Home
ಸುದ್ದಿಜಾಲ

ವಿಕಲಚೇತನ ಮತದಾರರಿಗೆ 'ಓಲಾ'ದಿಂದ ಉಚಿತ ಪ್ರಯಾಣ ಸೇವೆ!

ಕರ್ನಾಟಕದಲ್ಲಿ ಇಂದು (ಏ.18) ಮೊದಲ ಹಂತದ ಲೋಕಸಭಾ ಚುನಾವಣೆ ಶುರುವಾಗಿದ್ದು, ಮತದಾರರು ತಮ್ಮ ಮತ ಚಲಾಯಿಸಲು ಮತಗಟ್ಟೆಗಳತ್ತ ದೌಡಾಯಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ವಿಕಲಚೇತನ ಮತದಾರಿಗಾಗಿ ಓಲಾ ಸಂಸ್ಥೆ ನೆರವಿಗೆ ಮುಂದಾಗಿದ್ದು, ಮತ ಚಲಾಯಿಸಲು ಮತಗಟ್ಟೆಗಳಿಗೆ ಬರುವ ವಿಕಲಚೇತನ ಮತದಾರರಿಗೆ ಉಚಿತ ಪ್ರಯಾಣ ಸೇವೆ ಒದಗಿಸುವ ಕಾರ್ಯಕ್ಕೆ 'ಓಲಾ ಸಂಸ್ಥೆ' ಸಜ್ಜಾಗಿದೆ.

ವಿಕಲಚೇತನ ಮತದಾರರಿಗೆ 'ಓಲಾ' ದಿಂದ ಉಚಿತ ಪ್ರಯಾಣ ಸೇವೆ!

ಹೌದು, ಈ ಭಾರಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಚುನಾವಣಾಧಿಕಾರಿಗಳ ಸಹಯೋಗದೊಂದಿಗೆ ಓಲಾ ಟ್ಯಾಕ್ಸಿ ಸಂಸ್ಥೆ ಈ ನಿರ್ಧಾರ ಕೈಗೊಂಡಿದೆ. ಈ ವಿಶೇಷ ಉಚಿತ ಸೇವೆಗಾಗಿ ಈಗಾಗಲೇ 270 ಕ್ಯಾಬ್‌ಗಳನ್ನು ಕಂಪನಿಯು ನಿಯೋಜಿಸಲಾಗಿದ್ದು, ಇಂದು ಬೆಂಗಳೂರು, ಮಂಗಳೂರು ಮತ್ತು ಮೈಸೂರಿನಲ್ಲಿ ಓಲಾದ ಈ ಉಚಿತ ಸೇವೆಯು ಲಭ್ಯವಿರಲಿದೆ.

ವಿಕಲಚೇತನ ಮತದಾರರಿಗೆ 'ಓಲಾ' ದಿಂದ ಉಚಿತ ಪ್ರಯಾಣ ಸೇವೆ!

ವಿಕಲಚೇತನರು ಓಲಾ ಸಂಸ್ಥೆ ಹೆಲ್ಪ್​ಲೈನ್ ನಂಬರ್​ 9071464553 ಅಥವಾ 7624915133 ಕರೆ ಮಾಡಿ ಈ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಎರಡನೇ ಹಂತದ ಚುನಾವಣೆಯಲ್ಲಿಯೂ ಓಲಾ ಉಚಿತ ಸೇವೆ ಒದಗಿಸಲಿದ್ದು, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಬಳ್ಳಾರಿ ಸೇರಿದಂತೆ ಬೆಳಗಾವಿ ಜಿಲ್ಲೆಗಳಲ್ಲಿರುವ ವಿಕಲಚೇತನ ಸಹ ಈ ಉಚಿತ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.

ಪ್ರತಿಯೊಬ್ಬರು ಮತದಾನ ಮಾಡಬೇಕು ಎನ್ನುವ ಉದ್ದೇಶದಿಂದ ಖಾಸಗಿ ವಲಯದ ಕಾರ್ಖಾನೆಗಳು ಮತ್ತು ಕಂಪನಿಗಳಿಗಳು ವೇತನ ಸಹಿತ ರಜೆ ನೀಡಿವೆ. ಹೀಗಾಗಿ ಮತದಾನ ಮಾಡುವುದನ್ನು ಮರೆಯದಿರಿ. ಮತದಾನ ಪ್ರತಿಯೊಬ್ಬರ ಹಕ್ಕು, ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಮರೆಯದೇ ಮತ ಚಲಾಯಿಸಬೇಕು ಈ ಮೂಲಕ ಮತದಾನದ ಪ್ರಮಾಣವು ಸಹ ಹೆಚ್ಚಾಗುತ್ತದೆ.

Best Mobiles in India

English summary
For Voters With Disabilities, Ola To Offer Free Rides In Karnataka.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+