Home
ಸುದ್ದಿಜಾಲ

Laser TV C3 Projector: ಡಿಸ್‌ಪ್ಲೇನೇ ಇಲ್ಲದ 200 ಇಂಚಿನ ಸ್ಮಾರ್ಟ್‌ಟಿವಿ ಲಾಂಚ್‌! ಫೀಚರ್ಸ್‌ ಏನು? ಬೆಲೆ ಎಷ್ಟು?

ಸ್ಮಾರ್ಟ್‌ಟಿವಿಗಳ (SmartTVs) ವಿಭಾಗದಲ್ಲಿ ನೀವು ಈವರೆಗೂ ಸಾಕಷ್ಟು ಭಿನ್ನ ಫೀಚರ್ಸ್‌ ಆಯ್ಕೆಯ ಟಿವಿಗಳನ್ನು ನೋಡಿರಬಹುದು. ಆದರೆ, ಇದೇ ಮೊದಲ ಬಾರಿಗೆ ಡಿಸ್‌ಪ್ಲೇನೇ ಇಲ್ಲದೆ ಸ್ಮಾರ್ಟ್‌ಟಿವಿಯನ್ನು ಅನಾವರಣ ಮಾಡಲಾಗಿದೆ. ಈ ಸ್ಮಾರ್ಟ್‌ಟಿವಿ ನಿಮಗೆ 200 ಇಂಚಿನ ಡಿಸ್‌ಪ್ಲೇ ಅನುಭವ ನೀಡಲಿದೆ.

ಹೌದು, ನೀವು ಇದನ್ನು ಓದಿ ತಲೆಕೆಡಿಸಿಕೊಂಡಿರಬಹುದು. ಯಾಕೆಂದರೆ ಡಿಸ್‌ಪ್ಲೇ ಇಲ್ಲ ಅಂತಾನೂ ಹೇಳ್ತಾ ಇದ್ದಾರೆ ಹಾಗೆಯೇ 200 ಇಂಚಿನ ಡಿಸ್‌ಪ್ಲೇ ಇದೆ ಅಂತಾನೂ ಹೇಳ್ತಾ ಇದ್ದಾರೆ. ಅಂದ ಮೇಲೆ ಯಾವುದು ನಿಜ ಅಂತಾ ನೀವು ಅಂದುಕೊಳ್ಳಬಹುದು. ಆದರೆ, ಇದೆರಡೂ ನಿಜ. ನಿಮ್ಮ ಮನೆಯಲ್ಲಿ ಸಿನಿಮಾ ಅನುಭವವನ್ನು ನೀಡಲಿದೆ ಈ ಫಾರ್ಮೊವಿ ಲೇಸರ್ ಟಿವಿ C3 ಪ್ರೊಜೆಕ್ಟರ್(Formovie Laser TV C3 projector). ಹಾಗಿದ್ರೆ, ಇದರ ವಿಶೇಷತೆ ಏನು?, ಭಾರತದಲ್ಲಿ ಇದರ ಬೆಲೆ ಎಷ್ಟು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಡಿಸ್‌ಪ್ಲೇನೇ ಇಲ್ಲದ 200 ಇಂಚಿನ ಸ್ಮಾರ್ಟ್‌ಟಿವಿ ಲಾಂಚ್‌! ಫೀಚರ್ಸ್‌ ಏನು? ....

ಫಾರ್ಮೊವಿ ಲೇಸರ್ ಟಿವಿ C3 ಪ್ರೊಜೆಕ್ಟರ್: ಇಂದಿನ ದಿನಗಳಲ್ಲಿ ಓಟಿಟಿ ಪ್ಲಾಟ್‌ಫಾರ್ಮ್‌ಗಳ ಮೂಲಕ ವೆಬ್ ಸರಣಿಗಳು, ಚಲನಚಿತ್ರ ಗಳನ್ನು ನೋಡಲು ಅತ್ಯುತ್ತಮ ಸ್ಮಾರ್ಟ್‌ಟಿವಿ ಖರೀದಿ ಮಾಡುವುದು ಸಾಮಾನ್ಯ. ಆದರೆ, ಇನ್ಮುಂದೆ ಈ ಸ್ಮಾರ್ಟ್‌ಟಿವಿ ಕಡಿಮೆ ಆಗುವ ಸಮಯ ಬಂದಿದೆ. ಕಾರಣ ಸಿನಿಮಾ ಥಿಯೇಟರ್‌ನಲ್ಲಿ ಸಿಗುವ ಅನುಭವವನ್ನೇ ನೀಡುವ ಸಾಮರ್ಥ್ಯ ಇರುವ ಫಾರ್ಮೊವಿ ಲೇಸರ್ ಟಿವಿ C3 ಪ್ರೊಜೆಕ್ಟರ್ ಅನ್ನು ಲಾಂಚ್‌ ಮಾಡಲಾಗಿದೆ.

ಪ್ರೊಜೆಕ್ಟರ್ ನಲ್ಲಿ ಏನಿದೆ ವಿಶೇಷತೆ?: ಈಗಾಗಲೇ ಸಾಕಷ್ಟು ಪ್ರೊಜೆಕ್ಟರ್ ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ ಎಂದು ನೀವು ಅಂದುಕೊಳ್ಳಬಹುದು. ಆದರೆ, ಎಲ್ಲ ಪ್ರೊಜೆಕ್ಟರ್ ಅಂತೆ ಈ ಪ್ರೊಜೆಕ್ಟರ್ ಅಲ್ಲ ಬದಲಾಗಿ ಇದು ಲೇಸರ್ ಟಿವಿ ಆಗಿದೆ. ಭಾರತೀಯ ಕುಟುಂಬಗಳಿಗೆ ತಲ್ಲೀನಗೊಳಿಸುವ ಚಲನಚಿತ್ರ ಅನುಭವಗಳನ್ನು ನೀಡುವ ಉದ್ದೇಶದಿಂದ ವಿಶ್ವಪ್ರಸಿದ್ಧ ಫಾರ್ಮೊವಿ ಕಂಪನಿ ಭಾರತದಲ್ಲಿ ಹೊಸ ತಂತ್ರಜ್ಞಾನದ ಫಾರ್ಮೊವಿ ಲೇಸರ್ ಟಿವಿ C3 ಪ್ರೊಜೆಕ್ಟರ್ ಅನ್ನು ಲಾಂಚ್ ಮಾಡಿ ಭಾರತದಲ್ಲಿ ಕ್ರಾಂತಿ ಆರಂಭ ಮಾಡಿದೆ.

ಡಿಸ್‌ಪ್ಲೇನೇ ಇಲ್ಲದ 200 ಇಂಚಿನ ಸ್ಮಾರ್ಟ್‌ಟಿವಿ ಲಾಂಚ್‌! ಫೀಚರ್ಸ್‌ ಏನು? ....

ಈ ಅಲ್ಟ್ರಾ ಶಾರ್ಟ್ ಥ್ರೋ ಪ್ರೊಜೆಕ್ಟರ್ ಬಜೆಟ್ ಬೆಲೆಯಲ್ಲಿ ನಿಮಗೆ ಅತ್ಯುತ್ತಮ ಮನರಂಜನಾ ಅನುಭವವನ್ನು ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಅದರಲ್ಲೂ 4K ರೆಸಲ್ಯೂಶನ್‌ನಲ್ಲಿ 80" ರಿಂದ 200" ಇಂಚುಗಳಷ್ಟು ಸ್ಕ್ರೀನ್ ಸೆಟ್‌ ಮಾಡಿಕೊಳ್ಳಲು ಇದು ನಿಮಗೆ ಅನುಮತಿಸಲಿದ್ದು, ಸುಧಾರಿತ ಲೇಸರ್ ಫಾಸ್ಫರ್ ಡಿಸ್‌ಪ್ಲೇ (ALPD), 400 ನಿಟ್ಸ್‌ ಬ್ರೈಟ್‌ನೆಸ್‌ ಆಯ್ಕೆ ಹಾಗೂ 4K ರೆಸಲ್ಯೂಶನ್ ಸಾಮರ್ಥ್ಯ ಈ ಟಿವಿ ಬಳಕೆದಾರರನ್ನು ಸಿನಿಮಾ ಥಿಯೇಟರ್‌ ನಲ್ಲಿ ಕೂತಿರುವಂತೆ ಮಾಡುತ್ತದೆ.

ಸಾಂಪ್ರದಾಯಿಕ ಪ್ರೊಜೆಕ್ಟರ್‌ಗಳಿಗೆ ಹೋಲಿಸಿದರೆ ನೀವು ಉತ್ತಮ ದೃಶ್ಯ ಅನುಭವವನ್ನು ಈ ಪ್ರೊಜೆಕ್ಟರ್‌ ಮೂಲಕ ಪಡೆದುಕೊಳ್ಳಬಹುದಾಗಿದೆ. ಈ ಪ್ರೊಜೆಕ್ಟರ್ ನಿರ್ದಿಷ್ಟ ಬಣ್ಣಗಳಿಗೆ ಸೀಮಿತವಾಗಿರದೆ ಸಾವಿರಾರು ಬಣ್ಣಗಳನ್ನು ಪ್ರದರ್ಶಿಸುವ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ 3000:1 ರ ಹೆಚ್ಚಿನ ಕಾಂಟ್ರಾಸ್ಟ್ ಅನುಪಾತವನ್ನು ಹೊಂದಿದ್ದು, ದೃಶ್ಯಗಳು ಎದ್ದುಕಾಣುತ್ತವೆ. ಈ ಪ್ರೊಜೆಕ್ಟರ್‌ನ ಮತ್ತೊಂದು ಪ್ರಮುಖ ವಿಶೇಷ ಏನೆಂದರೆ ಮೋಷನ್ ಎಸ್ಟಿಮೇಶನ್ ಮೋಷನ್ ಕಾಂಪೆನ್ಸೇಶನ್ (MEMC) ಫೀಚರ್ಸ್‌.

ಮೋಷನ್ ಎಸ್ಟಿಮೇಶನ್ ಮೋಷನ್ ಕಾಂಪೆನ್ಸೇಶನ್‌ನಿಂದಾಗಿ ಡಿಸ್‌ಪ್ಲೇ ಮೇಲೆ ಚಲಿಸುವ ದೃಶ್ಯಗಳನ್ನು ಮಸುಕು ಇಲ್ಲದೆ ಸ್ಪಷ್ಟವಾಗಿ ಕಾಣಬಹುದು. ಆಡಿಯೋಗೆ ಸಂಬಂಧಿಸಿದಂತೆ ಎರಡು 15W ದೊಡ್ಡ ಕ್ಯಾವಿಟಿ ಸ್ಪೀಕರ್‌ಗಳನ್ನು ನೀಡಲಾಗಿದ್ದು, ಡಾಲ್ಬಿ ಆಡಿಯೋ ಮತ್ತು ಡಿಟಿಎಸ್‌ ಹೆಚ್‌ಡಿ ಫೀಚರ್ಸ್‌ನೊಂದಿಗೆ ಇದು ಕಾಣಿಸಿಕೊಡಿದೆ. ಈ ಕಾರಣಕ್ಕೆ ಹೇಳಿದ್ದು, ಥಿಯೇಟರ್ ತರಹದ ಅನುಭವವನ್ನು ಈ ಪ್ರೊಜೆಕ್ಟರ್ ಮೂಲಕ ಪಡೆದುಕೊಳ್ಳಬಹುದು ಎಂದು.

ಡಿಸ್‌ಪ್ಲೇನೇ ಇಲ್ಲದ 200 ಇಂಚಿನ ಸ್ಮಾರ್ಟ್‌ಟಿವಿ ಲಾಂಚ್‌! ಫೀಚರ್ಸ್‌ ಏನು? ....

ಇದೆಲ್ಲಕ್ಕಿಂತ ಮಿಗಿಲಾಗಿ ಈ ಪ್ರೊಜೆಕ್ಟರ್‌ ಫೆಂಗ್ಓಎಸ್ (FengOS) ಸಿಸ್ಟಮ್ ಮತ್ತು ಅಮೆಜಾನ್‌ 4K ಫೈಟ್‌ ಟಿವಿ ಸ್ಟಿಕ್‌ ಮ್ಯಾಕ್ಸ್ ಓಟಿಟಿ ಸೈಟ್‌ಗಳು ಮತ್ತು ಗೇಮ್‌ಗಳನ್ನು ಸುಲಭವಾಗಿ ಆಡುವಂತೆ ಮಾಡುತ್ತದೆ. ಇನ್ನು ಈ ಪ್ರೊಜೆಕ್ಟರ್‌ ನಿಮ್ಮ ಆರೋಗ್ಯದ ಮೇಲೂ ಕಾಳಜಿ ಇರಿಸಿಕೊಂಡಿದೆ. ಅಂದರೆ ನಿಮ್ಮ ಆರೋಗ್ಯವನ್ನು ಹಾಳುಮಾಡುವ ಫೀಚರ್ಸ್‌ ಆಯ್ಕೆ ನೀಡದೆ ನಿಮ್ಮ ಆರೋಗ್ಯಕ್ಕೆ ಯಾವುದೇ ಸಮಸ್ಯೆ ಉಂಟು ಮಾಡದ ಫೀಚರ್ಸ್‌ ಅನ್ನು ಈ ಟಿವಿ ಪಡೆದುಕೊಂಡಿದೆ.

ಈ ಲೇಸರ್ ಟಿವಿ ನೀಲಿ ಬೆಳಕಿನ ಕಣ್ಣಿನ ರಕ್ಷಣೆಯನ್ನು ನೀಡುತ್ತದೆ ಜೊತೆಗೆ ಅಲ್ಟ್ರಾ ತೆಳುವಾದ ಪೂರ್ಣ ಡಿಸ್‌ಪ್ಲೇನ ವಿನ್ಯಾಸವನ್ನು ನೀಡಲಿದ್ದು, ನಿಮ್ಮ ಕಣ್ಣುಗಳಿಗೆ ಹಾನಿಯಾಗುವ ಯಾವ ಸಮಸ್ಯೆಗಳು ಇದರಲ್ಲಿ ಇಲ್ಲ ಎಂದು ಕಂಪೆನಿ ಮಾಹಿತಿ ನೀಡಿದೆ. ಇದರೊಂದಿಗೆ ಹ್ಯೂಮನ್ ಡಿಟೆಕ್ಷನ್ ಫೀಚರ್ಸ್‌ ಸಹ ಇದ್ದು, ನೀವು ಈ ಡಿವೈಸ್‌ ಮುಂದೆ ಹಾದು ಹೋದರೆ ಅದನ್ನು ಪತ್ತೆ ಮಾಡಿ ಅದಕ್ಕೆ ತಕ್ಕಂತೆ ಹೊಳಪನ್ನು ಸರಿ ಹೊಂದಿಸುತ್ತದೆ.

ಲೇಸರ್ ಟಿವಿ C3 ಪ್ರೊಜೆಕ್ಟರ್ ಬೆಲೆ ಹಾಗೂ ಲಭ್ಯತೆ: ಈ ವಿಶೇಷ ಟಿವಿಯ ಬೆಲೆ ಭಾರತದಲ್ಲಿ 2,40,000 ರೂ. ಗಳಾಗಿದೆ. ಈ ಟಿವಿ ಮತ್ತೊಂದು ಸಂಯೋಜನೆಯನ್ನು ಹೊಂದಿದ್ದು, ಅಂದರೆ ಪ್ರೊಜೆಕ್ಟರ್ ಫಾರ್ಮೊವಿ 100 ಇಂಚಿನ ಫ್ರೆಸ್ನೆಲ್ ಸ್ಕ್ರೀನ್ ಟಿವಿ 3,90,000 ರೂ.ಗಳ ಬೆಲೆ ಹೊಂದಿದೆ. ಈ ಪ್ರೊಜೆಕ್ಟರ್ ಖರೀದಿಸಲು ಬಯಸುವವರು ಫಾರ್ಮೋವಿ ಇಂಡಿಯಾ ವೆಬ್‌ಸೈಟ್‌ನಲ್ಲಿ ಮೂಲಕ ಆರ್ಡರ್‌ ಮಾಡಬಹುದಾಗಿದೆ.

Best Mobiles in India

English summary
Formovie has launched the Laser TV C3 projector in India, offering a cinema theater experience with an excellent features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+