Subscribe to Gizbot

ತಿಂಗಳ ಸಂಬಳ ಪಡೆಯುತ್ತಿದ್ದ ಪೇಟಿಎಂ ನೌಕರರು ಈಗ ಕೋಟ್ಯಾಧಿಪತಿಗಳು..!

Written By:

ದೇಶದಲ್ಲಿ ಮೊಬೈಲ್ ಪೇಮೆಂಟ್ ಸೇವೆಯನ್ನು ನೀಡುತ್ತಿರುವ ಪೇಟಿಎಂ ಕಂಪನಿಯ ಮೌಲ್ಯವೂ 10 ಬಿಲಿಯನ್ ಡಾಲರ್ ತಲುಪಿದ್ದು, ಈ ಹಿನ್ನಲೆಯಲ್ಲಿ ಕಂಪನಿಯ ಸುಮಾರು 200 ಮಂದಿ ನೌಕರರು ESOP ಅನ್ವಯ ಕೋಟ್ಯಾಧಿಪತಿಗಳಾಗಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಪೇಟೆಎಂ ನೌಕರರು ಖುಷಿಯಾಗಿದ್ದಾರೆ.

ತಿಂಗಳ ಸಂಬಳ ಪಡೆಯುತ್ತಿದ್ದ ಪೇಟಿಎಂ ನೌಕರರು ಈಗ ಕೋಟ್ಯಾಧಿಪತಿಗಳು..!

ಮನಿಕಂಟ್ರೋಲ್ ನೊಂದಿಗೆ ಮಾಹಿತಿಯನ್ನು ಹಂಚಿಕೊಂಡಿರುವ ಪೇಟಿಎಂ, ಕಂಪನಿಯ ಮೌಲ್ಯವೂ 10 ಬಿಲಿಯನ್ ಡಾಲರ್ ತಲುಪಿದೆ ಎನ್ನಲಾಗಿದೆ. ಜಪಾನ್‌ ಮೂಲದ ಸಾಫ್ಟ್ ಬ್ಯಾಂಕ್ ಪೇಟಿಎಂನಲ್ಲಿ 1.4 ಬಿಲಿಯನ್ ಹೂಡಿಕೆ ಮಾಡಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ದೇಶದಲ್ಲಿ ಆರಂಭವಾದ ಸ್ಟಾರ್ಟಪ್ ವೊಂದು ಇಷ್ಟು ಬೇಗ 10 ಬಿಲಿಯನ್ ಡಾಲರ್ ಮೌಲ್ಯ ಪಡೆದಿರುವುದು ಸಂತಸದ ವಿಚಾರವಾಗಿದೆ.

ಓದಿರಿ: ರೂ.2000ಕ್ಕೆ 'ಜಿಯೋ' ಗೋ ಸ್ಮಾರ್ಟ್‌ಫೋನ್‌: ಐಫೋನ್ X ಮೀರಿಸುವ ಫೇಸ್‌ಲಾಕ್, ಆಂಡ್ರಾಯ್ಡ್‌ ಒರಿಯೋ..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
300 ಕೋಟಿ ಪಡೆದ ನೌಕರರು:

300 ಕೋಟಿ ಪಡೆದ ನೌಕರರು:

ಪೇಟಿಎಂ ಆರಂಭದಿಂದಲೂ ನೌಕರರಾಗಿ ದುಡಿಯುವ ಮೂಲಕ ಎಂಪ್ಲಾಯಿ ಸ್ಟಾಕ್ ಆಪ್ಷನ್ ಪಾಲಿಸಿಯಂತೆ ರೂ.300 ಕೋಟಿಯನ್ನು ಪಡೆಯುವ ಮೂಲಕ ಪೇಟಿಎಂನ 200 ಮಂದಿ ನೌಕರರು ಕೋಟ್ಯಾಧೀಪತಿಗಳಾಗಿದ್ದಾರೆ ಎನ್ನಲಾಗಿದೆ. ಪ್ರತಿ ತಿಂಗಳ ಸಂಬಳದೊಂದಿಗೆ ಈ ಹೊಸ ಲಾಭವನ್ನು ಪಡೆದುಕೊಂಡಿದ್ದಾರೆ.

ಎರಡನೇ ಸ್ಥಾನದಲ್ಲಿ ಪೇಟಿಎಂ:

ಎರಡನೇ ಸ್ಥಾನದಲ್ಲಿ ಪೇಟಿಎಂ:

ದೇಶದಲ್ಲಿ ಆರಂಭವಾದ ಸ್ಟಾರ್ಟಪ್‌ಗಳಲ್ಲಿ ಅತೀ ಹೆಚ್ಚಿನ ಮೌಲ್ಯವನ್ನು ಪಡೆದುಕೊಂಡಿರುವ ಕಂಪನಿಗಳಲ್ಲಿ ಎರಡನೇ ಸ್ಥಾನಕ್ಕೆ ಪೇಟಿಎಂ ತೃಪ್ತಿ ಪಟ್ಟುಕೊಂಡಿದ್ದು, ಮೊದಲನೇ ಸ್ಥಾನದಲ್ಲಿ ಶಾಪಿಂಗ್ ದೈತ್ಯ ಫ್ಲಿಪ್‌ಕಾರ್ಟ್ ಕಾಣಿಸಿಕೊಂಡಿದೆ ಎನ್ನಲಾಗಿದೆ. ಪೇಟಿಎಂ ಪೇಮೆಂಟ್ ಬ್ಯಾಂಕ್, ಪೇಟಿಎಂ ಮಾಲ್, ಮತ್ತು ಪೇಟಿಎಂ ಮನಿಗಳು ಈ ಮೌಲ್ಯದಲ್ಲಿ ಸೇರಿಕೊಂಡಿವೆ.

TEZ App : ಗೂಗಲ್ ಭಾರತೀಯರಿಗಾಗಿ ಗೂಗಲ್‌ನಿಂದ Tez ಪೇಮೆಂಟ್ ಆಪ್
ಮೊದಲ ಸ್ಥಾನದಲ್ಲಿ ಫ್ಲಿಪ್‌ಕಾರ್ಟ್‌:

ಮೊದಲ ಸ್ಥಾನದಲ್ಲಿ ಫ್ಲಿಪ್‌ಕಾರ್ಟ್‌:

ದೇಶಿಯ ಸ್ಟಾರ್ಟಪ್ ಗಳಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿರುವ ಫ್ಲಿಪ್‌ಕಾರ್ಟ್ 12 ಬಿಲಿಯನ್ ಡಾಲರ್ ಮೌಲ್ಯವನ್ನು ಪಡೆದುಕೊಂಡಿದೆ ಎನ್ನಲಾಗಿದೆ. ಎಂಪ್ಲಾಯಿ ಸ್ಟಾಕ್ ಆಪ್ಷನ್ ಪಾಲಿಸಿಯಂತೆ ಫ್ಲಿಪ್‌ಕಾರ್ಟ್‌ ಸಹ ತನ್ನ ನೌಕರರಿಗೆ ಲಾಭಾಂಶವನ್ನು ಹಂಚಿಕೆ ಮಾಡಿತ್ತು. ಇದಲ್ಲದೇ ಜಪಾನ್‌ನ ಸಾಫ್ಟ್ ಭ್ಯಾಂಕ್ ಪೇಟಿಎಂನಲ್ಲಿ 1.4 ಬಿಲಿಯನ್ ಹೂಡಿಕೆ ಮಾಡಿದ ಮಾದರಿಯಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ 2.5 ಬಿಲಿಯನ್ ಡಾಲರ್ ಅನ್ನು ಹೂಡಿಕೆ ಮಾಡಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
200 Paytm employees become millionaires. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot