ಅಮೆರಿಕಾದ ಈ ಬ್ರ್ಯಾಂಡ್‌ನ ಸ್ಮಾರ್ಟ್‌ವಾಚ್‌ಗಳಿಗೆ ಈಗ ಭಾರೀ ರಿಯಾಯಿತಿ!
ಜನಪ್ರಿಯ ಗಾರ್ಮಿನ್ ಬ್ರ್ಯಾಂಡ್ ಇದೀಗ 'ಗಾರ್ಮಿನ್ ಸಮ್ಮರ್ ಸೇಲ್ 2023' ಅನ್ನು ಭಾರತದಲ್ಲಿ ಆಯೋಜಿಸಿದೆ. ಈ ಮಾರಾಟ ಮೇಳದಲ್ಲಿ ವಿವಿಧ ಗಾರ್ಮಿನ್ ಧರಿಸಬಹುದಾದ ಉತ್ಪನ್ನಗಳ ಮೇಲೆ ಆಕರ್ಷಕ ರಿಯಾಯಿತಿಗಳೊಂದಿಗೆ ಘೋಷಿಸಲಾಗಿದೆ. ಕೆಲವು ಜನಪ್ರಿಯ ಡಿವೈಸ್‌ಗಳು ಸುಮಾರು 9,000ರೂ. ವರೆಗೂ ಡಿಸ್ಕೌಂಟ್ ಪಡೆದಿವೆ.
ಹೌದು, ಗಾರ್ಮಿನ್ ಸ್ಮಾರ್ಟ್‌ವಾಚ್‌ಗಳ ಮೇಲೆ 6,000ರೂ ದಿಂದ 9,000ರೂ. ವರೆಗೆ ಬೊಂಬಾಟ್ ರಿಯಾಯಿತಿಗಳನ್ನು ಘೋಷಿಸಿದ್ದಾರೆ. ಇನ್ನು ಗ್ರಾಹಕರು ಗಾರ್ಮಿನ್ ಡಿವೈಸ್‌ಗಳನ್ನು ಫ್ಲಿಪ್‌ಕಾರ್ಟ್, ಟಾಟಾ ಕ್ಲಿಕ್, ಗಾರ್ಮಿನ್ ಆನ್‌ಲೈನ್ ಸ್ಟೋರ್, ಅಮೆಜಾನ್ ಇಂಡಿಯಾ ಮತ್ತು ಗಾರ್ಮಿನ್ ಅಧಿಕೃತ ವಿತರಕ ಬ್ರೈಟೆಕ್ಸ್ ಸಿನರ್ಜಿಜರ್ ವೆಬ್‌ಸೈಟ್‌ನಲ್ಲಿ ಖರೀದಿಸಬಹುದಾಗಿದೆ.

ಅಂದಹಾಗೆ ಗಾರ್ಮಿನ್ ಸಮ್ಮರ್ ಸೇಲ್ 2023 ಮಾರಾಟದಲ್ಲಿ ಮುಖ್ಯವಾಗಿ ಗಾರ್ಮಿನ್ ವೆನು ಆವೃತ್ತಿಯ ಡಿವೈಸ್‌ಗಳು ಹೆಚ್ಚಿನ ಆಕರ್ಷಣೆ ಪಡೆದಿವೆ. ಅದರಲ್ಲಿಯೂ ಗಾರ್ಮಿನ್ ವೆನು Sq2 5,500ರೂ. ಡಿಸ್ಕೌಂಟ್ ಪಡೆದಿದ್ದು, 22,490ರೂ. ಬೆಲೆಗೆ ಲಭ್ಯವಿದೆ. ಹಾಗೆಯೇ ಗಾರ್ಮಿನ್ ವೆನು Sq2 ಮ್ಯೂಸಿಕ್ ಆವೃತ್ತಿಯ ಸ್ಮಾರ್ಟ್‌ವಾಚ್ 5,500ರೂ. ರಿಯಾಯಿತಿ ಪಡೆದಿದ್ದು, 27,990ರೂ. ಗಳ ಬೆಲೆಯಲ್ಲಿ ಖರೀದಿಸಬಹುದಾಗಿದೆ.
ಹಾಗೆಯೇ ಗಾರ್ಮಿನ್ ಸಂಸ್ಥೆಯು ಗಾರ್ಮಿನ್ ಗಾರ್ಮಿನ್ ಇನ್ಸ್ಟಿಂಕ್ಟ್ ಸರಣಿಯ ಡಿವೈಸ್‌ಗಳು ಸಹ ಅಧಿಕ ರಿಯಾಯಿತಿ ಪಡೆದಿದ್ದು, ಗ್ರಾಹಕರನ್ನು ಆಕರ್ಷಿಸಿವೆ. ಹಾಗಾದರೆ ಗಾರ್ಮಿನ್ ವೆನು Sq2 ಮತ್ತು ಗಾರ್ಮಿನ್ ವೆನು Sq2 ಮ್ಯೂಸಿಕ್ ಡಿವೈಸ್ ಫೀಚರ್ಸ್ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಗಾರ್ಮಿನ್ ವೆನು Sq2 ಮತ್ತು ವೆನು Sq2 ಮ್ಯೂಸಿಕ್ ಆವೃತ್ತಿಯ ಸ್ಮಾರ್ಟ್‌ವಾಚ್‌ಗಳು 1.4 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 320 x 360 ಪಿಕ್ಸೆಲ್ ರೆಸಲ್ಯೂಶನ್ ಪಡೆದಿವೆ. ಹಾಗೆಯೇ ಹಗುರವಾದ ಅಲ್ಯೂಮಿನಿಯಂ ಚಾಸಿಸ್ ಅನ್ನು ಪಡೆದಿವೆ.
ಈ ಎರಡೂ ವಾಚ್‌ಗಳು ಸಹ ವಿವಿಧ ಫೀಚರ್ಸ್ ಪಡೆದುಕೊಂಡಿವೆ. ಅದರಲ್ಲಿ ಮ್ಯೂಸಿಕ್ ಆವೃತ್ತಿಯ ವಾಚ್‌ನಲ್ಲಿ ಸ್ಪೀಕರ್ ಆಯ್ಕೆ ನೀಡಲಾಗಿದೆ. ಹಾಗೆಯೇ ಹಾಡುಗಳನ್ನು ಡೌನ್‌ಲೋಡ್ ಕೂಡ ಮಾಡಿಕೊಳ್ಳಬಹುದಾಗಿದೆ. ಇದರೊಂದಿಗೆ ಬ್ಲೂಟೂತ್ ಕನೆಕ್ಟಿವಿಟಿ ಮೂಲಕ ಹೆಡ್‌ಫೋನ್ ಅಥವಾ ಇಯರ್‌ಫೋನ್ ಗಳಲ್ಲಿ ಸಂಗೀತ ಆಲಿಸಬಹುದು.
ಈ ಸ್ಮಾರ್ಟ್‌ವಾಚ್‌ಗಳು ಅಪ್‌ಗ್ರೇಡ್ ಆಗಿರುವ 4ನೇ ಜನ್ ಫೀಚರ್ಸ್ ಹೊಂದಿರುವ ಸೆನ್ಸರ್‌ನಲ್ಲಿ ಹೃದಯ ಬಡಿತದ ಮೇಲ್ವಿಚಾರಣೆ ಮಾಡುವುದರೊಂದಿಗೆ ಚಟುವಟಿಕೆಗಳ ಟ್ರ್ಯಾಕಿಂಗ್ ಸಮಯದಲ್ಲಿ ವಿವರವಾದ ಡೇಟಾವನ್ನು ಒದಗಿಸಲು ಬೀಟ್-ಬೈ-ಬೀಟ್ ಆಧಾರಿತ ವಿಧಾನವನ್ನು ಬಳಸುತ್ತದೆ. ಅದರಲ್ಲೂ ಪ್ರಮುಖವಾಗಿ ಮಹಿಳೆಯರ ಆರೋಗ್ಯ ಸಂಬಂಧಿತ ಮಾಹಿತಿಯನ್ನು ಟ್ರ್ಯಾಕ್ ಮಾಡುವುದು ಇವುಗಳ ಮತ್ತೊಂದು ವಿಶೇಷ.
ಹಾಗೆಯೇ ದೇಹವು ಶಕ್ತಿಶಾಲಿಯಾಗಿದೆಯಾ ಅಥವಾ ದಣಿದಿದೆಯಾ, ದೇಹಕ್ಕೆ ವಿಶ್ರಾಂತಿ ಬೇಕಾಗಿದೆಯಾ ಎಂಬಿತ್ಯಾದಿ ಮಾಹಿತಿಯನ್ನು ನಿರಂತರವಾಗಿ ನೀಡುತ್ತಿರುತ್ತವೆ. ಈ ಸ್ಮಾರ್ಟ್‌ವಾಚ್‌ಗಳು ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿವೆ. ಒಂದು ಪೂರ್ಣ ಚಾರ್ಜ್‌ನಲ್ಲಿ ಸುಮಾರು 11 ದಿನಗಳ ವರೆಗೆ ಬಳಕೆ ಮಾಡಬಹುದು. ಹಾಗೆಯೇ ಇದರಲ್ಲಿ ಬ್ಯಾಟರಿ ಸೇವರ್ ಮೋಡ್ ಸಹ ಇದ್ದು, ಇದರಿಂದ ಒಂದು ಚಾರ್ಜ್‌ನಲ್ಲಿ ಒಂದು ದಿನದವರೆಗೆ ಹೆಚ್ಚುವರಿಯಾಗಿ ಬಳಕೆ ಮಾಡಬಹುದಾಗಿದೆ.
ಇನ್ನು 25 ಇನ್‌ಬಿಲ್ಟ್ ಅಪ್ಲಿಕೇಶನ್ ಹೊಂದಿದ್ದು, ಅದರಲ್ಲಿ ಪ್ರಮುಖವಾಗಿ GPS, ರನ್ನಿಂಗ್, ಸೈಕ್ಲಿಂಗ್, ಟೆನ್ನಿಸ್ ಮತ್ತು ಇನ್ನಿತರೆ ಒಳಾಂಗಣ ಕ್ರೀಡಾ ಅಪ್ಲಿಕೇಶನ್ ಇವೆ. ಈ ವಾಚ್‌ಗಳು ಆಂಡ್ರಾಯ್ಡ್ ಹಾಗೂ ಐಓಎಸ್ ಸ್ಮಾರ್ಟ್‌ಫೋನ್‌ಗಳಿಗೆ ಸಪೋರ್ಟ್ ಮಾಡಲಿವೆ. ಗಾರ್ಮಿನ್ ವೆನು Sq2 ಕೂಲ್ ಮಿಂಟ್, ಗ್ರೇ, ವೈಟ್ ಬಣ್ಣದಲ್ಲಿ ಲಭ್ಯವಿದ್ದರೆ ಗಾರ್ಮಿನ್ ವೆನು Sq2 ಮ್ಯೂಸಿಕ್ ಆವೃತ್ತಿ ವಾಚ್ ಬ್ಲಾಕ್ ಕಲರ್ ನಲ್ಲಿ ಮಾತ್ರ ಲಭ್ಯ ಇದೆ.


Click it and Unblock the Notifications








