ಮೈಜಿಯೋ ಆಪ್‌: ಕರ್ನಾಟಕ ಸರ್ಕಾರದ ಯೋಜನೆಗಳ ಪರಿಪೂರ್ಣ ಮಾಹಿತಿ ಲಭ್ಯ!

|

ಕರ್ನಾಟಕ ಸರ್ಕಾರದ ಸಾಮಾಜಿಕ ಕಲ್ಯಾಣ ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ಮನೆಯಲ್ಲೇ ಕುಳಿತು ಪಡೆಯುವುದು ಈಗ ಮತ್ತಷ್ಟು ಸುಲಭವಾಗಿದೆ. ಮೈ ಜಿಯೋ (MyJio) ಆಪ್‌ ನಲ್ಲಿ ಲಭ್ಯವಿರುವ EasyGov ನ ಮಿನಿ ಅಪ್ಲಿಕೇಶನ್ ಸುವಿಧಾ (Suvidha) ಅನ್ನು ಡೌನ್ ಲೋಡ್ ಮಾಡಿಕೊಳ್ಳುವ ಮೂಲಕ ಲಕ್ಷಾಂತರ ಜನ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯಲು ಶಕ್ತರಾಗಿದ್ದಾರೆ. ಕರ್ನಾಟಕ ಸರ್ಕಾರದ 300 ಕ್ಕೂ ಹೆಚ್ಚು ಕಲ್ಯಾಣ ಯೋಜನೆಗಳು ಮತ್ತು ನೂತನ ಉದ್ಯೋಗಗಳ ಬಗ್ಗೆ ಇಲ್ಲಿ ಮಾಹಿತಿ ದೊರೆಯಲಿದೆ. ಈ ಅಪ್ಲಿಕೇಶನ್ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಲಭ್ಯವಿದೆ. ಗೂಗಲ್ ಪ್ಲೇಸ್ಟೋರ್ ನಿಂದ ನೇರವಾಗಿಯೂ ಡೌನ್ ಲೋಡ್ ಮಾಡಿಕೊಳ್ಳಬಹುದು.

ಮೈಜಿಯೋ ಆಪ್‌: ಕರ್ನಾಟಕ ಸರ್ಕಾರದ ಯೋಜನೆಗಳ ಪರಿಪೂರ್ಣ ಮಾಹಿತಿ ಲಭ್ಯ!

ನಿಯಮಾಧಾರಿತ ಎಂಜಿನ್ ಅನ್ನು 'ಸುವಿಧಾ' (Suvidha) ದಲ್ಲಿ ಅಳವಡಿಸಲಾಗಿದೆ, ಇದು ಅರ್ಹ ನಾಗರಿಕರನ್ನು ಹುಡುಕುವುದಲ್ಲದೆ, ಕ್ಲಪ್ತ ಸಮಯದೊಳಗೆ ನಿಜವಾದ ಫಲಾನುಭವಿಯನ್ನು ಗುರುತಿಸಿ ಖಚಿತಪಡಿಸುತ್ತದೆ. ಬಳಕೆದಾರರ ಡೇಟಾವನ್ನು ದೃಢೀಕರಿಸಲು ಅಥವಾ ಪರಿಶೀಲಿಸಲು 'ಸುವಿಧಾ' ಅಪ್ಲಿಕೇಶನ್ ಅನ್ನು ಸರ್ಕಾರ ಕುಟುಂಬ ಮಾಹಿತಿಗಳಿರುವ ಡೇಟಾಬೇಸ್ 'ಕುಟುಂಬ್' ನೊಂದಿಗೆ ಸಂಯೋಜಿಸಲಾಗಿದೆ. ಇದಲ್ಲದೆ, ಅಪ್ಲಿಕೇಶನ್ KYC ಗಾಗಿ ಆಧಾರ್, ದಾಖಲೆ ಪರಿಶೀಲನೆಗಾಗಿ ಡಿಜಿಲಾಕರ್, ಸರ್ಕಾರದ ಯೋಜನೆಗಳ ಪಾವತಿಗಾಗಿ DBT (ನೇರ ಬ್ಯಾಂಕ್ ವರ್ಗಾವಣೆ) ಜೊತೆಗೆ ಕಾರ್ಯ ನಿರ್ವಹಿಸುತ್ತದೆ.

ಸರ್ಕಾರಿ ಅಧಿಕಾರಿಗಳಿಗೆ ಸಹಾಯ ಮಾಡಲು ಅಪ್ಲಿಕೇಶನ್‌ನಲ್ಲಿ ಅನಾಲಿಟಿಕ್ಸ್ ಡ್ಯಾಶ್‌ಬೋರ್ಡ್ ಅನ್ನು ಒದಗಿಸಲಾಗಿದೆ. ಇದರಿಂದ ಯೋಜನೆಗಳಿಗೆ ಬಂದ ಅರ್ಜಿಗಳನ್ನು ಶೀಘ್ರದಲ್ಲಿ ವಿಲೇವಾರಿ ಮಾಡುವುದು ಸುಲಭವಾಗುತ್ತದೆ. ನಾಗರಿಕರು ಸಲ್ಲಿಸಿದ ಅರ್ಜಿಗಳ ಇ-ಸಹಿ ಮತ್ತು ಸರ್ಕಾರಿ ಬಳಕೆದಾರರಿಂದ ಅವರ ಅನುಮೋದನೆಯನ್ನು ಸಹ ಅಪ್ಲಿಕೇಶನ್‌ನಲ್ಲಿ ಪಡೆಯಬಹುದು.

ಮೈಜಿಯೋ ಆಪ್‌: ಕರ್ನಾಟಕ ಸರ್ಕಾರದ ಯೋಜನೆಗಳ ಪರಿಪೂರ್ಣ ಮಾಹಿತಿ ಲಭ್ಯ!

EasyGov ನ ಸಂಸ್ಥಾಪಕ ಮತ್ತು ಸಿಇಒ ಅಮಿತ್ ಶುಕ್ಲಾ ಅವರ ಪ್ರಕಾರ, 'ಸಾಮಾಜಿಕ ಭದ್ರತಾ ಕಾರ್ಯಕ್ರಮಗಳು ಪ್ರತಿ ಕುಟುಂಬದ ಅಗತ್ಯಗಳನ್ನು ಅರ್ಥಮಾಡಿಕೊಂಡು ಅವರಿಗೆ ಕನಿಷ್ಠ ಆರೋಗ್ಯ, ವಸತಿ, ಶಿಕ್ಷಣ ಮತ್ತು ಆಹಾರದ ಅವಶ್ಯಕತೆಗಳನ್ನು ಪೂರೈಸುವ ಗುರಿಯನ್ನು ಹೊಂದಿರಬೇಕು. ಇದಕ್ಕಾಗಿ ಅಗತ್ಯವಿರುವವರನ್ನು ಗುರುತಿಸಿ ಪ್ರಯೋಜನ ಒದಗಿಸಬೇಕು' ಎಂದು ಅಭಿಪ್ರಾಯಪಟ್ಟರು.

ಸುರಜ್ಯಾ ಸರ್ವೀಸ್ ಲಿಮಿಟೆಡ್, ಕರ್ನಾಟಕ ಸರ್ಕಾರಕ್ಕಾಗಿ EasyGov ಡಿಜಿಟಲ್ ಸೊಲ್ಯೂಷನ್ ಅನ್ನು ವಿನ್ಯಾಸಗೊಳಿಸಿದೆ. ಇದು ಈಗ ಮೊದಲಿಗಿಂತ ಹೆಚ್ಚು ಸುಧಾರಿತ ಮತ್ತು ಬಳಸಲು ಸುಲಭವಾಗುವಂತಿದೆ. EasyGov ಆಡಳಿತವನ್ನು ಸುಧಾರಿಸಲು ಮತ್ತು ಸಾಮಾಜಿಕ ಭದ್ರತಾ ಕಾರ್ಯಕ್ರಮಗಳ ವಿನ್ಯಾಸ ಮತ್ತು ವಿತರಣೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಕರ್ನಾಟಕ ಸರ್ಕಾರವನ್ನು ಹೊರತುಪಡಿಸಿ, EasyGov ಹಲವಾರು ಇತರ ರಾಜ್ಯ ಸರ್ಕಾರಗಳು ಅಳವಡಿಸಿಕೊಂಡಿದ್ದು, ಅವುಗಳೊಂದಿದಗೆ ಕೆಲಸ ಮಾಡಿದ ಅನುಭವವನ್ನೂ ಹೊಂದಿದೆ.

ಮೈಜಿಯೋ ಆಪ್‌: ಕರ್ನಾಟಕ ಸರ್ಕಾರದ ಯೋಜನೆಗಳ ಪರಿಪೂರ್ಣ ಮಾಹಿತಿ ಲಭ್ಯ!

ಡೇಟಾ ಸುರಕ್ಷತೆಗಾಗಿ, EasyGov ವಿಶ್ವದ ಅತಿದೊಡ್ಡ ಮತ್ತು ವಿಶೇಷ ಕಂಪನಿ SAP ನೊಂದಿಗೆ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಂದಿದೆ. ಅಲ್ಲದೆ, ಅಗತ್ಯವಿರುವವರನ್ನು ಗುರುತಿಸಲು ಕೃತಕ ಬುದ್ಧಿಮತ್ತೆ (ಆರ್ಟಿಫೀಶಿಯಲ್ ಇಂಟಲಿಜನ್ಸ್) ಅನ್ನು ಬಳಸಲಾಗಿದೆ.

'ಜಾಗೃತ್ ತ್ರಿಪುರ' ಎಂಬುದು EasyGov ನ ಮತ್ತೊಂದು ವೇದಿಕೆಯಾಗಿದೆ. ಈ ವೇದಿಕೆಯನ್ನು ಈ ವರ್ಷದ ಮಾರ್ಚ್‌ನಲ್ಲಿ ತ್ರಿಪುರಾದಲ್ಲಿ ಪ್ರಾರಂಭಿಸಲಾಯಿತು. ಇದು ಸಮಾಜ ಕಲ್ಯಾಣ ಯೋಜನೆಗಳಿಗಾಗಿ ಅರ್ಹ ನಾಗರಿಕರ ಹುಡುಕಾಟದಲ್ಲಿ ಸಹಾಯ ಮಾಡುತ್ತಿದೆ. ಭಾರತದ ಕಲ್ಯಾಣ ಕಾರ್ಯಕ್ರಮಗಳಲ್ಲಿ ವ್ಯಯಿಸಲಾದ ಸುಮಾರು 10 ಲಕ್ಷ ಕೋಟಿ ರೂಪಾಯಿಗಳ ಬಳಕೆಯನ್ನು ಖಾತ್ರಿಪಡಿಸುವುದರ ಜೊತೆಗೆ ಸ್ವಾವಲಂಬಿ ಭಾರತಕ್ಕೆ 'ಜಾಗೃತ್ ತ್ರಿಪುರಾ' ದಂತಹ ಪರಿಹಾರಗಳು ದೃಢವಾದ ಹೆಜ್ಜೆಯಾಗಲಿವೆ ಎಂದು ನಂಬಲಾಗಿದೆ.

Best Mobiles in India

English summary
Get complete information about government social schemes of Karnataka on EasyGov, on just one click.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X