Home
ಸುದ್ದಿಜಾಲ

ಏರ್‌ಟೆಲ್‌ ಗ್ರಾಹಕರಿಗೆ ಶಾಕ್‌; ಏರ್‌ಟೆಲ್‌ ಪ್ಲ್ಯಾನ್‌ಗಳ ಹೊಸ ಬೆಲೆ ಹೀಗಿವೆ, ಚೆಕ್‌ ಮಾಡಿ!

ದೇಶದ ಖಾಸಗಿ ಟೆಲಿಕಾಂ ಸಂಸ್ಥೆಗಳಾದ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್‌ ಹಾಗೂ ವಿ ಟೆಲಿಕಾಂ ಕಂಪನಿಗಳು ತಮ್ಮ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ಗಳಿಗೆ ಪರಿಷ್ಕೃತ ಶುಲ್ಕ ಘೋಷಿಸಿವೆ. ಹೊಸ ಬೆಲೆಗಳು ಇದೇ ಜುಲೈ 3, 2024 ರಿಂದ ಜಾರಿಗೆ ಬರಲಿದೆ ಎಂದು ಭಾರ್ತಿ ಏರ್‌ಟೆಲ್‌ ಟೆಲಿಕಾಂ ಸಂಸ್ಥೆಯು ಬಹಿರಂಗಪಡಿಸಿವೆ. ಏರ್‌ಟೆಲ್‌ನ ಬಹುತೇಕ ರೀಚಾರ್ಜ್‌ ಪ್ಲ್ಯಾನ್‌ಗಳು ದೈನಂದಿನ ಡೇಟಾ ಪ್ರಯೋಜನ ಪಡೆದಿವೆ. ಹಾಗಾದರೇ ಏರ್‌ಟೆಲ್‌ನ ಹೊಸ ಯೋಜನೆಗಳ ಪೂರ್ಣ ಲಿಸ್ಟ್‌ ಮುಂದೆ ನೋಡೋಣ ಬನ್ನಿರಿ.

ಏರ್‌ಟೆಲ್‌ನ (Airtel) ಈ ಹಿಂದಿನ 179ರೂ ಯೋಜನೆಯು ಈಗ 199ರೂ ಬೆಲೆಯಲ್ಲಿ ಲಭ್ಯ ಇರಲಿದೆ. ಇದು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ನೀಡುತ್ತದೆ. ಅಲ್ಲದೇ 2GB ಡೇಟಾ, ಅನಿಯಮಿತ ವಾಯಿಸ್‌ ಕರೆ ಮತ್ತು ನಿತ್ಯ 100 ಎಸ್‌ಎಮ್‌ಎಸ್‌ ಪ್ರಯೋಜನ ಪಡೆದಿದೆ. ಅನ್ನು ಏರ್‌ಟೆಲ್‌ನ 265ರೂ. ಪ್ಲ್ಯಾನ್‌ ಈಗ 299ರೂ. ಗಳ ಪ್ರೈಸ್‌ ಟ್ಯಾಗ್‌ನಲ್ಲಿ ಗ್ರಾಹಕರಿಗೆ ಲಭ್ಯ. ಈ ಯೋಜನೆಯಲ್ಲಿ ಪ್ರತಿದಿನ 1GB ಡೇಟಾ, ಅನಿಯಮಿತ ವಾಯಿಸ್‌ ಕರೆ ಮತ್ತು ನಿತ್ಯ 100 ಎಸ್‌ಎಮ್‌ಎಸ್‌ ಪ್ರಯೋಜನ ಸಿಗಲಿವೆ.

ಏರ್‌ಟೆಲ್‌ ಗ್ರಾಹಕರಿಗೆ ಶಾಕ್‌; ಏರ್‌ಟೆಲ್‌ ಪ್ಲ್ಯಾನ್‌ಗಳ ಹೊಸ ಬೆಲೆ ಹೀಗಿವೆ!

ಅದೇ ರೀತಿ ಏರ್‌ಟೆಲ್‌ನ 299ರೂ. ಪ್ಲ್ಯಾನ್‌ ಇದೀಗ 349ರೂ. ಗಳ ಬೆಲೆಯಲ್ಲಿ ಲಭ್ಯವಾಗಲಿದೆ. ಈ ಯೋಜನೆಯು ಪ್ರತಿದಿನ 1.5GB ಡೇಟಾ ಪ್ರಯೋಜನ ಪಡೆದುಕೊಂಡಿದ್ದು, ಜೊತೆಗೆ ಅನಿಯಮಿತ ವಾಯಿಸ್‌ ಕರೆ ಮತ್ತು ನಿತ್ಯ 100 ಎಸ್‌ಎಮ್‌ಎಸ್‌ ಪ್ರಯೋಜನ ಅನ್ನು ಒಳಗೊಂಡಿದೆ. ಹಾಗೆಯೇ ಏರ್‌ಟೆಲ್‌ನ 359ರೂ. ಯೋಜನೆಯು ಈಗ 409ರೂ. ಬೆಲೆಯಲ್ಲಿ ರೀಚಾರ್ಜ್‌ಗೆ ಲಭ್ಯ. ಈ ಯೋಜನೆಯು ದಿನಕ್ಕೆ 2.5 GB ಡೇಟಾ ಸೌಲಭ್ಯವನ್ನು ಒಳಗೊಂಡಿದೆ.

ಅಲ್ಲದೇ ಏರ್‌ಟೆಲ್‌ನ 399ರೂ. ಪ್ರೀಪೇಯ್ಡ್‌ ಯೋಜನೆಯು ಇನ್ನು 449ರೂ. ಗಳ ಬೆಲೆಯಲ್ಲಿ ಕಾಣಿಸುತ್ತದೆ. ಈ ಯೋಜನೆಯು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದಿದ್ದು, ದಿನಕ್ಕೆ 3 GB ಡೇಟಾ ಸೌಲಭ್ಯವನ್ನು ಒದಗಿಸುತ್ತದೆ. ಅದೇ ರೀತಿ ಏರ್‌ಟೆಲ್‌ನ 479ರೂ. ಗಳ ಯೋಜನೆಯು ಈಗ 579ರೂ. ಗಳ ದರದಲ್ಲಿ ಲಭ್ಯ ಇರಲಿದೆ. ಈ ಯೋಜನೆಯು 56 ದಿನಗಳ ವ್ಯಾಲಿಡಿಟಿ ಪಡೆದಿದ್ದು, ನಿತ್ಯ 1.5GB ಡೇಟಾ ಪ್ರಯೋಜನ ನೀಡುತ್ತದೆ. ಹಾಗೆಯೇ ಅನಿಯಮಿತ ವಾಯಿಸ್‌ ಕರೆ, 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಸಿಗಲಿದೆ.

ಏರ್‌ಟೆಲ್‌ನ 549ರೂ. ಇದ್ದ ಪ್ರೀಪೇಯ್ಡ್‌ ಯೋಜನೆ ಈಗ 649ರೂ. ಬೆಲೆಯಲ್ಲಿ ಸಿಗಲಿದೆ. ಈ ಯೋಜನೆಯು 56 ದಿನಗಳ ವ್ಯಾಲಿಡಿಟಿ ಪಡೆದಿದ್ದು, ನಿತ್ಯ 2GB ಡೇಟಾ ಪ್ರಯೋಜನ ನೀಡುತ್ತದೆ. ಹಾಗೆಯೇ ಅನಿಯಮಿತ ವಾಯಿಸ್‌ ಕರೆ, 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಸಿಗಲಿದೆ. ಏರ್‌ಟೆಲ್‌ನ 455ರೂ. ಇದ್ದ ಪ್ರೀಪೇಯ್ಡ್‌ ಪ್ಲ್ಯಾನ್‌ ಈಗ 509ರೂ. ಬೆಲೆಯಲ್ಲಿ ಸಿಗಲಿದೆ. ಈ ಪ್ಲ್ಯಾನ್‌ ಮೂರು ತಿಂಗಳ ಅವಧಿಯದ್ದಾಗಿದ್ದು, 6GB ಡೇಟಾ ಪ್ರಯೋಜನ ಪಡೆದುಕೊಂಡಿದೆ.

ಹಾಗೆಯೇ ಏರ್‌ಟೆಲ್‌ನ 719ರೂ. ಬೆಲೆಯ ಯೋಜನೆ ಈಗ 859ರೂ. ಬೆಲೆಯಲ್ಲಿ ರೀಚಾರ್ಜ್‌ಗೆ ಸಿಗಲಿದೆ. ಈ ಪ್ಲ್ಯಾನ್‌ 84 ದಿನಗಳ ವ್ಯಾಲಿಡಿಟಿ ಪಡೆದಿದ್ದು, ಪ್ರತಿದಿನ 1.5GB ಡೇಟಾ ಪ್ರಯೋಜನ ನೀಡುತ್ತದೆ. ಹಾಗೆಯೇ ಅನಿಯಮಿತ ವಾಯಿಸ್‌ ಕರೆ, 100 ಎಸ್‌ಎಮ್‌ಎಸ್‌ ಸೌಲಭ್ಯ ಕೂಡಾ ಲಭ್ಯ. ಏರ್‌ಟೆಲ್‌ನ 839ರೂ. ದರದ ಪ್ಲ್ಯಾನ್‌ ಈಗ 979 ರೂ. ಬೆಲೆಯಲ್ಲಿ ಲಭ್ಯ. ಈ ಪ್ಲ್ಯಾನ್‌ 84 ದಿನಗಳ ವ್ಯಾಲಿಡಿಟಿ ಪಡೆದಿದ್ದು, ಪ್ರತಿದಿನ 2GB ಡೇಟಾ ಪ್ರಯೋಜನ ನೀಡುತ್ತದೆ. ಹಾಗೆಯೇ ಅನಿಯಮಿತ ವಾಯಿಸ್‌ ಕರೆ, 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಸಿಗಲಿದೆ.

ವಾರ್ಷಿಕ ವ್ಯಾಲಿಡಿಟಿ ಸೌಲಭ್ಯ ಪಡೆದಿರುವ ಏರ್‌ಟೆಲ್‌ನ 1799ರೂ ಪ್ಲ್ಯಾನ್‌ ಈಗ 1999ರೂ. ಗಳಿಗೆ ಏರಿಕೆ ಆಗಿದೆ. ಹಾಗೆಯೇ 2999ರೂ. ಬೆಲೆಯ ಪ್ಲ್ಯಾನ್‌ 3599ರೂ. ಗಳಿಗೆ ಜಿಗಿತ ಕಂಡಿದೆ. ಇನ್ನು ಈ ಯೋಜನೆಯು 365 ದಿನಗಳ ವ್ಯಾಲಿಡಿಟಿ ಪಡೆದಿದ್ದು, ದಿನವೂ 2GB ಡೇಟಾ ನೀಡುತ್ತದೆ.

Best Mobiles in India

English summary
Full list of all Airtel plans that have received a price hike. check all plans new price here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+