Home
ಸುದ್ದಿಜಾಲ

ಇನ್ನಷ್ಟು ಬಲಿಷ್ಠವಾಗುತ್ತಿದೆ ಭಾರತ... ಈ ವಿಷಯ ಕೇಳಿದ್ರೆ ಕುಣಿದು ಕುಪ್ಪಳಿಸುತ್ತೀರಿ!

ಭಾರತ ಇತ್ತೀಚಿನ ವರ್ಷಗಳಲ್ಲಿ ಇತರೆ ರಾಷ್ಟ್ರಗಳನ್ನು ಎಲ್ಲಾ ರಂಗದಲ್ಲೂ ಹಿಂದಿಕ್ಕುತ್ತಾ ಬರುತ್ತಿದೆ. ಇದಕ್ಕೆ ಹಲವಾರು ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಪ್ರಮುಖವಾಗಿ ಹೇಳಬೇಕು ಎಂ‍ದರೆ ಚಂದ್ರಯಾನ-3. ಇದರೊಂದಿಗೆ ನಮ್ಮ ದೇಶ ಇತರೆ ರಾಷ್ಟ್ರಗಳ ಮೇಲಿನ ಅವಲಂಬನೆಯನ್ನೂ ಸಹ ಕಡಿಮೆ ಮಾಡಿದ್ದು, ಈ ಮೂಲಕ ನಾವೆಷ್ಟು ಬಲಿಷ್ಠರು ಎಂಬುದನ್ನು ಜಗತ್ತಿಗೆ ತೋರಿಸುತ್ತಿದೆ.

ಹೌದು, ಹಿಂದೊಂದು ಕಾಲವಿತ್ತು. ಆಗ ಏನೂ ಬೇಕಾದರೂ ಬೇರೆ ರಾಷ್ಟ್ರಗಳನ್ನೇ ಅವಲಂಬನೆ ಮಾಡಬೇಕಾದ ಅನಿವಾರ್ಯತೆ ಇತ್ತು. ಅಷ್ಟೇ ಯಾಕೆ ಪ್ರತಿಯೊಂದು ಮನೆಯಲ್ಲೂ ಸಹ ಚೀನಾದ ವಸ್ತುಗಳ ಆಕ್ರಮಣವೇ ಹೆಚ್ಚಾಗಿತ್ತು. ಆದರೆ ಈಗ ಭಾರತವನ್ನೇ ಇತರೆ ರಾಷ್ಟ್ರಗಳು ಅವಲಂಬಿಸಲು ಮುಂದಾಗಿವೆ. ಇದರೊಂದಿಗೆ ಕೇಂದ್ರದ ಐಟಿ ಸಚಿವ ಅಶ್ವಿನಿ ವೈಷ್ಣವ್ ಗುಡ್ ನ್ಯೂಸ್‌ವೊಂದನ್ನು ನೀಡಿದ್ದಾರೆ. ಹಾಗಿದ್ರೆ, ಈಗ ಭಾರತದ ಯಾವ ವಿಷಯದಲ್ಲಿ ಹೊಸ ಸಾಧನೆ ಮಾಡಲು ಮುಂದಾಗಿದೆ?, ಇದರಿಂದ ಭಾರತೀಯರಿಗೆ ಆಗುವ ಅನುಕೂಲಗಳೇನು ಎಂಬ ಮಾಹಿತಿ ಇಲ್ಲಿದೆ ನೋಡಿ.

ಇನ್ನಷ್ಟು ಬಲಿಷ್ಠವಾಗುತ್ತಿದೆ ಭಾರತ, ಈ ವಿಷಯ ಕೇಳಿದ್ರೆ ಕುಣಿದು ಕುಪ್ಪಳಿಸುತ್ತೀರಿ

ಭಾರತದಲ್ಲೇ ತಯಾರಾಗಲಿವೆ.... : ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ ಗ್ಯಾಜೆಟ್‌(Smart gadgets) ಬಳಕೆ ಭಾರತದಲ್ಲಿ ಹೆಚ್ಚಾಗುತ್ತಿದೆ. ಈ ಕಾರಣಕ್ಕೆ ಇಲ್ಲಿ ಹೊಸ ಹೊಸ ವಿದೇಶಿ ಕಂಪೆನಿಗಳು ಕಚೇರಿ ಓಪನ್‌ ಮಾಡುತ್ತಿವೆ. ಅಷ್ಟೇ ಯಾಕೆ ಜಗತ್ತಿನ ದೈತ್ಯ ಕಂಪೆನಿ ಎನಿಸಿಕೊಂಡಿರುವ ಆಪಲ್‌ ಸಹ ಭಾರತದಲ್ಲಿ ಐಫೋನ್‌ಗಳನ್ನು(iPhones) ತಯಾರು ಮಾಡುತ್ತಿದೆ. ಇದೀಗ ಡೆಲ್, ಲೆನೊವೊ, ಎಚ್‌ಪಿ ಸೇರಿದಂತೆ ಇತರೆ ಕಂಪನಿಗಳು ಭಾರತದಲ್ಲಿ ಲ್ಯಾಪ್‌ಟಾಪ್‌ಗಳನ್ನು ತಯಾರಿಸಲಿವೆ.

ಭಾರತ ಸರ್ಕಾರ (Government of India) ಕೆಲವು ದಿನಗಳ ಹಿಂದೆ ದೇಶವೇ ಅಚ್ಚರಿ ಆಗುವ ನಿರ್ಧಾರವೊಂದನ್ನು ಘೋಷಣೆ ಮಾಡಿತ್ತು. ಅದೇನೆಂದರೆ ಆಮದು ಮಾಡಿಕೊಳ್ಳುವ ಲ್ಯಾಪ್‌ಟಾಪ್‌ಗಳ ಮೇಲಿನ ನಿರ್ಬಂಧ. ಈ ಎಲ್ಲಾ ಬೆಳವಣಿಗೆ ಹಿನ್ನೆಲೆ 32ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಟೆಕ್ ಕಂಪನಿಗಳು ಐಟಿ ಹಾರ್ಡ್‌ವೇರ್‌ನ ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ದೇಶದ ಪಿಎಲ್‌ಐ ಕಾರ್ಯಕ್ರಮಕ್ಕೆ ಅರ್ಜಿ ಹಾಕಿವೆ. ಈ ಮೂಲಕ ನಾವು ನಮ್ಮ ದೇಶದಲ್ಲಿ ಇವುಗಳನ್ನು ತಯಾರು ಮಾಡುವುದಿಲ್ಲ, ಬದಲಾಗಿ ಇಲ್ಲೇ ತಯಾರು ಮಾಡಿ ಇಲ್ಲೇ ಮಾರುತ್ತೇವೆ ಎಂಬ ನಿರ್ಧಾರಕ್ಕೆ ಬಂದಿವೆ.

ಅಂದರೆ 32ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಕಂಪನಿಗಳು ದೇಶದಲ್ಲಿ ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಸರ್ವರ್‌ಗಳನ್ನು ತಯಾರಿಸಲು ಭಾರತದ ಪ್ರೋತ್ಸಾಹ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಿವೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ (Ashwini Vaishnav) ಮಾಹಿತಿ ನೀಡಿದ್ದಾರೆ. ಲ್ಯಾಪ್‌ಟಾಪ್‌ಗಳನ್ನು ಆಮದು ಮಾಡಿಕೊಳ್ಳಲು ಸರ್ಕಾರವು ಹೊಸ ನಿರ್ಬಂಧಗಳನ್ನು ಹೇರಿದ ಸ್ವಲ್ಪ ಸಮಯದಲ್ಲೇ ಈ ಎಲ್ಲಾ ಬೆಳವಣಿಗೆ ಆಗುತ್ತಿದ್ದು, ಇದು ದೇಶದ ಜನರಿಗೆ ಸಂತಸ ನೀಡುವ ವಿಷಯವಾಗಿದೆ.

ಇನ್ನು ಭಾರತ ಸರ್ಕಾರವು HSN ಕೋಡ್ 8741 ಅಡಿಯಲ್ಲಿ ಉತ್ಪನ್ನಗಳ ಆಮದುಗಳನ್ನು ನಿರ್ಬಂಧಿಸಿದೆ. ಅದರಲ್ಲೂ ಮುಖ್ಯವಾಗಿ ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಆಲ್-ಇನ್-ಒನ್ ಪಿಸಿಗಳು ಮತ್ತು ಅಲ್ಟ್ರಾ-ಸ್ಮಾಲ್ ಕಂಪ್ಯೂಟರ್‌ಗಳನ್ನು ಈ ವಿಭಾಗದಲ್ಲಿ ಇವೆ. ಈ ನಿರ್ಧಾರವನ್ನು ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ ಪ್ರಕಟಿಸಿದ್ದು, ಈ ವಾರದ ಆರಂಭದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಇದಕ್ಕೆ ಅನುಮೋದನೆ ನೀಡಿದೆ.

ಈ ಸಂಬಂಧ ರಾಯಿಟರ್ಸ್ ವರದಿ ಮಾಡಿದ್ದು, ಡೆಲ್, ಲೆನೊವೊ ಮತ್ತು ಇತರ ಜನಪ್ರಿಯ ಲ್ಯಾಪ್‌ಟಾಪ್ ಕಂಪನಿಗಳು ಭಾರತದ $2 ಶತಕೋಟಿ ಪ್ರೋತ್ಸಾಹಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಕೆ ಮಾಡಿವೆ. ಇದನ್ನು ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ (ಪಿಎಲ್‌ಐ) ಪ್ರೋಗ್ರಾಂ ಎಂದು ಕರೆಯಲಾಗುತ್ತದೆ. ಮಾಹಿತಿ ತಂತ್ರಜ್ಞಾನದ ಯಂತ್ರಾಂಶದ ಮೇಲೆ ಕೇಂದ್ರೀಕರಿಸಿದ ಈ ಕಾರ್ಯಕ್ರಮವನ್ನು ಮೇ ತಿಂಗಳಲ್ಲಿ ಪರಿಚಯಿಸಲಾಗಿದೆ. ಈ ಮೂಲಕ ಭಾರತದ ಗಡಿಯೊಳಗೆ ಹೆಚ್ಚಿನ ಉತ್ಪಾದನೆಯನ್ನು ಉತ್ತೇಜಿಸುವುದು ಇದರ ಗುರಿಯಾಗಿದೆ.

ಈ ತಿಂಗಳ ಆರಂಭದಲ್ಲಿ ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಪರ್ಸನಲ್ ಕಂಪ್ಯೂಟರ್‌ಗಳನ್ನು ಆಮದು ಮಾಡಿಕೊಳ್ಳುವಾಗ ಪರವಾನಗಿಗಳ ಹೊಸ ಅಗತ್ಯವನ್ನು ಭಾರತ ಘೋಷಣೆ ಮಾಡಿತ್ತು. ಇದಕ್ಕೆ ಪ್ರಮುಖ ಕಾರಣ ದೇಶೀ ಉತ್ಪಾದನೆಗೆ ನೀಡಲಾದ ಹೆಚ್ಚಿನ ಒತ್ತು. ಇನ್ನು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರ ಪ್ರಕಾರ, ಐಟಿ ಹಾರ್ಡ್‌ವೇರ್‌ಗಾಗಿ ಪಿಎಲ್‌ಐ ಉಪಕ್ರಮವು ಗಮನಾರ್ಹ ಪ್ರಮಾಣದ ಹೂಡಿಕೆಯನ್ನು ಕಂಡಿದೆ ಅಂದರೆ ಇದರ ಮೌಲ್ಯ 24.3 ಬಿಲಿಯನ್. ಹಾಗೆಯೇ 75,000 ನೇರ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ತಿಳಿಸಿದ್ದಾರೆ.

ಇನ್ನಷ್ಟು ಬಲಿಷ್ಠವಾಗುತ್ತಿದೆ ಭಾರತ, ಈ ವಿಷಯ ಕೇಳಿದ್ರೆ ಕುಣಿದು ಕುಪ್ಪಳಿಸುತ್ತೀರಿ

ಈ ನಿರ್ಧಾರದಿಂದ ಭಾರತಕ್ಕೆ ಏನೆಲ್ಲಾ ಲಾಭ?: ಈ ರೀತಿಯ ಬೆಳವಣಿಗೆಗಳು ಭಾರತವನ್ನು ವಿಶ್ವಮಟ್ಟದಲ್ಲಿ ಇನ್ನಷ್ಟು ಎತ್ತರಕ್ಕೆ ಏರಿಸಲಿವೆ. ಅದರಲ್ಲದೂ ಸಾಕಷ್ಟು ಜನರಿಗೆ ಉದ್ಯೋಗ ಸಿಗಲಿದೆ, ಜನರು ಕೈಗೆಟಕುವ ದರದಲ್ಲಿ ವಸ್ತುಗಳನ್ನು ಖರೀದಿ ಮಾಡಲು ಸಹಾಯವಾಗುತ್ತದೆ. ಅದೆಲ್ಲದಕ್ಕಿಂತ ಹೆಚ್ಚಾಗಿ ಇಲ್ಲಿನವರ ಹಣ ಇಲ್ಲೇ ಖರ್ಚಾಗುತ್ತದೆ. ಈ ಮೂಲಕ ದೇಶ ಅಭಿವೃದ್ಧಿ ಪಥದತ್ತ ದಾಪುಗಾಲು ಇಟ್ಟಂತೆ ಆಗುತ್ತದೆ.

Best Mobiles in India

English summary
Nowadays, the use of smart gadgets is increasing in India. Meanwhile, other companies including Dell, Lenovo, HP are going to manufacture laptops in India after the government announced a import ban.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+