Home
ಸುದ್ದಿಜಾಲ

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ಇಲ್ಲಿದೆ ಪೂರ್ಣ ಮಾಹಿತಿ!

ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಘೋಷಿಸಿದ್ದ 5 ಗ್ಯಾರಂಟಿಗಳ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಅಧಿಕೃತವಾಗಿ ಘೋಷಿಸಿದ್ದಾರೆ. ಇದೇ ವೇಳೆ ಯಾವುದೇ ನಿರ್ಬಂಧಗಳಿಲ್ಲದೇ ಶಕ್ತಿ ಯೋಜನೆಯ ಸಹ ಘೋಷಿಸಿದ್ದು, ಇದೇ ಜೂನ್ 11 ರಿಂದ ಮಹಿಳೆಯರು ಉಚಿತವಾಗಿ ಬಸ್‌ನಲ್ಲಿ ಪ್ರಯಾಣ ಮಾಡಬಹುದಾಗಿದೆ.

ಹೌದು, ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಮಹಿಳೆಯರು ಬಿಎಂಟಿಸಿ, ಕೆಎಸ್‌ಆರ್‌ಟಿಸಿ (KSRTC), ಎನ್‌ಡಬ್ಲ್ಯೂಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ಇಲ್ಲಿದೆ ಪೂರ್ಣ ಮಾಹಿತಿ!

ಹವಾನಿಯಂತ್ರಿತ (AC) ಬಸ್, ಐಷಾರಾಮಿ ಬಸ್‌ಗಳನ್ನು ಹೊರತುಪಡಿಸಿ ಎಲ್ಲ ಬಸ್‌ಗಳಲ್ಲೂ ಉಚಿತ ಪ್ರಯಾಣ ಮಾಡಬಹುದಾಗಿದೆ. ಹಾಗೆಯೇ ರಾಜಹಂಸ ಬಸ್‌ಗಳಲ್ಲಿಯೂ ಸಹ ಮಹಿಳೆಯರು ಉಚಿತವಾಗಿ ಸಂಚರಿಸಬಹುದಾಗಿದೆ. ಕರ್ನಾಟಕದ ಎಲ್ಲ ಮಹಿಳೆಯರಿಗೂ ಈ ಶಕ್ತಿ ಯೋಜನೆ ಅನ್ವಯಆಗಲಿದೆ.

ಯಾವ ಬಸ್‌ಗಳಲ್ಲಿ ಉಚಿತ ಪ್ರಯಾಣ
ಬಿಎಂಟಿಸಿ, ಕೆಎಸ್‌ಆರ್‌ಟಿಸಿ (KSRTC), ಎನ್‌ಡಬ್ಲ್ಯೂಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು. ಎಸಿ (AC) ಬಸ್ ಹಾಗೂ ಐಷಾರಾಮಿ ಬಸ್‌ಗಳನ್ನು ಹೊರತುಪಡಿಸಿ ಉಳಿದ ಎಲ್ಲ ಬಸ್‌ಗಳಲ್ಲೂ ಉಚಿತ ಪ್ರಯಾಣ ಮಾಡಬಹುದಾಗಿದೆ.

ಉಚಿತ ಪ್ರಯಾಣಕ್ಕೆ ಮಿತಿ ಇದೆಯಾ?
ಕಾಂಗ್ರೆಸ್‌ ಸರ್ಕಾರ ಘೋಷಿಸಿರುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯಾವುದೇ ನಿಗದಿತ ಕಿಲೋಮೀಟರ್ ಮಿತಿ ಹೊಂದಿಲ್ಲ. ಮಹಿಳೆಯರು ರಾಜ್ಯದಲ್ಲಿ ಎಲ್ಲಿಂದ ಎಲ್ಲಿಗಾದರೂ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ.

ಪುರುಷರಿಗೆ ಶೇ.50 ರಷ್ಟು ಮೀಸಲಾತಿ
ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಶೇ.50 ರಷ್ಟು ಪುರುಷರಿಗೆ ಮೀಸಲಾತಿ ಘೋಷಣೆ ಆಗಿದೆ. ಆದರೆ ಬಿಎಂಟಿಸಿ ಬಸ್‌ಗಳಲ್ಲಿ ಮಾತ್ರ ಪುರುಷರಿಗೆ ಮೀಸಲಾತಿ ಇಲ್ಲ.

ಗೃಹಜ್ಯೋತಿ ಗ್ಯಾರಂಟಿ : ಇನ್ನು ಇದೇ ವೇಳೆ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ 'ಗೃಹಜ್ಯೋತಿ' ಯೋಜನೆಯನ್ನು ಸಹ ಜಾರಿ ಮಾಡಲಾಗಿದೆ. ಈ ಯೋಜನೆಯಲ್ಲಿ 200 ಯೂನಿಟ್‌ ವಿದ್ಯುತ್‌ ಉಚಿತವಾಗಿ ಲಭ್ಯವಾಗಲಿದೆ. ಈ ಯೋಜನೆಯನ್ನು ಒಂದು ವರ್ಷದ ಸರಾಸರಿ ಬಳಕೆಯ ಮಾಹಿತಿ ಪಡೆದುಕೊಂಡು ಅದರ ಆಧಾರದ ಮೇಲೆ 10% ವಿದ್ಯುತ್‌ ಉಚಿತವಾಗಿ ದೊರೆಯಲಿದೆ. ಆದರೆ ಇಲ್ಲಿಯವರೆಗೆ ಬಾಕಿ ಉಳಿಸಿಕೊಂಡಿರುವ ಹಳೆಯ ಬಿಲ್ ಪಾವತಿಸುವುದು ಕಡ್ಡಾಯವಾಗಿದೆ.

ಗೃಹಲಕ್ಷ್ಮೀ ಗ್ಯಾರಂಟಿ : ಗೃಹಲಕ್ಷ್ಮೀ ಯೋಜನೆಯು ಪ್ರಯೋಜನ ಪ್ರತಿ ಮನೆಯ ಯಜಮಾನಿಗೆ ಲಭ್ಯವಾಗಲಿದೆ. ಈ ಯೋಜನೆಯಲ್ಲಿ ಮನೆ ಯಜಮಾನಿಯ ಖಾತೆಗೆ ನೇರವಾಗಿ 2000 ರೂ. ಜಮೆ ಮಾಡಲಾಗುತ್ತದೆ. ಇನ್ನು ಈ ಯೋಜನೆಗೆ ಯಾವುದೇ ಷರತ್ತುಗಳಿಲ್ಲ ಅನ್ನೊದನ್ನ ಸರ್ಕಾರ ಹೇಳಿದೆ. ಆದರೆ ಇದಕ್ಕಾಗಿ ಹೊಸ ಸಾಫ್ಟ್‌ವೇರ್‌ ಅಭಿವೃದ್ದಿ ಪಡಿಸಬೇಕಿರುವುದರಿಂದ ಜೂನ್‌ 15 ರಿಂದ ಅರ್ಜಿ ಕರೆಯುವುದಾಗಿ ಸರ್ಕಾರ ತಿಳಿಸಿದೆ. ಎಪಿಎಲ್‌ (APL) ಮತ್ತು ಬಿಪಿಎಲ್‌ (BPL) ಎಂಬ ಯಾವುದೇ ಬೇದ ಭಾವವಿಲ್ಲದೇ ಎಲ್ಲರಿಗೂ ಪ್ರಯೋಜನ ಸಿಗಲಿದೆ.

ಗೃಹಲಕ್ಷ್ಮೀ ಯೋಜನೆಗೆ ಈ ಕೆಳಗಿನ ದಾಖಲೆಗಳು ಅಗತ್ಯ: ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ಮನೆ ಯಜಮಾನಿ ಬ್ಯಾಂಕ್‌ ಖಾತೆ ಹೊಂದಿರುವುದು ಕಡ್ಡಾಯವಾಗಿದೆ. ಅಲ್ಲದೆ ನಿಮ್ಮ ಬ್ಯಾಂಕ್‌ ಖಾತೆಗೆ ಆಧಾರ್‌ ಕಾರ್ಡ್‌ ಲಿಂಕ್‌ ಮಾಡಿರುವುದು ಕೂಡ ಕಡ್ಡಾಯ ಎಂದು ಸರ್ಕಾರ ಹೇಳಿದೆ. ಆದರಿಂದ ಗೃಹಲಕ್ಷ್ಮೀ ಯೋಜನೆಗೆ ಅಕೌಂಟ್​ ನಂಬರ್, ಆಧಾರ್​ ನಂಬರ್​, ಕಡ್ಡಾಯವಾಗಿದೆ. ಇನ್ನು ಈ ಯೋಜನೆಯ ಅರ್ಜಿಯನ್ನು ಜೂನ್‌ 15 ರಿಂದ ಪ್ರಾರಂಭಿಸಿ ಜುಲೈ 15 ರ ತನಕ ತೆಗೆದುಕೊಳ್ಳಲಾಗುವುದು ಎಂದು ಹೇಳಲಾಗಿದೆ.

Best Mobiles in India

English summary
Free Bus Travel For all Women in Karnataka: details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+