Home
ಸುದ್ದಿಜಾಲ

ಜಿಯೋ ಬಳಕೆದಾರರಿಗೆ 40GB ಉಚಿತ ಬೋನಸ್‌ ಡೇಟಾ ನೀಡುವ ಪ್ಲ್ಯಾನ್‌ಗಳಿವು!

ಜಿಯೋ ಟೆಲಿಕಾಂ ಪ್ರಮುಖ ಟೆಲಿಕಾಂ ಸಂಸ್ಥೆಗಳಲ್ಲಿ ಒಂದಾಗಿದ್ದು, ವಿವಿಧ ರೀತಿಯ ರೀಚಾರ್ಜ್‌ ಪ್ಲ್ಯಾನ್‌ಗಳ ಮೂಲಕ ಬಳಕೆದಾರರಿಗೆ ಸಾಕಷ್ಟು ಸೌಲಭ್ಯ ಸಿಗುವಂತೆ ಮಾಡಲಾಗಿದೆ. ಈ ಮೂಲಕ ಹೆಚ್ಚಿನ ಗ್ರಾಹಕರನ್ನು ತನ್ನತ್ತ ಸೆಳೆಯಲು ಜಿಯೋ ಮಂದಾಗಿದ್ದು, ಈ ನಡುವೆ ಬಳಕೆದಾರರಿಗೆ ಬರೋಬ್ಬರಿ 40GB ಬೋನಸ್‌ ಡೇಟಾ ನೀಡಲಿದೆ.

ಹೌದು, ಜಿಯೋ ಆಯ್ದ ಪ್ಲ್ಯಾನ್‌ಗಳಲ್ಲಿ ಬಳಕೆದಾರರಿಗೆ 40GB ಬೋನಸ್ ಡೇಟಾವನ್ನು ನೀಡಲಿದೆ. ಇದರಲ್ಲಿ ಮೂರು ಪ್ಲಾನ್‌ಗಳಿದ್ದು, ಬಳಕೆದಾರರು ತಮ್ಮ ಅಗತ್ಯಕ್ಕೆ ತಕ್ಕಂತೆ ಬೇಕಾದ ಪ್ಲ್ಯಾನ್ ಆಯ್ಕೆ ಮಾಡಿಕೊಳ್ಳಬಹುದು. ಇದರೊಂದಿಗೆ ವಿವಿಧ ಸೌಲಭ್ಯ ಸಹ ಲಭ್ಯ. ಹಾಗಿದ್ರೆ, ಯಾವೆಲ್ಲಾ ರೀಚಾರ್ಜ್‌ ಪ್ಲ್ಯಾನ್‌ಗಳಲ್ಲಿ 40GB ಬೋನಸ್‌ ಡೇಟಾ ಲಭ್ಯವಾಗಲಿದೆ?, ಇವುಗಳ ಮಾನ್ಯತೆ ಅವಧಿ ಎಷ್ಟು ಎಂಬಿತ್ಯಾದಿ ಮಾಹಿತಿಯನ್ನು ತಿಳಿಯೋಣ ಬನ್ನಿ.

ಜಿಯೋ ಬಳಕೆದಾರರಿಗೆ 40GB ಉಚಿತ ಬೋನಸ್‌ ಡೇಟಾ ನೀಡುವ ಪ್ಲ್ಯಾನ್‌ಗಳಿವು!

ಇದಕ್ಕೂ ಮೊದಲು ಅಂದರೆ ಈ ವರ್ಷದ ಆರಂಭದಲ್ಲಿ, IPL 2023 ತನ್ನ ಬಳಕೆದಾರರಿಗಾಗಿ ಹಲವಾರು ಕ್ರಿಕೆಟ್ ಯೋಜನೆಗಳನ್ನು ನೀಡುವ ಮೂಲಕ ಜನರ ಮನಸ್ಸನ್ನು ಗೆದ್ದಿತ್ತು. ಅದರಂತೆ 3 GB ದೈನಂದಿನ ಡೇಟಾ ನೀಡಲಾಗುತ್ತಿತ್ತು. ಜೊತೆಗೆ ಅನಿಯಮಿತ ಕರೆ ಮತ್ತು 5G ಪ್ರಯೋಜನಗಳನ್ನೂ ಸಹ ನೀಡಲಾಗುತ್ತಿತ್ತು ಇದೀಗ ಹೆಚ್ಚುವರಿಯಾಗಿ ಈ ಪ್ಲ್ಯಾನ್‌ಗಳಲ್ಲಿ ಗ್ರಾಹಕರು 40 GB ವರೆಗೆ ಬೋನಸ್ ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ.

ಯಾವ ಕಾರಣಕ್ಕೆ ಈ ಪ್ಲ್ಯಾನ್‌?: ಜಿಯೋ ಏನೇ ನಿರ್ಧಾರ ಮಾಡಿದರೂ ಅದರ ಹಿಂದೆ ಒಂದು ದೊಡ್ಡ ಉದ್ದೇಶ ಇದ್ದೇ ಇರುತ್ತದೆ. ಆ ಉದ್ದೇಶ ಕೆಲವುದಿನಗಳ ನಂತರ ತಿಳಿಯಲಿದೆ. ಆದರೆ, ಇದೀಗ ಜಿಯೋ ಹೇಳುವ ಪ್ರಕಾರ, ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಐಪಿಎಲ್ ಪಂದ್ಯಗಳು ಮತ್ತು ಸ್ಟ್ರೀಮಿಂಗ್ ಕಂಟೆಂಟ್‌ ಅನ್ನು ಆನಂದಿಸಲು ಬಳಕೆದಾರರನ್ನು ಸಕ್ರಿಯಗೊಳಿಸುವುದು ಈ ಪ್ಲ್ಯಾನ್‌ನ ಉದ್ದೇಶ ಎಂದು ಹೇಳಿಕೊಂಡಿದೆ. ಇದರಲ್ಲಿ 219, 399 ಮತ್ತು 999 ರೂ.ಗಳ ಪ್ಲ್ಯಾನ್‌ ಸೇರಿವೆ.

ಜಿಯೋ ಬಳಕೆದಾರರಿಗೆ 40GB ಉಚಿತ ಬೋನಸ್‌ ಡೇಟಾ ನೀಡುವ ಪ್ಲ್ಯಾನ್‌ಗಳಿವು!

ಜಿಯೋ 219ರೂ. ಪ್ಲ್ಯಾನ್‌: ರಿಲಯನ್ಸ್ ಜಿಯೋದ 219 ರೂ.ಗಳ ಪ್ಲ್ಯಾನ್‌ನಲ್ಲಿ ಬಳಕೆದಾರರು ಅನಿಯಮಿತ ಕರೆ, 100 ಉಚಿತ ಎಸ್‌ಎಮ್‌ಎಸ್‌ ಹಾಗೂ ನಿತ್ಯ 3 GB ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಈ ಪ್ಲ್ಯಾನ್‌ನಲ್ಲಿ ಬಳಕೆದಾರರು ಜಿಯೋ ಅಪ್ಲಿಕೇಶನ್‌ಗಳಿಗೆ 14 ದಿನಗಳ ಉಚಿತ ಚಂದಾದಾರಿಕೆ ಪಡೆದುಕೊಳ್ಳಬಹುದು. ಇದರೊಂದಿಗೆ 5G ವೆಲ್ಕಮ್ ಆಫರ್ ಅನ್ನು ಪಡೆದವರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 5G ಡೇಟಾವನ್ನು ಸಹ ಪಡೆದುಕೊಳ್ಳಬಹುದು. ಅಗತ್ಯ ಇದ್ದರೆ 25 ರೂ. ಮೌಲ್ಯದ ಪೂರಕ 2GB ಡೇಟಾ ಆಡ್-ಆನ್ ವೋಚರ್ ಅನ್ನು ಬಳಕೆ ಮಾಡಿಕೊಳ್ಳಬಹುದು.

399ರೂ. ಗಳ ಪ್ಲ್ಯಾನ್‌: ಈ ಪ್ಲ್ಯಾನ್‌ನಲ್ಲಿ ಬಳಕೆದಾರರು 3 GB ದೈನಂದಿನ ಡೇಟಾದೊಂದಿಗೆ 100 ಎಸ್‌ಎಮ್‌ಎಸ್‌ ಹಾಗೂ ಕರೆ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಇನ್ನುಳಿದಂತೆ ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆ ಸೌಲಭ್ಯ ಇದ್ದು, ಬಳಕೆದಾರರು ಈ ಪ್ಲ್ಯಾನ್‌ನೊಂದಿಗೆ 61 ರೂ.ಗಳ 6GB ಡೇಟಾ ಆಡ್-ಆನ್ ವೋಚರ್ ಅನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಇದರ ಮಾನ್ಯತೆ 28 ದಿನ.

999ರೂ. ಗಳ ಪ್ಲ್ಯಾನ್‌: ಈ ಪ್ಲ್ಯಾನ್‌ನಲ್ಲಿ ಜಿಯೋ 40 GB ಬೋನಸ್ ಡೇಟಾ ನೀಡಲಿದ್ದು, ಈ ಪ್ಲ್ಯಾನ್‌ನಲ್ಲಿ ನೀವು 3 GB ದೈನಂದಿನ ಡೇಟಾ, 100 ಎಸ್‌ಎಮ್‌ಎಸ್‌ ಸೌಲಭ್ಯ ಪಡೆದುಕೊಳ್ಳಬಹುದು. ಜೊತೆಗೆ ಉಚಿತ ಜಿಯೋ ಅಪ್ಲಿಕೇಶನ್‌ಗಳ ಚಂದಾದಾರಿಕೆ ಇರಲಿದೆ. ಇನ್ನು 5G ಗೆ ಪ್ರವೇಶ ಹೊಂದಿರುವ ಬಳಕೆದಾರರು ಸೀಮಿತ ಅವಧಿಗೆ 241ರೂ.ಗಳ ಮೌಲ್ಯದ ಹೆಚ್ಚುವರಿ 40GB ಉಚಿತ ಡೇಟಾವನ್ನು ಸಹ ಆನಂದಿಸಬಹುದು.

ಜಿಯೋ ಬಳಕೆದಾರರಿಗೆ 40GB ಉಚಿತ ಬೋನಸ್‌ ಡೇಟಾ ನೀಡುವ ಪ್ಲ್ಯಾನ್‌ಗಳಿವು!

ನಿಮಗೆ ಹೆಚ್ಚಿನ ಡೇಟಾ ಅಗತ್ಯವಿದ್ದರೆ 150GB ಡೇಟಾ ನೀಡಲಾಗುವ ಕ್ರಿಕೆಟ್ ಡೇಟಾ ಆಡ್-ಆನ್ ಪ್ಲ್ಯಾನ್‌ಗಳೊಂದಿಗೆ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಈ ಡೇಟಾ ಆಡ್-ಆನ್ ಪ್ಲ್ಯಾನ್‌ಗಳು 222ರೂ.ಗಳಿಂದ ಆರಂಭ ಆಗುತ್ತವೆ. ಇನ್ನು ಈ 999 ರೂ.ಗಳ ಪ್ಲ್ಯಾನ್‌ 84 ದಿನಗಳವರೆಗೆ ಮಾನ್ಯತೆ ಹೊಂದಿರುತ್ತದೆ. ಇದರೊಂದಿಗೆ ಕ್ರಿಕೆಟ್ ಆಡ್-ಆನ್ ಪ್ಲ್ಯಾನ್‌ಗಳನ್ನು ಸಹ ಘೋಷಣೆ ಮಾಡಲಾಗಿದ್ದು, 222ರೂ, 444ರೂ ಮತ್ತು 667ರೂ ಬೆಲೆಯ, 50GB, 100GB ಮತ್ತು 150GB ಇಂಟರ್ನೆಟ್ ಡೇಟಾವನ್ನು ಸಹ ನೀಡಲಾಗುತ್ತಿದೆ.

Best Mobiles in India

English summary
Jio will offer 40GB bonus data to users on select plans. It has three plans and users can choose the plan according to their needs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+