ಫೋನ್‌ನ ಬ್ಯಾಟರಿ ಬಾಳ್ವಿಕೆ ಉಳಿಸಲು ಟಾಪ್ ಸಲಹೆಗಳು

Written By:

ದುಬಾರಿ ಫೋನ್ ಅನ್ನು ಖರೀದಿಸುವುದರ ಜೊತೆಗೆ ಅದರ ಬ್ಯಾಟರಿ ಬಾಳ್ವಿಕೆಯತ್ತ ಗಮನ ಕೊಡುವುದೂ ಅತ್ಯವಶ್ಯಕವಾಗಿದೆ. ನೀವು ದುಬಾರಿ ಫೋನ್ ಅನ್ನು ಕೊಂಡು ಅತ್ಯುತ್ತಮ ಫೀಚರ್‌ಗಳನ್ನು ಅದು ಹೊಂದಿದ್ದರೂ ಬ್ಯಾಟರಿ ಸಮಸ್ಯೆಯನ್ನು ಎದುರಿಸುತ್ತಿದೆ ಎಂದಾದಲ್ಲಿ ಇದನ್ನು ನೀವು ಗಂಭೀರವಾಗಿ ಪರಿಗಣಿಸಲೇಬೇಕು.

ಇದನ್ನೂ ಓದಿ: ಖುಷಿ ಕೊಡುವ ಗೇಮಿಂಗ್ ಆಟಗಳು ಮಾಡಲಿವೆ ಪ್ರಾಣ ಹಾನಿ

ಅದಕ್ಕೆಂದೇ ಇಂದಿನ ಲೇಖನದಲ್ಲಿ ಪೋನ್‌ನ ಬ್ಯಾಟರಿ ಬಾಳ್ವಿಕೆಯನ್ನು ಉಳಿಸುವ ಟಾಪ್ ಸಲಹೆಗಳೊಂದಿಗೆ ನಾವು ಬಂದಿದ್ದು ಇದು ಖಂಡಿತ ನಿಮಗೆ ಪ್ರಯೋಜನಕಾರಿ ಎಂದೆನಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಪ್ಪು ಬಣ್ಣದ ಹಿನ್ನಲೆಯನ್ನು ಬಳಸಿ

ಕಪ್ಪು ಬಣ್ಣದ ಹಿನ್ನಲೆಯನ್ನು ಬಳಸಿ

ಸಲಹೆ 1

ನಿಮ್ಮ ಫೋನ್ ಅಮೋಲೆಡ್ ಸ್ಕ್ರೀನ್ ಅನ್ನು ಹೊಂದಿದೆ ಎಂದಾದಲ್ಲಿ ಕಪ್ಪು ವರ್ಣದ ಹಿನ್ನಲೆಯನ್ನು ಬಳಸಿ. ಏಕೆಂದರೆ ಕಪ್ಪು ಬಣ್ಣದ ಹಿನ್ನಲೆಯು ಬ್ಯಾಟರಿ ಪ್ರಮಾಣವನ್ನು ಕಡಿಮೆ ಬಳಸುತ್ತದೆ.

ಗಾಢ ಅಪ್ಲಿಕೇಶನ್‌ಗಳನ್ನು ಬಳಸಿ

ಗಾಢ ಅಪ್ಲಿಕೇಶನ್‌ಗಳನ್ನು ಬಳಸಿ

ಸಲಹೆ 2

ಗಾಢ ವರ್ಣದ ಹಿನ್ನಲೆಗಳು/ಥೀಮ್‌ಗಳನ್ನು ಬಳಸುವುದರಿಂದ ನಿಮ್ಮ ಫೋನ್ ಬ್ಯಾಟರಿ ಬಾಳ್ವಿಕೆಯನ್ನು ದೀರ್ಘಕಾಲದವರೆಗೆ ಇರಿಸುತ್ತದೆ.

ಆಟೊ ಬ್ರೈಟ್‌ನೆಸ್‌ನಿಂದ ಮುಕ್ತಿ ಪಡೆದುಕೊಳ್ಳಿ

ಆಟೊ ಬ್ರೈಟ್‌ನೆಸ್‌ನಿಂದ ಮುಕ್ತಿ ಪಡೆದುಕೊಳ್ಳಿ

ಸಲಹೆ 3

ಡಿಸ್‌ಪ್ಲೇ ಆಟೊ ಬ್ರೈಟ್‌ನೆಸ್ ಅನ್ನು ಬಳಸದಿರಿ. ಇದು ಕಾಣಲು ಚೆನ್ನಾಗಿರುತ್ತದೆ, ಆದರೆ ಆಟೊ ಬ್ರೈಟ್‌ನೆಸ್ ನಿಮಗೆ ಬೇಕಾಗಿರುವುದಕ್ಕಿಂತಲೂ ಗಾಢ ವರ್ಣವನ್ನು ನಿಮ್ಮ ಡಿವೈಸ್‌ಗೆ ಅಳವಡಿಸುತ್ತದೆ.

ವೈಬ್ರೇಟ್ ಬೇಡ

ವೈಬ್ರೇಟ್ ಬೇಡ

ಸಲಹೆ 4

ವೈಬ್ರೇಟ್ ಅನ್ನು ಸ್ವಿಚ್ ಆಫ್ ಮಾಡಿ. ನಿಮಗದು ಅವಶ್ಯಕ ಇಲ್ಲ ಎಂದಾದಲ್ಲಿ ವೈಬ್ರೇಶನ್ ಬಳಸದಿರಿ. ವೈಬ್ರೇಶನ್ ಮೋಡ್‌ನಲ್ಲಿ ನಿಮ್ಮ ಫೋನ್ ಹೆಚ್ಚುವರಿ ಶಕ್ತಿಯನ್ನು ವಿನಿಯೋಗಿಸುತ್ತದೆ ಆದ್ದರಿಂದ ವೈಬ್ರೇಶನ ಮೋಡ್ ಅನ್ನು ಆದಷ್ಟು ಕಡಿಮೆ ಬಳಸಿ.

ನಾಕ್ ಆಫ್ ಬಳಸಬೇಡಿ

ನಾಕ್ ಆಫ್ ಬಳಸಬೇಡಿ

ಸಲಹೆ 5

ಯಾವಾಗಲೂ ನೈಜ ಬ್ಯಾಟರಿಗಳನ್ನು ಬಳಸಿ ಯಾವುದೇ ಕಡಿಮೆ ದರ್ಜೆ ಯಾ ಗುಣಮಟ್ಟದ ಬ್ಯಾಟರಿಗಳನ್ನು ಬಳಸದಿರಿ. ಬ್ಯಾಟರಿ ಖರೀದಿಯಲ್ಲಿ ನೀವು ಜಿಪುಣತನವನ್ನು ಅನುಸರಿಸಿದರೆ ನಿಮ್ಮ ಫೋನ್ ಹಾಳಾಗುವುದಕ್ಕೆ ಹೊಣೆ ನೀವೇ ಆಗುತ್ತೀರಿ.

ಟೈಮ್ ಔಟ್ ಉತ್ತಮ ಆಯ್ಕೆ

ಟೈಮ್ ಔಟ್ ಉತ್ತಮ ಆಯ್ಕೆ

ಸಲಹೆ 6

ನಿಮ್ಮ ಡಿಸ್‌ಪ್ಲೇಯ ಸ್ಕ್ರೀನ್ ಟೈಮ್ ಔಟ್ ಅನ್ನು ಆದಷ್ಟು ಕಡಿಮೆ ಸಮಯಕ್ಕೆ ಇರಿಸಿ.

ಅಧಿಸೂಚನೆಗಳ ಬಳಕೆ ಕಡಿಮೆ ಮಾಡಿ

ಅಧಿಸೂಚನೆಗಳ ಬಳಕೆ ಕಡಿಮೆ ಮಾಡಿ

ಸಲಹೆ 7

ವೈಫೈ ಸ್ವಿಚ್ ಆಫ್ ಮಾಡಲು ಸ್ಲೀಪ್ ಟೈಮ್ಸ್ ಅಥವಾ ಬ್ಲಾಕಿಂಗ್ ಮೋಡ್ ಅನ್ನು ಹೊಂದಿಸಿ ಆದಷ್ಟು ಇದರ ಬಳಕೆಯನ್ನು ಕಡಿಮೆ ಮಾಡಿ.

 ಸ್ಮಾರ್ಟ್ ಫೀಚರ್‌ಗಳನ್ನು ಆಫ್ ಮಾಡಿ

ಸ್ಮಾರ್ಟ್ ಫೀಚರ್‌ಗಳನ್ನು ಆಫ್ ಮಾಡಿ

ಸಲಹೆ 8

ಏರ್ ಗೆಸ್ಚರ್ಸ್, ಸ್ಮಾರ್ಟ್ ಸ್ಕ್ರಾಲಿಂಗ್ ಮೊದಲಾದ ಸ್ಮಾರ್ಟ್ ಫೀಚರ್‌ಗಳ ಬಳಕೆಯನ್ನು ಕಡಿಮೆ ಬಳಸಿ. ನಿಮ್ಮ ಫೋನ್ ಯಾವಾಗಲೂ ಸ್ಮಾರ್ಟ್‌ ಆಗಿರಬೇಕೆಂಬ ನಿಯಮವೇನೂ ಇಲ್ಲ ಎಂಬುದು ನಿಮಗೆ ಗೊತ್ತಿರಲಿ.

24/7 ಸಂಪರ್ಕದಲ್ಲಿರಬೇಕೆಂದು ಬಯಸದಿರಿ

24/7 ಸಂಪರ್ಕದಲ್ಲಿರಬೇಕೆಂದು ಬಯಸದಿರಿ

ಸಲಹೆ 9

ಜಿಪಿಎಸ್, ಬ್ಲ್ಯೂಟೂತ್, ಎನ್‌ಎಫ್‌ಸಿ, ವೈ-ಫೈ ಮತ್ತು ಮೊಬೈಲ್ ಡೇಟಾವನ್ನು ಅಗತ್ಯಕ್ಕೆ ತಕ್ಕಂತೆ ಬಳಸಿ.

ಡೈನಾಮಿಕ್ ಅಧಿಸೂಚನೆಗಳನ್ನು ಪ್ರಯತ್ನಿಸಿ

ಡೈನಾಮಿಕ್ ಅಧಿಸೂಚನೆಗಳನ್ನು ಪ್ರಯತ್ನಿಸಿ

ಸಲಹೆ 10

ನಿಮ್ಮ ಫೋನ್‌ನ ROM ಬೆಂಬಲಿಸುತ್ತಿದೆ ಎಂದಾದಲ್ಲಿ ಲಾಕ್ ವಿಡ್ಜೆಟ್ ಅಥವಾ ಅಧಿಸೂಚನೆಗಳನ್ನು ಬಳಸಿ ಅಥವಾ ಡೈನಾಮಿಕ್ ಅಧಿಸೂಚನೆಗಳನ್ನು ಇಷ್ಟಪಡುವ ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about How to save battery life on your Android device.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot