Home
ಸುದ್ದಿಜಾಲ

AC: ನಿಮ್ಮ ಎಸಿ ಸರಿಯಾಗಿ ಕೆಲಸ ಮಾಡುತ್ತಿಲ್ಲವೇ?..ಹಾಗಿದ್ರೆ ಈ ಕೆಲಸ ಮಾಡಿ

ಬೇಸಿಗೆ ಜೋರಾಗಿದ್ದು, ಅದರಲ್ಲೂ ಮಹಾನಗರಗಳಲ್ಲಿನ ಜನರು ವಿವಿಧ ರೀತಿಯಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ. ಈ ನಡುವೆ ಸಾಕಷ್ಟು ಮನೆಗಳಲ್ಲಿ ಎಸಿ (Air conditioner) ಬಳಕೆ ಮಾಡಲಾಗುತ್ತಿದ್ದು, ಈ ಸಮಯದಲ್ಲಿ ನೀವು ಏನಾದರೂ ಸಮಸ್ಯೆ ಎದುರಿಸಿದ್ದರೆ. ಅಂದರೆ ಎಸಿ ಸರಿಯಾಗಿ ಕೂಲಿಂಕ್‌ ಅನುಭವ ನೀಡುತ್ತಿಲ್ಲ ಎಂದಾದರೆ ಚಿಂತೆ ಮಾಡಬೇಡಿ.

ಹೌದು, ಎಸಿಗಳನ್ನು ಸಾಕಷ್ಟು ಮನೆಗಳಲ್ಲಿ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ. ಕಾರಣ ಅತಿಯಾದ ಬಿಸಿಲು. ಈ ನಡುವೆ ನಿಮ್ಮ ಮನೆಯಲ್ಲಿನ ಎಸಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಅನ್ನೋದನ್ನು ಖಚಿತಪಡಿಸಿಕೊಳ್ಳಲು ವಿವಿಧ ಮಾರ್ಗಗಳು ಇವೆ. ಈ ಮೂಲಕ ನೀವು ಉತ್ತಮವಾದ ಕೂಲಿಂಗ್‌ ಅನುಭವವನ್ನು ಪಡೆಯಬಹುದಾಗಿದೆ. ಹಾಗಿದ್ರೆ, ಬನ್ನಿ ಎಸಿ ಹೇಗೆ ಸರಿಯಾಗಿ ಕೆಲಸ ಮಾಡುತ್ತಿದೆ ಅನ್ನೋದನ್ನು ತಿಳಿಯೋಣ.

AC: ನಿಮ್ಮ ಎಸಿ ಸರಿಯಾಗಿ ಕೆಲಸ ಮಾಡುತ್ತಿಲ್ಲವೇ?..ಹಾಗಿದ್ರೆ ಈ ಕೆಲಸ ಮಾಡಿ

ನಿಮ್ಮ ಎಸಿ ಚುರುಕಾಗಿ ಕೆಲಸ ಮಾಡಲು ಇಲ್ಲಿವೆ ಐದು ಪ್ರಮುಖ ಸಲಹೆಗಳು:
ಏರ್ ಫಿಲ್ಟರ್ ಚೆಕ್‌ ಮಾಡಿ: ಎಸಿಯಲ್ಲಿನ ಏರ್ ಫಿಲ್ಟರ್ (Air filter) ಎಸಿಯನ್ನು ಉತ್ತಮವಾಗಿರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮುಚ್ಚಿಹೋಗಿರುವ ಫಿಲ್ಟರ್ ಗಾಳಿಯ ಹರಿವನ್ನು ನಿರ್ಬಂಧಿಸುತ್ತದೆ, ಇದರಿಂದ ತಂಪಾದ ಗಾಳಿಯನ್ನು ಪಸರಿಸಲು ನಿಮ್ಮ ಎಸಿ ಹೆಚ್ಚುವರಿ ಸಮಯವನ್ನು ತೆಗೆದುಕೊಳ್ಳಬಹುದು. ಪರಿಣಾಮ ಇದನ್ನು ಒಮ್ಮೆ ಚೆಕ್‌ ಮಾಡಿ.

ಪರಿಣಾಮ ಬೇಸಿಗೆಯಲ್ಲಿ ಗರಿಷ್ಠ ಸಮಯದ ವರೆಗೆ ಬಳಕೆ ಮಾಡುವುದರಿಂದ ಪ್ರತಿ 1-2 ತಿಂಗಳಿಗೊಮ್ಮೆ ನಿಮ್ಮ ಫಿಲ್ಟರ್ ಅನ್ನು ಬದಲಾಯಿಸಿ. ಇದು ಅತ್ಯುತ್ತಮವಾದ ಗಾಳಿಯ ಹರಿವನ್ನು ಖಾತ್ರಿಗೊಳಿಸುತ್ತದೆ. ಹೊಸ ಫಿಲ್ಟರ್ ಕೂಡ ಧೂಳಿನಿಂದ ಕೂಡಿರುತ್ತದೆ. ನೀವು ಮರುಬಳಕೆ ಮಾಡಬಹುದಾದ ಫಿಲ್ಟರ್ ಹೊಂದಿದ್ದರೆ, ತಯಾರಕರ ಸೂಚನೆಗಳ ಪ್ರಕಾರ ಅದನ್ನು ನಿಯಮಿತವಾಗಿ ತೊಳೆಯಿರಿ.

AC: ನಿಮ್ಮ ಎಸಿ ಸರಿಯಾಗಿ ಕೆಲಸ ಮಾಡುತ್ತಿಲ್ಲವೇ?..ಹಾಗಿದ್ರೆ ಈ ಕೆಲಸ ಮಾಡಿ

ಸೂರ್ಯನ ಬೆಳಕಿನ ವಿರುದ್ಧ ಸಮರ ಸಾರಿ: ನಿಮ್ಮ ಕಿಟಕಿಗಳ ಮೂಲಕ ಸೂರ್ಯನ ಬೆಳಕು ಗಮನಾರ್ಹವಾಗಿ ನಿಮ್ಮ ಮನೆಗೆ ಶಾಖವನ್ನು ಉಂಟು ಮಾಡಬಹುದು. ಇದರಿಂದಾಗಿ ನಿಮ್ಮ ಎಸಿಗೆ ಹೆಚ್ಚಿನ ಒತ್ತಡ ಉಂಟಾಗುತ್ತದೆ. ಇದಕ್ಕಾಗಿ ಕರ್ಟೈನ್‌ಗಳನ್ನು ಬಳಕೆ ಮಾಡಿ. ನೇರ ಸೂರ್ಯನ ಬೆಳಕಿಗೆ ತೆರೆದುಕೊಳ್ಳುವ ಕಿಟಕಿಗಳ ಮೇಲೆ ಪರದೆಗಳನ್ನು ಅಥವಾ ಬ್ಲೈಂಡ್‌ಗಳನ್ನು ಹಾಕಿ. ಇದರ ಜೊತೆಗೆ ಬ್ಲ್ಯಾಕೌಟ್ ಕರ್ಟೈನ್‌ಗಳು (Blackout curtain) ಅಥವಾ ಪ್ರತಿಫಲಿತ ವಿಂಡೋ ಫಿಲ್ಮ್‌ಗಳನ್ನು (Reflective window film) ಬಳಕೆ ಮಾಡಿ.

ಮನೆಯಲ್ಲಿ ಎಲ್ಲಾದಾರೂ ಹೋಲ್‌ಗಳಿದ್ದರೆ ಅದನ್ನು ಮುಚ್ಚಿ: ಕಿಟಕಿಗಳು ಮತ್ತು ಬಾಗಿಲುಗಳ ಸುತ್ತಲೂ ಸಣ್ಣ ಗ್ಯಾಪ್‌ ಇದ್ದರೂ ಸಹ ಎಸಿಗೆ ಖಂಡಿತಾ ಒತ್ತಡ ಬೀಳುತ್ತದೆ. ಇದಕ್ಕಾಗಿ ಕಿಟಕಿಗಳು, ಬಾಗಿಲುಗಳು ಮತ್ತು ಯಾವುದೇ ಇತರ ಸಂಭಾವ್ಯ ಪ್ರವೇಶ ಬಿಂದುಗಳ ಸುತ್ತಲೂ ಗಾಳಿ ಸೋರಿಕೆ ಆಗುತ್ತಿದೆಯೇ ಎಂದು ಗಮನಿಸಿ. ನಂತರ ಎಲ್ಲಾದರೂ ಗಾಳಿ ಹೊರಹೋಗುತ್ತಿದ್ದರೆ ಅದನ್ನು ಕ್ಲೋಸ್‌ ಮಾಡಿ. ಇದರಿಂದ ನಿಮ್ಮ ಎಸಿ ನಿಮ್ಮ ಮನೆಯನ್ನು ಕೂಲ್‌ ಕೂಲ್‌ ಮಾಡುತ್ತದೆ.

AC: ನಿಮ್ಮ ಎಸಿ ಸರಿಯಾಗಿ ಕೆಲಸ ಮಾಡುತ್ತಿಲ್ಲವೇ?..ಹಾಗಿದ್ರೆ ಈ ಕೆಲಸ ಮಾಡಿ

ಸೀಲಿಂಗ್‌ ಫ್ಯಾನ್‌ ಸಹಾಯ ಪಡೆಯಿರಿ: ಬೇಸಿಗೆಯಲ್ಲಿ ನಿಮ್ಮ ಸೀಲಿಂಗ್ ಫ್ಯಾನ್‌ (Ceiling fan) ಸಹಾಯವನ್ನು ಪಡೆದು ನಿಮ್ಮ ಎಸಿ ಉತ್ತಮವಾಗಿ ಕೆಲಸ ಮಾಡುವಂತೆ ಮಾಡಬಹುದು. ಅಂದರೆ ಇಡೀ ಮನೆಯ ಜನರು ಎಸಿ ಯ ಮೇಲೆ ಮಾತ್ರ ಅವಲಂಬಿತರಾಗುವ ಬದಲು ಲಿವಿಂಗ್ ರೂಮ್ ಅಥವಾ ಮಲಗುವ ಕೋಣೆಯಂತಹ ಪ್ರದೇಶಗಳನ್ನು ನೇರವಾಗಿ ತಂಪಾಗಿಸಲು ಪೋರ್ಟಬಲ್ ಫ್ಯಾನ್‌ಗಳನ್ನು ಬಳಸಿ.

AC: ನಿಮ್ಮ ಎಸಿ ಸರಿಯಾಗಿ ಕೆಲಸ ಮಾಡುತ್ತಿಲ್ಲವೇ?..ಹಾಗಿದ್ರೆ ಈ ಕೆಲಸ ಮಾಡಿ

ವಾರ್ಷಿಕ ತಪಾಸಣೆ: ವರ್ಷಕ್ಕೊಮ್ಮೆಯಾದರೂ ವೃತ್ತಿಪರರಿಂದ ಸರ್ವಿಸ್‌ ಮಾಡಿಸಿ. ತಂತ್ರಜ್ಞರು ಸಂಭಾವ್ಯ ಸಮಸ್ಯೆಗಳನ್ನು ಗುರುತಿಸಬಹುದು, ಆಂತರಿಕ ಘಟಕಗಳನ್ನು ಸ್ವಚ್ಛಗೊಳಿಸಬಹುದು ಮತ್ತು ನಿಮ್ಮ ಎಸಿ ಅತ್ಯುತ್ತಮವಾಗಿ ಕೆಲಸ ಮಾಡುವಂತೆ ಮಾಡಬಹುದು. ಈ ಸರಳ ಸಲಹೆಗಳನ್ನು ಅನುಸರಿಸುವ ಮೂಲಕ, ನಿಮ್ಮ ಎಸಿ ಸರಾಗವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ನೀವು ಖಚಿತಪಡಿಸಿಕೊಳ್ಳಬಹುದು.
Best Mobiles in India

English summary
There are various ways to ensure that the AC in your home is working efficiently. This way you can get a better cooling experience.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+