Fridge Maintenance Tips: ಫ್ರಿಡ್ಜ್ ಯಾವಾಗಲೂ ಆನ್ ಆಗಿಯೇ ಇರಬೇಕೆ? ಆಫ್ ಮಾಡಿದ್ರೆ ಏನಾಗುತ್ತೆ?
ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಫ್ರಿಡ್ಜ್ ಬಳಕೆ ಮಾಡಲಾಗುತ್ತದೆ. ಈ ಹಿಂದೆ ಇವುಗಳ ಬೆಲೆ ದುಬಾರಿ ಆಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅಗ್ಗದ ಬೆಲೆಗೆ ಲಭ್ಯ ಆಗುತ್ತಿರುವುದರಿಂದ ಇದರ ಬಳಕೆ ವಿಸ್ತಾರಗೊಂಡಿದೆ. ಈ ನಡುವೆ ನಿಮಗೆ ಒಮ್ಮೆಯಾದರೂ ಫ್ರಿಡ್ಜ್ ಅನ್ನು ಯಾವಾಗಲೂ ಯಾಕೆ ಆನ್ ಆಗಿಯೇ ಇಡಬೇಕು? ಆಫ್ ಮಾಡಿದ್ರೆ ಏನಾಗುತ್ತದೆ ಎಂಬ ಪ್ರಶ್ನೆ ಮೂಡಿದೆಯಾ?.
ಹೌದು, ಸ್ಥಿರವಾದ ತಾಪಮಾನವನ್ನು ಕಾಪಾಡಿಕೊಂಡು ಅದರೊಳಗಿನ ಆಹಾರವನ್ನು ತಂಪಾಗಿ ಮತ್ತು ತಾಜಾವಾಗಿರಿಸಲು ಫ್ರಿಡ್ಜ್ ಅನ್ನು ನಿರಂತರವಾಗಿ ಆನ್ ಮಾಡಿ ಇಡಲಾಗುತ್ತದೆ. ಆದರೆ ಎಲ್ಲಾ ಸಮಯದಲ್ಲೂ ಇದನ್ನು ಆನ್ ಮಾಡಿಯೇ ಇರಬೇಕು?, ಆಗ್ಗಾಗ್ಗೆ ಆಫ್ ಮಾಡಿದ್ರೆ ಏನಾಗುತ್ತದೆ, ಅಥವಾ ವಿದ್ಯುತ್ ಸಮಸ್ಯೆ ಉಂಟಾದಾಗ ಫ್ರಿಡ್ಜ್ ಹೇಗೆ ಕೆಲಸ ಮಾಡುತ್ತದೆ ಎಂಬಿತ್ಯಾದಿ ಇಂಟ್ರೆಸ್ಟಿಂಗ್ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ದಿನಪೂರ್ತಿ ಫ್ರಿಡ್ಜ್ ಆನ್ ಆಗಿರಲೇ ಬೇಕಾ?: ಹಣ್ಣುಗಳು, ಹಾಲು ಮತ್ತು ತರಕಾರಿಗಳು ದೀರ್ಘಕಾಲ ತಾಜಾತನದಿಂದ ಉಳಿಯಲು ಈ ಫ್ರಿಡ್ಜ್ ಅನಿವಾರ್ಯ. ಜೊತೆಗೆ ತಿಂದು ಉಳಿದ ಆಹಾರವು ಸಹ ಹಾಳಾಗುವುದಿಲ್ಲ. ಈ ಕಾರಣಕ್ಕೆ ಮನೆಗಳಲ್ಲಿ ಫ್ರಿಡ್ಜ್ ನಿರಂತರವಾಗಿ ಆನ್ ಆಗಿಯೇ ಇರುತ್ತದೆ. ಇನ್ನೂ ಕೆಲವರು ವಿದ್ಯುತ್ ಉಳಿಕೆ ಮಾಡುವ ಉದ್ದೇಶ ಇಟ್ಟುಕೊಂಡು ಫ್ರಿಡ್ಜ್ ಅನ್ನು ಸ್ವಲ್ಪ 1-2 ಗಂಟೆಗಳ ಕಾಲ ಆಫ್ ಮಾಡುತ್ತಾರೆ. ಅದಾಗ್ಯೂ ಇಲ್ಲಿಯವರೆಗೆ ಫ್ರಿಡ್ಜ್ ಅನ್ನು ತಯಾರಿಸುವ ಯಾವುದೇ ಕಂಪೆನಿಹಳೂ ಸಹ ಫ್ರಿಡ್ಜ್ ಎಷ್ಟು ಕಾಲ ಆಲ್ ಆಗಿರಬೇಕು ಎಂದು ತಿಳಿಸಿಲ್ಲ.
ಇನ್ನು ಫ್ರಿಡ್ಜ್‌ನ ಆಂತರಿಕ ಭಾಗ ಚೇಂಬರ್‌ನಂತಿದ್ದು, ಫ್ರಿಡ್ಜ್‌ಗೆ ವಿದ್ಯುತ್ ಸಂಪರ್ಕ ಕಡಿತಗೊಂಡಾಗ ಅದು ಕಾರ್ಯನಿರ್ವಹಿಸುತ್ತಲೇ ಇರುತ್ತದೆ ಮತ್ತು ತಂಪಾಗಿಸುವ ಪ್ರಕ್ರಿಯೆಯು ಒಳಗೆ ಮುಂದುವರಿಯುತ್ತದೆ. ಅಥವಾ ನೀವು ಸ್ವತಃ ಫ್ರಿಡ್ಜ್‌ಗೆ ಅನ್ನು ಸ್ವಿಚ್ ಆಫ್ ಮಾಡಿದ ನಂತರವೂ ಸ್ವಲ್ಪ ಸಮಯದವರೆಗೆ ಅದು ತಂಪು ಮಾಡುವ ಕೆಲಸ ಮಾಡುತ್ತಲೇ ಇರುತ್ತದೆ. ಈ ರೀತಿ ಕಾರ್ಯನಿರ್ವಹಿಸಲು ಫ್ರಿಡ್ಜ್ ಅನ್ನು ನ್ಯಾಸಗೊಳಿಸಲಾಗಿದೆ.

ವರ್ಷವಿಡೀ ಫ್ರಿಡ್ಜ್ ಆನ್ ಮಾಡಿದ್ದರೂ ಅದರಲ್ಲಿ ತೊಂದರೆ ಕಾಣಿಸುವುದಿಲ್ಲ: ಫ್ರಿಡ್ಜ್ ಎಂಬುದು ಎಲೆಕ್ಟ್ರಾನಿಕ್ ಕೂಲಿಂಗ್ ಡಿವೈಸ್ ಆಗಿದ್ದು, ಇದನ್ನು ಗಂಟೆಗಳ ಕಾಲ ನಿರಂತರವಾಗಿ ಕಾರ್ಯನಿರ್ವಹಿಸುವಂತೆ ತಯಾರಿಸಲಾಗಿದೆ. ಅಂದರೆ ಎಲ್ಲಾ ಸಮಯದಲ್ಲೂ ಇದು ಕೆಲಸ ಮಾಡುತ್ತಾ ಇದ್ದರೂ ಸಹ ಯಾವುದೇ ಸಮಸ್ಯೆ ಇದಕ್ಕೆ ಆಗುವುದಿಲ್ಲ. ಅಂದರೆ ನೀವು ವರ್ಷವಿಡೀ ಫ್ರಿಡ್ಜ್ ಆಫ್ ಮಾಡದಿದ್ದರೂ ಅದರಲ್ಲಿ ಯಾವುದೇ ತೊಂದರೆ ಕಾಣಿಸಿಕೊಳ್ಳುವುದಿಲ್ಲ.
ಇನ್ನು ಕೆಲವರು ವಿದ್ಯುತ್ ಉಳಿಕೆ ಮಾಡಲು ಅಥವಾ ಎಲ್ಲಿ ನಿರಂತರವಾಗಿ ಫ್ರಿಡ್ಜ್ ರನ್ ಆದರೆ ಹಾಳಾಗುತ್ತದೆ ಎಂಬುವ ಭಯದಿಂದಾಗಿ 1-2 ಗಂಟೆಗಳ ಕಾಲ ಆಫ್ ಮಾಡುವ ಕೆಲಸ ಸಹ ಮಾಡುತ್ತಾರೆ. ಇದನ್ನು ದಿನದಲ್ಲಿ ಒಂದು ಬಾರಿ ಅಥವಾ ವಾರದಲ್ಲಿ ಎರಡು ಅಥವಾ ಮೂರು ಬಾರಿ ಮಾಡಿದರೆ ಸಮಸ್ಯೆ ಇರುವುದಿಲ್ಲ. ದಿನದಲ್ಲಿ ಹಲವು ಬಾರಿ ಈ ರೀರಿ ಮಾಡಿದರೆ ಫ್ರಿಡ್ಜ್ ಸರಿಯಾದ ಕೂಲಿಂಗ್ ನೀಡಲು ಸಾಧ್ಯವಾಗುವುದಿಲ್ಲ.ಈ ಮೂಲಕ ಒಳಗೆ ಇರಿಸಲಾದ ಆಹಾರವು ಹಾಳಾಗುವ ಸಂಭವ ಹೆಚ್ಚಿರುತ್ತದೆ.
ಅದಾಗ್ಯೂ ಈ ರೀತಿ ನಿರಂತರವಾಗಿ ಫ್ರಿಡ್ಜ್ ರನ್ ಆಗಿದ್ದರೆ ವಿದ್ಯುತ್ ಬಿಲ್ ಜಾಸ್ತಿ ಬರುವುದಿಲ್ಲವೇ ಎಂಬ ಪ್ರಶ್ನೆ ನಿಮ್ಮಲ್ಲಿ ಇರಬಹುದು. ಇದಕ್ಕೆ ಉತ್ತರ ಖಂಡಿತಾ ಇಲ್ಲ. ಯಾಕೆಂದರೆ ಫ್ರಿಡ್ಜ್ ಆಟೋಮ್ಯಾಟಿಕ್ ಆಗಿ ವಿದ್ಯುತ್ ಉಳಿಸುವ ಸಾಮರ್ಥ್ಯವನ್ನು ಹೊಂದಿದೆ. ಅಂದರೆ ಇತ್ತೀಚಿನ ದಿನಗಳಲ್ಲಿ ಎಲ್ಲಾ ಫ್ರಿಡ್ಜ್ ಗಳು ವಿದ್ಯುತ್ ಉಳಿತಾಯಕ್ಕಾಗಿ ಆಟೋಮ್ಯಾಟಿಕ್ ಆಫ್ ಅಥವಾ ಆಟೋ ಕಟ್ ಫೀಚರ್ಸ್‌ನೊಂದಿಗೆ ಕಾಣಿಸಿಕೊಳ್ಳುತ್ತಿವೆ.

ಈ ಫೀಚರ್ಸ್‌ನಲ್ಲಿ ನಿರ್ದಿಷ್ಟ ತಾಪಮಾನಕ್ಕೆ ಬಂದ ನಂತರ ನಂತರ ಫ್ರಿಡ್ಜ್ ಆಟೋಮ್ಯಾಟಿಕ್ ಆಗಿ ಆಫ್ ಆಗುತ್ತದೆ. ಹಾಗೂ ಫ್ರಿಡ್ಜ್ ಸ್ವಯಂ ಕಡಿತಗೊಂಡಾಗ ಕಂಪ್ರೆಸರ್ ಸ್ಟಾಪ್ ಆಗುತ್ತದೆ. ಇದರಿಂದಾಗಿ ವಿದ್ಯುತ್ ಉಳಿತಾಯವಾಗುತ್ತದೆ. ಇದಾದ ಬಳಿಕ ಫ್ರಿಡ್ಜ್‌ಗೆ ತಂಪಾಗುವ ಅಗತ್ಯ ಎದುರಾಗದಾ ತಕ್ಷಣ ಫ್ರಿಡ್ಜ್ ಆಟೋಮ್ಯಾಟಿಕ್ ಆಗಿ ಆಗುತ್ತದೆ. ಇದರಿಂದಾಗಿ ನೀವು ಗಮನಹರಿಸಬೇಕಾದ ವಿಷಯ ಏನೆಂದರೆ ಫ್ರಿಡ್ಜ್ ಅನ್ನು ಆಗಾಗ್ಗೆ ಆನ್ ಮತ್ತು ಆಫ್ ಮಾಡುವುದರಿಂದ ಅದರ ಕಾರ್ಯನಿರ್ವಹಣೆಯ ಮೇಲೆ ಹೊರೆ ಬೀಳುತ್ತದೆ.
ಮನೆಯಿಂದ ಒಂದು ಅಥವಾ ಎರಡು ದಿನ ಹೊರಹೋದಾಗ ಏನು ಮಾಡಬೇಕು?: ಈ ವಿಷಯದಲ್ಲಂತೂ ಬಹಳ ಮಂದಿಗೆ ಗೊಂದಲ ಇದ್ದೇ ಇರುತ್ತದೆ. ನೀವು ದೀರ್ಘಕಾಲದವರೆಗೆ ಮನೆಯಿಂದ ಹೊರಹೋಗುತ್ತಿದ್ದರೆ, ಫ್ರಿಡ್ಜ್ ನಿಂದ ಎಲ್ಲಾ ವಸ್ತುಗಳನ್ನು ಹೊರತೆಗೆದು ಅದನ್ನು ಆಫ್ ಮಾಡಬಹುದು. ಅಥವಾ ಕೆಲವು ದಿನ ಹೊರ ಹೋಗಲು ಮುಂದಾಗಿದ್ದರೆ ಫ್ರಿಡ್ಜ್ ಅನ್ನು ಮುಚ್ಚಬೇಡಿ. ಹಾಗೆ ಬಿಟ್ಟು ಆಫ್ ಮಾಡಿ ಹೋಗಿ.


Click it and Unblock the Notifications








