ಅಮೆರಿಕಾ ಮೂಲದ ಬ್ರ್ಯಾಂಡ್‌ನಿಂದ ಹೊಸ ಸ್ಮಾರ್ಟ್‌ವಾಚ್ ಬಿಡುಗಡೆ!..ಅಚ್ಚರಿಯ ಫೀಚರ್ಸ್!
ದೇಶಿಯ ಮಾರುಕಟ್ಟೆಯಲ್ಲಿ ಅಮೆರಿಕಾ ಮೂಲದ ಗಾರ್ಮಿನ್ ಸ್ಮಾರ್ಟ್‌ವಾಚ್‌ಗಳು ಉತ್ತಮ ಬೇಡಿಕೆ ಪಡೆದಿವೆ. ಈ ನಿಟ್ಟಿನಲ್ಲಿ ಗಾರ್ಮಿನ್ ಸಂಸ್ಥೆಯು ತನ್ನ ಹಲವು ಸ್ಮಾರ್ಟ್‌ವಾಚ್ ಸರಣಿಯಗಳನ್ನು ಇಲ್ಲಿಯ ಮಾರುಕಟ್ಟೆ ಬಿಡುಗಡೆ ಮಾಡಿ ಗಮನ ಸೆಳೆದಿದೆ. ಹಾಗೆಯೇ ಇದೀಗ ಹೊಸದಾಗಿ ಗಾರ್ಮಿನ್ ಫೆನಿಕ್ಸ್ 7 ಪ್ರೊ ಮತ್ತು ಗಾರ್ಮಿನ್ ಎಪಿಕ್ ಪ್ರೊ (Garmin Fenix 7 Pro, Epix Pro) ಸ್ಮಾರ್ಟ್‌ವಾಚ್ ಸರಣಿಯನ್ನು ಲಾಂಚ್ ಮಾಡಿದೆ.
ಹೌದು, ಗಾರ್ಮಿನ್ ಸಂಸ್ಥೆಯು ಭಾರತದಲ್ಲಿ ಗಾರ್ಮಿನ್ ಫೆನಿಕ್ಸ್ 7 ಪ್ರೊ ಮತ್ತು ಗಾರ್ಮಿನ್ ಎಪಿಕ್ ಪ್ರೊ ಸ್ಮಾರ್ಟ್‌ವಾಚ್ ಸರಣಿ ಬಿಡುಗಡೆ ಮಾಡಿದೆ. ಈ ಸರಣಿಯು ಒಂಬತ್ತು ಸ್ಮಾರ್ಟ್‌ವಾಚ್ ಮಾಡೆಲ್‌ಗಳನ್ನು ಒಳಗೊಂಡಿದೆ. ಈ ವಾಚ್‌ಗಳು ಔಟ್‌ಡೋರ್/ ಹೊರಾಂಗಣ ಸರಿಹೊಂದುವ ವಿನ್ಯಾಸ ಪಡೆದಿದ್ದು, ಅಡ್ವೆಂಚರ್, ಅಥ್ಲೇಟ್ಸ್ ಹಾಗೂ ಫಿಟ್ನೆಸ್ ಪ್ರಿಯರಿಗೂ ಇಷ್ಟವಾಗುವ ಮಾದರಿಯ ರಚನೆಯ ಪಡೆದಿವೆ.

ಗಾರ್ಮಿನ್ ಸಂಸ್ಥೆಯ ಈ ನೂತನ ಸ್ಮಾರ್ಟ್‌ವಾಚ್‌ಗಳು ಭಿನ್ನ ಆಯ್ಕೆಗಳನ್ನು ಒಳಗೊಂಡಿವೆ. ಅಮೊಲೆಡ್ ಡಿಸ್‌ಪ್ಲೇ, ವಾಟರ್ ರೆಸಿಸ್ಟನ್ಸ್, ದೀರ್ಘ ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯಗಳಂತಹ ಕೆಲವು ಆಕರ್ಷಕ ಫೀಚರ್ಸ್‌ಗಳನ್ನು ಈ ವಾಚ್‌ಗಳು ಒಳಗೊಂಡಿವೆ. ಹಾಗಾದರೆ ಗಾರ್ಮಿನ್ ಫೆನಿಕ್ಸ್ 7 ಪ್ರೊ ಮತ್ತು ಗಾರ್ಮಿನ್ ಎಪಿಕ್ ಪ್ರೊ ಸ್ಮಾರ್ಟ್‌ವಾಚ್‌ಗಳ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಗಾರ್ಮಿನ್ ಸಂಸ್ಥೆಯು ಹೊಸ ವಾಚ್‌ಗಳಲ್ಲಿ ಮೂರು ಎಪಿಕ್ಸ್ ಪ್ರೊ ವಾಚ್‌ಗಳು 42mm, 47mm ಮತ್ತು 51mm ಗಾತ್ರಗಳ ಆಯ್ಕೆ ಪಡೆದಿವೆ. ಹಾಗೆಯೇ ಗಾರ್ಮಿನ್ ಎಪಿಕ್ಸ್ ಪ್ರೊ ಸ್ಮಾರ್ಟ್ ವಾಚ್‌ಗಳು ಕ್ರಿಸ್ಟಲ್ ಲೆನ್ಸ್‌ನೊಂದಿಗೆ ಅಮೊಲೆಡ್ (AMOLED) ಡಿಸ್‌ಪ್ಲೇ ರಚನೆಯನ್ನು ಒಳಗೊಂಡಿವೆ. ಈ ಸರಣಿಯಲ್ಲಿ ಕೆಲವು ವಾಚ್‌ಗಳ ಬೆಜೆಲ್‌ಗಳು ಸ್ಟೇನ್‌ಲೆಸ್ ಸ್ಟೀಲ್ ಅಥವಾ ಟೈಟಾನಿಯಂ ರಚನೆಯಲ್ಲಿ ಇವೆ.
ಸಂಸ್ಥೆಯ ಈ ಮೂರು ಸ್ಮಾರ್ಟ್ ವಾಚ್‌ಗಳು 10 ಎಟಿಎಂ ರೇಟಿಂಗ್ ಅನ್ನು ಹೊಂದಿದ್ದು, 100 ಮೀಟರ್ ಆಳದವರೆಗೆ ನೀರು ರೆಸಿಸ್ಟನ್ಸ್ ಆಗಿವೆ. ಗಾರ್ಮಿನ್ ಎಪಿಕ್ಸ್ ಪ್ರೊ ಗ್ಲೋಬಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಮ್ (GNSS), ಡೌನ್‌ಲೋಡ್ ಮಾಡಬಹುದಾದ ಕಾರ್ಟೋಗ್ರಫಿ ಸಪೋರ್ಟ್ ಮತ್ತು ಎಲ್‌ಇಡಿ (LED) ಫ್ಲ್ಯಾಷ್‌ಲೈಟ್ ಒಳಗೊಂಡಿದ್ದು, ಆಕರ್ಷಕ ಡಿಸೈನ್ ಹೊಂದಿವೆ. ಇನ್ನು ವಾಚ್‌ಗಳ ಬಾಳಿಕೆ (duarability) MIL-STD-810 ಪರೀಕ್ಷಿಸಲಾಗಿದೆ.
ಇನ್ನು ಈ ವಾಚ್‌ಗಳು ಹೊರಾಂಗಣ ಫೀಚರ್ಸ್‌ಗಳ ಜೊತೆಗೆ, 32GB ಆನ್‌ಬೋರ್ಡ್ ಸಂಗ್ರಹ ಸಾಮರ್ಥ್ಯವನ್ನು ಹೊಂದಿವೆ. ಹೀಗಾಗಿ ಬಳಕೆದಾರರು ಮ್ಯೂಸಿಕ್ ಅನ್ನು ಸ್ಟೋರ್ ಮಾಡಬಹುದಾಗಿದೆ. ಹಾಗೆಯೇ ಈ ವಾಚ್‌ಗಳು 24/7 ಆರೋಗ್ಯ ಮೇಲ್ವಿಚಾರಣೆ ಮತ್ತು ಸ್ಮಾರ್ಟ್ ನೋಟಿಫೀಕೇಶನ್ ಅನ್ನು ಬೆಂಬಲಿಸುತ್ತವೆ. ಇನ್ನು ಈ ವಾಚ್‌ಗಳು ಉತ್ತಮ ಬ್ಯಾಟರಿ ಪಡೆದಿದ್ದು, ದೀರ್ಘ ಬಾಳಿಕೆ ಸಪೋರ್ಟ್ ಮಾಡಲಿವೆ. 42 ಎಂಎಂ ಮಾದರಿಯು 10 ದಿನಗಳವರೆಗೆ, 47 ಎಂಎಂ ಮಾದರಿಯು 16 ದಿನಗಳವರೆಗೆ ಮತ್ತು 51 ಎಂಎಂ ಮಾದರಿಯು 31 ದಿನಗಳವರೆಗೆ ಇರುತ್ತದೆ.
ಗಾರ್ಮಿನ್ ಸ್ಮಾರ್ಟ್‌ವಾಚ್‌ಗಳ ಬೆಲೆ ಮಾಹಿತಿ ಇಲ್ಲಿದೆ :
* ಗಾರ್ಮಿನ್ ಎಪಿಕ್ಸ್ 2 ಪ್ರೊ ವಾಚ್ ಬೆಲೆ 1,11,990ರೂ. (ಲೈಟ್ ಸ್ಯಾಂಡ್ ಬ್ಯಾಂಡ್)
* ಗಾರ್ಮಿನ್ ಎಪಿಕ್ಸ್ 2 ಪ್ರೊ 42ಎಂಎಂ ಬೆಲೆ 1,11,990ರೂ. (ಟೈಟಾನಿಯಂ ಜೊತೆಗೆ ಬ್ಲ್ಯಾಕ್ ಬ್ಯಾಂಡ್)
* ಗಾರ್ಮಿನ್ ಎಪಿಕ್ಸ್ 2 ಪ್ರೊ 47ಎಂಎಂ ಬೆಲೆ 1,11,990ರೂ. (ವೈಟ್‌ಸ್ಟೋನ್ ಬ್ಯಾಂಡ್)
* ಗಾರ್ಮಿನ್ ಎಪಿಕ್ಸ್ 2 ಪ್ರೊ 51ಎಂಎಂ ಬೆಲೆ 1,23,490ರೂ. (ಟೈಟಾನಿಯಂ ಜೊತೆಗೆ ಬ್ಲ್ಯಾಕ್ ಬ್ಯಾಂಡ್)
* ಗಾರ್ಮಿನ್ ಫೆನಿಕ್ಸ್ 7S ಪ್ರೊ ಸೋಲಾರ ಬೆಲೆ 1,00,990ರೂ. (ಟೈಟಾನಿಯಂ ಜೊತೆಗೆ ಬ್ಲ್ಯಾಕ್ ಬ್ಯಾಂಡ್)
* ಗಾರ್ಮಿನ್ ಫೆನಿಕ್ಸ್ 7X ಪ್ರೊ ಸೋಲಾರ ಬೆಲೆ 1,11,990ರೂ. (ಟೈಟಾನಿಯಂ ಜೊತೆಗೆ ಬ್ಲ್ಯಾಕ್ ಬ್ಯಾಂಡ್)


Click it and Unblock the Notifications








