ಟ್ವಿಟ್ಟರ್‌ಗೆ ಪ್ರತಿಸ್ಪರ್ಧಿಯಾಗಿ ಎಂಟ್ರಿ ಕೊಡ್ತು ಥ್ರೆಡ್ಸ್: ಇನ್ಮುಂದೆ ಟ್ವಿಟ್ಟರ್ ಗತಿ ಏನು?
ಸಾಮಾಜಿಕ ಜಾಲತಾಣಗಳು ಜನಸಾಮಾನ್ಯರಿಗೆ ಬಹಳ ಅತ್ಯಗತ್ಯ. ಈ ಕಾರಣದಿಂದಾಗಿಯೇ ಸಮಾಜದಲ್ಲಿ ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಮ್ ಸೇರಿದಂತೆ ಇನ್ನೂ ಅನೇಕ ಪ್ಲಾಟ್‌ಫಾರ್ಮ್‌ಗಳು ಬಳಕೆದಾರರಿಗೆ ಭಿನ್ನ ಸೇವೆ ನೀಡುತ್ತಾ ಬರುತ್ತಿವೆ. ಈ ನಡುವೆ ಎಲಾನ್ ಮಸ್ಕ್ ಹಾಗೂ ಮಾರ್ಕ್ ಜುಕರ್‌ಬರ್ಗ್ ನಡುವೆ ತೀವ್ರ ಪೈಪೋಟಿ ಎದುರಾಗಲಿದೆ.
ಹೌದು, ಇನ್ಮುಂದೆ ಮಾರ್ಕ್ ಅವರ ಥ್ರೆಡ್ಸ್ ಮಸ್ಕ್ ಅವರ ಟ್ವಿಟರ್‌ನೊಂದಿಗೆ ಸ್ಪರ್ಧಿಸುತ್ತದೆ. ಅರೇ ಇದೇನಿದು ಟ್ಬಿಟ್ಟರ್‌ಗೆ ಪರ್ಯಾಯವಾದ ಆಪ್ ಸಿದ್ಧ ಆಗಿದೆಯಾ ಎಂದುಕೊಂಡರೆ ನಿಮ್ಮ ಊಹೆ ನಿಜ. ಯಾಕೆಂದರೆ ಮೆಟಾ ಸಂಸ್ಥೆಯ ಮಾಲೀಕ ಮಾರ್ಕ್ ಜುಕರ್‌ಬರ್ಗ್ ಹೊಸ ಅಪ್ಲಿಕೇಶನ್ ಥ್ರೆಡ್ಸ್ ಕೆಲಸ ಮಾಡಲು ಪ್ರಾರಂಭಿಸಿದೆ. ಇದು ಮಸ್ಕ್ ಅವರ ಮನದಲ್ಲಿ ತೀವ್ರ ಭಯ ಉಂಟು ಮಾಡಿದೆ ಎನ್ನಲಾಗಿದೆ. ಅಂದರೆ ಜುಕರ್‌ಬರ್ಗ್ ಅವರ ಈ ಆಪ್ ಎಲೋನ್ ಮಸ್ಕ್ ಅವರ ಟ್ವಿಟರ್‌ಗೆ ದೊಡ್ಡ ಪೈಪೋಟಿ ನೀಡಲಿದೆ ಎಂದು ಹೇಳಲಾಗುತ್ತಿದೆ.

ಇನ್ನು ಟ್ವಿಟರ್ ಅನ್ನು ಖರೀದಿಸಿ ಮಾಡಿದ ಬಳಿಕ ಎಲಾನ್ ಮಸ್ಕ್ ಅವರು ಈ ಪ್ಲಾಟ್‌ಫಾರ್ಮ್‌ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಅದೆಲ್ಲಕ್ಕೂ ಮಿಗಿಲಾಗಿ ಹೆಚ್ಚಾಗಿ ನಿಯಂತ್ರಣಗಳನ್ನೇ ಹೇರುತ್ತಿದ್ದಾರೆ. ಇದರಿಂದಾಗಿ ಬಳಕೆದಾರರಿಗೆ ಹಲವು ಸಮಸ್ಯೆಗಳನ್ನು ಉಂಟಾಗುತ್ತಿವೆ ಎಂಬುದು ಈಗ ಎಲ್ಲರಿಗೂ ತಿಳಿದ ವಿಚಾರ. ಈ ಸಮಯದಲ್ಲೇ ಮಾರ್ಕ್ ಜುಕರ್‌ಬರ್ಗ್ ತಮ್ಮ ಅಪ್ಲಿಕೇಶನ್ ಅನ್ನು ಪರಿಚಯಿಸುವ ಮೂಲಕ ಟ್ವಿಟರ್‌ಗೆ ಪ್ರತಿ ಸ್ಪರ್ಧಿಯಾಗಲು ಬಯಸಿದ್ದಾರೆ ಎಂದು ಕಾಣಿಸಿದೆ.
ಥ್ರೆಡ್ಸ್ ವಿಶೇಷತೆ ಏನು?: ಮಾಧ್ಯಮ ವರದಿಗಳ ಪ್ರಕಾರ ಬಳಕೆದಾರರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನೇ ಬಳಕೆ ಮಾಡಿಕೊಂಡು ಈ ಅಪ್ಲಿಕೇಶನ್‌ಗೆ ಲಾಗ್ ಇನ್ ಆಗಬಹುದಾಗಿದೆ. . ಅಷ್ಟು ಮಾತ್ರವಲ್ಲದೆ ಇನ್‌ಸ್ಟಾಗ್ರಾಮ್‌ನಲ್ಲಿ ಇರುವ ಬಳಕೆದಾರರೇ ಇಲ್ಲೂ ಸಹ ಫಾಲೋ ಮಾಡಲು ಅನುಕೂಲ ಮಾಡಿಕೊಡಲಾಗಿದೆ. ಅದಾಗ್ಯೂ ಈ ಆಪ್ ಬಗ್ಗೆ ಹೆಚ್ಚಿನ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಈ ವರ್ಷದ ಜನವರಿಯಿಂದ ಪ್ರಾಜೆಕ್ಟ್ 92 ರ ಅಡಿಯಲ್ಲಿ ಮೆಟಾ ಈ ಆಪ್ ಅನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಹೇಳಲಾಗುತ್ತಿತ್ತು.
ಬಳಕೆದಾರರು ಡೆಸ್ಕ್‌ಟಾಪ್ ಸೈಟ್‌ನಿಂದ Threads.net ಎಂದು ಟೈಪಿಸುವ ಮೂಲಕ ಅಥವಾ ಐಓಎಸ್ ಹಾಗೂ ಆಂಡ್ರಾಯ್ಡ್‌ಗಾಗಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೂಲಕ ಹೊಸ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ನೀಡಬಹುದು. ಈ ಮೂಲಕ ನಿಮಗೆ ಅನಿಸಿದ್ದನ್ನು 500 ಪದಗಳ ಮಿತಿಯೊಳಗೆ ಚಿತ್ರಗಳ ಸಹಿತ ಬರೆಯಬಹುದು ಎಂದು ತಿಳಿದುಬಂದಿದೆ. ಜೊತೆಗೆ ಐದು ನಿಮಿಷ ಇರುವ ವಿಡಿಯೋವನ್ನೂ ಸಹ ಶೇರ್ ಮಾಡಬಹುದು.
ಎಲಾನ್ ಮಸ್ಕ್ ಅವರಿಗೆ ಎದುರಾಯ್ತಾ ಸಂಕಷ್ಟ?: ಇನ್ನು ಮಾರ್ಕ್ ಜುಕರ್‌ಬರ್ಗ್ ಅವರ ಈ ಹೊಸ ಆಪ್ ಟ್ವಿಟರ್‌ಗೆ ದೊಡ್ಡ ಬೆದರಿಕೆಯಾಗಿರಬಹುದು ಎನ್ನಲಾಗಿದೆ. ಯಾಕೆಂದರೆ ಟ್ವಿಟ್ಟರ್‌ನೊಂದಿಗೆ ಸ್ಪರ್ಧೆ ಮಾಡಲು ಮೆಟಾ ಸಾಕಷ್ಟು ಬಲವನ್ನು ಹೊಂದಿದೆ. ಅದೆಲ್ಲಕ್ಕೂ ಮಿಗಿಲಾಗಿ ಈ ಇದು ಇನ್‌ಸ್ಟಾಗ್ರಾಮ್‌ನೊಂದಿಗೆ ನಂಟು ಹೊಂದಿರುವುದರಿಂದಾಗಿ ಖಂಡಿತಾ ಕೆಲವೇ ದಿನಗಳಲ್ಲಿ ಇದು ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತವೆ ಎಂಬುದು ಸಾರ್ವಜನಿಕರ ಅಭಿಪ್ರಾಯ.

ಕೇಜ್ ಫೈಟ್ ಚಾಲೆಂಜ್: ಇನ್ನು ಮಾರ್ಕ್ ಜುಕರ್‌ಬರ್ಗ್ ಅವರು ಥ್ರೆಡ್ ಅನ್ನು ಪ್ರಕಟಿಸಿದಾಗಿನಿಂದ, ಮಸ್ಕ್ ಹಾಗೂ ಜುಕರ್‌ಬರ್ಗ್ ನಡುವಿನ ಜಗಳ ಜಾಸ್ತಿ ಆಗಿದೆ. ಅದರಲ್ಲೂ ಇಬ್ಬರ ನಡುವೆ ಕೇಜ್ ಫೈಟ್ ಚಾಲೆಂಜ್ ನಡೆಯುತ್ತಿದೆ. ಮಸ್ಕ್ ಮಾರ್ಕ್ ಗೆ ಸವಾಲು ಹಾಕಲಾಗಿದ್ದು, ಇಬ್ಬರೂ ಲಾಸ್ ವೇಗಾಸ್‌ನಲ್ಲಿ ಕೇಜ್ ಫೈಟ್ ಚಾಲೆಂಜ್ ಅನ್ನು ಪೂರ್ಣಗೊಳಿಸುತ್ತಾರೆ ಎಂದು ತಿಳಿದುಬಂದಿದೆ.


Click it and Unblock the Notifications








