KSRTC-BMTC ಬಸ್‌ನಲ್ಲೂ ಶೀಘ್ರವೇ ಉಚಿತ ವೈ-ಫೈ..!
ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೇವೆಯೂ ಈಗಾಗಲೇ ದೇಶದ ವಿವಿಧ ಭಾಗಗಳಲ್ಲಿ ಆರಂಭವಾಗಿದೆ. ಇದಲ್ಲದೇ ಸಾರ್ವಜನಿಕ ಪ್ರದೇಶಗಳಲ್ಲಿಯೂ ಉಚಿತ ವೈ-ಫೈ ಸೌಲಭ್ಯವು ಲಭ್ಯವಿದೆ. ಆದರೆ ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯೂ ತನ್ನ ಸಾರಿಗೆ ಬಸ್‌ಗಳ ವೈ-ಫೈ ಸೇವೆಯನ್ನು ಆರಂಭಿಸಲು ಮುಂದಾಗಿದ್ದು, ಶೀಘ್ರವೇ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿಯೂ ಪ್ರಯಾಣಿಕರು ಉಚಿತ ವೈ-ಫೈ ಸೇವೆಯನ್ನು ಪಡೆಯಬಹುದಾಗಿದೆ.

ಈಗಾಗಲೇ ಒಲಾ ಮತ್ತು ಉಬರ್ ಕಾರುಗಳಲ್ಲಿ ಪ್ರಯಾಣಿಸುವವರಿಗೆ ಕಂಪನಿಗಳು ಉಚಿತ ಇಂಟರ್ನೆಟ್ ಸೇವೆಯನ್ನು ನೀಡುತ್ತಿವೆ. ಇದೇ ಮಾದರಿಯಲ್ಲಿ ಸರಕಾರಿ ಒಡೆತನದ ಕೆಎಸ್‌ಆರ್‌ಟಿಸಿ ತನ್ನ ಬಸ್ ಗಳಲ್ಲಿ ವೈ-ಫೈ ಮೂಲಕ ಉಚಿತ ಇಂಟರ್ನೆಟ್ ಸೌಲಭ್ಯ ವನ್ನು ನೀಡಲು ಯೋಜನೆಯನ್ನು ರೂಪಿಸಿದೆ. ಇದಕ್ಕಾಗಿ ಮೊದಲಿಗೆ ಮಂಗಳೂರು ವಿಭಾಗದ ಎಲ್ಲ ಬಸ್‌ಗಳಿಗೂ ವೈ-ಫೈ ಮೂಲಕ ಉಚಿತ ಇಂಟರ್ನೆಟ್ ಸೌಲಭ್ಯವನ್ನು ನೀಡುತ್ತಿದೆ.
ಓದಿರಿ: ತಿಂಗಳ ಸಂಬಳ ಪಡೆಯುತ್ತಿದ್ದ ಪೇಟಿಎಂ ನೌಕರರು ಈಗ ಕೋಟ್ಯಾಧಿಪತಿಗಳು..!

ಮೊದಲ ಹಂತ:
ಪರೀಕ್ಷಾರ್ಥವಾಗಿ ಮಂಗಳೂರು ವಿಭಾಗದ ಕೆಎಸ್‌ಆರ್‌ಟಿಸಿ ರಾಜಹಂಸ, ವೋಲ್ವೋ, ಸ್ಲಿಪರ್ ಬಸ್‌ಗಳಿಗೆ ವೈ-ಫೈ ಸೇವೆಯನ್ನು ನೀಡುವ ಕಾರ್ಯ ಆರಂಭವಾಗಲಿದೆ. ಇದಾದ ನಂತರದಲ್ಲಿ ಬೆಂಗಳೂರು ಹಾಗೂ ಮೈಸೂರು ವಿಭಾಗದ ಬಸ್‌ಗಳಿಗೂ ವೈ-ಫೈ ಅಳವಡಿಕೆ ಕೆಲಸ ಆರಂಭ ವಾಗಲಿದೆ.


ಬಿಎಂಟಿಸಿಯಲ್ಲಿಯೂ:
ಇದಲ್ಲದೇ ಸಿಲಿಕಾನ್ ಸಿಟಿ ಬೆಂಗಳೂರಿನ ನರನಾಡಿಗಳಾಗಿರುವ ಬಿಎಂಟಿಸಿ ಬಸ್‌ಗಳಲ್ಲಿ ವೈ-ಫೈ ಸೇವೆಯೂ ಆರಂಭವಾಗಲಿದೆ. ಇದರಿಂದಾಗಿ ಪ್ರಯಾಣಿಕರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರಯಾಣದ ಸಮಯದಲ್ಲಿ ಉಚಿತ ವೈ-ಫೈ ಸೇವೆಯನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. .

ಕಂಡಕ್ಟರ್ ಬಳಿ ಪಾಸ್‌ವರ್ಡ್:
ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ವೈ-ಫೈ ಸೌಲಭ್ಯವನ್ನು ಪಡೆಯುವ ಸಲುವಾಗಿ ಬಸ್‌ನ ಕಂಡಕ್ಟರ್ ಬಳಿ ಇರುವ ಪಾಸ್‌ವರ್ಡ್ ಅಗತ್ಯವಾಗಲಿದೆ. ಈ ಪಾಸ್‌ವರ್ಡ್ ಹಾಕಿದರೆ ಮಾತ್ರವೇ ಮೊಬೈಲ್‌ನಲ್ಲಿ ಉಚಿತ ಇಂಟರ್ನೆಟ್ ಸೇವೆಯೂ ಲಭ್ಯವಾಗಲಿದೆ.


Click it and Unblock the Notifications








