ಅಮೆರಿಕಾದ ಗಾರ್ಮಿನ್ ಸಂಸ್ಥೆಯ ಹೊಸ GPS-ಸ್ಮಾರ್ಟ್‌ವಾಚ್‌ ಬಿಡುಗಡೆ!.ಬೆಲೆ ದುಬಾರಿ!

|

ಭಾರತೀಯ ಟೆಕ್‌ ಮಾರುಕಟ್ಟೆಯು ವಿಸ್ತಾರವಾಗುತ್ತಿದ್ದು, ಬಹುತೇಕ ವಿದೇಶಿ ಕಂಪನಿಗಳಿಗೆ ದೇಶಿಯ ಮಾರುಕಟ್ಟೆಯೇ ಬೆಸ್ಟ್‌ ಎನಿಸಿವೆ. ಈ ನಿಟ್ಟಿನಲ್ಲಿ ಅಮೆರಿಕ ಮೂಲದ 'ಗಾರ್ಮಿನ್' ಸಂಸ್ಥೆಯು ಇತ್ತೀಚಿಗೆ ಭಾರತದಲ್ಲಿ 'ಫೊರೆರನ್ನರ್ 245' ಮತ್ತು 'ಫೊರೆರನ್ನರ್ 245 ಮ್ಯೂಸಿಕ್' ಹೆಸರಿನ ಎರಡು ಸ್ಮಾರ್ಟ್‌ವಾಚ್‌ಗಳನ್ನು ಬಿಡುಗಡೆ ಮಾಡಿದ್ದು, ಆದ್ರೆ ಈಗ ಅದೇ ಸರಣಿಯಲ್ಲಿ ಮತ್ತೊಂದು ಹೈಫೀಚರ್ಸ್‌ ಸ್ಮಾರ್ಟ್‌ವಾಚ್‌ ಅನ್ನು ಬಿಡುಗಡೆ ಮಾಡಿದೆ.

ಅಮೆರಿಕಾದ ಗಾರ್ಮಿನ್ ಸಂಸ್ಥೆಯ ಹೊಸ GPS-ಸ್ಮಾರ್ಟ್‌ವಾಚ್‌ ಬಿಡುಗಡೆ!.ಬೆಲೆ ದುಬಾರಿ!

ಹೌದು, ಜನಪ್ರಿಯ ಗಾರ್ಮಿನ್ ಕಂಪನಿಯು 'ಫೊರೆರನ್ನರ್ 945' ಹೆಸರಿನ ಸ್ಮಾರ್ಟ್‌ವಾಚ್‌ ಅನ್ನು ಇದೇ ಜೂನ್‌ 24ರಂದು ಭಾರತೀಯ ಮಾರುಕಟ್ಟೆಗೆ ರಿಲೀಸ್‌ ಮಾಡಿದ್ದು, ಈ ಸ್ಮಾರ್ಟ್‌ವಾಚ್‌ GPS ಆಧಾರಿತವಾಗಿದೆ. ಫಿಟ್ನೆಸ್‌ ಸಂಬಂಧಿಸಿದ ಈ ಡಿವೈಸ್‌ ರನ್ನಿಂಗ್, ಸೈಕ್ಲಿಂಗ್, ಸ್ವಿಮ್ಮಿಂಗ್, ಸ್ಕೀಯಿಂಗ್, ಪ್ಯಾಡಲ್ ಸ್ಪೋರ್ಟ್ಸ್‌ಗಳಿಗಾಗಿ ಇನ್‌ಬಿಲ್ಟ್‌ ಆಕ್ಟಿವಿಟಿ ಪ್ರೊಫೈಲ್‌ ಅನ್ನು ಒಳಗೊಂಡಿದೆ.

ಅಮೆರಿಕಾದ ಗಾರ್ಮಿನ್ ಸಂಸ್ಥೆಯ ಹೊಸ GPS-ಸ್ಮಾರ್ಟ್‌ವಾಚ್‌ ಬಿಡುಗಡೆ!.ಬೆಲೆ ದುಬಾರಿ!

ದುಬಾರಿ ಬೆಲೆಯ ಪ್ರೈಸ್‌ಟ್ಯಾಗ್‌ನಲ್ಲಿ ಬಿಡುಗಡೆ ಆಗಿರುವ 'ಫೊರೆರನ್ನರ್ 945' ಸ್ಮಾರ್ಟ್‌ವಾಚ್‌ ಇನ್‌ಬಿಲ್ಟ್‌ ಸ್ಟೋರೇಜ್‌ ಆಯ್ಕೆಯನ್ನು ಹೊಂದಿದ್ದು, ಸುಮಾರು 1000 ಸಾಂಗ್ಸ್‌ಗಳನ್ನು ಸ್ಟೋರ್‌ ಮಾಡಬಹುದಾಗಿದೆ. ಬ್ಯಾಟರಿ ಬಾಳಿಕೆಯು ಸಹ ಅತ್ಯುತ್ತಮವಾಗಿದೆ. ಹಾಗಾದರೇ ಗಾರ್ಮಿನ್ ಫೊರೆರನ್ನರ್ 945 ಸ್ಮಾರ್ಟ್‌ವಾಚ್‌ ಇತರೆ ಯಾವೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಓದಿರಿ : ಹೊಸ ದಾಖಲೆ ಬರೆದ ಶಿಯೋಮಿ : 'ಮಿ ಬ್ಯಾಂಡ್ 4' ಭರ್ಜರಿ ಮಾರಾಟ! ಓದಿರಿ : ಹೊಸ ದಾಖಲೆ ಬರೆದ ಶಿಯೋಮಿ : 'ಮಿ ಬ್ಯಾಂಡ್ 4' ಭರ್ಜರಿ ಮಾರಾಟ!

ಪವರ್‌ಫುಲ್‌ ಫಿಟ್ನೆಸ್‌ ಡಿವೈಸ್‌

ಪವರ್‌ಫುಲ್‌ ಫಿಟ್ನೆಸ್‌ ಡಿವೈಸ್‌

ಗಾರ್ಮಿನ್ ಫೊರೆರನ್ನರ್ 945 ಪಕ್ಕಾ ಫಿಟ್ನೆಸ್‌ ಪ್ರಿಯರಿಗೆ ಹೇಳಿ ಮಾಡಿಸಿದಂತೆ ಇದ್ದು, ಈ ಡಿವೈಸ್‌ ರನ್ನಿಂಗ್, ಸೈಕ್ಲಿಂಗ್, ಸ್ವಿಮ್ಮಿಂಗ್, ಸ್ಕೀಯಿಂಗ್, ಟ್ರಾಯಲ್‌ ರನ್ನಿಂಗ್, ಪ್ಯಾಡಲ್ ಸ್ಪೋರ್ಟ್ಸ್‌ಗಳಿಗಾಗಿ ಇನ್‌ಬಿಲ್ಟ್‌ ಆಕ್ಟಿವಿಟಿ ಪ್ರೊಫೈಲ್‌ ಹೊಂದಿದೆ. ಹಾಗೆಯೇ VO2 ಮ್ಯಾಕ್ಸ್‌ , ಎರೋಬಿಕ್ಸ್‌ ಟ್ರೈನಿಂಗ್ ಎಫೆಕ್ಟ್‌ ಸೇವೆಗಳ ಆಯ್ಕೆಯನ್ನು ಪಡೆದಿದೆ.

ಮ್ಯೂಸಿಕ್‌ ಫೀಚರ್‌

ಮ್ಯೂಸಿಕ್‌ ಫೀಚರ್‌

ಈ ಸ್ಮಾರ್ಟ್‌ವಾಚ್‌ನಲ್ಲಿ ಫೋನ್‌ ಫ್ರೀ ಮ್ಯೂಸಿಕ್‌ ಕೇಳುವ ಫೀಚರ್‌ ನೀಡಲಾಗಿದ್ದು, ಸುಮಾರು 1,000 ಹಾಡುಗಳನ್ನು ಸ್ಟೋರ್‌ ಮಾಡಲು ಅವಕಾಶ ಇದೆ. ಇದರೊಂದಿಗೆ ಸ್ಪಾಟಿಫೈ ಮ್ಯೂಸಿಕ್‌ ಸ್ಟ್ರೀಮಿಂಗ್ ಸೇವೆ ಕನೆಕ್ಟ್‌ ಮಾಡಬಹುದಾಗಿದೆ. ಹಾಗೂ ಕಂಪ್ಯೂಟರ್‌ನಿಂದ ಡಿವೈಸ್‌ಗೆ ಮ್ಯೂಸಿಕ್‌ ಟ್ರಾನ್ಸ್‌ಫರ್‌ ಮಾಡುವ ಆಯ್ಕೆಯನ್ನು ಪಡೆದುಕೊಂಡಿದೆ.

ಓದಿರಿ : 143ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ 'ಹ್ಯಾರಿ ಪಾಟರ್' ಮಾಂತ್ರಿಕ ಗೇಮ್‌ ಬಿಡುಗಡೆ!ಓದಿರಿ : 143ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ 'ಹ್ಯಾರಿ ಪಾಟರ್' ಮಾಂತ್ರಿಕ ಗೇಮ್‌ ಬಿಡುಗಡೆ!

ಬಿಗ್‌ ಬ್ಯಾಟರಿ ಲೈಫ್

ಬಿಗ್‌ ಬ್ಯಾಟರಿ ಲೈಫ್

ಫೊರೆರನ್ನರ್ 945 ಸ್ಮಾರ್ಟ್‌ವಾಚ್‌ ಬಿಗ್‌ ಬ್ಯಾಟರಿ ಲೈಫ್‌ ಅನ್ನು ಹೊಂದಿದ್ದು, ಸ್ಮಾರ್ಟ್‌ವಾಚ್‌ ಮೋಡ್‌ನಲ್ಲಿ ಸುಮಾರು ಎರಡು ವಾರಗಳ ಕಾಲ ಬಾಳಿಕೆ ಬರಲಿದೆ. GPS +ಮ್ಯೂಸಿಕ್ ಮೋಡ್‌ 10ಗಂಟೆಗಳ ಕಾಲ ಬಾಳಿಕೆ ಬರಲಿದ್ದು, ಬರೀ GPS ಮೋಡ್‌ನಲ್ಲಿ 40ಗಂಟೆಗಳ ಕಾಲ ಬ್ಯಾಟರಿ ಲೈಫ್ ಇರಲಿದೆ. ಇನ್ನು ಅಲ್ಟ್ರಾಟ್ರಾಕ್‌ ಮೋಡ್‌ನಲ್ಲಿ 60ಗಂಟೆ ಬ್ಯಾಟರಿ ಶಕ್ತಿ ಇರಲಿದೆ.

ಬೆಲೆ ಎಷ್ಟಿದೆ?

ಬೆಲೆ ಎಷ್ಟಿದೆ?

ಫೊರೆರನ್ನರ್ 945 ಸ್ಮಾರ್ಟ್‌ವಾಚ್‌ ಬ್ಲ್ಯಾಕ್‌ ಮತ್ತು ಬ್ಲೂ ಬಣ್ಣಗಳ ಎರಡು ವೇರಿಯಂಟ್‌ ಮಾದರಿಯಲ್ಲಿ ದೊರೆಯಲಿದ್ದು, ಬೆಲೆಯು 59,990ರೂ.ಗಳು ಆಗಿದೆ. ಇತ್ತೀಚಿಗೆ ಬಿಡುಗಡೆ ಆಗಿರುವ ಕಂಪನಿಯ ಫೊರೆರನ್ನರ್ 245 (Forerunner 245) ಸ್ಮಾರ್ಟ್‌ವಾಚ್ ಬೆಲೆಯು 29,990ರೂ.ಗಳು ಆಗಿದೆ. ಹಾಗೆಯೇ ಫೊರೆರನ್ನರ್ 245 ಮ್ಯೂಸಿಕ್ ಸ್ಮಾರ್ಟ್‌ವಾಚ್ ಬೆಲೆಯು 34,990ರೂ.ಗಳು ಆಗಿದೆ.

ಓದಿರಿ : ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡುವಾಗ ಈ ಕ್ರಮಗಳನ್ನು ಮರೆಯದೇ ಅನುಸರಿಸಿ!ಓದಿರಿ : ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡುವಾಗ ಈ ಕ್ರಮಗಳನ್ನು ಮರೆಯದೇ ಅನುಸರಿಸಿ!

ಎಲ್ಲಿ ದೊರೆಯುತ್ತದೆ?

ಎಲ್ಲಿ ದೊರೆಯುತ್ತದೆ?

ಆನ್‌ಲೈನ್‌ ಮತ್ತು ಆಫ್‌ಲೈನ್‌ಗಳಲ್ಲಿ ದೊರೆಯಲಿದ್ದು, ಇ ಕಾಮರ್ಸ್‌ ತಾಣಗಳಾದ ಫ್ಲಿಪ್‌ಕಾರ್ಟ್‌, ಅಮೆಜಾನ್, ಮಂತ್ರಾ, ಪೇಟಿಎಮ್ ಮಾಲ್ ಆನ್‌ಲೈನ್‌ ತಾಣಗಳಲ್ಲಿ ಲಭ್ಯವಿರಲಿದೆ. ಹಾಗೆಯೇ ಆಫ್‌ಲೈನ್‌ನಲ್ಲಿ ಟೈಟಾನ್‌ಸಂಸ್ಥೆಯ Helios ವಾಚ್ಸ್‌ ಶಾಪ್‌ನಲ್ಲಿ ದೊರೆಯಲಿದೆ. ಇನ್ನು ಬೆಂಗಳೂರಿನಲ್ಲಿ ಗೋ ಸ್ಪೋರ್ಟ್ಸ್‌ ಮತ್ತು ಅಧಿಕೃತ ಗಾರ್ಮಿನ್ ಸ್ಟೋರ್‌ಗಳಲ್ಲಿ ಗ್ರಾಹಕರಿಗೆ ದೊರಕಲಿದೆ.

ಓದಿರಿ : ಮಾರುಕಟ್ಟೆಯಲ್ಲಿ ಲಭ್ಯವಿರುವ 5 ಬೆಸ್ಟ್‌ ಬ್ಯುಸಿನೆಸ್‌ ಪ್ರೊಜೆಕ್ಟರ್‌ಗಳು!ಓದಿರಿ : ಮಾರುಕಟ್ಟೆಯಲ್ಲಿ ಲಭ್ಯವಿರುವ 5 ಬೆಸ್ಟ್‌ ಬ್ಯುಸಿನೆಸ್‌ ಪ್ರೊಜೆಕ್ಟರ್‌ಗಳು!

Best Mobiles in India

English summary
Garmin on Monday launched its Forerunner 945 wearable in India at Rs. 59,990. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X