Apple iPhone : ಐದು ಸಾವಿರಕ್ಕೆ ಐಫೋನ್ ಮಾರುತ್ತಿದ್ದ ಗ್ಯಾಂಗ್ ಈಗ ಕಂಬಿ ಹಿಂದೆ, ವಂಚನೆ ಶೈಲಿ ಹೇಗಿತ್ತು ಗೊತ್ತಾ!?
ಐಫೋನ್(iPhone) ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಿಂತ ಕಡಿಮೆ ಬೆಲೆಯಲ್ಲಿ ಲಭ್ಯ ಆಗುತ್ತದೆ ಎಂದರೆ ಯಾರು ಸಹ ಬೇಡ ಎನ್ನುವುದಿಲ್ಲ. ಈ ನಡುವೆ ಕೇವಲ ಐದು ಸಾವಿರಕ್ಕೆ ಐಫೋನ್ ಮಾರಾಟ ಮಾಡುತ್ತಿದ್ದ ದೊಡ್ಡ ಗ್ಯಾಂಗ್ ಈಗ ಕಂಬಿ ಎಣಿಸುತ್ತಿದೆ.
ಹೌದು, ಸಾಮಾಜಿಕ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ್ದ ಐದು ಸಾವಿರಕ್ಕೆ ಐಫೋನ್ ವಿಷಯ ಕೊನೆಗೂ ಬಯಲಾಗಿದೆ. ಅಂದರೆ ಕೆಲವು ತಿಂಗಳುಗಳಿಂದ ಐದು ಸಾವಿರಕ್ಕೆ ಐಫೋನ್ ಮಾರಾಟ ಮಾಡಲಾಗುತ್ತದೆ ಎಂಬ ಲಿಂಕ್ ಎಲ್ಲೆಡೆ ಹರಿದಾಡುತ್ತಿತ್ತು. ಇದನ್ನು ನಂಬಿ ಹಲವಾರು ಜನರು ಹಣ ಕಳೆದುಕೊಂಡು ಮೋಸ ಹೋಗಿದ್ದರು. ಆದರೆ, ಇದೀಗ ಈ ದೊಡ್ಡ ಮೋಸದ ಜಾಲಕ್ಕೆ ಪೊಲೀಸರು ತಕ್ಕ ಪಾಠ ಕಲಿಸಿದ್ದಾರೆ. ಹಾಗಿದ್ರೆ, ಬನ್ನಿ ಏನಿದು ಐದು ಸಾವಿರಕ್ಕೆ ಐಫೋನ್ ಕಥೆ ನೋಡಿ ಬರೋಣ.

ಐದು ಸಾವಿರಕ್ಕೆ ಐಫೋನ್: ಯಾವುದೇ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳು ಅಥವಾ ಸ್ಮಾರ್ಟ್‌ಡಿವೈಸ್‌ಗಳ ಬಗ್ಗೆ ಪೋಸ್ಟ್‌ಗಳು ಕಾಣಿಸಿಕೊಂಡರೆ ತಕ್ಷಣವೇ ಎಚ್ಚೆತ್ತುಕೊಳ್ಳಿ. ಈ ರೀತಿಯ ಜಾಹೀರಾತು ಹೆಚ್ಚಾಗಿ ಇನ್‌ಸ್ಟಾಗ್ರಾಮ್ ಖಾತೆಯಲ್ಲಿಯೇ ಕಾಣಿಸಿಕೊಳ್ಳುತ್ತಿದ್ದು, ದೊಡ್ಡ ದೊಡ್ಡ ವ್ಯಕ್ತಿಗಳೇ ಈ ಬಲೆಗೆ ಬಿದ್ದಿರುವುದು ದುರಂತದ ವಿಷಯ. ಇದೀಗ ದುಬಾರಿ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ನಕಲಿ ಡೀಲ್ ನೀಡಿ ಜನರನ್ನು ವಂಚಿಸುತ್ತಿದ್ದವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಅಂದರೆ ದುಬಾರಿ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಊಹೆ ಕೂಡ ಮಾಡಲಾಗಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡುವ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ವ್ಯಕ್ತಿಗಳನ್ನು ವಂಚಿಸಿದ ಅಂತಿಮ ವರ್ಷದ ಬಿಬಿಎ ವಿದ್ಯಾರ್ಥಿ ಸೇರಿದಂತೆ ಇಬ್ಬರು ಸೈಬರ್ ಕ್ರಿಮಿನಲ್‌ಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಇನ್ನು ಈ ಆನ್‌ಲೈನ್ ವಂಚಕರಿಗೆ ಬಲಿಯಾದ ಅಖಿಲೇಶ್ ಗುಪ್ತಾ ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದರು.

ಇಂಟರ್ನೆಟ್ ಪ್ರೋಟೋಕಾಲ್ ವಿವರಗಳ ದಾಖಲೆಯನ್ನು (IPDR) ವಿಶ್ಲೇಷಣೆ ಮಾಡಲಾಗಿದ್ದು, ಪಾಣಿಪತ್‌ನಲ್ಲಿ ಈ ವಂಚಕರ ಜಾಡು ಬೀಡು ಬಿಟ್ಟಿತ್ತು ಎಂದು ಪ್ರಾಥಮಿಕ ತನಿಖೆ ನಡೆಸಿದ ನಂತರ ಪೊಲೀಸ್ ಉಪ ಆಯುಕ್ತ ರವಿಕುಮಾರ್ ಸಿಂಗ್ ಎಂಬುವರು ಮಾಹಿತಿ ನೀಡಿದ್ದಾರೆ. ಇನ್ನು ರಾಘವ್ ಎಂಬಾತನನ್ನು ಬಂಧಿಸಿದ್ದು, ಆತನ ಬಳಿ ಅಪರಾಧ ಕೃತ್ಯಗಳಿಗೆ ಬಳಸಿದ ಮೂರು ಮೊಬೈಲ್ ಫೋನ್ ಗಳನ್ನು ತನಿಖೆ ಮಾಡಲಾಗಿ, ಆ ಮೂಲಕ ಆರ್ಯನ್ ಎಂಬ ಇನ್ನೊಬ್ಬ ವ್ಯಕ್ತಿಯನ್ನು ನಳಂದದ ದೇವಿ ಸರೈನಲ್ಲಿ ಬಂಧಿಸಲಾಗಿದೆ
ಗ್ರೂಪ್ ಮೂಲಕ ಸ್ಕ್ಯಾಮಿಂಗ್ ತಂತ್ರ ಕಲಿತ ಸ್ಕ್ಯಾಮರ್ಸ್ : ರಾಘವ್ ಟೆಲಿಗ್ರಾಂನಲ್ಲಿ ವಂಚನೆ ಮಾಡುವುದು ಹೇಗೆ ಎಂಬ ಸ್ಕ್ಯಾಮಿಂಗ್ ವಿಧಾನಗಳನ್ನು ಕಲಿತಿದ್ದಾನಂತೆ. ಜೊತೆಗೆ ಈತ ಮತ್ತೊಬ್ಬ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದು, ಆತ ಕಡಿಮೆ ಬೆಲೆಗೆ ದುಬಾರಿ ಗ್ಯಾಜೆಟ್‌ಗಳನ್ನು ಹೇಗೆ ಮಾರಾಟ ಮಾಡಬೇಕೆಂದು ಕಲಿಸಿದ್ದಾನೆ ಎಂದು ತಿಳಿದುಬಂದಿದೆ. ಇದಾದ ನಂತರ ಸ್ಕ್ಯಾಮರ್ಸ್ gadgets.world ಎಂಬ ಇನ್‌ಸ್ಟಾಗ್ರಾಮ್‌ನಲ್ಲಿ ಪೇಜ್ ಕ್ರಿಯೇಟ್ ಮಾಡಿ ಧನಾತ್ಮಕ ವಿಮರ್ಶೆಗಳು ಮತ್ತು ಅನ್ಬಾಕ್ಸಿಂಜ್ ಮಾಡುವ ಗ್ರಾಹಕರ ವಿಡಿಯೋ ಹಾಗೂ ಫೋಟೋ ಪೋಸ್ಟ್ ಮಾಡಿದ್ದಾರೆ.
ಇದಾದ ಬಳಿಕ ಅತ್ಯುತ್ತಮ ಸೇವೆಯನ್ನು ನೀಡುತ್ತೇವೆ ಎನ್ನುವ ನಂಬಿಕೆಯನ್ನು ಹುಟ್ಟಿಸುವ ಸಲುವಾಗಿ ರಾಘವ್ indiansmartpanel.com ನಲ್ಲಿ ನಕಲಿ ಅನುಯಾಯಿಗಳನ್ನು ಪಡೆದುಕೊಂಡಿದ್ದಾನೆ. ಜೊತೆಗೆ ಅದರಲ್ಲಿ 5000 ರೂ.ಗೆ ಐಫೋನ್‌ಗಳು ಮತ್ತು ಇತರ ಉನ್ನತ-ಮಟ್ಟದ ಫೋನ್‌ಗಳನ್ನು ಮಾರಾಟ ಮಾಡುವ ಜಾಹೀರಾತುಗಳೇ ತುಂಬಿ ತುಳುಕಾಡಿವೆ. ಅಷ್ಟು ಮಾತ್ರವಲ್ಲ ಯಾವುದೇ ಪ್ರೊಡಕ್ಟ್ ಅನ್ನು ತಲುಪಿಸಲು ಮುಂಗಡವನ್ನು ಪಾವತಿಸುವಂತೆ ಅಲ್ಲಿ ಉಲ್ಲೇಖ ಮಾಡಲಾಗಿದೆ.

ಇಷ್ಟು ಮಾತ್ರವಲ್ಲದೆ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಕೈಗೆಟುಕುವ ಬೆಲೆಗಳು ಮತ್ತು ನಕಲಿ ವಿಮರ್ಶೆಗಳ ಬಗ್ಗೆ ಸೈಬರ್ ಅಪರಾಧಿಗಳು ಜನರನ್ನು ಆಕರ್ಷಿಸುವಲ್ಲಿ ಯಶಸ್ವಿ ಸಹ ಆಗಿದ್ದು, ರಾಘವ್ ಮತ್ತು ಆರ್ಯನ್ ಇನ್‌ಸ್ಟಾಗ್ರಾಮ್ ಪುಟಕ್ಕೆ ಲಿಂಕ್ ಮಾಡಿದ ವಾಟ್ಸಾಪ್ ಖಾತೆಯನ್ನು ಕ್ರಿಯೇಟ್ ಮಾಡಿ ಹೆಚ್ಚಿನ ವಿವರಗಳಿಗಾಗಿ ಆಸಕ್ತ ಖರೀದಿದಾರರನ್ನು ವಾಟ್ಸಾಪ್ ಮೂಲಕ ಸಂಪರ್ಕಿಸಲು ಸೂಚಿಸಿದ್ದಾರೆ. ಈ ಮಾರ್ಗ ಸಹ ಅವರಿಗೆ ಮೋಸ ಮಾಡಲು ದೊಡ್ಡ ಅನುಕೂಲ ಮಾಡಿಕೊಟ್ಟಿದೆ.


Click it and Unblock the Notifications








