ಭಾರತದ ಟಾಪ್‌ 10 ಶ್ರೀಮಂತರ ಪಟ್ಟಿ: ಅಗ್ರಸ್ಥಾನದಲ್ಲಿ ಮುಖೇಶ ಅಂಬಾನಿ!

|

ದೇಶದ ಬಿಲಿಯನೇರ್‌ಗಳ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಾಲೀಕ ಮುಕೇಶ್ ಅಂಬಾನಿ ಅವರು ಮತ್ತೊಮ್ಮೆ ಅಗ್ರಸ್ಥಾನದಲ್ಲಿ ಕಾಣಿ. ಫೋರ್ಬ್ಸ್ ಬಿಡುಗಡೆ ಮಾಡಿರುವ 2022ನೇ ಸಾಲಿನ ಪಟ್ಟಿಯಲ್ಲಿ ದೇಶದ ಶ್ರೀಮಂತರ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದಾರೆ. ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ ಎರಡನೇ ಸ್ಥಾನ ದಲ್ಲಿ ಗುರುತಿಸಿಕೊಂಡಿದ್ದಾರೆ. ಎಚ್ ಸಿ ಎಲ್ ಟೆಕ್ನಾಲಜಿ ಚೇರ್ ಮೆನ್ ಶಿವ ನಾಡರ್ ದೇಶದ ಮೂರನೇ ಅತಿದೊಡ್ಡ ಶ್ರೀಮಂತರು ಆಗಿದ್ದಾರೆ. ಭಾರತದಲ್ಲಿ ಬಿಲಿಯನೇರ್‌ಗಳ ಸಂಖ್ಯೆಯು ಕಳೆದ ವರ್ಷಕ್ಕೆ ಹೋಲಿಸಿದರೆ 140 ರಿಂದ 166ಕ್ಕೆ ಏರಿಕೆಯಾಗಿದೆ ಎಂದು ಫೋರ್ಬ್ಸ್ ವರದಿ ತಿಳಿಸಿದೆ.

ಭಾರತದ ಟಾಪ್‌ 10 ಶ್ರೀಮಂತರ ಪಟ್ಟಿ: ಅಗ್ರಸ್ಥಾನದಲ್ಲಿ ಮುಖೇಶ ಅಂಬಾನಿ!

2021 ರಲ್ಲಿ ಇದೇ ಮೂವರು ಬಿಲಿಯನೇರ್‌ಗಳು ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದ್ದರು. ವರದಿ ಪ್ರಕಾರ, ಮುಕೇಶ್ ಅಂಬಾನಿ ಒಟ್ಟು ಸಂಪತ್ತು 90.7 ಶತಕೋಟಿ ಡಾಲರ್ ನಷ್ಟಿದೆ. ಕಳೆದ ಆರ್ಥಿಕ ವರ್ಷಕ್ಕಿಂತ ಶೇ.7ರಷ್ಟು ಹೆಚ್ಚಳವಾಗಿದೆ. ಫೋರ್ಬ್ಸ್‌ನ ಪಟ್ಟಿಯಲ್ಲಿ ದೇಶದ ಅಗ್ರಮಾನ್ಯ ಶ್ರೀಮಂತ ಎನಿಸಿಕೊಂಡಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಕೇಶ್ ಅಂಬಾನಿ ಜಾಗತಿಕ ಮಟ್ಟದಲ್ಲಿಯೂ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಜಗತ್ತಿನ ಅಗ್ರಮಾನ್ಯ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ 10 ನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿರುವ ಅದಾನಿಯವರ ಒಟ್ಟು ನಿವ್ವಳ ಆಸ್ತಿ 90 ಬಿಲಿಯನ್ ಡಾಲರ್ ಆಗಿದೆ.

ಭಾರತದ ಟಾಪ್‌ 10 ಶ್ರೀಮಂತರ ಪಟ್ಟಿ: ಅಗ್ರಸ್ಥಾನದಲ್ಲಿ ಮುಖೇಶ ಅಂಬಾನಿ!

ಭಾರತದಲ್ಲಿ ಲಸಿಕೆ ಉತ್ಪಾದಿಸುವ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (SII) ಸೈರಸ್ ಪೂನಾವಾಲಾ ಅಂದಾಜು 24.3 ಶತಕೋಟಿ ಡಾಲರ್ ನಿವ್ವಳ ಮೌಲ್ಯದೊಂದಿಗೆ ನಾಲ್ಕನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಕಳೆದ ವರ್ಷ ವಿಶ್ವದ 100 ಶ್ರೀಮಂತ ವ್ಯಕ್ತಿಗಳ ಪಟ್ಟಿಗೆ ಡಿ-ಮಾರ್ಟ್ ಸಂಸ್ಥಾಪಕ ರಾಧಾಕಿಶನ್ ದಮಾನಿ ಪ್ರವೇಶ ಪಡೆದುಕೊಂಡಿದ್ದರು. 2022 ರ ಪೋರ್ಬ್ಸ್ ಪಟ್ಟಿಯಲ್ಲಿ ಅದೇ ಡಿ-ಮಾರ್ಟ್ ಸಂಸ್ಥಾಪಕ ರಾಧಾಕಿಶನ್ ದಮಾನಿ, 20 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಭಾರತದಲ್ಲಿ ಐದನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಭಾರತದ ಟಾಪ್‌ 10 ಶ್ರೀಮಂತರ ಪಟ್ಟಿ: ಅಗ್ರಸ್ಥಾನದಲ್ಲಿ ಮುಖೇಶ ಅಂಬಾನಿ!

ಆರ್ಸೆಲರ್ ಮಿತ್ತಲ್ ಕಾರ್ಯಕಾರಿ ಅಧ್ಯಕ್ಷ ಲಕ್ಷ್ಮಿ ಮಿತ್ತಲ್ ಅವರು 17.9 ಶತಕೋಟಿ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದು, ಆರನೇ ಸ್ಥಾನದಲ್ಲಿದ್ದಾರೆ. ಒ.ಪಿ.ಜಿಂದಾಲ್ ಗ್ರೂಪಿನ ಸಾವಿತ್ರಿ ಜಿಂದಾಲ್ 17.7 ಶತಕೋಟಿ ಡಾಲರ್ ಮೂಲಕ ಏಳನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. 16.5 ಶತಕೋಟಿ ಡಾಲರ್ ಮೌಲ್ಯ ಹೊಂದಿರುವ ಆದಿತ್ಯ ಬಿರ್ಲಾ ಗ್ರೂಪ್ ಮುಖ್ಯಸ್ಥ ಕುಮಾರ್ ಬಿರ್ಲಾ ಎಂಟನೇ ಸ್ಥಾನದಲ್ಲಿದ್ದಾರೆ. ಸನ್ ಫಾರ್ಮಾಸ್ಯುಟಿಕಲ್ಸ್ ಮುಖ್ಯಸ್ಥ ದಿಲೀಪ್ ಶಾಂಘ್ವಿ 15.6 ಶತಕೋಟಿ ಡೌಲರ್ ಮೌಲ್ಯದೊಂದಿಗೆ ಒಂಬತ್ತನೇ ಸ್ಥಾನದಲ್ಲಿದ್ದರೆ 14 ಶತಕೋಟಿ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿರುವ ಕೋಟಕ್ ಮಹೀಂದ್ರಾ ಬ್ಯಾಂಕ್ ಎಂ ಡಿ ಉದಯ್ ಕೋಟಕ್ ಹತ್ತನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

Most Read Articles
Best Mobiles in India

Read more about:
English summary
Forbes India billionaires 2022: Mukesh Ambani tops list.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X