100% ಸುರಕ್ಷತೆಯೊಂದಿಗೆ ಉಚಿತ ಹಾಡುಗಳ ಡೌನ್‌ಲೋಡ್ ವೆಬ್‌ಸೈಟ್‌ಗಳಿವು!
ಸ್ಮಾರ್ಟ್‌ಗ್ಯಾಜೆಟ್‌ಗಳ ಮೂಲಕ ಮಾಹಿತಿ, ಮನರಂಜನೆ ಹಾಗೂ ಇನ್ನಿತರೆ ಸೇವೆ ಪಡೆದುಕೊಳ್ಳುವುದು ಸಾಮಾನ್ಯ. ಅದರಲ್ಲೂ ಪ್ರಯಾಣ ಮಾಡುವಾಗ, ಬೇಸರವಾದಾಗ ಸಮಯ ಕಳೆಯಲು ಸಂಗೀತ ಆಲಿಸುವವರ ಸಂಖ್ಯೆ ಹೆಚ್ಚಾಗಿಯೇ ಇರುತ್ತದೆ. ಈ ನಡುವೆ ಹಲವಾರು ಜನರು ಯಾವ್ಯಾವುದೋ ವೆಬ್‌ಸೈಟ್‌ಗೆ ಭೇಟಿ ನೀಡಿ ಹಾಡುಗಳನ್ನು ಡೌನ್‌ಲೋಡ್ ಮಾಡುವ ಆತುರದಲ್ಲಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
ಹೌದು, ಸಾಮಾನ್ಯವಾಗಿ ಎಲ್ಲಾ ರೀತಿಯ ಆಡಿಯೋ ಹಾಗೂ ವಿಡಿಯೋ ಕಂಟೆಂಟ್ ಅನ್ನು ಡೌನ್‌ಲೋಡ್ ಮಾಡಲು ಸಾವಿರಾರು ವೆಬ್‌ಸೈಟ್‌ಗಳಿಗೆ. ಆದರೆ ಇವೆಲ್ಲಾ ಸುರಕ್ಷಿತವಾದವು ಎಂದು ನೀವು ಎಂದಿಗೂ ತಿಳಿದುಕೊಳ್ಳಬೇಡಿ.ಯಾಕೆಂದರೆ ಈ ವೆಬ್‌ಸೈಟ್‌ಗಳನ್ನು ನಿಯಂತ್ರಿಸುವ ಸ್ಕ್ಯಾಮರ್‌ಗಳು ನಿಮ್ಮ ಡಿವೈಸ್‌ಗೆ ಮಾಲ್‌ವೇರ್ ಮೂಲಕ ಎಂಟ್ರಿ ನೀಡಲಿದ್ದು,ನಿಮ್ಮ ಖಾಸಗಿ ಮಾಹಿತಿ ಹಾಗೂ ಇನ್ನಿತರೆ ಅಗತ್ಯ ಮಾಹಿತಿಯನ್ನು ಕದಿಯುತ್ತಾರೆ.ಹೀಗಾಗಿ100% ಸುರಕ್ಷತೆಯೊಂದಿಗೆ ಉಚಿತವಾಗಿ ಹಾಡುಗಳನ್ನು ಡೌನ್‌ಲೋಡ್ ಮಾಡಲು ಕೆಲ ವೆಬ್‌ಸೈಟ್‌ಗಳ ಬಗ್ಗೆ ನಾವಿಂದು ವಿವರಿಸಿದ್ದೇವೆ ಈ ಲೇಖನ ಓದಿರಿ.

ಯೂಟ್ಯೂಬ್ ಆಡಿಯೋ ಲೈಬ್ರರಿ:ಯೂಟ್ಯೂಬ್ ಆಡಿಯೊ ಲೈಬ್ರರಿಯಲ್ಲಿ ಯಾವುದೇ ಹಕ್ಕುಸ್ವಾಮ್ಯ ಸಮಸ್ಯೆ ಇರುವುದಿಲ್ಲ.ಇದು ಸಂಗೀತ ವಿಭಾಗದಲ್ಲಿ ವ್ಯಾಪಕ ಆಯ್ಕೆಯನ್ನು ನೀಡುತ್ತಿದ್ದು,ನಿಮ್ಮ ಭಾವನೆಗೆ ತಕ್ಕ ಹಾಡುಗಳನ್ನು ಈ ಮೂಲಕ ಕೇಳಬಹುದು. ಜೊತೆಗೆ ಡೌನ್‌ಲೋಡ್ ಮಾಡಿಕೊಳ್ಳಬಹುದು.ಇದಕ್ಕಾಗಿ ನೀವು ಯೂಟ್ಯೂಬ್ ಸ್ಟುಡಿಯೋ ಓಪನ್ ಮಾಡಿ. ನಂತರ ಆಡಿಯೋ ಲೈಬ್ರರಿ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಿ.ಬಳಿಕ ಅಗತ್ಯ ಹಾಡುಗಳನ್ನು ಹುಡುಕಿ, ಅದರಲ್ಲಿ ಡೌನ್‌ಲೋಡ್ ಲೋಗೋ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಟ್ಯಾಪ್ ಮಾಡಿದರೆ ಸಾಕು.
ಬ್ಯಾಂಡ್‌ಕ್ಯಾಂಪ್ : ಬ್ಯಾಂಡ್‌ಕ್ಯಾಂಪ್ ಎಂಬುವುದು ಆನ್‌ಲೈನ್ ಮ್ಯೂಸಿಕ್ ಸ್ಟೋರ್ ಮತ್ತು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಆಗಿದ್ದು, ಇದು ಸ್ವತಂತ್ರ ಸಂಗೀತಗಾರರಿಗೆ ತಮ್ಮ ಸಂಗೀತವನ್ನು ನೇರವಾಗಿ ಅವರ ಅಭಿಮಾನಿಗಳಿಗೆ ಮಾರಾಟ ಮಾಡಲು ಮತ್ತು ಪ್ರಚಾರ ಮಾಡಲು ಅಧಿಕಾರ ನೀಡುತ್ತದೆ. ಇದರಲ್ಲಿ ಡಿಜಿಟಲ್ ಡೌನ್‌ಲೋಡ್‌ಗಳು, ವಿನೈಲ್ ಮತ್ತು ಸಿಡಿಗಳಂತಹ ವಿವಿಧ ಸ್ವರೂಪಗಳು ಇರಲಿದ್ದು, www.bandcamp.com ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಉಚಿತ ಹಾಡುಗಳನ್ನು ಡೌನ್‌ಲೋಡ್ ಮಾಡಬಹುದು.

ಫ್ರೀ ಮ್ಯೂಸಿಕ್ ಆರ್ಕೈವ್: ಈ ವೆಬ್‌ಸೈಟ್‌ನಲ್ಲಿ ರೇಡಿಯೋ ಸ್ಟೇಷನ್, ಆಡಿಯೋ ಡೌನ್‌ಲೋಡ್‌ಗಳ ಸೇವೆ ಪಡೆದುಕೊಳ್ಳಬಹುದಾಗಿದೆ. ಅದರಲ್ಲೂ ಕಡಿಮೆ ಪ್ರಸಿದ್ಧ ಕಲಾವಿದರನ್ನು ಉತ್ತೇಜಿಸಲು ಮುಂದಾದರೆ ಈ ಪ್ಲಾಟ್‌ಫಾರ್ಮ್ ಉತ್ತಮವಾಗಿದೆ. ಈ ವೇದಿಕೆಯಲ್ಲಿ ಹಾಡುಗಳನ್ನು ಡೌನ್‌ಲೋಡ್ ಮಾಡಲು ನೀವು www.freemusicarchive.org ಎಂದು ಟೈಪ್ ಮಾಡಿ. ಬಳಿಕ ನಿಮ್ಮಿಷ್ಟದ ಹಾಡುಗಳನ್ನು ಸರ್ಚ್ ಮಾಡಿದರೆ ಅದರ ಕೆಳಗೆ ಡೌನ್‌ಲೋಡ್ ಲೋಗೋ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಿದರೆ ಸಾಕು.
ಆಡಿಯೊ ಮ್ಯಾಕ್: ಆಡಿಯೊ ಮ್ಯಾಕ್ ಮ್ಯೂಸಿಕ್ ಸ್ಟ್ರೀಮಿಂಗ್ ಮತ್ತು ಶೇರ್ ಮಾಡಲು ವಿನ್ಯಾಸಗೊಳಿಸಲಾದ ಪ್ಲಾಟ್‌ಫಾರ್ಮ್ ಆಗಿದ್ದು, ಇದು ಕಲಾವಿದರಿಗೆ ತಮ್ಮ ಸಂಗೀತವನ್ನು ಅಪ್‌ಲೋಡ್ ಮಾಡಲು ಮತ್ತು ಅವರ ಅಭಿಮಾನಿಗಳನ್ನು ಹೆಚ್ಚಿಸಿಕೊಳ್ಳಲು ಅವಕಾಶ ನೀಡುತ್ತದೆ. ಇದರಲ್ಲಿ ಹಿಪ್-ಹಾಪ್, ಎಲೆಕ್ಟ್ರಾನಿಕ್ ಮತ್ತು ರೆಗ್ಗೀ ಮುಂತಾದ ಸಂಗೀತ ಪ್ರಕಾರಗಳಿವೆ. ಇದರಲ್ಲಿ www.audiomack.com ಎಂದು ಟೈಪ್ ಮಾಡುವ ಮೂಲಕ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ. ಜೊತೆಗೆ ಆಪ್ ಸಹ ಲಭ್ಯ ಇದೆ.

ರಾಕ್ ಆನ್: ಅತ್ಯಂತ ಸುರಕ್ಷಿತ ಹಾಗೂ ಉಚಿತವಾಗಿ ಸಂಗೀತ ಆಲಿಸಬೇಕು ಎಂದು ನೀವೇನಾದರೂ ಸರ್ಚ್ ಮಾಡುತ್ತಿದ್ದರೆ ಮೇಲೆ ತಿಳಿಸಿದ ವೆಬ್‌ಸೈಟ್‌ಗಳಂತೆ ಈ ರಾಕ್ ಆನ್ ಸಹ ಪ್ರಮುಖ ಪ್ಲಾಟ್‌ಫಾರ್ಮ್ ಆಗಿದೆ. ಅದರಲ್ಲೂ ಸ್ವತಂತ್ರ ಕಲಾವಿದರನ್ನು ಉತ್ತೇಜಿಸಬೇಕು ಅವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ನೀವು ಬಯಸಿದರೆ ಜೊತೆಗೆ ಉಚಿತ ಹಾಡುಗಳನ್ನು ಡೌನ್‌ಲೋಡ್ ಮಾಡಲು ಇಚ್ಚಿಸಿದರೆ ಈ ಸೈಟ್ ಸಹ ಉತ್ತಮವಾಗಿದೆ.


Click it and Unblock the Notifications








