Subscribe to Gizbot

ಸೂರ್ಯನ ಬೆಳಕಿನಿಂದಲೇ ಡಿವೈಸ್ ಚಾರ್ಜ್ ಮಾಡುವ ಸಾಕೆಟ್

Written By:

ಎಷ್ಟೇ ದುಬಾರಿ ಸ್ಮಾರ್ಟ್‌ಫೋನ್ ಖರೀದಿಸಿದರೂ ಅದರಲ್ಲಿ ಬ್ಯಾಟರಿ ದೀರ್ಘ ಸಮಯಕ್ಕೆ ಬರುವಂತೆ ಮಾಡುವುದು ತಲೆನೋವಿನ ಕೆಲಸವೇ ಸರಿ. ಪವರ್ ಬ್ಯಾಂಕ್‌ಗಳು ಇಂದು ನಿಮ್ಮ ಪ್ರಯಾಣದ ಸಮಯದಲ್ಲಿ ಫೋನ್‌ಗೆ ಬೇಕಾದ ಶಕ್ತಿಯನ್ನು ತಮ್ಮ ಸಂಗ್ರಹಿತ ಬ್ಯಾಟರಿಯ ಮೂಲಕ ಒದಗಿಸುತ್ತಿದ್ದರೂ ಕರೆಂಟ್ ಬಳಸಿ ಈ ಪವರ್ ಬ್ಯಾಂಕ್‌ಗಳನ್ನು ಚಾರ್ಜ್ ಮಾಡಬೇಕಾಗಿ ಬರುತ್ತದೆ. ಆದರೆ ಇಲ್ಲಿರುವ ಸೋಲಾರ್ ಶಕ್ತಿಯ ವಿಂಡೋ ಸಾಕೆಟ್ ನಿಮ್ಮೆಲ್ಲಾ ಚಿಂತೆಗಳನ್ನು ದೂರಮಾಡಲಿದೆ.

ಓದಿರಿ: ಫೋನ್‌ನ ಬ್ಯಾಟರಿ ಬಾಳ್ವಿಕೆ ಉಳಿಸಲು ಟಾಪ್ ಸಲಹೆಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೋಲಾರ್ ಪವರ್

ವಿಂಡೋ ಸಾಕೆಟ್

ಕ್ಯುಹೋ ಸಾಂಗ್ ಹಾಗೂ ಬುವಾಹೋ ವಿಂಡೋ ಸಾಕೆಟ್ ಅನ್ನು ವಿನ್ಯಾಸಪಡಿಸಿದ್ದು, ಇದನ್ನು ಗಾಜಿನ ಕಿಟಕಿಗೆ ಸಿಕ್ಕಿಸಿ ಸೋಲಾರ್ ಪವರ್ ಅನ್ನು ಬ್ಯಾಟರಿಗೆ ಹಾಯಿಸಿ ನಂತರ ಡಿವೈಸ್‌ಗಳಿಗೆ ಚಾರ್ಜ್ ಮಾಡಬಹುದಾಗಿದೆ.

ಸರಳ ರಚನೆ

ಸರಳ ವಿನ್ಯಾಸ

ಈ ಸಾಕೆಟ್ ಸರಳ ರಚನೆಯನ್ನು ಪಡೆದುಕೊಂಡಿದ್ದು ಕಿಟಕಿಗೆ ಇದನ್ನು ಸಿಕ್ಕಿಸಿದರೆ ಸಾಕು ನೇರವಾಗಿ ಸೂರ್ಯನ ಬೆಳಕನ್ನು ಪಡೆದುಕೊಂಡು ಚಾರ್ಜ್ ಆಗುತ್ತದೆ.

10 ಗಂಟೆ ನಿರಂತರ ಪವರ್

ಯುಎಸ್‌ಬಿ ಔಟ್‌ಲೆಟ್

ಇದರ ವಿನ್ಯಾಸಕಾರರು ಇದರ ಶಕ್ತಿಯನ್ನು 10000 mAh ವರೆಗೆ ಹೆಚ್ಚಿಸುವ ಇರಾದೆಯನ್ನು ಹೊಂದಿದ್ದು ಯುಎಸ್‌ಬಿ ಔಟ್‌ಲೆಟ್ ಅನ್ನು ಇದಕ್ಕೆ ಸೇರ್ಪಡೆಗೊಳಿಸಬಹುದಾಗಿದೆ. ಪ್ರಸ್ತುತ ಇದು 10 ಗಂಟೆಗಳ ನಿರಂತರ ಪವರ್ ಅನ್ನು ಒದಗಿಸುತ್ತಿದ್ದು ಪೂರ್ಣ ಚಾರ್ಜ್‌ನಲ್ಲಿದೆ.

ಉತ್ತಮ ಸೌಕರ್ಯ

ತಂತ್ರಜ್ಞಾನದ ಕೊಡುಗೆ

ಬಳಕೆದಾರರಿಗೆ ಉತ್ತಮ ಸೌಕರ್ಯವನ್ನು ಒದಗಿಸಿಕೊಡಲಿರುವ ಈ ಸಾಕೆಟ್ ಹೆಚ್ಚು ಪ್ರಯೋಜನವನ್ನು ಒದಗಿಸಲಿದೆ.

ಕಡಿಮೆ ಖರ್ಚಿನದ್ದಾಗಿದೆ

ಸರಳ ತಯಾರಿ

ಕ್ಯುಹೋ ಸಾಂಗ್ ಹಾಗೂ ಬುವಾಹೋ ಈ ಸಾಕೆಟ್ ಅನ್ನು ನಿರ್ಮಿಸಿದ್ದು ಕಡಿಮೆ ಖರ್ಚಿನದ್ದಾಗಿದೆ.

ಬ್ಯಾಟರಿ ಸಮಸ್ಯೆ

ಬ್ಯಾಟರಿ ಸಮಸ್ಯೆ ದೂರ

ಈ ಸಾಕೆಟ್ ಬ್ಯಾಟರಿ ಸಮಸ್ಯೆಯನ್ನು ದೂರಮಾಡುವುದಂತೂ ನಿಜ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
In this article we can see the Forget Battery Packs, This Solar-Powered, Gadget-Charging Outlet Sticks to Windows.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot