Samsung: ಗ್ರೀನ್ ಲೈನ್ ಸಮಸ್ಯೆ ಎದುರಿಸುತ್ತಿರುವವರಿಗೆ ಸ್ಯಾಮ್‌ಸಂಗ್‌ನಿಂದ ಫ್ರೀ ಡಿಸ್‌ಪ್ಲೇ...
ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ (Samsung smartphone) ಬಳಕೆದಾರರು ಕೆಲವು ದಿನಗಳ ಹಿಂದೆ ಗ್ರೀನ್ ಲೈನ್ ಸಮಸ್ಯೆ ಎದುರಿಸುತ್ತಿರುವುದನ್ನು ವರದಿ ಮಾಡುತ್ತಿದ್ದರು. ವಿಷಯ ಏನೆಂದರೆ ಈವರೆಗೂ ಸ್ಯಾಮ್‌ಸಂಗ್ ಮಾತ್ರ ಅಧಿಕೃತವಾಗಿ ನಮ್ಮದೇ ಸಮಸ್ಯೆ ಎಂದು ಹೇಳಿರಲಿಲ್ಲ. ಆದರೆ, ಈಗ ಬದಲಿ ಡಿಸ್‌ಪ್ಲೇಯನ್ನು ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಿದೆ.
ಹೌದು, ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಅಲ್ಟ್ರಾ (Samsung Galaxy S22 Ultra) ಸ್ಮಾರ್ಟ್‌ಫೋನ್ ಬಳಕೆದಾರರು ಗ್ರೀನ್ ಲೈನ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದರಿಂದ ಬೇಸತ್ತ ಅದೆಷ್ಟೋ ಬಳಕೆದಾರರು ಎಕ್ಸ್‌ನಲ್ಲಿ ಹಾಗೂ ರೆಡ್ಡಿಟ್‌ನಲ್ಲಿ ತಮ್ಮ ಅನುಭವ ತೋಡಿಕೊಂಡಿದ್ದರು. ಆದರೆ, ಈಗ ಸ್ಯಾಮ್‌ಸಂಗ್ ಈ ಸಮಸ್ಯೆಗೆ ಪರಿಹಾರ ನೀಡಿದೆ. ಆದರೆ ಇದು ಸೀಮಿತ ಸಮಯದ ವರೆಗೆ ಮಾತ್ರ. ಹಾಗಿದ್ರೆ ಯಾರೆಲ್ಲಾ ಉಚಿತ ಸೇವೆ ಪಡೆಯಬಹುದು?, ಯಾಕಾಗಿ ಈ ಸಮಸ್ಯೆ ಎದುರಾಯಿತು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಅಲ್ಟ್ರಾ: ಹಳೆಯ ಸ್ಯಾಮ್‌ಸಂಗ್ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳ ಡಿಸ್‌ಪ್ಲೇನಲ್ಲಿ ಗ್ರೀನ್ ಲೈನ್ ಗಳು ಕಾಣಿಸಿಕೊಳ್ಳುತ್ತಿವೆ. ಅದರಂತೆ ಈಗ ಅರ್ಹ ಹ್ಯಾಂಡ್‌ಸೆಟ್‌ಗಳನ್ನು ಬದಲಿ ಫ್ರೀ ಡಿಸ್‌ಪ್ಲೇಗಾಗಿ ಗುರುತಿಸಲಾಗಿದ್ದು, ಇದರಲ್ಲಿ ಗ್ಯಾಲಕ್ಸಿ ನೋಟ್ 20 ಸರಣಿ ಮತ್ತು ಗ್ಯಾಲಕ್ಸಿ ಎಸ್ 20 ಸರಣಿ ಪೋನ್‌ಗಳು ಇವೆ. ಅದರಲ್ಲೂ ತಯಾರಕರು ಈಗ ಗ್ಯಾಲಕ್ಸಿ S21 ಮತ್ತು ಗ್ಯಾಲಕ್ಸಿ S22 ಸರಣಿಯ ಮಾದರಿಗಳನ್ನು ಫ್ರೀ ಡಿಸ್‌ಪ್ಲೇ ಬದಲಿಗೆ ಸೇರಿಸಿಕೊಂಡಿದೆ. ಅರ್ಹ ಡಿವೈಸ್‌ಗಳ ಪಟ್ಟಿಯನ್ನು ವಿಸ್ತರಿಸಿರುವುದರಿಂದ ಭಾರತದಲ್ಲಿ ಸಮಸ್ಯೆ ಹೆಚ್ಚುತ್ತಿದೆ ಎಂದು ಕಂಡುಬಂದಿದೆ.
ಇನ್ನು ಕಂಪನಿಯು ಜುಲೈ 2023 ರಿಂದ ಆಯ್ದ ಸ್ಮಾರ್ಟ್‌ಫೋನ್‌ಗಳಿಗೆ ಉಚಿತ ಡಿಸ್‌ಪ್ಲೇ ಬದಲಿ ಸೇವೆಯನ್ನು ನೀಡುತ್ತಿದೆ. ಅರ್ಹ ಹ್ಯಾಂಡ್‌ಸೆಟ್‌ಗಳಲ್ಲಿ ಗ್ಯಾಲಕ್ಸಿ ನೋಟ್ 20 ಸರಣಿ ಮತ್ತು ಗ್ಯಾಲಕ್ಸಿ S20 ಸರಣಿಗಳು ಸೇರಿವೆ. ಈ ಪಟ್ಟಿಯು ವಿಸ್ತರಣೆ ಆಗಿದ್ದು, ಈಗ ಗ್ಯಾಲಕ್ಸಿ S21 ಮತ್ತು ಗ್ಯಾಲಕ್ಸಿ S22 ಸರಣಿಯ ಮಾದರಿಗಳನ್ನು ಸಹ ಸೇರಿಸಲಾಗುತ್ತದೆ ಎಂದು ವರದಿಗಳಿಂದ ತಿಳಿದುಬಂದಿದೆ.

ತರುಣ್ ವ್ಯಾಟ್ಸ್ ಹಂಚಿಕೊಂಡಿರುವ ಚಾಟ್ ಸ್ಕ್ರೀನ್‌ಗ್ರಾಬ್ ಪ್ರಕಾರ, ಡಿಸ್‌ಪ್ಲೇ ರಿಪೇರಿಗಳ ಹೊರತಾಗಿ, ಈ ಡಿವೈಸ್‌ಗಳು ಒಂದು ಬಾರಿ OCTA ಅಸೆಂಬ್ಲಿ, ಬ್ಯಾಟರಿ ಮತ್ತು ರಿವರ್ಕ್ ಕಿಟ್‌ನ ಉಚಿತ ಬದಲಿ ಅನ್ನು ಸಹ ಪಡೆಯಬಹುದು. ಸ್ಯಾಮ್‌ಸಂಗ್ ಸೇವಾ ಕೇಂದ್ರದಲ್ಲಿ ಅಪಾಯಿಂಟ್‌ಮೆಂಟ್ ಅನ್ನು ಕಾಯ್ದಿರಿಸಲು ಮತ್ತು ಆಫರ್ ಅನ್ನು ಪಡೆದುಕೊಳ್ಳಲು ಗಡುವು ಏಪ್ರಿಲ್ 30, 2024 ಆಗಿದೆ.
ಇನ್ನು ಈ ಫ್ರೀ ಡಿಸ್‌ಪ್ಲೇ ಪಡೆದುಕೊಳ್ಳಲು ಈಗ ಗ್ಯಾಲಕ್ಸಿ S22 ಅಲ್ಟ್ರಾ, ಗ್ಯಾಲಕ್ಸಿ S21, ಗ್ಯಾಲಕ್ಸಿ S21 ಪ್ಲಸ್, ಗ್ಯಾಲಕ್ಸಿ S21 ಅಲ್ಟ್ರಾ, ಗ್ಯಾಲಕ್ಸಿ S20, ಗ್ಯಾಲಕ್ಸಿ S20 ಪ್ಲಸ್, ಗ್ಯಾಲಕ್ಸಿ S20 ಅಲ್ಟ್ರಾ, ಗ್ಯಾಲಕ್ಸಿ ನೋಟ್ 20 ಮತ್ತು ಗ್ಯಾಲಕ್ಸಿ ನೋಟ್ 20 ಅಲ್ಟ್ರಾ ಸೇರಿವೆ. ಇವುಗಳ ವಾರಂಟಿ ಅವಧಿ ಮುಗಿದಿದ್ದರೂ ಮತ್ತು ಯಾವುದೇ ಭೌತಿಕ ಅಥವಾ ನೀರಿನ ಹಾನಿ ಇಲ್ಲದಿದ್ದರೂ ಸಹ ಡಿಸ್‌ಪ್ಲೇ ಸಮಸ್ಯೆಯನ್ನು ಪರಿಗಣಿಸಲು ಸ್ಯಾಮ್‌ಸಂಗ್ ಮುಂದಾಗಿದೆ. ಆದರೆ ಈ ನೀತಿಯು ಖರೀದಿಸಿದ ದಿನಾಂಕದಿಂದ ಮೂರು ವರ್ಷಗಳೊಳಗಿನ ಫೋನ್‌ಗಳಿಗೆ ಮಾತ್ರ ಅನ್ವಯಿಸುತ್ತದೆ.
ಎಕ್ಸ್‌ನಲ್ಲಿ ಕೆಲವರು ಈ ಸಮಸ್ಯೆ ಯಾವಾಗ ಕಾಣಿಸಿಕೊಂಡಿದೆ ಅನ್ನೋದನ್ನು ಉಲ್ಲೇಖ ಮಾಡಿದ್ದಾರೆ. ಅದರಂತೆ ಮಾರ್ಚ್ ನವೀಕರಣದ ನಂತರ ಗ್ಯಾಲಕ್ಸಿ S21 FE ಸ್ಮಾರ್ಟ್‌ಫೋನ್ ಸೇರಿದಂತೆ ಇತರೆ ಫೋನ್‌ಗಳು ಡಿಸ್‌ಪ್ಲೇ ಸಮಸ್ಯೆಗಳನ್ನು ಎದುರಿಸಿವೆ. ಈ ನಡುವೆ ಸ್ಯಾಮ್‌ಸಂಗ್ ಮಾತ್ರವಲ್ಲದೆ ಪ್ರಮುಖ ಹಾಗೂ ಭಾರೀ ಜನಪ್ರಿಯತೆ ಪಡೆದಿರುವ ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳು ಸಹ ಈ ಸಂಬಂಧ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿವೆ. ಆದರೆ, ಈಗ ಸ್ಯಾಮ್‌ಸಂಗ್ ಸರದಿಯಾಗಿದ್ದು, ಇದನ್ನು ಸರಿಪಡಿಸುವ ಮೂಲಕ ಬಳಕೆದಾರರ ಅನುಭವವನ್ನು ಹೆಚ್ಚಿಸುವ ಕೆಲಸ ಮಾಡುತ್ತಿದೆ.


Click it and Unblock the Notifications








