ಎಲ್ಲರೂ ನೀರಿನೊಳಗೆ ಚಲಿಸುವ ಬುಲೆಟ್ ರೈಲಿನಲ್ಲಿ ಹೋಗಲು ರೆಡಿಯಾಗಿ

Written By:

ತಂತ್ರಜ್ಞಾನದಿಂದಲೇ ಒಂದು ದೇಶ ಶೀಘ್ರವಾಗಿ ಅಭಿವೃದ್ದಿ ಹೊಂದಬಲ್ಲದು ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು. ಅಂದಹಾಗೆ ಇಂದು ದಿನನಿತ್ಯ ಕೋಟ್ಯಾಂತರ ಜನರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸುತ್ತಿರುವುದು ಸಾರಿಗೆ ಅಭಿವೃದ್ದಿಯಿಂದ. ಆದ್ರೆ ಕೆಲವು ಮಾರ್ಗಗಗಳು ದೇಶದಲ್ಲಿ ಇನ್ನೂ ಸಹ ಸಂಚಾರ ಮಾಡಲು ಯೋಗ್ಯವಿಲ್ಲ ಎಂಬುದು ಗಮನಾರ್ಹ. ಆದ್ರೆ ಅದನ್ನೆಲ್ಲ ಈಗ ಪಕ್ಕಕ್ಕೆ ಸರಿಸಿ ಒಂದು ಸಿಹಿ ಸುದ್ದಿ ತಿಳಿಯೋಣ. ಭಾರತದಲ್ಲಿ ಇನ್ನೂ ಕೆಲವೇ ದಿನಗಳಲ್ಲಿ ನೀರಿನೊಳಗೆ (underwater) ಸುರಂಗ ಮಾರ್ಗದಲ್ಲಿ ಬುಲೆಟ್‌ ರೈಲು ಚಲಿಸಲಿದೆ. ವಾವ್‌ ನೀರಿನೊಳಗ... ಹಾಗೆ ಒಮ್ಮೆ ನೀರಿನೊಳಗೆ ರೈಲು ಚಲಿಸುತ್ತಿದ್ರೆ ನಮಗೆ ಆಗುವ ಫೀಲ್‌ ಹೇಗಿರುತ್ತೆ ಕಲ್ಪಿಸಿಕೊಳ್ಳಿ. ಬಹುಶಃ ಕುತೂಹಲ ಹೆಚ್ಚಾಗುತ್ತೆ ಅಲ್ವಾ... ಅಂದಹಾಗೆ ಈ ನೀರಿನೊಳಗೆ ಚಲಿಸುವ ಬುಲೆಟ್‌ ರೈಲಿನ ಮಾರ್ಗ ಯಾವುದು. ಎಲ್ಲಿಂದ ಎಲ್ಲಿಗೆ ಹೋಗಬಹುದು. ದೂರ ಎಷ್ಟು ಎಂಬಿತ್ಯಾದಿ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ತಿಳಿಯಿರಿ.

ಪ್ರತಿಯೊಬ್ಬರಿಗೂ ಗೊಂದಲ ಉಂಟುಮಾಡುವ ಅಚ್ಚರಿ ಫೋಟೋಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಬುಲೆಟ್‌ ರೈಲು

ಬುಲೆಟ್‌ ರೈಲು

ಟೆಕ್ನಾಲಜಿಯಿಂದ ಇದು ಸಾಧ್ಯ. ಭಾರತ ಮುಂಬರುವ ದಿನಗಳಲ್ಲಿ ಕೇವಲ ಮೊಟ್ಟ ಮೊದಲ ಬುಲೆಟ್‌ ರೈಲನ್ನು ಮಾತ್ರ ಓಡಿಸುತ್ತಿಲ್ಲ. ಅದು ನೀರಿನೊಳಗಿನ ಸುರಂಗ ಮಾರ್ಗದಲ್ಲಿ ಓಡಲಿದೆ. ಹಾಗೆ ಒಮ್ಮೆ ಕಲ್ಪಿಸಿಕೊಳ್ಳಿ ಸಮುದ್ರವಿರುವ ಕಡೆಗಳಲೆಲ್ಲ ನೀರಿನೊಳಗಿನ ಸುರಂಗ ಮಾರ್ಗದಲ್ಲಿ ಪ್ರಯಾಣ ಮಾಡುತ್ತಿದ್ರೆ ಹೇಗಿರುತ್ತದೆ ಅಂತ.

ಮಾರ್ಗ ಯಾವುದು ಗೊತ್ತೇ?

ಮಾರ್ಗ ಯಾವುದು ಗೊತ್ತೇ?

ನೀರಿನೊಳಗೆ(underwater) ಚಲಿಸಲಿರುವ ಬುಲೆಟ್‌ ರೈಲಿನ ಮೊದಲ ಮಾರ್ಗ ಮುಂಬೈನಿಂದ ಅಹಮದಾಬಾದ್. ದೂರ 21 ಕಿಲೋ ಮೀಟರ್‌. ಠಾಣೆಯಿಂದ ವಿಹಾರದ ಮುಖಾಂತರ ಅಂಡರ್‌ವಾಟರ್‌ ರೈಲು ಕಾರಿಡಾರ್‌ನಲ್ಲಿ ಬುಲೆಟ್‌ ರೈಲು ಓಡಲಿದೆ. ಈ ಮಾರ್ಗವು ಅಂಡರ್‌ವಾಟರ್‌ ಸುರಂಗ ಪಡೆಯಲಿದೆ ಎಂದು "ಜಪಾನ್ ಅಂತಾರಾಷ್ಟ್ರೀಯ ಸಹಕಾರ ಏಜೆನ್ಸಿ (JICA )" ವರದಿಯಲ್ಲಿ ತಿಳಿಸಿದೆ.

ಬುಲೆಟ್‌ ರೈಲು ಕಾರಿಡಾರ್‌

ಬುಲೆಟ್‌ ರೈಲು ಕಾರಿಡಾರ್‌

ಬುಲೆಟ್‌ ರೈಲು ಕಾರಿಡಾರ್ "ನ್ಯಾಷನಲ್‌ ಹೈ-ಸ್ಪೀಡ್‌ ರೈಲ್‌ ಕಾರ್ಪೋರೇಶನ್‌ ಲಿಮಿಟೆಡ್" ಮತ್ತು "ಜಪಾನ್ ಅಂತಾರಾಷ್ಟ್ರೀಯ ಸಹಕಾರ ಏಜೆನ್ಸಿ (JICA )" ಜಂಟಿ ಪ್ರಯತ್ನದಿಂದ ನಿರ್ಮಾಣವಾಗಲಿದೆ.

 ಅಂಡರ್‌ವಾಟರ್‌ ಬುಲೆಟರ್‌ ರೈಲು ಯೋಜನೆ ವೆಚ್ಚ

ಅಂಡರ್‌ವಾಟರ್‌ ಬುಲೆಟರ್‌ ರೈಲು ಯೋಜನೆ ವೆಚ್ಚ

ಅಂದಹಾಗೆ ನೀರಿನನೊಳಗಿನ ಸುರಂಗ ಮಾರ್ಗದಲ್ಲಿ ಚಲಿಸಲಿರುವ ಬುಲೆಟ್ ರೈಲು ಯೋಜನೆಗೆ ರೂ.97,639 ಕೋಟಿ ವೆಚ್ಚವಾಗಲಿದೆಯಂತೆ. ಇದರ ಶೇಕಡ 81 ರಷ್ಟು ಹಣ ಜಪಾನ್‌ನಿಂದ ಸಾಲವಾಗಿ ದೊರೆಯಲಿದೆ. ಸಾಲ ಒಪ್ಪಂದದಲ್ಲಿ ಜಪಾನ್‌ ಸಿಗ್ನಲ್‌, ವಿದ್ಯುತ್‌ ವ್ಯವಸ್ಥೆ, ಮತ್ತು ಇತರೆ ಎಲ್ಲಾ ಉಪಕರಣಗಳನ್ನು ಜಪಾನ್‌ನಿಂದ ತರುವುದಾಗಿ ಹೇಳಲಾಗಿದೆ. ಈ ಒಪ್ಪಂದ ಈ ವರ್ಷದ ಕೊನೆಗೆ ಮುಗಿಯಲಿದ್ದು, 2018 ರ ಅಂತ್ಯದೊಳಗೆ ನಿರ್ಮಾಣ ಪ್ರಾರಂಭ ಮಾಡುವ ನಿರೀಕ್ಷೆ ಹೊಂದಲಾಗಿದೆ.

508 ಕಿಲೋ ಮೀಟರ್‌ ಅಂತರ

508 ಕಿಲೋ ಮೀಟರ್‌ ಅಂತರ

ಬುಲೆಟ್ ರೈಲಿನ ಉಪಯೋಗ ಏನು ಎಂಬುದು ಇನ್ನೂ ಎಷ್ಟೋ ಜನರಿಗೆ ಅರ್ಥವಾಗಿಲ್ಲ ಎನಿಸುತ್ತದೆ. ಅಂದಹಾಗೆ ಮುಂಬೈ ಮತ್ತು ಅಹಮದಾಬಾದ್‌ ನಡುವೆ ಇರುವ 508 ಕಿಲೋ ಮೀಟರ್ ದೂರವನ್ನು ಕೇವಲ 2 ಗಂಟೆ ಯೊಳಗೆ ನೀರಿನೊಳಗಿನ ಸುರಂಗ ಮಾರ್ಗದಲ್ಲಿ ಬುಲೆಟ್ ರೈಲಿನಲ್ಲಿ ತಲುಪಬಹುದು. ಇದರ ದೂರ ಕೇವಲ 21 ಕಿಲೋ ಮೀಟರ್‌.

ಬುಲೆಟ್‌ ರೈಲು ವೇಗ

ಬುಲೆಟ್‌ ರೈಲು ವೇಗ

ಬುಲೆಟ್ ರೈಲನ್ನು ಗರಿಷ್ಟ 350kph ನಲ್ಲಿ ಚಲಿಸಬಹುದಾಗಿದೆ. ಆದರೆ ಗರಿಷ್ಟ ವೇಗ 320kph ವೇಗದಲ್ಲಿ ಚಲಿಸಲಾಗುವುದು, ಪ್ರಯಾಣ ಸಮಯ 2 ಗಂಟೆ ಆಗಲಿದೆ.

ಭಾರತದ ಪ್ರಮುಖ ಹೆಜ್ಜೆ

ಭಾರತದ ಪ್ರಮುಖ ಹೆಜ್ಜೆ

ನೀರಿನೊಳಗಿನ ಸುರಂಗ ಮಾರ್ಗದ ಬುಲೆಟ್ ರೈಲು ಯೋಜನೆ ಭಾರತ ಮತ್ತು ರಾಷ್ಟ್ರೀಯ ಸಾರಿಗೆ ಉದ್ಯಮಕ್ಕೆ ಹೆಚ್ಚು ಉಪಯೋಗವಾಗಲಿದ್ದು, ದೊಡ್ಡ ಹೆಜ್ಜೆ ಆಗಿದೆ. ವಿದೇಶಾಂಗ ಸಚಿವಾಲಯ, ಆರ್ಥಿಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿಗಳು, ರೈಲ್ವೈ ಮಂಡಳಿಗಳೆಲ್ಲವೂ ಜಂಟಿ ಸಮಿತಿ ರಚನೆಯಿಂದ ಅತಿ ವೇಗವಾಗಿ ಈ ಯೋಜನೆ ಪೂರ್ಣಗೊಳಿಸುವ ಬಗ್ಗೆ ತೀರ್ಮಾನ ಕೈಗೊಂಡಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Get ready To Travel Underwater With India’s First Hightech Bullet Train. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot