ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳಲ್ಲಿ ಉಚಿತ ಇಂಟರ್ನೆಟ್‌ ಸಂಪರ್ಕ

By Suneel
|

ಅಂತೂ ಇಂತೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕರ್ನಾಟಕ ರಾಜ್ಯದ 13 ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣಗಳಲ್ಲಿ ಉಚಿತ ಇಂಟರ್ನೆಟ್‌ ಅನ್ನು ಒದಗಿಸುವ ಉದ್ದೇಶದಿಂದ ವೈಫೈ ಸೇವೆಯನ್ನು ಪ್ರಾಯೋಗಿಕವಾಗಿ ಆರಂಭಿಸಿದೆ. ಕರ್ನಾಟಕದ ಈ 13 ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣಗಳಲ್ಲಿ "ನೋಡ್ರಪ್ಪಾ ಮೊಬೈಲ್‌ ಬಳಕೆದಾರರೆ, ಲ್ಯಾಪ್‌ಟಾಪ್‌ ಬಳಕೆದಾರರೇ ನಮ್ ಸರ್ಕಾರಿ ಬಸ್ಸುಗಳು ಬರೋತನಕ ನೀವು ಬಸ್ಸತ್ತಿ ಕೂರೋತನಕ ಎನಾದ್ರು ಬೇಜಾರಾದ್ರೆ ಉಚಿತವಾಗಿ ವೈಫೈ ಬಳಸಿ ಇಂಟರ್ನೆಟ್‌ ಕನೆಕ್ಟ್‌ ಮಾಡಿಕೊಂಡು ಮನರಂಜನೆ ಪಡೆಯಿರಿ ಅಥವಾ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲಿ ಎಂದು" ಪ್ರಾಯೋಗಿಕವಾಗಿ ವೈಫೈ ಸೇವೆ ಆರಂಭಿಸಿದೆ.

ಓದಿರಿ:ಸ್ಮಾರ್ಟ್‌ಫೋನ್‌ ಕಳೆದುಹೋದಲ್ಲಿ ಹುಡುಕುವುದು ಹೇಗೆ

ಪ್ರಸ್ತುತದಲ್ಲಿ ಕೆಎಸ್‌ಆರ್‌ಟಿಸಿ 13 ಬಸ್‌ ನಿಲ್ದಾಣಗಳಲ್ಲಿ ಉಚಿತ ವೈಫೈ ಸಂಪರ್ಕ ಕಲ್ಪಿಸಿದೆ. ಹಾಗಾದರೆ ಉಚಿತ ವೈಫೈ ಯಾವ ಯಾವ ಬಸ್‌ ನಿಲ್ದಾಣಗಳಲ್ಲಿ ಲಭ್ಯ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.

ಉಚಿತ ವೈಫೈ ಬಸ್‌ ನಿಲ್ದಾಣಗಳು

ಉಚಿತ ವೈಫೈ ಬಸ್‌ ನಿಲ್ದಾಣಗಳು

ಬೆಂಗಳೂರು - ಕೆಂಪೇಗೌಡ ಬಸ್‌ ನಿಲ್ದಾಣ
ಬೆಂಗಳೂರು - ಶಾಂತಿನಗರ ಬಸ್‌ ನಿಲ್ದಾಣ
ಹಾಸನ ಕೆಎಸ್ಆರ್‌ಟಿಸಿ ಬಸ್‌ ನಿಲ್ದಾಣ
ತುಮಕೂರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ

 ಉಚಿತ ವೈಫೈ ನಿಲ್ದಾಣಗಳು

ಉಚಿತ ವೈಫೈ ನಿಲ್ದಾಣಗಳು

ಮಂಡ್ಯ ಕೆಎಸ್ಆರ್‌ಟಿಸಿ ಬಸ್‌ ನಿಲ್ದಾಣ
ಮಡಿಕೇರಿ ಕೆಎಸ್ಆರ್‌ಟಿಸಿ ಬಸ್‌ ನಿಲ್ದಾಣ
ಧರ್ಮಸ್ಥಳ ಕೆಎಸ್ಆರ್‌ಟಿಸಿ ಬಸ್‌ ನಿಲ್ದಾಣ
ಮಂಗಳೂರು ಕೆಎಸ್ಆರ್‌ಟಿಸಿ ಬಸ್‌ ನಿಲ್ದಾಣ
ಕುಂದಾಪುರ ಕೆಎಸ್ಆರ್‌ಟಿಸಿ ಬಸ್‌ ನಿಲ್ದಾಣ

ಉಚಿತ ವೈಫೈ ನಿಲ್ದಾಣಗಳು

ಉಚಿತ ವೈಫೈ ನಿಲ್ದಾಣಗಳು

ಶಿವಮೊಗ್ಗ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ
ಹರಿಹರ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ
ದಾವಣಗೆರೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ
ಚಿಕ್ಕಮಗಳೂರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ
ಚಿತ್ರ ಕೃಪೆ: ಕೆಎಸ್‌ಆರ್‌ಟಿಸಿ ಬ್ಲಾಗ್‌.ಕಾಂ

ವೈಫೈ ಪಡೆಯುವುದು ಹೇಗೆ ?

ವೈಫೈ ಪಡೆಯುವುದು ಹೇಗೆ ?

* ಮೊದಲು ನಿಮ್ಮ ಮೊಬೈಲ್‌ನಲ್ಲಿ ವೈಫೈ ಆನ್‌ ಮಾಡಿ. ನಂತರದಲ್ಲಿ "ION Wi-Fi" ನೆಟ್‌ವರ್ಕ್‌ ಬರುತ್ತದೆ.
* ಗೂಗಲ್‌ ಪ್ಲೇ ಸ್ಟೋರ್‌ನಿಂದ "ION Wi-Fi" ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ.
* ಐಫೋನ್‌ ಬಳಕೆದಾರರು ಬ್ರೌಸರ್‌ ಮೂಲಕ ನೇರವಾಗಿ ಲಾಗಿನ್‌ ಆಗಬಹುದು ಅಥವಾ ಐಸ್ಟೋರ್‌ನಿಂದ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

 ವೈಫೈ ಪಡೆಯುವುದು ಹೇಗೆ?

ವೈಫೈ ಪಡೆಯುವುದು ಹೇಗೆ?

* "ION Wi-Fi" ಅಪ್ಲಿಕೇಶನ್‌ಗಾಗಿ ಕ್ಲಿಕ್‌ ಮಾಡಿ
* "ION Wi-Fi" ಆಪ್‌ನಲ್ಲಿ ಅಥವಾ ನೇರವಾಗಿ ಬ್ರೌಸರ್‌ನಲ್ಲಿ ನಿಮ್ಮ ಮೊಬೈಲ್‌ ನಂಬರ್‌ ಅನ್ನು ದಾಖಲಿಸಿ. ನಿಮಗೆ ಎಸ್ಎಂಎಸ್‌ ಮೂಲಕ ಪಾಸ್‌ವರ್ಡ್‌ ಬರುತ್ತದೆ. ಅದನ್ನು ನೀಡಿ ಸಬ್ಮಿಟ್‌ ಮಾಡಿ.
* ನಂತರದಲ್ಲಿ ನೀವು ಇಂಟರ್ನೆಟ್‌ ಸಂಪರ್ಕ ಪಡೆಯುತ್ತೀರಿ.

Best Mobiles in India

English summary
Free Wi-fi at bus stations in Karnataka's 13 towns, cities. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X