ಫ್ಯೂಜಿಫಿಲ್ಮ್‌ನಿಂದ ಹೊಸ instax ಹೈಬ್ರಿಡ್‌ ಕ್ಯಾಮೆರಾ ಲಾಂಚ್!..ಬೆಲೆ?

|

ಫೋಟೊಗ್ರಾಫಿ ಎಂದರೇ ಸಾಮಾನ್ಯವಾಗಿ ಎಲ್ಲರು ಇಷ್ಟಪಡುತ್ತಾರೆ. ಆದರೆ ಕ್ಯಾಮೆರಾದಲ್ಲಿ ಅತ್ಯುತ್ತಮ ಫೋಟೊಗಳನ್ನು ಕ್ಲಿಕ್ಕಿಸುವುದು ಒಂದು ಕಲೆ. ಆಸಕ್ತಿ ಮತ್ತು ಅಭಿರುಚಿಗಳ ಸಮ್ಮಿಶ್ರಣದಿಂದ ಅದು ಸಾಧ್ಯ ಎನ್ನಬಹುದು. ಮಾರುಕಟ್ಟೆಯಲ್ಲಿಂದು ಡಿಜಿಟಲ್‌ ಕ್ಯಾಮೆರಾಗಳು ಲಭ್ಯವಿದ್ದು, ಸೆರೆಹಿಡಿದ ಫೋಟೊಗಳು ಮೆಮೊರಿ ಕಾರ್ಡ್‌ನಲ್ಲಿ ಸೇವ್ ಆಗುತ್ತವೆ. ಬೇಕಾದಾರ ಪ್ರಿಂಟ್‌ ಹಾಕಿಸಬಹುದು. ಹಾಗೆಯೇ ಫೋಟೊ ಕ್ಲಿಕ್ ಮಾಡಿದಾಕ್ಷಣ ಫೋಟೊ ಪ್ರಿಂಟ್ ನೀಡುವ ಕ್ಯಾಮೆರಾಗಳು ಇವೆ.

ಫ್ಯೂಜಿಫಿಲ್ಮ್‌

ಹೌದು, ಫ್ಯೂಜಿಫಿಲ್ಮ್‌ ಸಂಸ್ಥೆಯು ಈಗಾಗಲೇ instax ಕ್ಯಾಮೆರಾಗಳನ್ನು ಪರಿಚಯಿಸಿದ್ದು, ಇದೀಗ ಭಾರತೀಯ ಮಾರುಕಟ್ಟೆಗೆ ಹೊಸದಾಗಿ 'instax LiPlay' ಇನ್‌ಸ್ಟಂಟ್ ಕ್ಯಾಮೆರಾ ಬಿಡುಗಡೆ ಮಾಡಿದೆ. ಈ instax ಹೈಬ್ರಿಡ್‌ ಕ್ಯಾಮೆರಾವು 2.7 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಸೆರೆಹಿಡಿದ ಫೋಟೊಗಳನ್ನು ಪ್ರಿಂಟ್ ಸಹ ಮಾಡಬಹುದಾದ ಸೌಲಭ್ಯಗಳನ್ನು ಪಡೆದಿದೆ. ಹಾಗಾದರೇ ಫ್ಯೂಜಿಫಿಲ್ಮ್ instax LiPlay ಹೈಬ್ರಿಡ್‌ ಫೋಟೊ ಪ್ರಿಂಟರ್ ಕ್ಯಾಮೆರಾ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ನೋಡೋಣ ಬನ್ನಿರಿ.

ಏನಿದು instax ಕ್ಯಾಮೆರಾ

ಏನಿದು instax ಕ್ಯಾಮೆರಾ

ಜನಪ್ರಿಯ ಫ್ಯೂಜಿಫಿಲ್ಮ್ ಸಂಸ್ಥೆಯು instax ಮಾದರಿಯ ಕ್ಯಾಮೆರಾಗಳನ್ನು ಪರಿಚಯಿಸಿದ್ದು, ಈ ಕ್ಯಾಮೆರಾಗಳು ಫೋಟೊ ಸೆರೆಹಿಡಿಯಲು ನೆರವಾಗುವ ಜೊತೆಗೆ ಫೋಟೊ ಪ್ರಿಂಟ್ ಮಾಡುವ ಸೌಲಭ್ಯವನ್ನು ಸಹ ಒಳಗೊಂಡಿರುತ್ತವೆ. ಅದೇ ಮಾದರಿಯಲ್ಲಿ ಕಂಪನಿಯು ಇದೀಗ instax LiPlay ಹೈಬ್ರಿಡ್‌ ಫೋಟೊ ಪ್ರಿಂಟರ್ ಕ್ಯಾಮೆರಾ ಬಿಡುಗಡೆ ಮಾಡಿದೆ. ಇದರಲ್ಲಿ QR ಕೋಡ್ ಸ್ಕ್ಯಾನ್ ಮಾಡಿ ಫೋಟೊ ಪ್ರಿಂಟ್ ಮಾಡಬಹುದಾಗಿದೆ.

ರಚನೆ ಹೇಗಿದೆ

ರಚನೆ ಹೇಗಿದೆ

ಈ ಕ್ಯಾಮೆರಾವು ಫ್ಯೂಜಿಫಿಲ್ಮ್ ಸಂಸ್ಥೆಯ ಮೊದಲ ಹೈಬ್ರಿಡ್‌ instax ಮಾದರಿ ಆಗಿದ್ದು, ಕ್ಯಾಮೆರಾ ಸೈಜ್ 86 mm x 54 mm ಆಗಿದೆ. ಹಾಗೆಯೇ ಕ್ರಮವಾಗಿ 'ಸ್ಟೋನ್‌ ವೈಟ್', 'ಎಲಿಗಂಟ್ ಬ್ಲ್ಯಾಕ್' ಮತ್ತು 'ಬ್ಲಶ್‌ ಗೋಲ್ಡ್‌' ಮೂರು ಬಣ್ಣಗಳ ಆಯ್ಕೆಗಳನ್ನು ಒಳಗೊಂಡಿದ್ದು, ಡಿಸ್‌ಪ್ಲೇ, ವಾಯಿಸ್ ರೆಕಾರ್ಡರ್ ಬಟನ್, ಪ್ರಿಂಟರ್ ಆಯ್ಕೆಗಳನ್ನು ಸಹ ಇದು ಒಳಗೊಂಡಿದೆ.

ಫೋಟೊ ರೆಸಲ್ಯೂಶನ್

ಫೋಟೊ ರೆಸಲ್ಯೂಶನ್

ಫ್ಯೂಜಿಫಿಲ್ಮ್ instax LiPlay ಹೈಬ್ರಿಡ್‌ ಕ್ಯಾಮೆರಾ 2.7 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, f/2.0 ಅಪರ್ಚರ್ ಸಾಮರ್ಥ್ಯದೊಂದಿಗೆ 1/5 ಇಂಚಿನ CMOS ಇಮೇಜ್ ಸೆನ್ಸಾರ್ ಪಡೆದಿದೆ. ಫೋಟೊಗಳು 2560 x 1920 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಮೂಡಿಬರಲಿವೆ. ಬ್ಲೂಟೂತ್ ಮೂಲಕ ಸ್ಮಾರ್ಟ್‌ಫೋನ್‌ ಕನೆಕ್ಟ್‌ ಮಾಡಿ ಫೋಟೊಗಳನ್ನು ಪ್ರಿಂಟ್ ಮಾಡಬಹುದು. ಇದು ಸುಮಾರು 50 ಫೋಟೊಗಳ ಪ್ರಿಂಟ್ ಹಿಸ್ಟರಿ ಕಾಯ್ದುಕೊಳ್ಳುವ ಆಯ್ಕೆ ಹೊಂದಿದ್ದು, ಬೇಕೆಂದಾಗ ರೀಪ್ರಿಂಟ್ ಪಡೆಯಬಹುದು.

ವಿಶೇಷ ಫೀಚರ್ಸ್‌

ವಿಶೇಷ ಫೀಚರ್ಸ್‌

ಫ್ಯೂಜಿಫಿಲ್ಮ್ instax LiPlay ಹೈಬ್ರಿಡ್‌ ಕ್ಯಾಮೆರಾವು ವಾಯಿಸ್‌ ರೆಕಾರ್ಡಿಂಗ್ ಆಯ್ಕೆಯನ್ನು ಒಳಗೊಂಡಿದ್ದು, ಸುಮಾರು 10 ಸೆಕೆಂಡ ಅವಧಿಯ ರೆಕಾರ್ಡಿಂಗ್‌ಗೆ ಬೆಂಬಲ ನೀಡಲಿದೆ. ಕೇವಲ 12 ಸೆಕೆಂಡಗಳಲ್ಲಿ ಫೋಟೊವನ್ನು ಪ್ರಿಂಟ್ ನೀಡಲಿದೆ. ಹಾಗೆಯೇ 20ಕ್ಕೂ ಅಧಿಕ ಫೋಟೊ ಡಿಸೈನ್‌ಗಳ ಆಯ್ಕೆಯು ಇದ್ದು, ಒಮ್ಮೆ ಪೂರ್ಣ ಚಾರ್ಜ್ ಮಾಡಿದರೇ ಸುಮಾರು 100 ಫೋಟೊಗಳನ್ನು ಪ್ರಿಂಟ್ ಮಾಡುವ ಸಾಮರ್ಥ್ಯವನ್ನು ಪಡೆದಿದೆ. ಫೋಟೊಗಳು ಕ್ರೆಡಿಟ್ ಕಾರ್ಡ್‌ ಗಾತ್ರದಲ್ಲಿರಲಿವೆ.

ಬೆಲೆ

ಬೆಲೆ

'ಸ್ಟೋನ್‌ ವೈಟ್', 'ಎಲಿಗಂಟ್ ಬ್ಲ್ಯಾಕ್' ಮತ್ತು 'ಬ್ಲಶ್‌ ಗೋಲ್ಡ್‌' ಮೂರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗುವ ಈ ಫ್ಯೂಜಿಫಿಲ್ಮ್ instax LiPlay ಹೈಬ್ರಿಡ್‌ ಕ್ಯಾಮೆರಾದ ಬೆಲೆಯು 13,799ರೂ.ಗಳಾಗಿದೆ.

Best Mobiles in India

English summary
Fujifilm instax LiPlay instant camera can also print photos from your smartphone. Here’s all you need to know about the latest instax. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X