ಗಾರ್ಮಿನ್‌ನಿಂದ ಲಕ್ಸುರಿ ಸ್ಮಾರ್ಟ್‌ವಾಚ್ ಸರಣಿ ಬಿಡುಗಡೆ!..ಬೆಲೆ ಲಕ್ಷದ ಮೇಲೆ!

|

ಅಮೆರಿಕಾ ಮೂಲದ ಗಾರ್ಮಿನ್ ಸಂಸ್ಥೆಯು ಈಗಾಗಲೇ ಹಲವು ಸ್ಮಾರ್ಟ್‌ ವಾಚ್‌ಗಳನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸಿದೆ. ಆದ್ರೆ ಗಾರ್ಮಿನ್ ಇದೀಗ ಲಕ್ಸುರಿ ಸ್ಮಾರ್ಟ್‌ವಾಚ್‌ಗಳ 'ಮಾರ್ಕ್' ಸರಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಸ್ಮಾರ್ಟ್‌ವಾಚ್‌ಗಳು ಬಿಲ್ಟ್‌ಇನ್‌ ಮ್ಯೂಸಿಕ್, ಜಿಪಿಎಸ್‌, ಪಲ್ಸ್‌ Ox2 ಸೆನ್ಸಾರ್‌, ಹಾರ್ಟ್ ರೇಟ್ ಸೇರಿದಂತೆ ಸುಮಾರು 12 ದಿನಗಳ ಬ್ಯಾಟರಿ ಬಾಳಿಕೆ ಸಾಮರ್ಥ್ಯವನ್ನು ಪಡೆದಿವೆ.

ಸ್ಮಾರ್ಟ್‌ವಾಚ್ ಸರಣಿ

ಹೌದು, ಗಾರ್ಮಿನ್ ಕಂಪನಿಯು ಭಾರತದಲ್ಲಿ ಹೊಸದಾಗಿ 'ಮಾರ್ಕ್'(Marq) ಸ್ಮಾರ್ಟ್‌ವಾಚ್ ಸರಣಿಯನ್ನು ಲಾಂಚ್ ಮಾಡಿದೆ. ಈ ಸರಣಿಯು ಮಾರ್ಕ್ ಡ್ರೈವರ್(Marq Driver), ಮಾರ್ಕ್ ಅಥ್ಲೆಟ್‌(Marq Athlete), ಮಾರ್ಕ್ ಏವಿಯೇಟರ್(Marq Aviator), ಮಾರ್ಕ್ ಕ್ಯಾಪ್ಟನ್(Marq Captain) ಮತ್ತು ಮಾರ್ಕ್ ಎಕ್ಸ್‌ಪೆಡಿಶನ್(Marq Expedition) ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ. ಹಾಗಾದರೇ ಗಾರ್ಮಿನ್ ಕಂಪನಿಯ ಈ ಸ್ಮಾರ್ಟ್‌ವಾಚ್‌ಗಳ ಫೀಚರ್ಸ್‌ಗಳೆನು?..ಮತ್ತು ಬೆಲೆ ಎಷ್ಟು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಮಾರ್ಕ್ ಡ್ರೈವರ್(Marq Driver)

ಮಾರ್ಕ್ ಡ್ರೈವರ್(Marq Driver)

ಮಾರ್ಕ್‌ ಡ್ರೈವರ್ ವಾಚ್ ಹೈಬ್ರಿಡ್‌ ಬ್ರಾಸ್‌ಲೈಟ್‌ ಮತ್ತು ಟೈಟಾನಿಯಮ್ ಸೆಲ್ ಹೊಂದಿದ್ದು, ಪ್ರಿಮಿಯಮ್ ಲುಕ್‌ನಲ್ಲಿ ಕಾಣುತ್ತದೆ. ಬಾಹ್ಯವಾಗಿ DLC ಕೋಟಿಂಗ್ ನೀಡಲಾಗಿದ್ದು, ಸ್ಕ್ರಾಚ್ ಮುಕ್ತವಾಗಿದೆ. ಲೈವ್ ಡೆಲ್ಟಾ ಟೈಮಿಂಗ್, ಟ್ರಾಕ್ ಟೈಮರ್, ಆಟೋ ಲ್ಯಾಪ್ ಸ್ಪಿಲ್ಟ್‌ ಸೌಲಭ್ಯಗಳನ್ನು ಒಳಗೊಂಡಿದೆ. ಒಮ್ಮೆ ಚಾರ್ಜ್ ಮಾಡಿದರೇ ಸ್ಮಾರ್ಟ್‌ವಾಚ್ ಮೋಡ್‌ನಲ್ಲಿ ಸುಮಾರು 12 ದಿನಗಳ ಬ್ಯಾಟರಿ ಬ್ಯಾಕ್‌ಅಪ್‌ ಬರಲಿದೆ. ಆಂಡ್ರಾಯ್ಡ್‌ ಮತ್ತು ಐಓಎಸ್‌ ಎರಡು ಓಎಸ್‌ಗಳಿಗೂ ಬೆಂಬಲ ನೀಡಲಿದೆ.

ಮಾರ್ಕ್ ಅಥ್ಲೇಟ್‌(Marq Athlete)

ಮಾರ್ಕ್ ಅಥ್ಲೇಟ್‌(Marq Athlete)

ಈ ಸ್ಮಾರ್ಟ್‌ವಾಚ್‌ ಟೈಟಾನಿಯಂನಿಂದ ರಚಿತವಾಗಿದ್ದು, ಸಿಲಿಕಾನ್ ಬ್ಯಾಂಡ್‌ ಅನ್ನು ಹೊಂದಿದೆ. V02 ಮ್ಯಾಕ್ಸ್‌ ಮತ್ತು ರಿಕವರಿ ಟೈಮ್‌ ಸ್ಕೇಲ್ ಆಯ್ಕೆಗಳೊಂದಿಗೆ, ಅಡ್ವಾನ್ಸ್ಡ್ ರನ್ನಿಂಗ್ ಡೈನಾಮಿಕ್ಸ್‌ ಫೀಚರ್ ಪಡೆದಿದೆ. ಹಲವು ಅಗತ್ಯ ಸೆನ್ಸಾರ್‌ಗಳನ್ನು ಇನ್‌ಬಿಲ್ಟ್‌ ಆಗಿ ಒಳಗೊಂಡಿದ್ದು, ಈ ಡಿವೈಸ್‌ ಆಕ್ಸಿಜನ್ ಹಿರಿಕೊಳ್ಳುವಿಕೆಯ ಪ್ರಮಾಣವನ್ನು ತಿಳಿಸುತ್ತದೆ. ಹಾಗೆಯೇ ಇದು ಸಹ 12 ಗಂಟೆಯ ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿದೆ. ಆಂಡ್ರಾಯ್ಡ್‌ ಮತ್ತು ಐಓಎಸ್‌ ಎರಡು ಓಎಸ್‌ಗಳಿಗೂ ಬೆಂಬಲ ನೀಡಲಿದೆ.

ಮಾರ್ಕ್ ಏವಿಯೇಟರ್(Marq Aviator)

ಮಾರ್ಕ್ ಏವಿಯೇಟರ್(Marq Aviator)

ಗಾರ್ಮಿನ್ ಏವಿಯೇಟರ್‌ ಸ್ಮಾರ್ಟ್‌ವಾಚ್ ಸ್ವೆಪ್ಟ್ ವಿಂಗ್ ಡಿಸೈನ್ ಮತ್ತು ಮಲ್ಟಿಲಿಂಕ್ ಟೈಟಾನಿಯಂ ಬ್ರಾಸ್‌ಲೈಟ್‌ನಿಂದ ರಚಿತವಾಗಿದೆ. NEXRAD ವೇದರ್ ರೆಡಾರ್, ಏರ್‌ಪೋರ್ಟ್‌ ಮಾಹಿತಿ ಮತ್ತು ಗಾರ್ಮಿನ್ ಕಾಕ್‌ಪೀಟ್‌ ಇನ್ಫರ್ಮೇಶನ್‌ನಂತಹ ಸುರಕ್ಷತೆಯ ಆಯ್ಕೆಗಳನ್ನು ಒಳಗೊಂಡಿದೆ. ಈ ವಾಚ್ ಅತ್ಯುತ್ತಮ ಫೈಟ್‌ವೇರ್ ಆಗಿದ್ದು, ಇದು ಸಹ ಸುಮಾರು 12ಗಂಟೆಗಳ ಬ್ಯಾಟರಿ ಬಾಳಿಕೆ ಪಡೆದಿದೆ. ಆಂಡ್ರಾಯ್ಡ್‌ ಮತ್ತು ಐಓಎಸ್‌ ಎರಡು ಓಎಸ್‌ಗಳಿಗೂ ಬೆಂಬಲ ನೀಡಲಿದೆ.

ಮಾರ್ಕ್ ಕ್ಯಾಪ್ಟನ್(Marq Captain)

ಮಾರ್ಕ್ ಕ್ಯಾಪ್ಟನ್(Marq Captain)

ಮಾರ್ಕ್ ಕ್ಯಾಪ್ಟನ್ ವಾಚ್ ಅನ್ನು ನೌಕಾಪಡೆಯವರಿಗೆ ಹೆಚ್ಚು ಸೂಕ್ತವಾಗುವಂತೆ ರಚಿಸಲಾಗಿದ್ದು, ಈ ವಾಚ್ ಕೋಸ್ಟಲ್ ಚಾರ್ಟ್‌ ಮತ್ತು ಟ್ರಾಕ್ ಅಸಿಸ್ಟಂಟ್ ಸೌಲಭ್ಯವನ್ನು ಪಡೆದಿದೆ. ಹಾಗೆಯೇ ಬೀಸುತ್ತಿರುವ ಗಾಳಿಯ ವೇಗ, ತಾಪಮಾನ ಮತ್ತು ಹವಾಮಾನದ ಏರಿಳಿತದ ಮಾಹಿತಿಗಳನ್ನು ಸ್ಮಾರ್ಟ್‌ವಾಚ್‌ ಡಿಸ್‌ಪ್ಲೇಯಲ್ಲಿ ತಿಳಿಯಬಹುದಾಗಿದೆ. ಇದರೊಂದಿಗೆ ನೌಕಾಪಡೆಯವರು ನೀರಿನ ಅಲೆಗಳ ಕುರಿತಾಗಿಯು ಮಾಹಿತಿ ನೀಡುವ ಆಯ್ಕೆಗಳನ್ನು ಹೊಂದಿದೆ. ಇದು ಸಹ ಆಂಡ್ರಾಯ್ಡ್‌ ಮತ್ತು ಐಓಎಸ್‌ ಎರಡು ಓಎಸ್‌ಗಳಿಗೂ ಬೆಂಬಲ ನೀಡಲಿದೆ.

ಮಾರ್ಕ್ ಎಕ್ಸ್‌ಪೆಡಿಶನ್(Marq Expedition)

ಮಾರ್ಕ್ ಎಕ್ಸ್‌ಪೆಡಿಶನ್(Marq Expedition)

ಈ ಸ್ಮಾರ್ಟ್‌ವಾಚ್‌ ವಾಯರ್ ಸಂಪರ್ಕವಿಲ್ಲದೇ (ಯೂನಿಟ್‌-ಯೂನಿಟ್‌) ಇನ್ನೊಂದು ಸ್ಮಾರ್ಟ್‌ವಾಚ್‌ ಜೊತೆಗೆ ಕನೆಕ್ಟ್ ಮಾಡಬಹುದು. ಒಂದು ಡಿವೈಸ್‌ನಿಂದ ಇನ್ನೊಂದು ಡಿವೈಸ್‌ಗೆ ಮೆಸೆಜ್ ಕಳುಹಿಸುವ ಆಯ್ಕೆ ಸಹ ಇದೆ. ಇಟಾಲಿಯನ್ ವಚೆಟಾ ಲೆದರ್‌ನಿಂದ ರಚಿತವಾಗಿದ್ದು, ಸಾಫ್ಟ್‌ ರಚನೆಯನ್ನು ಪಡೆದಿದೆ. ಒಮ್ಮೆ ಪೂರ್ಣ ಚಾರ್ಜ್ ಮಾಡಿದರೇ ಸ್ಮಾರ್ಟ್‌ವಾಚ್‌ ಮೋಡ್‌ನಲ್ಲಿ ಸುಮಾರು 12 ಗಂಟೆಗಳ ಬ್ಯಾಟರಿ ಲೈಫ್‌ ಬರಲಿದೆ.

ಬೆಲೆ ಎಷ್ಟು

ಬೆಲೆ ಎಷ್ಟು

ಮಾರ್ಕ್ ಡ್ರೈವರ್ ಸ್ಮಾರ್ಟ್‌ವಾಚ್‌ ಬೆಲೆಯು 2,36,990ರೂ.ಗಳಾಗಿದ್ದು, ಮಾರ್ಕ್ ಮಾರ್ಕ್ ಅಥ್ಲೇಟ್‌ ಸ್ಮಾರ್ಟ್‌ವಾಚ್‌ ಬೆಲೆಯು 1,41,990ರೂ.ಗಳಳಿಗೆ ಲಭ್ಯವಾಗಲಿದೆ. ಹಾಗೆಯೇ ಮಾರ್ಕ್ ಕ್ಯಾಪ್ಟನ್ ಸ್ಮಾರ್ಟ್‌ವಾಚ್ 1,74,990ರೂ. ಪ್ರೈಸ್‌ಟ್ಯಾಗ್‌ನಲ್ಲಿದ್ದು, ಮಾರ್ಕ್ ಏವಿಯೇಟರ್ ಬೆಲೆಯು 1,84,990ರೂ.ಗಳಾಗಿದೆ. ಮತ್ತು ಮಾರ್ಕ್ ಎಕ್ಸ್‌ಪೆಡಿಶನ್ ಸ್ಮಾರ್ಟ್‌ವಾಚ್‌ 1,65,990ರೂ.ಗಳ ಬೆಲೆಯನ್ನು ಪಡೆದಿದೆ. ಗಾರ್ಮಿನ್ ಅಧಿಕೃತ ಆನ್‌ಲೈನ್‌ ಸ್ಟೋರ್‌ನಲ್ಲಿ ಖರೀದಿಸಬಹುದಾಗಿದೆ ಮತ್ತು ಬೆಂಗಳೂರು, ದೆಹಲಿ ಮತ್ತು ನೋಯ್ಡಾಗಳಲ್ಲಿ ಕಂಪನಿಯ ಆಫ್‌ಲೈನ್‌ ಶಾಪ್‌ನಲ್ಲಿಯೂ ಲಭ್ಯ.

Most Read Articles
Best Mobiles in India

English summary
The new collection includes four different models, namely the Marq Driver, Marq Athlete, Marq Aviator, Marq Captain, and the Marq Expedition. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X