ಸರ್ಕಾರದಿಂದ ಉಚಿತ 50 ಲಕ್ಷ 4G ಮೊಬೈಲ್, ಫ್ರೀ ಡಾಟಾ!! ಏಕೆ? ಎಲ್ಲಿ?

ಮೊಬೈಲ್ ಐದು ಇಂಚು ಡಿಸ್‌ಪ್ಲೇ, ಡ್ಯುಯಲ್ ಸಿಮ್ ಹಾಗೂ 16 mp ಮತ್ತು 5mp ಕ್ಯಾಮರಾ, 16 GB ಒಳ ಮತ್ತು 32 GB ವರೆಗೂ ಹೆಚ್ಚಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 3500 amh ಬ್ಯಾಟರಿ ಹೊಂದಿದೆ ಎನ್ನಲಾಗಿದೆ.

|

ಆರು ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ 18 ರಿಂದ 35 ವಯಸ್ಸಿನ ರಾಜ್ಯದ ಯುವಕರಿಗೆ 50 ಲಕ್ಷ 4G ಮೊಬೈಲ್‌ಗಳನ್ನು ಉಚಿತವಾಗಿ ನೀಡುವುದಾಗಿ ಪಂಜಾಬ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಅಮರೀಂದರ್ ಸಿಂಗ್ ಹೇಳಿದ್ದಾರೆ. 4G ಮೊಬೈಲ್ ಭಾಗ್ಯದ ಜೊತೆಗೆ ಒಂದು ವರ್ಷದ ಉಚಿತ ಡಾಟಾ ಕಾಲಿಂಗ್ ಆಫರ್ ಸಹ ಘೋಷಿಸಿರುವ ಅಮರೀಂದರ್ ಸಿಂಗ್ ದೇಶದ ಜನರ ಹುಬ್ಬೇರುವಂತೆ ಮಾಡಿದ್ದಾರೆ.

ಸರ್ಕಾರದಿಂದ ಉಚಿತ 50 ಲಕ್ಷ 4G ಮೊಬೈಲ್, ಫ್ರೀ ಡಾಟಾ!! ಏಕೆ? ಎಲ್ಲಿ?

ಜಿಯೋಗೆ ವರವಾದ ನೋಟು ಬ್ಯಾನ್!..ಜಿಯೋ ಗ್ರಾಹಕರೂ ಫುಲ್‌ಖುಷ್!! ಏಕೆ ಗೊತ್ತಾ?

ರಾಜ್ಯ ಸರ್ಕಾರವು ಈ ಯೋಜನೆಗಾಗಿ 4 ರಿಂದ 5 ರೂಪಾಯಿಗಳ ಹಣವನ್ನು ನಿಯೋಜಿಸಿದ್ದು, ಆಡಳಿತದ 100 ದಿವಸಗಳಲ್ಲಿ ಈ ಯೋಜನೆಯನ್ನು ಯುವಕರಿಗೆ ತಲುಪಿಸುವುದಾಗಿ ಅಮರೀಂದರ್ ಸಿಂಗ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಇನ್ನು ಈ ಯೋಜನೆ ಬಗ್ಗೆ ವೃತ್ತಪತ್ರಿಕೆಗಳಲ್ಲಿ ಜಾಹಿರಾತನ್ನು ನಿಡುತ್ತೇವೆ. ರಾಜ್ಯದ ಯುವಕರು ತಮ್ಮ ಮೊಬೈಲ್‌ ಮತ್ತು ಇ-ಮೇಲ್ ಐಡಿ ಮೂಲಕ ರಿಜಿಸ್ಟಾರ್ ಮಾಡಿಕೊಂಡ ನಂತರದ ಕೆಲವು ದಿನಗಳಲ್ಲಿ ಮೊಬೈಲ್‌ಗಳನ್ನು ನೀಡಲಾಗುತ್ತದೆ ಎಂದು ಸರ್ಕಾರದ ಪ್ರಮುಖರು ತಿಳಿಸಿದ್ದಾರೆ.

ಸರ್ಕಾರದಿಂದ ಉಚಿತ 50 ಲಕ್ಷ 4G ಮೊಬೈಲ್, ಫ್ರೀ ಡಾಟಾ!! ಏಕೆ? ಎಲ್ಲಿ?

ಸರ್ಕಾರದಿಂದ ನೀಡುತ್ತಿರುವ 4G ಗೆ ಸಪೋರ್ಟ್ ಆಗುವ ಈ ಮೊಬೈಲ್‌ನಲ್ಲಿ ಒಂದು ವರ್ಷದ ವರೆಗೂ ಉಚಿತ 3G ಡಾಟಾ ನೀಡಲಾಗುತ್ತದೆ ಎಂದು ಹೇಳಲಾಗಿದ್ದು, ಮೊಬೈಲ್‌ ಉತ್ತಮ ಫೀಚರ್ಸ್‌ ಹೊಂದಿರುತ್ತದೆ ಎನ್ನಲಾಗಿದೆ. ಮೊಬೈಲ್ ಐದು ಇಂಚು ಡಿಸ್‌ಪ್ಲೇ, ಡ್ಯುಯಲ್ ಸಿಮ್ ಹಾಗೂ 16 mp ಮತ್ತು 5mp ಕ್ಯಾಮರಾ, 16 GB ಒಳ ಮತ್ತು 32 GB ವರೆಗೂ ಹೆಚ್ಚಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 3500 amh ಬ್ಯಾಟರಿ ಹೊಂದಿದೆ ಎನ್ನಲಾಗಿದೆ.

ಸರ್ಕಾರದಿಂದ ಉಚಿತ 50 ಲಕ್ಷ 4G ಮೊಬೈಲ್, ಫ್ರೀ ಡಾಟಾ!! ಏಕೆ? ಎಲ್ಲಿ?

ಇನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ಮುಂದುವರೆದ ಭಾಗದಂತೆ, ರಾಜ್ಯದ ಯುವಕರನ್ನು ಸೆಳೆಯಲು ಅಮರೀಂದರ್ ಸಿಂಗ್ ಈ ರೀತಿಯ ಯೋಜನೆ ಮಾಡಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ರಾಜಕೀಯದ ಮೇಲಾಟದಿಂದಾಗಿ ಯುವಕರಿಗೆ ಮೊಬೈಲ್ ಭಾಗ್ಯ ದೊರಕಿದ್ದು, ಡಿಜಿಟಲ್ ಇಂಡಿಯಾ ಶೈನ್ ಆಗುತ್ತಿದೆ!!

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Captain Amarinder Singh's last elections and he has taken such a big step by promising these free 4G-enabled smartphones with one-year of free data calling. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X