ಸ್ಮಾರ್ಟ್‌ಫೋನ್‌ ಕಳೆದುಹೋದಲ್ಲಿ ಹುಡುಕುವುದು ಹೇಗೆ..

By Suneel
|

ಮೊಬೈಲ್‌ ಬಳಸುತ್ತಿರುವ ಎಲ್ಲಾ ಮೊಬೈಲ್‌ ಬಳಕೆದಾರರಿಗೆ ಒಂದು ದಿನ ತಮ್ಮ ಮೊಬೈಲ್‌ ಇಲ್ಲ ಅಂದ್ರು ತಾಳ್ಮೆಯನ್ನು ಕಳೆದುಕೊಳ್ಳುವುದರಲ್ಲಿ ಸಂಶಯವಿಲ್ಲಾ. ಕಾರಣ ಮೊಬೈಲ್‌ ಬಳಕೆದಾರರು ಇಂದು ತಮ್ಮ ವಯಕ್ತಿಕ ಮಾಹಿತಿಗಳು, ಬ್ಯಾಂಕಿಂಕ್‌ ನಿರ್ವಹಣೆ ಹೀಗೆ ಹಲವು ಮುಖ್ಯ ಚಟುವಟಿಕೆಗಳನ್ನೆಲ್ಲಾ ಮೊಬೈಲ್‌ನಲ್ಲೇ ನಿರ್ವಹಿಸುತ್ತಿರುತ್ತಾರೆ. ಆಕಸ್ಮಿಕವಾಗಿ ಮೊಬೈಲ್‌ ಕಳೆದುಕೊಳ್ಳುವುದು ಸಹಜ ಕ್ರಿಯೆ ಆಗಿದೆ. ಅಂತಹ ಸಂದರ್ಭದಲ್ಲಿ ಕೆಲವರು ಮೊಬೈಲ್‌ ಕಳೆದು ಹೋದದಕ್ಕೆ ಚಿಂತಿಸುವುದು ಬಿಟ್ಟು ಅದರಲ್ಲಿನ ವಯಕ್ತಿಕ ಮಾಹಿತಿಗಳು ದುರ್ಬಳಕೆಯಾದಲ್ಲಿ ಎಂಬ ಭಯದಿಂದ ನಡುಗುವುದುಂಟು ಅಲ್ಲವೇ ? ಇಂತಹ ಸಮಸ್ಯೆಗಳಿಂದ ಪಾರಾಗಲು ಅಂದರೆ ಮೊಬೈಲ್‌ ಕಳೆದು ಹೋದರೆ ಮೊಬೈಲ್‌ ಅನ್ನು ಟ್ರ್ಯಾಕ್‌ ಮಾಡುವ ಮತ್ತು ವಯಕ್ತಿಕ ಮಾಹಿತಿಗಳು ದುರ್ಬಳಕೆಯಾಗದಂತೆ ಮೊಬೈಲ್‌ ಅನ್ನು ನಿರ್ವಹಿಸುವುದು ಹೇಗೆ ಎಂಬುದನ್ನು ನಾವು ತಿಳಿಸುತ್ತೇವೆ.

ಓದಿರಿ : ಆನ್‌ಲೈನ್‌ನಿಂದ ಹಣ ಸಂಪಾದಿಸಲು 10 ಸರಳ ವಿಧಾನಗಳು

ಇಂದು ನಿಮ್ಮ ಕಳೆದು ಹೋದ ಮೊಬೈಲ್‌ಗಳನ್ನು ಆಂಡ್ರಾಯ್ಡ್‌ ಡಿವೈಸ್‌ ಮ್ಯಾನೇಜರ್‌ಗಳಿಂದ ಸುಲಭವಾಗಿ ಟ್ರ್ಯಾಕ್‌ ಮಾಡಬಹುದಾಗಿದೆ. ಅಲ್ಲದೇ ವಯಕ್ತಿಕ ಮಾಹಿತಿಗಳನ್ನು ಕಾಪಾಡಿ ಕೊಳ್ಳಬಹುದಾಗಿದೆ. ಅದು ಹೇಗೆ ಎಂದು ಲೇಖನ ಓದಿ ತಿಳಿಯಿರಿ.

 ಆಂಡ್ರಾಯ್ಡ್ ಡಿವೈಸ್‌ ಮೆನೇಜರ್

ಆಂಡ್ರಾಯ್ಡ್ ಡಿವೈಸ್‌ ಮೆನೇಜರ್

ನೀವು ಕಳೆದು ಕೊಂಡ ಮೊಬೈಲ್‌ ಟ್ರ್ಯಾಕ್‌ ಮಾಡಲು ಐಒಎಸ್‌ ಡಿವೈಸ್‌ಗಳನ್ನು ಬಳಸುವವರು "Find my iPhone" ಅಪ್ಲಿಕೇಶನ್‌ ಬಳಸಿ. ಆಂಡ್ರಾಯ್ಡ್‌ ಬಳಕೆದಾರರು ಆಂಡ್ರಾಯ್ಡ್ ಡಿವೈಸ್‌ ಮೆನೇಜರ್ ಬಳಸಿ.

 ಗೂಗಲ್‌ ಸೆಟ್ಟಿಂಗ್ಸ್‌

ಗೂಗಲ್‌ ಸೆಟ್ಟಿಂಗ್ಸ್‌

ಆಂಡ್ರಾಯ್ಡ್‌ ಡಿವೈಸ್‌ ಮ್ಯಾನೇಜರ್ ಸೆಟ್‌ಮಾಡಲು ಗೂಗಲ್‌ ಸೆಟ್ಟಿಂಗ್ಸ್‌ಗೆ ಹೋಗಿ 'ಸೆಕ್ಯುರಿಟಿ' ಎಂಬ ಆಯ್ಕೆ ಮೇಲೆ ಟ್ಯಾಪ್‌ ಮಾಡಿ. ಅಲ್ಲಿ "android device manager" ಎಂದು ಇರುತ್ತದೆ. ಅದರ ಕೆಳಗೆ "Remotely locate this divice" ಎಂಬ ಆಯ್ಕೆಯನ್ನು ಎನೇಬಲ್‌ ಮಾಡಿ. ಹಾಗೂ "Allow remote lock" ಅನ್ನು ಸಹ ಎನೇಬಲ್ ಮಾಡಿ.

ಕಳೆದು ಹೋದ ಫೋನ್‌ ಟ್ರ್ಯಾಕ್‌ ಹೇಗೆ

ಕಳೆದು ಹೋದ ಫೋನ್‌ ಟ್ರ್ಯಾಕ್‌ ಹೇಗೆ

ಕಂಪ್ಯೂಟರ್‌ನಲ್ಲಿ ನಿಮ್ಮ ಗೂಗಲ್‌ ಖಾತೆಯನ್ನು ಲಾಗಿನ್‌ ಆಗಿ ಅಲ್ಲಿ ನಿಮ್ಮ ಆಂಡ್ರಾಯ್ಡ್‌ ಡಿವೈಸ್‌ ಮ್ಯಾನೇಜರ್ ಎಂದು ಬ್ರೌಸರ್‌ ಟೈಟಲ್‌ನಲ್ಲಿ ಟೈಪ್ ಮಾಡಿ. ಮೊಬೈಲ್‌ ಇರುವ ಸ್ಥಳ ಗೂಗಲ್‌ ಮ್ಯಾಪ್‌ನಲ್ಲಿ ನಿಮಗೆ ಕಾಣುತ್ತದೆ.

ಲಾಕ್‌ಸ್ಕ್ರೀನ್‌ ಬೈಪಾಸ್‌ ಹೇಗೆ

ಲಾಕ್‌ಸ್ಕ್ರೀನ್‌ ಬೈಪಾಸ್‌ ಹೇಗೆ

ಒಂದು ವೇಳೆ ಯಾವುದೋ ಒಂದು ಸಂದರ್ಭದಲ್ಲಿ ಮೊಬೈಲ್‌ ಕಳೆದು ಕೊಂಡಲ್ಲಿ ಅದನ್ನು ಲಾಕ್‌ ಮಾಡಲು "android device manager" ಮೂಲಕ ಬೈಪಾಸ್‌ ಲಾಕ್‌ ಸ್ಕ್ರೀನ್ ಮಾಡುವುದರ ಜೊತೆಗೆ ಕಸ್ಟಮ್‌ ಮೆನೇಜರ್‌ ಹೊಂದಿಸಿ ಅಥವಾ ಲಾಕ್‌ ಸ್ಕ್ರೀನ್‌ನಲ್ಲಿ ಇತರೆ ಫೋನ್‌ ನಂಬರ್‌ ನೀಡಿ.

ಸೆಟ್‌ ಅಪ್‌ ಲಾಕ್‌ ಸ್ಕ್ರೀನ್‌

ಸೆಟ್‌ ಅಪ್‌ ಲಾಕ್‌ ಸ್ಕ್ರೀನ್‌

"android device manager" ನಲ್ಲಿ ಸೆಟ್‌ ಅಪ್‌ ಲಾಕ್‌ ಸ್ಕ್ರೀನ್‌ ಅಂಡ್‌ ಎರೇಸ್ ಮೇಲೆ ಕ್ಲಿಕ್‌ ಮಾಡಿ. ಅಲ್ಲಿ ಲಾಕ್‌ ಮೇಲೆ ಕ್ಲಿಕ್‌ ಮಾಡಿ ಪಾಸ್‌ವರ್ಡ್‌ ನೀಡಿ. ಇಲ್ಲವಾದಲ್ಲಿ ನಿಮ್ಮ ಮೊಬೈಲ್‌ನಲ್ಲಿಯ ವಯಕ್ತಿಕ ವಿಷಯಗಳನ್ನು ನೀವೆ ಪರಿಚಯಿಸಿದಂತಾಗುತ್ತದೆ.

ನ್ಯೂ ಲಾಕ್‌ ಸ್ಕ್ರೀನ್

ನ್ಯೂ ಲಾಕ್‌ ಸ್ಕ್ರೀನ್

ನ್ಯೂ ಲಾಕ್‌ ಸ್ಕ್ರೀನ್‌ನಲ್ಲಿ ಪಾಸ್‌ವರ್ಡ್‌ ನೀಡಿ. ಮತ್ತೊಮ್ಮೆ ಪಾಸ್‌ವರ್ಡ್‌ ಖಚಿತಪಡಿಸಿ. ನಂತರದಲ್ಲಿ ರಿಕವರಿ ಮೆಸೇಜ್‌ ಮತ್ತು ಫೋನ್‌ ನಂಬರ್ ನೀಡಿ.

ಮೊಬೈಲ್‌ ರಿಂಗ್‌

ಮೊಬೈಲ್‌ ರಿಂಗ್‌

ನಿಮ್ಮ ಮೊಬೈಲ್‌ ಅನ್ನು "android device manager" ಮೂಲಕ ಲಾಕ್‌ ಮಾಡಿದ ನಂತರ ಮೊಬೈಲ್‌ ನೀವು ಇರುವ ಹತ್ತಿರದಲ್ಲಿ ಇರುವ ಬಗ್ಗೆ ಖಚಿತ ಪಡಿಸಲು 'ಲೋಕೆಶನ್' ಆನ್‌ ಆಗಿದ್ದಲ್ಲಿ, ಮತ್ತು ಆನ್‌ಲೈನ್‌ ನಲ್ಲಿ ಇದ್ದಲ್ಲಿ ರಿಂಗ್ ಮೇಲೆ ಕ್ಲಿಕ್‌ ಮಾಡಿ. ಇದು 5 ನಿಮಿಷಗಳವರೆಗೆ ರಿಂಗ್‌ ಆಗುತ್ತದೆ.

 ಡಾಟಾ ಎರೇಸ್‌ಮಾಡುವುದು ಹೇಗೆ

ಡಾಟಾ ಎರೇಸ್‌ಮಾಡುವುದು ಹೇಗೆ

ನಿಮ್ಮ ಮೊಬೈಲ್‌ನಲ್ಲಿ ಬ್ಯಾಂಕ್‌ ಹಾಗೂ ಇತರೆ ಮುಖ್ಯ ಮಾಹಿತಿ ಇದ್ದಲ್ಲಿ ಇತರರಿಗೆ ತಿಳಿಯದಂತೆ ಮಾಡಲು "android device manager" ಮೂಲಕ ಲಾಕ್‌ ನಂತರದಲ್ಲಿರುವ ಎರೇಸ್ ಮೇಲೆ ಕ್ಲಿಕ್‌ ಮಾಡಿ. ಇದು ನಿಮ್ಮ ಮೊಬೈಲ್‌ನಲ್ಲಿರುವ ಎಲ್ಲಾ ಮಾಹಿತಿಗಳನ್ನು ಅಳಿಸಿ ಹಾಕುತ್ತದೆ.‌

ಗಿಜ್‌ಬಾಟ್‌

ಗಿಜ್‌ಬಾಟ್‌

ಮೊಬೈಲ್‌ನಿಂದಲೇ ದೂರು ಸಲ್ಲಿಸಲು ಅಪ್ಲಿಕೇಶನ್‌ </a></strong><br /><strong><a href=ಕ್ಯಾನ್ಸರ್‌ ಸಂಶೋಧನೆಗೆ ವೋಡಾಫೋನ್‌ ಡ್ರೀಮ್‌ಲ್ಯಾಬ್ ಅಪ್ಲಿಕೇಶನ್‌
ಚಂದ್ರ ಗ್ರಹದಲ್ಲಿ ಯಾರೋ ಇದ್ದಾರೆ: ನಾಸಾ ಸಿಬ್ಬಂದಿ ಹೇಳಿಕೆ
ಶಿಕ್ಷಣ ಅರ್ಧಕ್ಕೆ ಬಿಟ್ರು ಟಾಪ್‌ ಸೆಲೆಬ್ರಿಟಿಗಳು :ಯಾರು ಗೊತ್ತೇ? " title="ಮೊಬೈಲ್‌ನಿಂದಲೇ ದೂರು ಸಲ್ಲಿಸಲು ಅಪ್ಲಿಕೇಶನ್‌
ಕ್ಯಾನ್ಸರ್‌ ಸಂಶೋಧನೆಗೆ ವೋಡಾಫೋನ್‌ ಡ್ರೀಮ್‌ಲ್ಯಾಬ್ ಅಪ್ಲಿಕೇಶನ್‌
ಚಂದ್ರ ಗ್ರಹದಲ್ಲಿ ಯಾರೋ ಇದ್ದಾರೆ: ನಾಸಾ ಸಿಬ್ಬಂದಿ ಹೇಳಿಕೆ
ಶಿಕ್ಷಣ ಅರ್ಧಕ್ಕೆ ಬಿಟ್ರು ಟಾಪ್‌ ಸೆಲೆಬ್ರಿಟಿಗಳು :ಯಾರು ಗೊತ್ತೇ? " loading="lazy" width="100" height="56" />ಮೊಬೈಲ್‌ನಿಂದಲೇ ದೂರು ಸಲ್ಲಿಸಲು ಅಪ್ಲಿಕೇಶನ್‌
ಕ್ಯಾನ್ಸರ್‌ ಸಂಶೋಧನೆಗೆ ವೋಡಾಫೋನ್‌ ಡ್ರೀಮ್‌ಲ್ಯಾಬ್ ಅಪ್ಲಿಕೇಶನ್‌
ಚಂದ್ರ ಗ್ರಹದಲ್ಲಿ ಯಾರೋ ಇದ್ದಾರೆ: ನಾಸಾ ಸಿಬ್ಬಂದಿ ಹೇಳಿಕೆ
ಶಿಕ್ಷಣ ಅರ್ಧಕ್ಕೆ ಬಿಟ್ರು ಟಾಪ್‌ ಸೆಲೆಬ್ರಿಟಿಗಳು :ಯಾರು ಗೊತ್ತೇ?

 ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

Best Mobiles in India

English summary
How to Track Lost Smartphone with Android Device Manager. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X