FUJIFILM: ಫ್ಯೂಜಿಫಿಲ್ಮ್ ಇನ್ಸ್ಟಾಕ್ಸ್ ಪಾಲ್ ಪಾಮ್ ಡಿಜಿಟಲ್ ಕ್ಯಾಮೆರಾ ಲಾಂಚ್ ! ಫೀಚರ್ಸ್ ಏನು?
ಫ್ಯೂಜಿಫಿಲ್ಮ್ (FUJIFILM) ಇಂಡಿಯಾವು ಈಗಾಗಲೇ ಸಾಕಷ್ಟು ಭಿನ್ನ ಫೀಚರ್ಸ್ ಇರುವ ಡಿವೈಸ್‌ಗಳನ್ನು ಅನಾವರಣ ಮಾಡಿದೆ. ಅದರಲ್ಲೂ ದೇಶದಲ್ಲಿ 25 ವರ್ಷಗಳಿಂದ ತನ್ನದೇ ಡಿವೈಸ್‌ಗಳನ್ನು ಅನಾವರಣ ಮಾಡುವ ಮೂಲಕ ಕ್ಯಾಮೆರಾ ಮಾರುಕಟ್ಟೆ ವಿಭಾಗದಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ.
ಹೌದು, ಫ್ಯೂಜಿಫಿಲ್ಮ್ ಇದೀಗ ಮತ್ತೊಂದು ಭಿನ್ನ ಫೀಚರ್ಸ್ ಆಯ್ಕೆಯ ಸ್ಮಾರ್ಟ್ ಕ್ಯಾಮೆರಾವನ್ನು ಅನಾವರಣ ಮಾಡಲಾಗಿದೆ. ಅಂದರೆ ಇನ್ಸ್ಟಾಕ್ಸ್ ಸಾಲಿನ ಭಾಗವಾಗಿರುವ ಅಲ್ಟ್ರಾ-ಕಾಂಪ್ಯಾಕ್ಟ್ ಇನ್ಸ್ಟಾಕ್ಸ್ ಪಾಲ್ ಡಿಜಿಟಲ್ ಕ್ಯಾಮೆರಾವನ್ನು ಲಾಂಚ್ ಮಾಡಲಾಗಿದೆ(FUJIFILM INSTAX Pal palm-sized digital camera). ಈ ವಿಶೇಷ ಕ್ಯಾಮೆರಾ ದೇಶದಲ್ಲಿ 25 ವರ್ಷಗಳ ಅಸ್ತಿತ್ವವನ್ನು ಗುರುತಿಸುತ್ತದೆ. ಹಾಗಿದ್ರೆ, ಈ ಕ್ಯಾಮೆರಾದ ವಿಶೇಷ ಫೀಚರ್ಸ್ ಏನು?, ಬೆಲೆ ಎಷ್ಟು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಫ್ಯೂಜಿಫಿಲ್ಮ್ ಇನ್ಸ್ಟಾಕ್ಸ್ ಪಾಲ್ ಪಾಮ್ ಸೈಜ್ ಡಿಜಿಟಲ್ ಕ್ಯಾಮೆರಾ: ಈಗಂತೂ ಸಣ್ಣ ಗಾತ್ರದ ಕ್ಯಾಮೆರಾಗಳಿಗೆ ಹೆಚ್ಚಿನ ಬೇಡಿಕೆ ಇದೆ. ಪ್ರಯಾಣದಲ್ಲಿರುವಾಗ ಅದ್ಭುತ ಕ್ಷಣಗಳನ್ನು ಸೆರೆಹಿಡಿಯಲು ಈ ಕ್ಯಾಮೆರಾವನ್ನು ವಿನ್ಯಾಸಗೊಳಿಸಲಾಗಿದೆ. ಅಲ್ಲದೆ ಸಣ್ಣ ಕ್ಷಣಗಳನ್ನು ದೊಡ್ಡದಾಗಿಸಿ ಎಂಬ ಗುರಿಯನ್ನು ಫ್ಯೂಜಿಫಿಲ್ಮ್ ಹೊಂದಿದ್ದು, ಅದರಂತೆ ಈ ಕ್ಯಾಮೆರಾದಲ್ಲಿ ಅತ್ಯುತ್ತಮವಾದ ಫೀಚರ್ಸ್ ಅನ್ನು ನೀಡಿದೆ.
ಪಾಲ್ ಕ್ಯಾಮೆರಾವು ಪ್ರಾಥಮಿಕ ಬಣ್ಣದ ಫಿಲ್ಟರ್‌ನೊಂದಿಗೆ 1/5 ಇಂಚಿನ CMOS ಅನ್ನು ಹೊಂದಿದ್ದು, ಇದರ ಸ್ಟ್ಯಾಂಡರ್ಡ್ ಮೋಡ್, ಶಟರ್ ಬಟನ್ ಅನ್ನು ಆನ್ ಮಾಡುವ ಮೂಲಕ ಸಕ್ರಿಯಗೊಳಿಸಬಹುದಾಗಿದೆ. ಜೊತೆಗೆ ವಿಭಿನ್ನ ದೃಷ್ಟಿಕೋನಗಳಿಂದ ಅನನ್ಯ ಶಾಟ್‌ಗಳಿಗಾಗಿ ವೈಡ್-ಆಂಗಲ್ ಲೆನ್ಸ್ ಅನ್ನೂ ಸಹ ನೀಡಲಾಗಿದೆ.

ಅಷ್ಟೇ ಅಲ್ಲದೆ ಇದು ಬಳಕೆದಾರರಿಗೆ ವಿವರವಾದ ಬ್ಯಾಗ್‌ಗ್ರೌಂಡ್‌ನೊಂದಿಗೆ ಡೈನಾಮಿಕ್ ಫೋಟೋಗಳನ್ನು ಸೆರೆಹಿಡಿಯಲು ಅನುಮತಿಸುತ್ತದೆ. ಈ ಕ್ಯಾಮೆರಾದ ಪಿಕ್ಸೆಲ್‌ಗಳು 2560 × 1920 ಸಾಮರ್ಥ್ಯದ್ದಾಗಿದ್ದು, F2.2 ಅಪರ್ಚರ್ ಅನ್ನು ಪಡೆದಿದೆ. ಇದರೊಂದಿಗೆ ಸ್ಪೀಕರ್, ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಆಯ್ಕೆಯನ್ನೂ ಸಹ ಪಡೆದಿದ್ದು, ಇದನ್ನು ಚಾರ್ಜ್ ಮಾಡಲು 2-3 ಗಂಟೆಗಳು ಬೇಕಾಗುತ್ತದೆ. ಇದಕ್ಕಾಗಿ ಯುಎಸ್‌ಬಿ ಟೈಪ್-ಸಿ ಪೋರ್ಟ್ ಆಯ್ಕೆ ನೀಡಲಾಗಿದೆ.
ಈ ವಿಶೇಷ ಕ್ಯಾಮೆರಾದಲ್ಲಿ ಉತ್ತಮ ಚಲನಶೀಲತೆಗಾಗಿ ಕಂಪನಿಯು ಇನ್ಸ್ಟಾಕ್ಸ್ ಪಾಲ್ ಅನ್ನು ಪಾಮ್ ಗಾತ್ರದಲ್ಲಿ ನಿರ್ಮಾಣ ಮಾಡಿದೆ. ಅಂದರೆ ಈ ಮೂಲಕ ಸುಲಭವಾಗಿ ಕಂಟ್ರೋಲ್ ಮಾಡಲು ಅಥವಾ ಸ್ಟ್ಯಾಂಡ್ ಆಗಿ ಬಳಕೆ ಮಾಡಲು ಇದರಲ್ಲಿ ಡಿಟ್ಯಾಚೇಬಲ್ ರಿಂಗ್ ಆಯ್ಕೆಯನ್ನು ನೀಡಲಾಗಿದೆ. ಇದರೊಂದಿಗೆ ಪಾಲ್ ರಿಮೋಟ್ ಮೋಡ್ ಆಯ್ಕೆಯನ್ನೂ ಈ ಕ್ಯಾಮೆರಾದಲ್ಲಿ ಕಾಣಬಹುದಾಗಿದೆ.
ಇನ್ನು ಇನ್ಸ್ಟಾಕ್ಸ್ ಪಾಲ್ ಆಪ್ ಬಳಕೆ ಮಾಡಿಕೊಂಡು ಸ್ಮಾರ್ಟ್‌ಫೋನ್‌ಗಳಿಗೆ ಸಂಪರ್ಕ ಪಡೆದುಕೊಳ್ಳಬಹುದಾಗಿದೆ. ಈ ಮೂಲಕ ಬಳಕೆದಾರರು ಸೆಲ್ಫಿ ಅಥವಾ ಗ್ರೂಫ್ ಫೋಟೋಗಳನ್ನು ದೂರದಿಂದಲೇ ತೆಗೆದುಕೊಳ್ಳಬಹುದು ಮತ್ತು ಫೋಟೋ ಗಾತ್ರಗಳನ್ನು ಸರಿಹೊಂದಿಸಬಹುದು. ಈ ವೇಳೆ ಎಮೋಜಿಗಳು, ಸ್ಟಿಕ್ಕರ್‌ಗಳು ಅಥವಾ ಆಪ್ ಅನ್ನು ಬಳಕೆ ಮಾಡಿಕೊಂಡು ಟೆಕ್ಸ್ಟ್ ಅನ್ನೂ ಸಹ ಆಡ್ ಮಾಡಬಹುದಾಗಿದೆ. ಈ ನಡುವೆ ಮಧ್ಯಂತರ ಮೋಡ್ ಮೂರು-ಸೆಕೆಂಡ್ ಮಧ್ಯಂತರದಲ್ಲಿ ನಿರಂತರ ಫೋಟೋಗಳನ್ನು ಸೆರೆಹಿಡಿಯುವ ಕೆಲಸ ಮಾಡುತ್ತದೆ.

ಈ ನಡುವೆ ಪಾಲ್ ಚಿತ್ರಗಳನ್ನು ಮುದ್ರಿಸಲು ಇನ್ಸ್ಟಾಕ್ಸ್ ಲಿಂಕ್ ಪ್ರಿಂಟರ್ ಸರಣಿ ಮತ್ತು ಇತರ ಇನ್ಸ್ಟಾಕ್ಸ್ ಕ್ಯಾಮೆರಾಗಳೊಂದಿಗೆ ಕನೆಕ್ಟ್ ಮಾಡಲು ಅನುಮತಿಸುತ್ತದೆ. ಬಳಕೆದಾರರು ಸ್ಟ್ರಾಪ್ ಕ್ಯಾರಬೈನರ್ ಮತ್ತು ಇನ್‌ಸ್ಟಂಟ್ ಫೋಟೋ ಪ್ರಿಂಟ್‌ಗಾಗಿ ಲಿಂಕ್ ಮೋಡ್ ಸ್ವಿಚ್ ಅನ್ನು ಒಳಗೊಂಡಿರುವ ಸಿಲಿಕೋನ್ ಕೇಸ್‌ನೊಂದಿಗೆ ಇದನ್ನು ಜೋಡಿಸಬಹುದಾಗಿದೆ.
ಫ್ಯೂಜಿಫಿಲ್ಮ್ ಇನ್ಸ್ಟಾಕ್ಸ್ ಪಾಲ್ ಪಾಮ್ ಸೈಜ್ ಡಿಜಿಟಲ್ ಕ್ಯಾಮೆರಾ: ಇನ್ಸ್ಟಾಕ್ಸ್ ಪಾಲ್‌ಗೆ 10,999 ರೂ.ಗಳ ಬೆಲೆ ನಿಗದಿ ಮಾಡಲಾಗಿದ್ದು, ಜೆಮ್ ಬ್ಲಾಕ್, ಪೌಡರ್ ಪಿಂಕ್, ಪಿಸ್ತಾ ಗ್ರೀನ್, ಲ್ಯಾವೆಂಡರ್ ಬ್ಲೂ ಮತ್ತು ಮಿಲ್ಕಿ ವೈಟ್ ಬಣ್ಣದಲ್ಲಿ ಲಭ್ಯ ಇದೆ. ಇದನ್ನು ಫ್ಯೂಜಿಫಿಲ್ಮ್ ಇಂಡಿಯಾ ರಿಟೇಲರ್ ಸ್ಟೋರ್‌ಗಳು ಮತ್ತು ವೆಬ್‌ಸೈಟ್ ಮೂಲಕ ಖರೀದಿ ಮಾಡಬಹುದಾಗಿದೆ.


Click it and Unblock the Notifications








