ಭಾರತೀಯ ಬಳಕೆದಾರರ ಅಚ್ಚುಮೆಚ್ಚಿನ ಫೋನ್ ಆದ ಲೀಕೊ

By Shwetha
|

ಸ್ಮಾರ್ಟ್‌ಫೋನ್ ಫೀಚರ್ ಮತ್ತು ವಿಶೇಷತೆಗಳು ನಿಮ್ಮ ಗಮನಕ್ಕೆ ಬರುವುದು ಅವುಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ. ಇಂತಹುದ್ದೇ ಅತ್ಯುನ್ನತ ವಿಶೇಷತೆಗಳಿಂದ ಕೂಡಿರುವ ಲೀಕೊ ಸ್ಮಾರ್ಟ್‌ಫೋನ್‌ಗಳು ಭಾರತೀಯ ನೆಲದಲ್ಲಿ ಗ್ರಾಹಕರ ಮನವನ್ನು ಹಿಡಿದಿಟ್ಟಿವೆ.

ಓದಿರಿ: ಲೀಕೊ ಫ್ಲ್ಯಾಶ್‌ಸೇಲ್ ವೋಡಾಫೋನ್ ವಿಶೇಷ ಆಫರ್

3ಜಿಬಿ RAM, 32 ಜಿಬಿ ಆಂತರಿಕ ಮೆಮೊರಿಯೊಂದಿಗೆ ತನ್ನೆಲ್ಲಾ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡುತ್ತಿರುವ ಲೀಕೊ, ಮಲ್ಟಿಟಾಸ್ಕಿಂಗ್, ಹ್ಯಾಂಗಿಂಗ್ ಸಮಸ್ಯೆ ಮತ್ತು ಅಲ್ಟಿಮೇಟ್ ಮಲ್ಟಿಮೀಡಿಯಾ ಅನುಭವವನ್ನು ಬಳಕೆದಾರರಿಗೆ ಒದಗಿಸುತ್ತಿದೆ. ಲೀಕೊ ತನ್ನೆಲ್ಲಾ ಸ್ಮಾರ್ಟ್‌ಫೋನ್‌ಗಳನ್ನು "3+32", ಇನ್ನೂ ಮೇಲ್ಮಟ್ಟದ ಕಾನ್ಫಿಗರೇಶನ್‌ನಲ್ಲಿ ಲಾಂಚ್ ಮಾಡಿದೆ. ನಮ್ಮ ದೇಶದಲ್ಲಿ ಹೆಚ್ಚಿನವರು 35 ಕ್ಕಿಂತ ಕೆಳಗಿನವೇ ಆಗಿದ್ದು, ಯುವ ಜನರಿಗೆ ಲೀಕೊ ಸ್ಮಾರ್ಟ್‌ಫೋನ್ ಅತ್ಯುತ್ತಮ ಖರೀದಿಗೆ ಅರ್ಹವೆನಿಸಿದೆ. ಇಂದಿನ ಲೇಖನದಲ್ಲಿ ಲೀಕೊ ಸ್ಮಾರ್ಟ್‌ಫೋನ್ ಇತರ ಬ್ರ್ಯಾಂಡ್‌ಗಳಿಗಿಂತ ಹೇಗೆ ಅತ್ಯುತ್ತಮವಾದುದು ಎಂಬುದನ್ನು ನೋಡೋಣ.

ಓದಿರಿ: 2 ಸೆಕೆಂಡ್‌ಗಳಲ್ಲಿ 70,000 ಮಾರಾಟ ಕಂಡ ಲೀಕೊ ಸ್ಮಾರ್ಟ್‌ಫೋನ್

ಮನರಂಜನಾ ಕೂಪನ್‌

ಮನರಂಜನಾ ಕೂಪನ್‌

ಯುವ ಜನರ ಸ್ಮಾರ್ಟ್‌ಫೋನ್ ಚಟುವಟಿಕೆಗಳನ್ನು ಈಡೇರಿಸುವಂತಹ ಮಾದರಿಯಲ್ಲಿ ಲೀಕೊ ಸ್ಮಾರ್ಟ್‌ಫೋನ್‌ಗಳು ಬಂದಿದ್ದು ಫೋನ್ ಖರೀದಿಸುವಾಗ ಲೀಕೊ ಮನರಂಜನಾ ಕೂಪನ್‌ಗಳನ್ನು ಖರೀದಿಸಬಹುದಾಗಿದೆ.

ಸಾಫ್ಟ್‌ವೇರ್

ಸಾಫ್ಟ್‌ವೇರ್

ಈ ಫೋನ್‌ನಲ್ಲಿ ಇನ್ನೊಂದು ಮನಸೆಳೆಯುವ ಅಂಶವೆಂದರೆ ಸಾಫ್ಟ್‌ವೇರ್ ಆಗಿದೆ. ಇತ್ತೀಚೆಗೆ ತಾನೇ ಕಂಪೆನಿಯು EUI 5.8 ಕಸ್ಟಮ್ ಮೇಡ್ ಯೂಸರ್ ಇಂಟರ್ಫೇಸ್ ಅನ್ನು ಹೊರತಂದಿದ್ದು ಅದನ್ನು ಲೀಮ್ಯಾಕ್ಸ್2 ಹಾಗೂ ಲೀ2 ಡಿವೈಸ್‌ಗಳಲ್ಲಿ ಕಾಣಬಹುದಾಗಿದೆ. ಆಂಡ್ರಾಯ್ಡ್ ಮಾರ್ಶ್ ಮಲ್ಲೊ ಆಧಾರಿತ ಓಎಸ್ ಅನ್ನು ಡಿವೈಸ್‌ಗಳು ಪಡೆದುಕೊಂಡಿದೆ.

ಡೇಟಾ ಬಳಕೆ

ಡೇಟಾ ಬಳಕೆ

EUI 5.8 ಫೀಚರ್ ನಿಮಗೆ ಡೇಟಾ ಬಳಕೆಯ ಮೇಲೆ ನಿಯಂತ್ರಣವನ್ನು ಸಾಧಿಸಲು ನೆರವಾಗಲಿದೆ. ನಿಮ್ಮ ಸೆಲ್ಯುಲಾರ್ ಅಥವಾ ವೈಫೈ ಡೇಟಾವನ್ನು ಬಳಸಿಕೊಂಡು ಯಾವ ಅಪ್ಲಿಕೇಶನ್ ಉಪಯೋಗಿಸಬೇಕು ಎಂಬುದನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ. ಪವರ್ ಸೇವಿಂಗ್ ವ್ಯವಸ್ಥೆಯು ಹೆಚ್ಚಿನ ವಿಶೇಷತೆಗಳನ್ನು ಪಡೆದುಕೊಂಡಿದ್ದು ನಿಮ್ಮ ಬ್ಯಾಟರಿ ಬಳಕೆಯನ್ನು ಅಪ್ಟಿಮೈಸ್ ಮಾಡಲು ಸಹಕಾರಿಯಾಗಲಿದೆ.

ಸಂಪೂರ್ಣ ವೆಬ್ ಪುಟದ ಸ್ಕ್ರೀನ್ ಶಾಟ್

ಸಂಪೂರ್ಣ ವೆಬ್ ಪುಟದ ಸ್ಕ್ರೀನ್ ಶಾಟ್

EUI 5.8 ನೊಂದಿಗೆ ಒಂದೇ ಕ್ಲಿಕ್‌ನಲ್ಲಿ ಸಂಪೂರ್ಣ ವೆಬ್ ಪುಟದ ಸ್ಕ್ರೀನ್ ಶಾಟ್ ಅನ್ನು ಬಳಕೆದಾರರು ತೆಗೆದುಕೊಳ್ಳಬಹುದಾಗಿದೆ.

ವೆರಿ ಲಾರ್ಜ್ ಫಾಂಟ್ ಸೈಜ್

ವೆರಿ ಲಾರ್ಜ್ ಫಾಂಟ್ ಸೈಜ್

ಪಠ್ಯವನ್ನು ದೊಡ್ಡದಾಗಿಸಲು, 'ವೆರಿ ಲಾರ್ಜ್ ಫಾಂಟ್ ಸೈಜ್' ಆಪ್ಶನ್ ಡಿವೈಸ್‌ನಲ್ಲಿದೆ. ಹೊಸ ನವೀಕರಣ ಕೂಡ ಡಿವೈಸ್‌ಗೆ ಮ್ಯೂಸಿಕ್ ಅಪ್ಲಿಕೇಶನ್ ಮತ್ತು ರಿಫ್ರೆಶ್ಡ್ ಯುಐ ಅನ್ನು ಒದಗಿಸಲಿದೆ. ಇನ್ನು ಸಾರ್ಟಿಂಗ್ ಮಾಡುವ ಅವಕಾಶವನ್ನೂ ಡಿವೈಸ್ ಬಳಕೆದಾರರಿಗೆ ನೀಡಲಿದೆ.

ಇಂಟರ್ಫೇಸ್

ಇಂಟರ್ಫೇಸ್

3+32 ಮತ್ತು ಅದಕ್ಕೂ ಮೇಲ್ಮಟ್ಟದ ಇಂಟರ್ಫೇಸ್ ಅನ್ನು ಬಳಸುವವರಿಗೆ ಲೀಕೊ ಸ್ಮಾರ್ಟ್‌ಫೋನ್ ಹೇಳಿಮಾಡಿಸಿರುವಂಥದ್ದಾಗಿದೆ. ಲೀಕೊ ಮತ್ತು ಫ್ಲಿಪ್‌ಕಾರ್ಟ್ 'ಬಿಗ್ ಎಕ್ಸ್‌ಚೇಂಜ್ ಡೇಸ್" ಪ್ರೊಗ್ರಾಮ್ ಅನ್ನು ನಡೆಯಿಸಿದ್ದು ತಮ್ಮ ಹಳೆಯ ಫೋನ್‌ಗಳನ್ನು ಬದಲಾಯಿಸುವ ಅವಕಾಶ ಕೂಡ ಇಲ್ಲಿತ್ತು.

ದೀರ್ಘ ಬ್ಯಾಟರಿ

ದೀರ್ಘ ಬ್ಯಾಟರಿ

ಲೀ ಮ್ಯಾಕ್ಸ್2, ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 820 ಚಿಪ್‌ಸೆಟ್‌ನೊಂದಿಗೆ ಬಂದಿದ್ದು 2.15GHZ ಕ್ರಿಯೊ ಪ್ರೊಸೆಸರ್ ಇದರಲ್ಲಿದೆ. ವೇಗದ ಕನೆಕ್ಶನ್ ಫೀಚರ್, ವರ್ಧಿತ ವೀಕ್ಷಣೆ ಮತ್ತು ದೀರ್ಘ ಬ್ಯಾಟರಿ, ಸುಧಾರಿತ ಚಿಪ್‌ ಹೆಚ್ಚು ಇಂಟೆನ್ಸಿಟಿ ಗೇಮಿಂಗ್ ಮತ್ತು ಮಲ್ಟಿಮೀಡಿಯಾವನ್ನು ಬೆಂಬಲಿಸಲಿದೆ.

ಬಜೆಟ್ ಶ್ರೇಣಿ

ಬಜೆಟ್ ಶ್ರೇಣಿ

ಲೀ2 ಸೂಪರ್ ಫೋನ್, ಬಜೆಟ್ ಶ್ರೇಣಿಯಲ್ಲೇ ಬಂದಿದ್ದು ಹೆಚ್ಚು ಆಕರ್ಷಕ ಫೀಚರ್ ಅನ್ನು ಪಡೆದುಕೊಂಡಿದೆ. ಹೆಚ್ಚು ಶಕ್ತಿಯುತ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 652 ಓಕ್ಟಾ ಕೋರ್ ಪ್ರೊಸೆಸರ್ ಜೊತೆಗೆ 1.8GHZ ವಿಶೇಷತೆ ಇದರಲ್ಲಿದೆ. 3 ಜಿಬಿ RAM ಮತ್ತು 32 ಜಿಬಿ ಆಂತರಿಕ ಸಂಗ್ರಹವನ್ನು ಡಿವೈಸ್ ಪಡೆದುಕೊಂಡಿದ್ದು ಕ್ವಿಕ್ ಚಾರ್ಜರ್ ಇದರಲ್ಲಿದೆ.

ಬಹು ಅಪ್ಲಿಕೇಶನ್‌ ಚಾಲನೆ

ಬಹು ಅಪ್ಲಿಕೇಶನ್‌ ಚಾಲನೆ

ಯಾವುದೇ ಅಡೆತಡೆಯಿಲ್ಲದೆ ಲೀ 1ಎಸ್ ಇಕೊ, 64 ಬಿಟ್ ಓಕ್ಟಾ ಕೋರ್ ಮೀಡಿಯಾ ಟೆಕ್ ಹೇಲಿಯೊ ಎಕ್ಸ್ 10 ಚಿಪ್‌ಸೆಟ್ ಅನ್ನು ಪಡೆದುಕೊಂಡಿದ್ದು, 3ಜಿಬಿ RAM ಹೊಂದಿದೆ. ಯಾವುದೇ ತೊಂದರೆಯಿಲ್ಲದೆ ಬಹು ಅಪ್ಲಿಕೇಶನ್‌ಗಳನ್ನು ಇದರಲ್ಲಿ ಚಾಲನೆ ಮಾಡಬಹುದಾಗಿದೆ. ಬಳಕೆದಾರರು ಗೇಮಿಂಗ್ ಮತ್ತು ವಾಟ್ಸಾಪ್ ಅನ್ನು ಸಮಾನವಾಗಿ ಕಾರ್ಯನಿರ್ವಹಿಸಿಕೊಳ್ಳಬಹುದಾಗಿದೆ.

Best Mobiles in India

English summary
Specs and features of a smartphone are of no use if they do not bring a difference in user experience. It is here that global internet ecosystem conglomerate LeEco's Superphones bring par excellence user experience compared to other brands.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X