Home
ಸುದ್ದಿಜಾಲ

ಭಾರತೀಯ ಮಾರುಕಟ್ಟೆಗೆ ಲೀಕೊ ಪರಿಚಯಿಸುತ್ತಿದೆ ಅತ್ಯದ್ಭುತ ಟಿವಿ

By Shwetha

ಲೀಕೊ ಇನ್ನೊಮ್ಮೆ ತಂತ್ರಜ್ಞಾನ ಕ್ಷೇತ್ರಕ್ಕೆ ಅತ್ಯುತ್ತಮವಾದ ಕೊಡುಗೆಯನ್ನು ನೀಡುತ್ತಿದೆ. ತನ್ನ ಸೂಪರ್ ಟಿವಿಯನ್ನು ಭಾರದತಲ್ಲಿ ಲಾಂಚ್ ಮಾಡುತ್ತಿದೆ. ಲೀ 1ಎಸ್ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಲಾಂಚ್ ಮಾಡುವ ಮೂಲಕ ತನ್ನ ಕೊಡುಗೆಯನ್ನು ಆರಂಭಿಸಿದ ಕಂಪೆನಿ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿದೆ.

ಓದಿರಿ: ಭಾರತೀಯ ಬಳಕೆದಾರರ ಅಚ್ಚುಮೆಚ್ಚಿನ ಫೋನ್ ಆದ ಲೀಕೊ

ಟಿವಿಯನ್ನು ಲಾಂಚ್ ಮಾಡುವ ಮೂಲಕ ಟಿವಿ ಕ್ಷೇತ್ರದಲ್ಲೂ ಸ್ಪರ್ಧೆಗೆ ಅಣಿಯಾಗುತ್ತಿದೆ ಲೀಕೊ ಬಜೆಟ್ ಬೆಲೆಯಲ್ಲೇ ದೊಡ್ಡ ಸ್ಕ್ರೀನ್ ಉಳ್ಳ ಟಿವಿಯನ್ನು ಒದಗಿಸುತ್ತದೆ ಎಂಬುದಾಗಿ ಮೂಲಗಳು ತಿಳಿಸಿವೆ. ಬನ್ನಿ ಈ ಟಿವಿಯ ಬೆಲೆ, ವಿಶೇಷತೆಗಳು ಮತ್ತು ಇನ್ನಷ್ಟು ಮಾಹಿತಿಗಳನ್ನು ಈ ಕೆಳಗಿನ ಸ್ಲೈಡರ್‌ಗಳಲ್ಲಿ ಅರಿತುಕೊಳ್ಳೋಣ

ಬೆಲೆ

ಬೆಲೆ

ಭಾರತೀಯ ಮಾರುಕಟ್ಟೆಯಲ್ಲಿ ಬೆಲೆ ಎಂಬುದು ಹೆಚ್ಚು ಪರಿಗಣಿತವಾದ ಅಂಶವಾಗಿದೆ. ನಾವು ಕೊಂಡುಕೊಳ್ಳುವ ಟಿವಿ ಎಲ್ಲಾ ಹೊಸ ಬಗೆಯ ಫೀಚರ್‌ಗಳನ್ನು ಹೊಂದಿರಬೇಕು ಮತ್ತು ಬಜೆಟ್‌ಗೆ ಸೂಕ್ತವಾಗಿರಬೇಕು ಎಂಬುದಾಗಿ ನಾವು ಬಯಸುತ್ತೇವೆ. ಕ್ಯಾಶ್‌ಬ್ಯಾಕ್ಸ್ ಮತ್ತು ಆನ್‌ಲೈನ್ ವಿನಾಯಿತಿಗಳನ್ನು ಖರೀದಿಯ ಮುನ್ನ ನಾವು ಪರಿಗಣಿಸುತ್ತೇವೆ.

ದೊಡ್ಡ ಗಾತ್ರ

ದೊಡ್ಡ ಗಾತ್ರ

ಇಂದಿನ ಟಿವಿ ತಯಾರಕರು 22 ರಿಂದ 120 ಇಂಚುಗಳ ಟಿವಿ ಗಾತ್ರಕ್ಕೆ ಮಹತ್ವವನ್ನು ನೀಡುತ್ತಿದ್ದಾರೆ. ಗ್ರಾಹಕರು ಬಯಸುವುದು 32 ರಿಂದ 65 ಇಂಚುಗಳ ಟಿವಿಯತ್ತಲೇ ತಮ್ಮ ಗಮನವನ್ನು ಹರಿಸುತ್ತಿದ್ದಾರೆ. 40 ಇಂಚುಗಳ ಟಿವಿಯನ್ನು ಖರೀದಿಸುತ್ತಿರುವ ಗ್ರಾಹಕರ ಸಂಖ್ಯೆಯೂ ಏರುತ್ತಿದೆ.

ಅಂಶಗಳು

ಅಂಶಗಳು

ತಮಗೆ ಬೇಕಾದ ಸಮಯದಲ್ಲೇ ಟಿವಿಯಲ್ಲಿ ವಿಷಯಗಳನ್ನು ವೀಕ್ಷಕರು ವೀಕ್ಷಿಸುತ್ತಾರೆ. ಹೀಗೆ ಟಿವಿಯು ಹೆಚ್ಚಿನ ಮನರಂಜನಾ ಅಂಶಗಳನ್ನು ಒಳಗೊಂಡಿರಬೇಕು ಎಂಬುದಾಗಿ ಟಿವಿ ಖರೀದಿದಾರ ಬಯಸುತ್ತಾರೆ. ಕೆಲವೊಂದು ಸ್ಮಾರ್ಟ್ ಟಿವಿಗಳು ಸ್ಥಳೀಯ ಅಪ್ಲಿಕೇಶನ್ ಅನ್ನು ಒದಗಿಸುತ್ತಿದ್ದು ತಮಗೆ ಬೇಕಾದ ವಿಷಯಗಳನ್ನು ಈ ಮೂಲಕ ವೀಕ್ಷಕರು ನೋಡಬಹುದಾಗಿದೆ.

ಆಕರ್ಷಿಸುವ ಬಣ್ಣ

ಆಕರ್ಷಿಸುವ ಬಣ್ಣ

ಟಿವಿ ಖರೀದಿಸುವಾಗ ಬಣ್ಣಕ್ಕೂ ಆದ್ಯತೆಯನ್ನು ನೀಡಲಾಗುತ್ತದೆ. ಬಣ್ಣ ಎಷ್ಟು ಗಾಢವಾಗಿದೆ ಮತ್ತು ಪ್ರಖರವಾಗಿದೆ ಎಂಬುದನ್ನೂ ಕಾಣುತ್ತಾರೆ. ಚಿತ್ರಗಳು ಚೆನ್ನಾಗಿ ಪ್ರಸಾರವಾಗಬೇಕು ಎಂಬುದಾಗಿ ಕೂಡ ಬಯಸುತ್ತಾರೆ. ಹೀಗೆ ಟಿವಿಯು ಎಲ್ಲಾ ಅಂಶಗಳನ್ನು ಪೂರೈಸುವ ಮಾದರಿಯಲ್ಲಿರಬೇಕಾಗುತ್ತದೆ.

ವೇಗ

ವೇಗ

ಕಂಪ್ಯೂಟರ್‌ಗಳಂತೆಯೇ, ಟಿವಿಗಳಲ್ಲೂ ವೇಗ ಮಹತ್ವದ್ದಾಗಿದೆ. ಟಿವಿಯನ್ನು ಪವರ್ ಮಾಡುವ ಸಿಪಿಯು ಮತ್ತು ಜಿಪಿಯುಗೂ ಮಹತ್ವವನ್ನು ನೀಡಬೇಕಾಗುತ್ತದೆ. ಟಿವಿಯು ಮಾಹಿತಿಯನ್ನು ಎಷ್ಟು ಬೇಗ ಪ್ರಕ್ರಿಯಿಸುತ್ತದೆ ಎಂಬುದನ್ನು ಜಿಪಿಯುವನ್ನು ನೋಡಿ ಆಧರಿಸಲಾಗುತ್ತದೆ. ನೀವು ಕ್ರಿಸ್ಟಲ್ ಕ್ಲಿಯರ್ ಚಿತ್ರವನ್ನು ಆನಂದಿಸುತ್ತಿದ್ದೀರಿ ಎಂಬುದನ್ನು ಖಾತ್ರಿಪಡಿಸಿ.

Best Mobiles in India

English summary
It is being speculated that internet and ecosystem conglomerate LeEco is all set to launch its Super TVs in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+