ನವರಾತ್ರಿಗೆ ಸ್ಯಾಮ್‌ಸಂಗ್ ಉಡುಗೊರೆ!..ಗ್ಯಾಲಾಕ್ಸಿ ಎಸ್8, ಎಸ್8 ಪ್ಲಸ್ ಬೆಲೆ ಭಾರಿ ಇಳಿಕೆ!!
ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್ 8 ಮತ್ತು ಗ್ಯಾಲಾಕ್ಸಿ ಎಸ್ 8 ಪ್ಲಸ್ ಸ್ಮಾರ್ಟ್‌ಪೋನ್‌ಗಳ ಮೇಲೆ ಇದೇ ಮೊದಲ ಭಾರಿಗೆ ಗಮನಾರ್ಹವಾದ ಬೆಲೆ ಕಡಿತವಾಗಿದೆ .!!
ದೇಶದೆಲ್ಲೆಡೆ ವಿಜೃಂಭಣೆಯಿಂದ ಆಚರಿಸುವ ನವರಾತ್ರಿ ಹಬ್ಬದ ಉಡುಗೊರೆಯಾಗಿ ಸ್ಯಾಮ್‌ಸಂಗ್ ತನ್ನ ಹೈ ಎಂಡ್ ಸ್ಮಾರ್ಟ್‌ಪೋನ್‌ಗಳ ಬೆಲೆಯನ್ನು ಕಡಿತಗೊಳಿಸಿದೆ.!! ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್ 8 ಮತ್ತು ಗ್ಯಾಲಾಕ್ಸಿ ಎಸ್ 8 ಪ್ಲಸ್ ಸ್ಮಾರ್ಟ್‌ಪೋನ್‌ಗಳ ಮೇಲೆ ಇದೇ ಮೊದಲ ಭಾರಿಗೆ ಗಮನಾರ್ಹವಾದ ಬೆಲೆ ಕಡಿತವಾಗಿದೆ.!!
ನವರಾತ್ರಿ ವಿಶೇಷ ಆಫರ್‌ನಿಂದ ಗ್ಯಾಲಾಕ್ಸಿ ಎಸ್ 8 ಮತ್ತು ಗ್ಯಾಲಾಕ್ಸಿ ಎಸ್ 8 ಪ್ಲಸ್ ಸ್ಮಾರ್ಟ್‌ಫೋನ್‌ಗಳ ಬೆಲೆ 4,000 ರೂ.ಗಿಂತಲೂ ಹೆಚ್ಚು ಕಡಿತಗೊಂಡಿದ್ದು, ಪ್ರಸ್ತುತ ಗ್ಯಾಲಾಕ್ಸಿ ಎಸ್ 8 ಸ್ಮಾರ್ಟ್‌ಫೋನ್ ಬೆಲೆ 53,990 ರೂಪಾಯಿಗಳಾಗಿವೆ. ಹಾಗೆಯೇ, ಗ್ಯಾಲಾಕ್ಸಿ ಎಸ್ 8 ಪ್ಲಸ್ ಸ್ಮಾರ್ಟ್‌ಫೋನ್ ಬೆಲೆ 60,990 ರೂಪಾಯಿಗಳಾಗಿವೆ.!!

ಹೆಚ್‌ಡಿಎಫ್‌ಸಿ ಗ್ರಾಹಕರಿಗೂ ಕೂಡ ಸ್ಯಾಮ್‌ಸಂಗ್ ಭಾರಿ ಆಫರ್ ನೀಡಿದ್ದು, ಹೆಚ್‌ಡಿಎಫ್‌ಸಿ ಗ್ರಾಹಕರು ಗ್ಯಾಲಾಕ್ಸಿ ಎಸ್ 8 ಮತ್ತು ಗ್ಯಾಲಾಕ್ಸಿ ಎಸ್ 8 ಪ್ಲಸ್ ಸ್ಮಾರ್ಟ್‌ಫೋನ್‌ಗಳ ಮೇಲೆ 4,000 ಹೆಚ್ಚಿನ ಡಿಸ್ಕ್ಂಟ್ಸ್ ಪಡೆಯಬಹುದು ಎಂದು ಹೇಳಿದೆ.!! ಆದರೆ, ಸ್ಯಾಮ್‌ಸಂಗ್ ಅಫಿಷಿಯಲ್ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಇನ್ನು ಪ್ರಕಟಿಸಲಾಗಿಲ್ಲ.!!

ಇನ್ನು ಕಳೆದ ವಾರವಷ್ಟೆ ಭಾರತದಲ್ಲಿ ಬಿಡುಗಡೆಯಾಗಿರುವ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ನೋಟ್ 8 ಮಾರಾಟಕ್ಕೂ ಮುನ್ನವೇ ಗ್ಯಾಲಾಕ್ಸಿ ಎಸ್ 8 ಮತ್ತು ಗ್ಯಾಲಾಕ್ಸಿ ಎಸ್ 8 ಪ್ಲಸ್ ಸ್ಮಾರ್ಟ್‌ಫೋನ್‌ಗಳ ಬೆಲೆ ಇಳಿಕೆಯಾಗಿದ್ದು, ಸ್ಯಾಮ್‌ಸಂಗ್ ಪ್ರಿಯರಿಗೆ ಖುಷಿಸುದ್ದಿಯಾಗಿದೆ.!!
ಓದಿರಿ: ನಾವು ಸರಿಯಾದ ಜಿಎಸ್‌ಟಿ ತೆರಿಗೆ ವಿಧಿಸಿದ್ದೇವೆ ಎಂದು ತಿಳಿಯುವುದು ಹೇಗೆ?


Click it and Unblock the Notifications








