ದೇಶಿಯ ಬಜಾರ್‌ಗೆ ಎಂಟ್ರಿ ಕೊಟ್ಟ ಅಮೆರಿಕಾದ 'ಫೊರ್‌ರನ್ನರ್‌ 45' ಸ್ಮಾರ್ಟ್‌ವಾಚ್!

|

ಅಮೆರಿಕಾ ಮೂಲದ 'ಗಾರ್ಮಿನ್' ಸಂಸ್ಥೆಯು ಇತ್ತೀಚಿಗಷ್ಟೆ 'ಫೊರ್‌ರನ್ನರ್ 245' ಮತ್ತು 'ಫೊರ್‌ರನ್ನರ್ 245 ಮ್ಯೂಸಿಕ್' ಹೆಸರಿನ ಎರಡು ಸ್ಮಾರ್ಟ್‌ವಾಚ್‌ ಡಿವೈಸ್‌ಗಳನ್ನು ಬಿಡುಗಡೆ ಮಾಡಿ ಭಾರಿ ಸದ್ದು ಮಾಡಿತ್ತು. ಈಗ ಹೊಸ ವಿಷಯ ಎನೆಂದರೇ ಗಾರ್ಮಿನ್ ಮತ್ತೆ ಫೊರ್‌ರನ್ನರ್ ಸ್ಮಾರ್ಟ್‌ವಾಚ್‌ ಸರಣಿಯಲ್ಲಿ ಹೊಸದೊಂದು ಡಿವೈಸ್‌ ಲಾಂಚ್‌ ಮಾಡಿದ್ದು, ಅತ್ಯುತ್ತಮ ಫೀಚರ್ಸ್‌ಗಳಿಂದ ಗ್ರಾಹಕರನ್ನು ಆಕರ್ಷಿಸಿದೆ.

ದೇಶಿಯ ಬಜಾರ್‌ಗೆ ಎಂಟ್ರಿ ಕೊಟ್ಟ ಅಮೆರಿಕಾದ 'ಫೊರ್‌ರನ್ನರ್‌ 45' ಸ್ಮಾರ್ಟ್‌ವಾಚ್!

ಹೌದು, ಗಾರ್ಮಿನ್ ಕಂಪನಿಯು 'ಫೊರ್‌ರನ್ನರ್‌ 45' ಹೆಸರಿನ ಸ್ಮಾರ್ಟ್‌ವಾಚ್‌ ಅನ್ನು ಇದೇ ಅಗಷ್ಟ 2ರಂದು ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಡಿವೈಸ್‌ ಬಿಲ್ಟ್‌ಇನ್ GPS ಸೌಲಭ್ಯವನ್ನು ಹೊಂದಿದ್ದು, ಸೆಫ್ಟಿ ಹಾಗೂ ಇನ್ಸಿಡೆಂಟ್‌ ಡಿಟೆಕ್ಷನ್, ಗಾರ್ಮಿನ್ ಕೋಚ್ 2.0, 24x7 ಹೃದಯ ಬಡಿತದ ಮಾನಿಟರಿಂಗ್, ಬಾಡಿ ಬ್ಯಾಟರಿ ಮತ್ತು ಇತರೆ ಫಿಟ್ನೆಸ್‌ ಫೀಚರ್ಸ್‌ಗಳನ್ನು ಹೊಂದಿದೆ.

ದೇಶಿಯ ಬಜಾರ್‌ಗೆ ಎಂಟ್ರಿ ಕೊಟ್ಟ ಅಮೆರಿಕಾದ 'ಫೊರ್‌ರನ್ನರ್‌ 45' ಸ್ಮಾರ್ಟ್‌ವಾಚ್!

ಈ ಡಿವೈಸ್‌ ಲಾವಾ ರೆಡ್‌ ಮತ್ತು ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿದ್ದು, ಅಮೆಜಾನ್ ಇ ಕಾಮರ್ಸ್‌ ಜಾಲತಾಣದಲ್ಲಿ ಮತ್ತು ಮೆಟ್ರೊ ನಗರಗಳಲ್ಲಿನ ಪ್ರಮುಖ ಆಫ್‌ಲೈನ್‌ ಸ್ಟೋರ್‌ಗಳಲ್ಲಿಯೂ ಖರೀದಿಗೆ ದೊರೆಯಲಿದೆ. ಹಾಗಾದರೇ ಗಾರ್ಮಿನ್ ಫೊರ್‌ರನ್ನರ್‌ 45 ಸ್ಮಾರ್ಟ್‌ವಾಚ್‌ ಡಿವೈಸ್‌ ಇತರೆ ಯಾವೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ವಿಶೇಷ ಫೀಚರ್ಸ್‌ಗಳು

ವಿಶೇಷ ಫೀಚರ್ಸ್‌ಗಳು

ಗಾರ್ಮಿನ್ ಫೊರ್‌ರನ್ನರ್‌ 45 ಡಿವೈಸ್‌, ಅಥ್ಲೇಟಿಕ್ ಲೈಫ್‌ಸ್ಟೈಲ್‌ ಮಾದರಿಯಲ್ಲಿದ್ದು, ಬಳಕೆದಾರರ ಸ್ನೇಹಿ ಎನಿಸಿಕೊಂಡಿದೆ. ಬಿಲ್ಟ್‌ಇನ್ ಜಿಪಿಎಸ್‌ ಆಯ್ಕೆ ಪಡೆದಿರುವ ಈ ಡಿವೈಸ್‌ ಗಾರ್ಮಿನ್ ಕೋಚ್ 2.0, ಆಕ್ಸಿಜನ್ ಲೆವೆಲ್ ತಿಳಿಸುವ VO2 ಸೌಲಭ್ಯ, ನಿರಂತರ ಹೃದಯ ಬಡಿತದ ಮಾನಿಟರಿಂಗ್ ಮತ್ತು ಬಾಡಿ ಬ್ಯಾಟರಿ, ಸೌಲಭ್ಯಗಳನ್ನು ಸಹ ಒಳಗೊಂಡಿದೆ.

ಫಿಟ್ನೆಸ್‌ ಫೀಚರ್ಸ್‌ಗಳು

ಫಿಟ್ನೆಸ್‌ ಫೀಚರ್ಸ್‌ಗಳು

ಬಳಕೆದಾರರ ರನ್ನಿಂಗ್ ಟ್ರಾಕ್‌ ಮಾಡುವ ಆಯ್ಕೆ ಇದ್ದು, ಎಷ್ಟು ವೇಗದಲ್ಲಿ ಎಷ್ಟು ದೂರ ರನ್ನ ಮಾಡಲಾಗಿದೆ ಎನ್ನುವ ಮಾಹಿತಿ ನೀಡುತ್ತದೆ. ಹಾಗೆಯೇ ಸೈಕ್ಲಿಂಗ್, ಇನ್‌ಡೋರ್‌ ಟ್ರಾಕ್, ಟ್ರೆಡ್‌ಮಿಲ್, ಕಾರ್ಡಿಯೊ, ಯೋಗಾ ಮತ್ತು ಇನ್ನಿತರೆ ಅಗತ್ಯ ಆಕ್ಟಿವಿಟಿಗಳನ್ನು ನಿಯಮಿತವಾಗಿ ಟ್ರಾಕ್ ಮಾಡುವ ಸೌಲಭ್ಯಗಳನ್ನು ಸಹ ಪಡೆದುಕೊಂಡಿದೆ. ಬಳಕೆ ಸಹ ಸುಲಭವಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಗಾರ್ಮಿನ್ ಫೊರ್‌ರನ್ನರ್‌ 45 ಡಿವೈಸ್‌ ಬೆಲೆಯು 19,990ರೂ.ಗಳು ಆಗಿದ್ದು, ಅಮೆಜಾನ್‌ ಸೇರಿದಂತೆ ಟಾಟಾ ಕ್ಲಿಕ್, ಮಂತ್ರಾ ಮತ್ತು ಪೇಟಿಎಮ್ ಮಾಲ್ ಇ ಕಾಮರ್ಸ್ ಜಾಲತಾಣಗಳಲ್ಲಿ ಖರೀದಿಗೆ ಲಭ್ಯವಿದೆ. ಹಾಗೆಯೇ ಪ್ರಮುಖ ಮೆಟ್ರೊ ನಗರಗಳಲ್ಲಿನ ಜಸ್ಟ್ ಇನ್ ಟೈಮ್ ಸ್ಟೋರ್ಸ್ ಮತ್ತು ಅಧಿಕೃತ ರೀಟೈನ್ ಸ್ಟೋರ್‌ಗಳಲ್ಲಿ ಗ್ರಾಹಕರಿಗೆ ದೊರೆಯಲಿದೆ.

ಆಫ್‌ಲೈನ್‌ ಲಭ್ಯತೆ

ಆಫ್‌ಲೈನ್‌ ಲಭ್ಯತೆ

ಈ ಡಿವೈಸ್‌ ಆನ್‌ಲೈನ್ ಅಲ್ಲದೇ ಆಫ್‌ಲೈನ್‌ನಲ್ಲಿಯೂ ಲಭ್ಯವಿದ್ದು, ಪುಂಡೋಲ್ ಮತ್ತು ಸನ್ಸ್ (ಪುಣೆ), ಜಾನ್ಸನ್ ವಾಚ್ ಕಂ (ಸಿಪಿ, ನವದೆಹಲಿ), ಇಂಡೋ ವಾಚ್ ಗ್ಯಾಲರಿ, ಸಮೇ ವಾಚ್‌ಗಳು, ಶಾಪರ್ಸ್ ಸ್ಟಾಪ್, ಐದನೇ ಸೀಸನ್ (ಚೆಂಬೂರ್, ಮುಂಬೈ) ವಾಚ್‌ಗಳ ಅಂಗಡಿ-ಸಿಟಿ ವಾಕ್ (ಸಾಕೆಟ್, ನವದೆಹಲಿ), ಕಮಲ್ ವಾಚ್ ಕಂ (ಹೈದರಾಬಾದ್), ಸ್ಪೋರ್ಟ್ಸ್ ಸ್ಟೇಷನ್ (ನವದೆಹಲಿ), ಮತ್ತು ಗಾರ್ಮಿನ್ ಬ್ರಾಂಡ್ ಸ್ಟೋರ್ -ನೊಯಿಡಾಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
The smartwatch comes with a price tag of Rs 19,990 and it is available in Black and Lava Red colour options. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X