ಯಾವುದೇ ಸ್ಮಾರ್ಟ್ ಫೋನಿನಲ್ಲಿ ರಿಲಯನ್ಸ್ ಜಿಯೋ 4ಜಿ ಸಿಮ್ ಅನ್ನು ಉಚಿತವಾಗಿ ಉಪಯೋಗಿಸುವುದು ಹೇಗೆ?

|

ರಿಲಯನ್ಸ್ ಜಿಯೋ 4ಜಿ ಸಿಮ್ ಕಾರ್ಡ್ ತೊಂಭತ್ತು ದಿನಗಳ ಉಚಿತ ಕರೆ ಮತ್ತು ಡಾಟಾದೊಂದಿಗೆ ಮಾರುಕಟ್ಟೆಗೆ ಬಂದಾಗಿನಿಂದ ಅದರ ಬಗ್ಗೆ ಹೆಚ್ಚಿನ ಆಸಕ್ತಿ ಕೇಳಿಬಂದಿದೆ.

ಯಾವುದೇ ಸ್ಮಾರ್ಟ್ ಫೋನಿನಲ್ಲಿ ರಿಲಯನ್ಸ್ ಜಿಯೋ 4ಜಿ ಸಿಮ್

ಮೊದಲಿಗೆ ಜಿಯೋ ಸಿಮ್ ಕಾರ್ಡ್ ಆಫರ್ ಸ್ಯಾಮ್ಸಂಗ್ ಮತ್ತು ಎಲ್.ಜಿಯ ಸ್ಮಾರ್ಟ್ ಫೋನುಗಳಿಗೆ ಮಾತ್ರ ಲಭ್ಯವಿತ್ತು, ಈಗ ಆಸಕ್ತಿಕರ ಅಪ್ ಡೇಟ್ ಆಗಿದೆ. ಯಾವುದೇ 4ಜಿ ಸ್ಮಾರ್ಟ್ ಫೋನ್ ಹೊಂದಿರುವವರೂ ಕೂಡ ಜಿಯೋ ಸಿಮ್ ಕಾರ್ಡನ್ನು ಉಪಯೋಗಿಸಿಕೊಂಡು 90 ದಿನಗಳ ಉಚಿತ ಸೌಕರ್ಯವನ್ನು ಪಡೆದುಕೊಳ್ಳಬಹುದು.

ಓದಿರಿ: ನೀರಿನಾಳದಲ್ಲಿ ಪತ್ತೆಯಾದ ನಗರ! ಅದ್ಭುತಗಳಿಗೆ ಅಂತ್ಯವೇ ಇಲ್ಲ

ಗಿಜ್ ಬಾಟ್ ರಿಲಯನ್ಸ್ ಜಿಯೋದ ಸಿಮ್ ಕಾರ್ಡನ್ನು ಹೆಟ್.ಟಿ.ಸಿ ಒನ್ ಎ9 ಫೋನಿಗೆ ಪಡೆದುಕೊಂಡಿದೆ. ರಿಲಯನ್ ಜಿಯೋದ ಈ ಹೆಜ್ಜೆ ತುಂಬಾ ಶ್ಲಾಘನೀಯ, ಕಾರಣ ಕಡಿಮೆ ಬೆಲೆಯ ಅನೇಕ 4ಜಿ ಸ್ಮಾರ್ಟ್ ಫೋನುಗಳೀಗ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಓದಿರಿ: ಎಲ್ಲಾ ಅಂತರ್ಜಾಲ ಪ್ರೇಮಿಗಳಿಗೆ ಇಲ್ಲಿವೆ 7 ಮುಖ್ಯ ಅಭ್ಯಾಸಗಳು ಅಳವಡಿಸಲು!

ಈ ಹೊಸ ಮತ್ತು ಸೂಪರ್ ಫಾಸ್ಟ್ 4ಜಿ ಸಿಮ್ ಅನ್ನು ಯಾವುದೇ ಸ್ಮಾರ್ಟ್ ಫೋನಿನಲ್ಲಿ ಸುಲಭವಾಗಿ ಪಡೆದುಕೊಳ್ಳುವುದು ಹೇಗೆ ಎನ್ನುವುದನ್ನು ಈ ಲೇಖನದಿಂದ ತಿಳಿದುಕೊಳ್ಳಿ.

ಮೈಜಿಯೋ ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ.

ಮೈಜಿಯೋ ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ.

ಉಚಿತ ಜಿಯೋ 4ಜಿ ಸಿಮ್ ಕಾರ್ಡನ್ನು ಪಡೆಯಲು ಮೊದಲಿನ ಹಾಗೆ ಮೈಜಿಯೋ ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ. ಸೇವೆ ನೀಡುವಾತ ಕೋಡನ್ನು ಜೆನರೇಟ್ ಮಾಡುತ್ತಾನೆ. ನೀವ ಮಾಡಬೇಕಾಗಿರುವುದಿಷ್ಟೇ, ಹತ್ತಿರದ ರಿಲಯನ್ಸ್ ಡಿಜಿಟಲ್, ಮಿನಿ ಸ್ಟೋರ್ ಅಥವಾ ಜಿಯೋ ಸ್ಟೋರ್ ಗೆ ಹೋಗಿ ಸಿಮ್ ಕಾರ್ಡನ್ನು ಉಚಿತವಾಗಿ ಪಡೆದುಕೊಳ್ಳಿ.

90 ದಿನದವರೆಗೆ ಅನಿಯಮಿತ 4ಜಿ ಡಾಟಾ ಮತ್ತು ಕರೆಗಳನ್ನು ಪಡೆಯಿರಿ.

90 ದಿನದವರೆಗೆ ಅನಿಯಮಿತ 4ಜಿ ಡಾಟಾ ಮತ್ತು ಕರೆಗಳನ್ನು ಪಡೆಯಿರಿ.

ಈ ಪ್ರಿವ್ಯೀವ್ ಕೊಡುಗೆಯ ಮೂಲಕ, 90 ದಿನದವರೆಗೆ ಅನಿಯಮಿತ 4ಜಿ ಡಾಟಾ, ಕರೆ ಮತ್ತು ಸಂದೇಸಗಳನ್ನು ಪಡೆದುಕೊಳ್ಳಿ. ಜೊತೆಗೆ ಜಿಯೋ ಆ್ಯಪ್ ಸ್ಯೂಟ್ ಅನ್ನು ಉಚಿತವಾಗಿ ಉಪಯೋಗಿಸಿ.

ಇದು ತುಂಬಾ ಸರಳ

ಇದು ತುಂಬಾ ಸರಳ

ಉಚಿತ ಜಿಯೋ ಸಿಮ್ ಕಾರ್ಡನ್ನು ಪಡೆಯುವುದನ್ನು ರಿಲಯನ್ಸ್ ತುಂಬಾ ಸರಳವಾಗಿಸಿದೆ. ಹತ್ತಿರದ ರಿಲಯನ್ಸ್ ಡಿಜಿಟಲ್ ಸ್ಟೋರ್ ಗೆ ಹೋಗಿ, ನಿಮ್ಮ ಕೆ.ವೈ.ಸಿ ದಾಖಲೆಗಳನ್ನು ಕೊಡಿ.

ಕೂಪನ್ ಕೋಡ್ ಗಳ ಅವಶ್ಯಕತೆಯಿಲ್ಲ.

ಕೂಪನ್ ಕೋಡ್ ಗಳ ಅವಶ್ಯಕತೆಯಿಲ್ಲ.

ಸಂತಸದ ವಿಷಯವೆಂದರೆ ಜಿಯೋ ಸಿಮ್ ಕಾರ್ಡ್ ಗಳನ್ನು ನೀವು ಉಚಿತವಾಗಿ ಓಪನ್ ಸೇಲ್ ನಲ್ಲಿ ಪಡೆದುಕೊಳ್ಳಬಹುದು. ಜಿಯೋ ಕೆಲಸಗಾರರಿಗಷ್ಟೇ ಈ ಆಫರ್ ಲಭ್ಯವಿದ್ದಾಗ ಕೂಪನ್ ಕೋಡ್ ಗಳ ಅವಶ್ಯಕತೆಯಿತ್ತು. ಈಗ ಯಾವ ಕೂಪನ್ ಕೋಡ್ ಗಳೂ ಬೇಕಾಗಿಲ್ಲ.

ಜಿಯೋ ಜಾಯಿನ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬೇಕು.

ಜಿಯೋ ಜಾಯಿನ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬೇಕು.

ನೋಂದಣಿಯಾದ ಮೊಬೈಲ್ ನಂಬರಿಗೆ ಮೆಸೇಜ್ ಅಥವಾ ಕರೆ ಬಂದಾಗ ಮತ್ತು ನಿಮ್ಮ ಸಿಮ್ ಕಾರ್ಡ್ ನ ಸಿಗ್ನಲ್ ತೋರಿದಾಗ ನಿಮ್ಮ 4ಜಿ ಸಿಮ್ ಕಾರ್ಡನ್ನು ಆ್ಯಕ್ಟಿವೇಟ್ ಮಾಡಿಕೊಳ್ಳಬಹುದು. ಜಿಯೋ ಜಾಯಿನ್ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ಕರೆಗಳನ್ನು ಮಾಡಬಹುದು. 4ಜಿ ಡಾಟಾ ಸೇವೆಗಳನ್ನು ಉಪಯೋಗಿಸಲು ಜಿಯೋ ಜಾಯಿನ್ ಆ್ಯಪ್ ಅವಶ್ಯಕತೆಯಿಲ್ಲ. ಲೈಫ್ ಹೊರತುಪಡಿಸಿ ಮತ್ಯಾವುದೇ ಸ್ಮಾರ್ಟ್ ಫೋನನ್ನು ನೀವು ಉಪಯೋಗಿಸುತ್ತಿದ್ದರೆ ಇದು ಅತ್ಯವಶ್ಯ.

ಉಚಿತ ಕಂಟೆಂಟ್ ಸೇವೆಗಳನ್ನೂ ಪಡೆಯಿರಿ.

ಉಚಿತ ಕಂಟೆಂಟ್ ಸೇವೆಗಳನ್ನೂ ಪಡೆಯಿರಿ.

ಈ ಪ್ರಿವ್ಯೀವ್ ಕೊಡುಗೆಯಲ್ಲಿ ಜಿಯೋ ಆ್ಯಪ್ ಸ್ಯೂಟ್ ನಲ್ಲಿರುವ ಆ್ಯಪ್ ಗಳಾದ ಜಿಯೋ ಪ್ಲೇ, ಜಿಯೋ ಆನ್ ಡಿಮ್ಯಾಂಡ್, ಜಿಯೋ ಬೀಟ್ಸ್, ಜಿಯೋ ಎಕ್ಸ್ ಪ್ರೆಸ್ ನ್ಯೂಸ್ ಹಾಗೂ ಇನ್ನೂ ಅನೇಕ ತಂತ್ರಾಂಶಗಳನ್ನು ಉಚಿತವಾಗಿ ಅನಿಯಮಿತವಾಗಿ ಉಪಯೋಗಿಸಬಹುದು. ಇವುಗಳನ್ನು ಡೌನ್ ಲೋಡ ಮಾಡಿಕೊಳ್ಳಲೇಬೇಕೆಂದೇನಿಲ್ಲ, ಆದರೆ ಡೌನ್ ಮಾಡಿಕೊಂಡು 90 ದಿನದವರೆಗೆ ಉಚಿತ ಸೇವೆಗಳನ್ನು ಪಡೆಯಬಹುದು.

Best Mobiles in India

Read more about:
English summary
Reliance has extended the Jio 4G SIM card's Preview Offer. Under the same, the SIM card can be got by any 4G smartphone user without the necessity of the code for free and enjoy unlimited phone calls and data for 90 days.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X