ಆಪಲ್ ಪ್ರಿಯರಿಗೆ ಸಂತಸದ ಸುದ್ದಿ; ಇನ್ಮುಂದೆ ಐಫೋನ್‌ಗಳಲ್ಲಿ ಈ ವಿಶೇಷ ಸೌಲಭ್ಯ!?
ಆಪಲ್ ಕಂಪೆನಿಯು ಕಾಲಕಾಲಕ್ಕೆ ತಕ್ಕಂತೆ ವಿಶೇಷವಾದ ಹಾಗೂ ಆಕರ್ಷಕ ಬದಲಾವಣೆಗಳನ್ನು ಐಫೋನ್‌ನಲ್ಲಿ ಮಾಡಿಕೊಂಡು ಬರುತ್ತಿದ್ದು, ಅದರಲ್ಲಿ ಬಣ್ಣದ ವಿಷಯ ಆಗಿರಬಹುದು, ಕಾರ್ಯಕ್ಷಮತೆ ವಿಷಯ ಆಗಿರಬಹುದು. ಈ ಮೂಲಕ ಇತರೆ ಫೋನ್‌ಗಳಿಗಿಂತ ಹೆಚ್ಚು ವಿಭಿನ್ನವಾಗಿರಲಿದೆ. ಇದರ ನಡುವೆ ಆಪಲ್ ಮತ್ತೊಂದು ಬದಲಾವಣೆ ಘೋಷಿಸಿದೆ.
ಹೌದು, ಆಪಲ್ ಲಾಂಚ್ ಮಾಡಲಾಗುವ ಮುಂದಿನ ಐಫೋನ್‌ಗಳಲ್ಲಿ ಈ ವಿಶೇಷ ಬದಲಾವಣೆ ಕಾಣಿಸಿಕೊಳ್ಳಲಿವೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಆಪಲ್‌ನ SE ವೇರಿಯಂಟ್ ಫೋನ್‌ಗಳಲ್ಲಿ ಇದು ಕಂಡುಬರಲಿದೆ ಎಂದೂ ಸಹ ತಿಳಿದುಬಂದಿದೆ. ಹಾಗಿದ್ರೆ, ಆಪಲ್ ಬದಲಾವಣೆ ಮಾಡಲು ಮುಂದಾಗಿರುವ ಸೌಲಭ್ಯ ಏನು?, ಇದರಿಂದ ಬಳಕೆದಾರರಿಗೆ ಲಾಭ ಏನು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಭವಿಷ್ಯದ ಐಫೋನ್‌ಗಳಲ್ಲಿ ಮಹತ್ವದ ಬದಲಾವಣೆ
ಯಾವುದೇ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆಗಳಾದರೂ ಸಹ ವಿವಿಧ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುವುದರ ಜೊತೆಗೆ ಶೈಲಿಯಲ್ಲೂ ಕೆಲವು ಬದಲಾವಣೆ ಮಾಡಿಕೊಂಡು ಬರುತ್ತವೆ. ಇದಕ್ಕೆ ಕಾರಣ ಮಾರಾಟದ ತಂತ್ರ. ಅದರಂತೆ ಆಪಲ್ ಸಹ ಬಳಕೆದಾರರಿಗೆ ವಿಶೇಷ ಅನುಭವ ನೀಡುವ ಉದ್ದೇಶದಿಂದ ಫೇಸ್ ಐಡಿ ಹಾಗೂ ಟಚ್ ಐಡಿ ವಿಷಯದಲ್ಲಿ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ.
ಅಂಡರ್ ಡಿಸ್‌ಪ್ಲೇ ಫೇಸ್ ಐಡಿ
ಆಪಲ್ ಅಂಡರ್ ಡಿಸ್‌ಪ್ಲೇ ಫೇಸ್ ಐಡಿ ಸ್ಕ್ಯಾನಿಂಗ್ ತಂತ್ರಜ್ಞಾನದೊಂದಿಗೆ ಟಚ್ ಐಡಿ ಸೆನ್ಸರ್ ಅನ್ನು ಸೆಟ್ ಮಾಡುವ ಮೂಲಕ ಮುಂಬರುವ ಫೋನ್‌ಗಳನ್ನು ಅನಾವರಣ ಮಾಡುತ್ತದೆ ಎನ್ನುವ ವದಂತಿಗಳು ಹೆಚ್ಚಾಗಿವೆ. ಅದಾಗ್ಯೂ ಭವಿಷ್ಯದ ಐಫೋನ್‌ಗಳ ಡಿಸ್‌ಪ್ಲೇ ಅಡಿಯಲ್ಲಿ ಟಚ್ ಐಡಿ ಮತ್ತು ಫೇಸ್ ಐಡಿಯನ್ನು ಸೆಟ್ ಮಾಡಲು ಆಪಲ್ ಇನ್ನೂ ಬಹುಕಾಲ ಕಾರ್ಯನಿರ್ವಹಿಸುತ್ತಿದೆ ಎಂದು ಸಹ ಕೆಲವು ವರದಿಗಳಿಂದ ತಿಳಿದುಬಂದಿದೆ.

ಒಂದು ವರ್ಷದ ನಂತರ ಬದಲಾವಣೆ
ಆಪಲ್ ಫೋನ್‌ಗಳಲ್ಲಿ ಈ ಬದಲಾವಣೆಗೆ ಸುದೀರ್ಘ ಸಮಯ ಹಿಡಿಯಲಿದ್ದು, ಕನಿಷ್ಠ ಅಂದರೂ ಒಂದು ವರ್ಷವಾದರೂ ವಿಳಂಬ ಆಗಬಹುದು ಎನ್ನಲಾಗಿದೆ. ಈ ಹಿಂದೆ ಈ ವಿಶೇಷ ಫೋನ್‌ಗಳು 2024 ರಲ್ಲಿ ಲಾಂಚ್ ಆಗಲಿವೆ ಎಂದು ಹೇಳಲಾಗುತ್ತಿತ್ತು. ಆದರೆ, ಈಗ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಈ 2025 ರಲ್ಲಿ ಲಾಂಚ್ ಆಗಲಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಬಳಕೆದಾರರಲ್ಲಿ ಆಪಲ್ ಕುತೂಹಲವನ್ನು ಹೆಚ್ಚಿಗೆ ಮಾಡಿದೆ.
SE ವೇರಿಯಂಟ್‌ನಲ್ಲಿ ಮಾತ್ರ ಈ ವಿಶೇಷ ಫೀಚರ್ಸ್ ಲಭ್ಯವಾಗುತ್ತವೆ ಎನ್ನಲಾಗಿದ್ದು, ಇವು ಟಚ್ ಐಡಿ ಮೂಲಕ ಕಾರ್ಯನಿರ್ವಹಿಸುತ್ತವೆ. ಇದಾದ ನಂತರ ಆಪಲ್ ತನ್ನ ಐಫೋನ್ X ಲಾಂಚ್‌ನೊಂದಿಗೆ ಫೇಸ್ ಐಡಿಗೆ ಬದಲಾಗಿದೆ. ಆದರೆ, ಈ ಎರಡೂ ತಂತ್ರಜ್ಞಾನ ಒಮ್ಮೆಲೆ ಅಸ್ತಿತ್ವದಲ್ಲಿರಲಿವೆಯೇ ಎನ್ನುವ ಬಗ್ಗೆ ಮಾತ್ರ ಯಾವುದೇ ಸ್ಪಷ್ಟತೆ ಇಲ್ಲ. ಈ ಸಂಬಂಧ ಕೊರಿಯನ್ ಬ್ಲಾಗ್ ನೇವರ್‌ನ ವರದಿಯು, ಆಪಲ್ ಅಂಡರ್ ಡಿಸ್‌ಪ್ಲೇ ಟಚ್ ಐಡಿ ಅಭಿವೃದ್ಧಿಯಲ್ಲಿ ಕೆಲವು ಪ್ರಗತಿಯನ್ನು ಸಾಧಿಸಿದೆ ಎಂದು ಉಲ್ಲೇಖಿಸಿದೆ.

ಅಂಡರ್ ಡಿಸ್‌ಪ್ಲೇ ಫೇಸ್ ಐಡಿ ತಂತ್ರಜ್ಞಾನದ ಯಶಸ್ಸಿನ ಮೇಲೆ ಅವಲಂಬಿತವಾಗಿದ್ದು, ಅಂಡರ್ ಡಿಸ್‌ಪ್ಲೇ ಫೇಸ್ ಐಡಿಯನ್ನು ಬಿಡುಗಡೆ ಮಾಡಿದ ನಂತರ ಅಂಡರ್ ಸ್ಕ್ರೀನ್ ಟಚ್ ಐಡಿಯನ್ನು ಪರಿಚಯಿಸಲು ಎರಡರಿಂದ ಮೂರು ವರ್ಷಗಳವರೆಗೆ ಕಾಯಬೇಕಿದೆ ಎಂದೂ ಸಹ ಈ ವೇಳೆ ತನ್ನ ವರದಿ ಮೂಲಕ ಮಾಹಿತಿ ನೀಡಿದೆ. ಆದರೆ, ಮೊದಲ ತಂತ್ರಜ್ಞಾನ ಮಾರುಕಟ್ಟೆಯಲ್ಲಿ ನಿರೀಕ್ಷಿತ ಯಶಸ್ಸನ್ನು ಗಳಿಸಿದರೆ ಮಾತ್ರವೇ ಎರಡನೇ ತಂತ್ರಜ್ಞಾನದ ಅಭಿವೃದ್ಧಿಗೆ ಆಪಲ್ ಮುಂದಾಗುತ್ತದೆ ಎಂದೂ ಸಹ ಹೇಳಲಾಗುತ್ತಿದೆ.
ಇನ್ನು ಅಭಿವೃದ್ಧಿ ಹಂತದಲ್ಲಿರುವ ಈ ಟಚ್ ಐಡಿ ವ್ಯವಸ್ಥೆಯು ಬಳಕೆದಾರರಿಗೆ ಐಫೋನ್ ಅನ್ನು ಅನ್‌ಲಾಕ್ ಮಾಡಲು ಅವಕಾಶ ನೀಡುವುದಿಲ್ಲ. ಆದರೆ, ಆಮ್ಲಜನಕ ಶುದ್ಧತ್ವ (SpO2) ಮತ್ತು ಪಲ್ಸ್ ರೇಟ್ ಅಳೆಯಲು ಇದು ಅವಕಾಶ ನೀಡುತ್ತದೆ ಎನ್ನಲಾಗಿದೆ.


Click it and Unblock the Notifications








