ಏರ್‌ಟೆಲ್ ಗ್ರಾಹಕರೇ, 84 ದಿನಗಳ ಮಾನ್ಯತೆಯ ರೀಚಾರ್ಜ್ ಪ್ಲ್ಯಾನ್ ಇಲ್ಲಿವೆ ನೋಡಿ
ಪ್ರಮುಖ ಟೆಲಿಕಾಂ ಸೇವೆಗಳಲ್ಲಿ ಒಂದಾದ ಏರ್‌ಟೆಲ್ ಗ್ರಾಹಕರಿಗೆ ಆಕರ್ಷಕ ರೀಚಾರ್ಜ್ ಪ್ಲ್ಯಾನ್‌ಗಳನ್ನು ನೀಡುತ್ತಾ ಬರುತ್ತಿದೆ. ಅದರಲ್ಲೂ ಕೆಲವು ದಿನಗಳ ಹಿಂದೆ ಘೋಷಣೆ ಮಾಡಲಾದ 489ರೂ. ಹಾಗೂ 509 ರೂ. ಗಳ ರೀಚಾರ್ಜ್ ಪ್ಲ್ಯಾನ್‌ನಲ್ಲಿ ಬಳಕೆದಾರರು ದಿನಪೂರ್ತಿ ಸಾಮಾಜಿಕ ಜಾಲತಾಣವನ್ನು ಬಳಕೆ ಮಾಡಿದರೂ ಸಹ ಡೇಟಾ ಖಾಲಿಯಾಗುವುದಿಲ್ಲ. ಇದು ಹೆಚ್ಚಿನ ಡೇಟಾ ಬಳಕೆ ಮಾಡುವವರಿಗೆ ವರದಾನವಾಗಿದ್ದು, ಇದರ ನಡುವೆ ದೀರ್ಘ ಸಮಯದ ರೀಚಾರ್ಜ್ ಪ್ಲ್ಯಾನ್ ಬೇಕು ಎಂದವರಿಗೆ ಇಲ್ಲಿವೆ ನೋಡಿ ಹಲವು ಆಯ್ಕೆ.

ಹೌದು, ಏರ್‌ಟೆಲ್ ತನ್ನ ಪ್ರತಿಸ್ಪರ್ಧಿಗಳಿಗೆ ಪೈಪೋಟಿ ನೀಡುತ್ತಾ ಬರುತ್ತಿದ್ದು, ಅದರಂತೆ ನೀವೇನಾದರೂ ಈ ವರ್ಷದಲ್ಲಿ 84 ದಿನಗಳ ಮಾನ್ಯತೆ ಇರುವ ರೀಚಾರ್ಜ್ ಪ್ಲ್ಯಾನ್‌ಗಳನ್ನು ಖರೀದಿಸಬೇಕು ಎಂದರೆ ನಿಮಗೆ ಹಲವು ಆಯ್ಕೆಗಳು ಲಭ್ಯ ಇವೆ. ಅದರಲ್ಲಿ ನಾಲ್ಕು ಪ್ರಮುಖ ಪ್ರಿಪೇಯ್ಡ್ ಯೋಜನೆಗಳು ಬಳಕೆದಾರರಿಗೆ ಅನಿಯಮಿತ ಕರೆ ಸೇವೆ ನೀಡುವುದರ ಜೊತೆಗೆ ಅಗತ್ಯ ಸೇವೆಗಳನ್ನೂ ಸಹ ನೀಡಲಿದೆ. ಹಾಗಿದ್ರೆ, ಯಾವೆಲ್ಲಾ ರೀಚಾರ್ಜ್ ಪ್ಲ್ಯಾನ್‌ಗಳು ಏನೆಲ್ಲಾ ಸೌಲಭ್ಯ ನೀಡಲಿವೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ ಓದಿರಿ.
ಏರ್‌ಟೆಲ್ 455 ರೂ. ಪ್ರಿಪೇಯ್ಡ್ ಪ್ಲ್ಯಾನ್
455 ರೂ. ಗಳ ಪ್ಲ್ಯಾನ್ 84 ದಿನಗಳ ಮಾನ್ಯತೆ ಹೊಂದಿದ್ದು, ಈ ಪ್ಲ್ಯಾನ್‌ನಲ್ಲಿ ಅನಿಯಮಿತ ಸ್ಥಳೀಯ ಕರೆ, ಎಸ್‌ಟಿಡಿ ಮತ್ತು ರೋಮಿಂಗ್ ಕರೆಗಳು, 900 ಎಸ್‌ಎಮ್‌ಎಸ್ ಮತ್ತು 6 GB ಡೇಟಾವನ್ನು ಪಡೆಯಬಹುದಾಗಿದೆ. ಹಾಗೆಯೇ ನೀಡಲಾದ ಡೇಟಾ ಖಾಲಿಯಾದರೆ ಪ್ರತಿ MB ಗೆ 50 ಪೈಸೆ ಶುಲ್ಕ ನೀಡುವ ಮೂಲಕ ಹೆಚ್ಚುವರಿ ಡೇಟಾ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಇದರ ಹೊರತಾಗಿ ಈ ಪ್ಲ್ಯಾನ್‌ನಲ್ಲಿ ಗ್ರಾಹಕರು ಮೂರು ತಿಂಗಳವರೆಗೆ ಅಪೋಲೋ 24/ 7 ನ ಹೆಚ್ಚುವರಿ ಪ್ರಯೋಜನವನ್ನೂ ಸಹ ಪಡೆಯಬಹುದಾಗಿದೆ. ಹಾಗೆಯೇ ಫಾಸ್ಟ್ಯಾಗ್‌ನಲ್ಲಿ 100 ರೂ. ಕ್ಯಾಶ್‌ಬ್ಯಾಕ್ ಮತ್ತು ಉಚಿತ ವಿಂಕ್ ಮ್ಯೂಸಿಕ್ ಸೌಲಭ್ಯ ಪಡೆದುಕೊಳ್ಳಬಹುದು.
ಏರ್‌ಟೆಲ್ 719 ರೂ. ಗಳ ಪ್ರಿಪೇಯ್ಡ್ ಪ್ಲ್ಯಾನ್
84 ದಿನಗಳ ಮಾನ್ಯತೆಯೊಂದಿಗೆ ಓಟಿಟಿ ಸೇವೆ ಹಾಗೂ ದಿನವೂ ಡೇಟಾ ಬಳಕೆ ಮಾಡಲು ಈ ಪ್ಲ್ಯಾನ್ ಸೂಕ್ತ. ಇದರಲ್ಲಿ ನಿಮಗೆ ಅನಿಯಮಿತ ಸ್ಥಳೀಯ, ಎಸ್‌ಟಿಡಿ ಮತ್ತು ರೋಮಿಂಗ್ ಕರೆಗಳ ಆಯ್ಕೆ ಸಿಗಲಿದ್ದು, ದಿನಕ್ಕೆ 100 ಎಸ್‌ಎಂಎಸ್ ಹಾಗೂ ಪ್ರತಿದಿನವೂ 1.5 GB ಡೇಟಾ ಲಭ್ಯವಾಗಲಿದೆ. ಇದರೊಂದಿಗೆ ಗ್ರಾಹಕರು 3 ತಿಂಗಳವರೆಗೆ ಡಿಸ್ನಿ+ ಹಾಟ್‌ಸ್ಟಾರ್ ಪ್ಲಾಟ್‌ಫಾರ್ಮ್ ಅನ್ನು ಬಳಕೆ ಮಾಡಬಹುದಾಗಿದೆ. ಹಾಗೆಯೇ ರಿವಾರ್ಡ್‌ಮಿನಿ ಚಂದಾದಾರಿಕೆ, ಮೂರು ತಿಂಗಳವರೆಗೆ ಅಪೊಲೊ 24 / 7 ಸೇವೆ, ಫಾಸ್ಟ್ಯಾಗ್‌ನಲ್ಲಿ 100 ರೂ. ಗಳ ಕ್ಯಾಶ್‌ಬ್ಯಾಕ್ ಹಾಗೂ ಉಚಿತ ವಿಂಕ್ ಮ್ಯೂಸಿಕ್ ಸೌಲಭ್ಯ ಪಡೆದುಕೊಳ್ಳಬಹುದು. ಏರ್‌ಟೆಲ್ ಥ್ಯಾಂಕ್ಸ್ ಆಪ್ ಬಳಕೆ ಮಾಡಿಕೊಂಡು ರೀಚಾರ್ಜ್ ಮಾಡಿದರೆ ಉಚಿತ 2 GB ಡೇಟಾ ಸಹ ಲಭ್ಯವಾಗಲಿದೆ.

ಏರ್‌ಟೆಲ್ 839 ರೂ. ಪ್ರಿಪೇಯ್ಡ್ ಪ್ಲ್ಯಾನ್
ಏರ್‌ಟೆಲ್ ನ 839 ರೂ. ಗಳ ಪ್ರಿಪೇಯ್ಡ್ ರೀಚಾರ್ಜ್ ಪ್ಲ್ಯಾನ್ 719 ರೂ. ಗಳ ಪ್ರಿಪೇಯ್ಡ್ ಪ್ಲ್ಯಾನ್ ರೀತಿಯಲ್ಲೇ ಇರಲಿದ್ದು, ಇದರಲ್ಲಿ ಇರುವ ಪ್ರಮುಖ ಬದಲಾವಣೆ ಎಂದರೆ ದಿನಕ್ಕೆ 2 GB ಡೇಟಾವನ್ನು ಬಳಕೆ ಮಾಡಬಹುದು. ದೈನಂದಿನ ಕೋಟಾ ಬಳಕೆಯ ಡೇಟಾ ವೇಗವು 64 Kbps ವರೆಗೆ ಇರುತ್ತದೆ. ಇನ್ನು ಏರ್‌ಟೆಲ್ ಥ್ಯಾಂಕ್ಸ್ ಆಪ್ ಮೂಲಕ ರೀಚಾರ್ಜ್ ಮಾಡಿದರೆ ಉಚಿತ 2 GB ಡೇಟಾ ಕೂಪನ್ ಅನ್ನು ಹೆಚ್ಚುವರಿಯಾಗಿ ಪಡೆದುಕೊಳ್ಳಬಹುದಾಗಿದೆ.

ಏರ್‌ಟೆಲ್‌ನ 999 ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್‌ನಲ್ಲಿ ಗ್ರಾಹಕರು ದಿನಕ್ಕೆ 2.5 GB ಡೇಟಾ ಬಳಕೆ ಮಾಡಬಹುದಾಗಿದೆ, ಅದೂ ಸಹ 64 Kbps ವರೆಗಿನ ವೇಗದಲ್ಲಿ. ಹಾಗೆಯೇ ಅನಿಯಮಿತ ಕರೆ ಸೌಲಭ್ಯ ಹಾಗೂ ದಿನವೂ 100 ಎಸ್‌ಎಮ್‌ಎಸ್ ಕಳುಹಿಸಬಹುದಾಗಿದ್ದು, 3 ತಿಂಗಳವರೆಗೆ ಡಿಸ್ನಿ+ ಹಾಟ್‌ಸ್ಟಾರ್ ಓಟಿಟಿ ಸೇವೆಯನ್ನು ಪಡೆಯಬಹುದಾಗಿದೆ. ಇದರೊಂದಿಗೆ ಅಮೆಜಾನ್ ಪ್ರೈಮ್ ಸದಸ್ಯತ್ವ ಸಹ ಲಭ್ಯವಾಗಲಿದೆ. ಇದಿಷ್ಟೇ ಅಲ್ಲದೆ ಮೂರು ತಿಂಗಳಿಗೆ ಅಪೊಲೊ 24 / 7, ಫಾಸ್ಟ್ಯಾಗ್‌ನಲ್ಲಿ 100 ರೂ. ಗಳ ಕ್ಯಾಶ್‌ಬ್ಯಾಕ್ ಮತ್ತು ಉಚಿತ ವಿಂಕ್ ಮ್ಯೂಸಿಕ್ ಸೇವೆ ಲಭ್ಯವಾಗಲಿದೆ.


Click it and Unblock the Notifications








