Home
ಸುದ್ದಿಜಾಲ

ಗಾರ್ಮಿನ್ ಕಂಪೆನಿಯ ಎರಡು ಸ್ಮಾರ್ಟ್‌ವಾಚ್‌ಗಳು ಅನಾವರಣ; ಬೆಲೆಗೆ ತಕ್ಕ ಫೀಚರ್ಸ್‌!

ಗಾರ್ಮಿನ್ ಸಂಸ್ಥೆಯು ಈಗಾಗಲೇ ಸ್ಪೋರ್ಟ್ಸ್‌ ವಾಚ್‌ ಗಳನ್ನು ಪರಿಚಯಿಸಿ ಭಾರೀ ಜನಮನ್ನಣೆ ಗಳಿಸಿದೆ. ಹಾಗೆಯೇ ಆರೋಗ್ಯ ಸಂಬಂಧಿ ವಿಷಯಗಳ ಟ್ರ್ಯಾಕಿಂಗ್‌ ಜೊತೆಗೆ ಜಿಪಿಎಸ್‌ಗಳಂತಹ ಸೆನ್ಸರ್‌ಗಳಿಗೆ ಹೆಚ್ಚು ಕೇಂದ್ರೀಕರಿಸಲಾಗುತ್ತದೆ. ಇದರೊಂದಿಗೆ ಹೊಸದಾಗಿ ಈಗ ಎರಡು ಸ್ಮಾರ್ಟ್‌ವಾಚ್‌ಗಳನ್ನು ಭಾರತದಲ್ಲಿ ಅನಾವರಣ ಮಾಡಲಾಗಿದ್ದು, ಇದರಲ್ಲಿ ಒಂದು ವಾಚ್‌ ಬರೋಬ್ಬರಿ 70 ದಿನಗಳ ಬ್ಯಾಟರಿ ಬ್ಯಾಕಪ್‌ ನೀಡಲಿದೆ ಎಂದರೆ ನೀವು ನಂಬಲೇ ಬೇಕು.

ಸ್ಮಾರ್ಟ್‌ವಾಚ್‌

ಹೌದು, ಸ್ಮಾರ್ಟ್‌ವಾಚ್‌ ವಿಭಾಗದಲ್ಲಿ ಈಗಾಗಲೇ ಹಲವಾರು ಕಂಪೆನಿಗಳು ವಿವಿಧ ಶೈಲಿಯ ಹಾಗೂ ಅಗತ್ಯ ಫೀಚರ್ಸ್ ಇರುವ ಸ್ಮಾರ್ಟ್‌ವಾಚ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಇದರ ನಡುವೆ ಈಗ ಹೊಸದಾಗಿ ಗಾರ್ಮಿನ್ ಎರಡು ವಾಚ್‌ಗಳನ್ನು ಅನಾವರಣ ಮಾಡಿದ್ದು, ಇವುಗಳಿಗೆ 'ಇನ್‌ಸ್ಟಿಂಕ್ಟ್ ಕ್ರಾಸ್‌ಓವರ್' ಮತ್ತು 'ಇನ್‌ಸ್ಟಿಂಕ್ಟ್ ಕ್ರಾಸ್‌ಓವರ್ ಸೋಲಾರ್' (Instinct Crossover and Instinct Crossover Solar smartwatches) ಎಂದು ಹೆಸರಿಡಲಾಗಿದೆ. ಹಾಗಿದ್ರೆ, ಈ ವಾಚ್‌ಗಳ ಪ್ರಮುಖ ಫೀಚರ್ಸ್‌ ಏನು?, ಬೆಲೆ ದುಬಾರಿಯೇ? ಎಂಬಿತ್ಯಾದಿ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಪ್ರಮುಖ ಫೀಚರ್ಸ್‌

ಪ್ರಮುಖ ಫೀಚರ್ಸ್‌

ಪ್ರಮುಖ ಸ್ಮಾರ್ಟ್‌ವಾಚ್‌ ತಯಾರಿಕಾ ಸಂಸ್ಥೆಗಳಲ್ಲಿ ಒಂದಾಗಿರುವ ಗಾರ್ಮಿನ್‌ ಇನ್‌ಸ್ಟಿಂಕ್ಟ್ ಕ್ರಾಸ್‌ಓವರ್ ಮತ್ತು ಇನ್‌ಸ್ಟಿಂಕ್ಟ್ ಕ್ರಾಸ್‌ಓವರ್ ಸೋಲಾರ್ ಎಂಬ ಎರಡು ವಾಚ್‌ಗಳನ್ನು ಅನಾವರಣ ಮಾಡಿದ್ದು, ಈ ವಾಚ್‌ಗಳಲ್ಲಿ ಇನ್ಸ್ಟಿಂಕ್ಟ್ ಕ್ರಾಸ್ಓವರ್ ಸೋಲಾರ್ ವಾಚ್‌ ಸೌರ ಚಾರ್ಜಿಂಗ್ ಜೊತೆಗೆ ಬ್ಯಾಟರಿ ಸೇವರ್ ಮೋಡ್ ಫೀಚರ್ಸ್‌ ಅನ್ನು ಪಡೆದುಕೊಂಡಿದೆ. ಈ ಮೂಲಕ ಬರೋಬ್ಬರಿ 70 ದಿನಗಳ ಬ್ಯಾಟರಿ ಬ್ಯಾಕಪ್‌ ಲಭ್ಯವಾಗಲಿದೆ. ಸೌರ ಚಾರ್ಜಿಂಗ್ ಇಲ್ಲದ ಸ್ಮಾರ್ಟ್ ವಾಚ್ ಇನ್‌ಸ್ಟಿಂಕ್ಟ್ ಕ್ರಾಸ್‌ಓವರ್ ಸುಮಾರು ಒಂದು ತಿಂಗಳ ಬ್ಯಾಟರಿ ಅವಧಿಯನ್ನು ಮತ್ತು ಜಿಪಿಎಸ್ ಮೋಡ್‌ನಲ್ಲಿ 110 ಗಂಟೆಗಳಿಗಿಂತ ಹೆಚ್ಚು ಸಮಯದ ಬ್ಯಾಕಪ್‌ ನೀಡಲಿದೆ.

ಇನ್ಸ್ಟಿಂಕ್ಟ್

ಇನ್ಸ್ಟಿಂಕ್ಟ್ ಕ್ರಾಸ್ಓವರ್ ಸ್ಮಾರ್ಟ್‌ವಾಚ್‌ ಸ್ಲೀಪ್ ಸ್ಕೋರ್ ಮತ್ತು ಸ್ಲೀಪ್ ಮಾನಿಟರಿಂಗ್ ಮೇಲೆ ನಿಗಾ ಇರಿಸಲಿದ್ದು, ಇದರೊಂದಿಗೆ ಹೆಲ್ತ್ ಮಾನಿಟರಿಂಗ್ ಸೇರಿದಂತೆ ಬಳಕೆದಾರರ ಸಂಪೂರ್ಣ ಆರೋಗ್ಯ ಸಂಬಂಧಿ ಮಾಹಿತಿ ನೀಡುವ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಅದರಲ್ಲೂ ಒತ್ತಡ ಮತ್ತು ಹೃದಯ ಬಡಿತದಂತಹ ಪ್ರಮುಖ ಆರೋಗ್ಯ ವಿಚಾರಗಳನ್ನು ಒಂದೇ ವೀಕ್ಷಣೆಯಲ್ಲಿ ದಾಖಲು ಮಾಡಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.

ಕ್ರಾಸ್ಓವರ್

ಹೊಸ ಇನ್ಸ್ಟಿಂಕ್ಟ್ ಕ್ರಾಸ್ಓವರ್ ಅನ್ನು MIL-STD-810 ಮಾನದಂಡದಲ್ಲಿ ನಿರ್ಮಿಸಲಾಗಿದ್ದು, ಥರ್ಮಲ್ ಮತ್ತು ಶಾಕ್ ರೆಸಿಸ್ಟೆಂಟ್ ಆಗಿದೆ. ಅದರಲ್ಲೂ ಸ್ಕ್ರ್ಯಾಚ್ ರೆಸಿಸ್ಟೆಂಟ್ ಲೆನ್ಸ್ ಮತ್ತು 10 ATM (100 ಮೀಟರ್) ವಾಟರ್ ರೇಟಿಂಗ್‌ನೊಂದಿಗೆ ಈ ವಾಚ್‌ ಕಾಣಿಸಿಕೊಂಡಿದೆ.

ಇನ್‌ಸ್ಟಿಂಕ್ಟ್ ಕ್ರಾಸ್‌ಓವರ್ ಸ್ಮಾರ್ಟ್‌ಫೋನ್‌ಗಳೊಂದಿಗೆ ಸುಲಭವಾಗಿ ಕನೆಕ್ಟ್‌ ಆಗಲಿದ್ದು, ಮಣಿಕಟ್ಟಿನಲ್ಲಿಯೇ ಬಳಕೆದಾರರು ನೋಟಿಫಿಕೇಶನ್‌ಗಳನ್ನು ವೀಕ್ಷಣೆ ಮಾಡಬಹುದು. ಜೊತೆಗೆ ಗಾರ್ಮಿನ್ ಕನೆಕ್ಟ್ ಆಪ್‌ನೊಂದಿಗೆ ಸಿಂಕ್ ಮಾಡಬಹುದಾಗಿದ್ದು, ಕಸ್ಟಮೈಸೇಶನ್‌ಗಾಗಿ ಐಕ್ಯೂ ಸ್ಟೋರ್ ಅನ್ನು ಸಂಪರ್ಕಿಸಬಹುದಾಗಿದೆ.

ಗಾರ್ಮಿನ್

ಈ ಸಂಬಂಧ ಗಾರ್ಮಿನ್ ಇಂಡಿಯಾದ ಕಂಟ್ರಿ ಹೆಡ್ ಯೇಸುದಾಸ್ ಪಿಳ್ಳೈ ಮಾಹಿತಿ ನೀಡಿದ್ದು, ಗಾರ್ಮಿನ್ ಭಾರತದಲ್ಲಿ ಹೈಬ್ರಿಡ್ ಜಿಪಿಎಸ್ ಮಲ್ಟಿಸ್ಪೋರ್ಟ್ ಸ್ಮಾರ್ಟ್ ವಾಚ್ ಅನ್ನು ಅನಾವರಣ ಮಾಡಿದೆ. ಸಾಂಕ್ರಾಮಿಕ ಭೀತಿ ಕಡಿಮೆಯಾಗುತ್ತಿದ್ದು, ಭಾರತದಲ್ಲಿ ಜನರು ಹೊರಾಂಗಣ ಟ್ರ್ಯಾಕಿಂಗ್, ಪ್ರಯಾಣ ಮತ್ತು ಸಂಚಾರಕ್ಕೆ ಹೆಜ್ಜೆ ಹಾಕಲು ಮುಂದಾಗಿದ್ದಾರೆ. ಅದರಂತೆ ಇನ್‌ಸ್ಟಿಂಕ್ಟ್ ಕ್ರಾಸ್‌ಓವರ್ ಅನ್ನು ವಿಶೇಷವಾಗಿ ಒರಟಾದ ಸಾಂಪ್ರದಾಯಿಕ ವಾಚ್‌ನ ಶೈಲಿ ಬೇಕು ಎನ್ನುವವರನ್ನು ಆಧಾರವಾಗಿರಿಸಿಕೊಂಡು ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಭಾರತದಲ್ಲಿ ಇನ್‌ಸ್ಟಿಂಕ್ಟ್ ಕ್ರಾಸ್‌ಓವರ್ ಮತ್ತು ಇನ್‌ಸ್ಟಿಂಕ್ಟ್ ಕ್ರಾಸ್‌ಓವರ್ ಸೋಲಾರ್ ಸ್ಮಾರ್ಟ್‌ವಾಚ್‌ಗಳು ಲಾಂಚ್‌ ಆಗಿದ್ದು, ಈ ವಾಚ್‌ಗಳು ಗ್ರಾಹಕರಿಗೆ 20ನೇ ಜನವರಿಯಿಂದ ಲಭ್ಯವಾಗಲಿದೆ. ಹಾಗೆಯೇ ಗಾರ್ಮಿನ್ ಇನ್‌ಸ್ಟಿಂಕ್ಟ್ ಕ್ರಾಸ್‌ಓವರ್ ಸ್ಮಾರ್ಟ್‌ವಾಚ್‌ಗೆ 55,990ರೂ. ಗಳನ್ನು ನಿಗದಿ ಮಾಡಲಾಗಿದ್ದು, ಇನ್‌ಸ್ಟಿಂಕ್ಟ್ ಕ್ರಾಸ್‌ಓವರ್ ಸೋಲಾರ್ ಸ್ಮಾರ್ಟ್‌ವಾಚ್‌ಗೆ 61,990 ರೂ. ಗಳ ಬೆಲೆ ನಿಗದಿ ಮಾಡಲಾಗಿದೆ.

ಇನ್ಸ್ಟಿಂಕ್ಟ್

ಈ ವಾಚ್‌ಗಳಲ್ಲಿ ಇನ್ಸ್ಟಿಂಕ್ಟ್ ಕ್ರಾಸ್ಓವರ್ ಬ್ಲ್ಯಾಕ್‌ ಬಣ್ಣದಲ್ಲಿ ಕಾಣಿಸಿಕೊಂಡರೆ ಸೌರ ಆವೃತ್ತಿಯು ಗ್ರ್ಯಾಫೈಟ್‌ ಬಣ್ಣದಲ್ಲಿ ಕಾಣಿಸಿಕೊಂಡಿದೆ. ಈ ವಾಚ್‌ಗಳನ್ನು ಗ್ರಾಹಕರು ಅಮೆಜಾನ್‌, ಟಾಟಾ, CLiQ, ಟಾಟಾ ಲಕ್ಸುರಿ, ಫ್ಲಿಪ್‌ಕಾರ್ಟ್ ಸೇರಿದಂತೆ ಇನ್ನಿತರೆ ಆನ್‌ಲೈನ್‌ ಸೈಟ್‌ಗಳಲ್ಲಿ ಖರೀದಿ ಮಾಡಬಹುದಾಗಿದೆ. ಹಾಗೆಯೇ ಗಾರ್ಮಿನ್ ಬ್ರಾಂಡ್ ಸ್ಟೋರ್, ಹೆಲಿಯೊಸ್ ವಾಚ್ ಸ್ಟೋರ್, ಜಸ್ಟ್ ಇನ್ ಟೈಮ್, ಸ್ಪೋರ್ಟ್ಸ್ ಸ್ಟೋರ್‌ಗಳಲ್ಲಿಯೂ ಈ ವಾಚ್‌ಗಳು ಲಭ್ಯ.

Best Mobiles in India

English summary
Garmin unveils new smartwatch with More than 2 months of battery backup!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+