ಇಯರ್ ಫೋನ್ ಹುಡುಗಿಯ ಪ್ರಾಣಕ್ಕೆ ಮುಳುವಾಯಿತು!!!

Written By:

ಹಾಡು ಆಲಿಸುವುದು ಯಾರಿಗೆ ಇಷ್ಟವಿಲ್ಲದ ಹವ್ಯಾಸ ಹೇಳಿ? ಅದಕ್ಕೆಂದೇ ಇಂದು ಮಾರುಕಟ್ಟೆಯಲ್ಲಿ ಅತ್ಯಾಧುನಿಕ ವಿಶಿಷ್ಟ ಮಾದರಿಯ ಹೆಡ್‌ಫೋನ್‌ಗಳು ಇಯರ್ ಫೋನ್‌ಗಳು ಲಭ್ಯವಿದೆ. ಸುಮ್ಮನೆ ಅದನ್ನು ನಿಮ್ಮ ಫೋನ್‌ಗೆ ಸಿಕ್ಕಿಸಿ 24 ಗಂಟೆಯೂ ಹಾಡಿನ ರಸಗವಳವನ್ನು ನಿಮ್ಮ ಕಿವಿಯಲ್ಲಿ ತುಂಬಿಕೊಳ್ಳಬಹುದು.

ಓದಿರಿ: ವಿಶಿಷ್ಟ ಸಂಶೋಧನೆ: ಕಸದ ತೊಟ್ಟಿಯಿಂದ ವೈಫೈ

ಆದರೆ ಈ ರಸಗವಳ ಬೆಂಕಿಯನ್ನುಗುಳುವ ವಿಷ ಜ್ವಾಲೆಯಾದರೆ ಅದನ್ನು ನೀವು ತಾಳಿಕೊಳ್ಳಬಲ್ಲಿರಾ? ಖಂಡಿತಾ ಸಾಧ್ಯವಿಲ್ಲ. ಫೋನ್ ಚಾರ್ಜ್‌ನಲ್ಲಿರುವಾಗ ಇಯರ್ ಫೋನ್ ಅನ್ನು ಕಿವಿಯಲ್ಲಿಟ್ಟಕೊಂಡೇ ಹಾಡಿನ ಮೋಡಿಗೆ ಬೆರಗಾಗಿ ಒಂದು ಹುಡುಗಿ ತನ್ನ ಸುಂದರ ಜೀವನವನ್ನೇ ಇಹಲೋಕಕ್ಕೆ ಸಾಗಿಸಿದ ಘಟನೆ ಇಂದಿನ ಲೇಖನದ ಮುಖ್ಯ ಕಾನ್ಸೆಪ್ಟ್ ಆಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟೆಕ್ಸಾಸ್ ಘಟನೆ

ಟೆಕ್ಸಾಸ್ ಘಟನೆ

ಟೆಕ್ಸಾಸ್‌ನಲ್ಲಿ ನಡೆದ ಈ ಘಟನೆ ನಿಮ್ಮ ಜೀವನದಲ್ಲಿ ಇಯರ್ ಫೋನ್ ಸಿಕ್ಕಿಸಿಕೊಂಡು ಹಾಡು ಆಲಿಸುವ ಕನಸಿಗೆ ಭಗ್ನವನ್ನುಂಟು ಮಾಡುವುದು ಖಂಡಿತ.

ಚಿರನಿದ್ರೆ

ಚಿರನಿದ್ರೆ

19 ವರ್ಷದ ಎಳೆಯ ಕುಸುಮ ಗೇಬ್ರಿಲ್ ಸ್ಯಾಮುವೆಲ್ಸ್ ಇಯರ್ ಫೋನ್ ಹಾಡಿಗೆ ಚಿರನಿದ್ರೆಯನ್ನೇ ಮಾಡಿದ್ದಾಳೆ.

ಸತ್ತು ಹೆಣವಾಗಿದ್ದಾಳೆ

ಸತ್ತು ಹೆಣವಾಗಿದ್ದಾಳೆ

ಮಗಳು ಮಲಗಿದ್ದಾಳೆ ಎಂದೇ ಭಾವಿಸಿ ಆಕೆಯ ತಂದೆ ತಾಯಿ ಎಂದಿನಂತೆ ಕಚೇರಿ ಕೆಲಸಕ್ಕೆ ಹೋಗಿದ್ದಾರೆ. ಆದರೆ ತಮ್ಮ ಮಗಳು ಸತ್ತು ಹೆಣವಾಗಿದ್ದಾಳೆ ಎಂಬ ಸಂಶಯ ಅವರಲ್ಲಿ ಬರಲೇ ಇಲ್ಲ.

ವಾಯ್ಸ್ ಮೇಲ್

ವಾಯ್ಸ್ ಮೇಲ್

ಇನ್ನು ಹುಡುಗಿಯ ಗೆಳೆಯ ಕೂಡ ಸಾಕಷ್ಟು ಬಾರಿ ಆಕೆಗೆ ಫೋನಾಯಿಸಿದ್ದು ಆಕೆಯಿಂದ ಯಾವುದೇ ಪ್ರತ್ಯುತ್ತರ ಬಂದಿಲ್ಲ ಮತ್ತು ಆತನ ವಾಯ್ಸ್ ಮೇಲ್ ನಿರಂತರವಾಗಿ ಆಕೆಯನ್ನು ಸಮೀಪಿಸುತ್ತಲೇ ಇತ್ತು.

ಸಂದೇಶಕ್ಕೆ ಪ್ರತ್ಯುತ್ತರಿಸದಿರುವುದನ್ನು

ಸಂದೇಶಕ್ಕೆ ಪ್ರತ್ಯುತ್ತರಿಸದಿರುವುದನ್ನು

ಹುಡುಗಿಯು ತನ್ನ ಯಾವುದೇ ಸಂದೇಶಕ್ಕೆ ಪ್ರತ್ಯುತ್ತರಿಸದಿರುವುದನ್ನು ಕಂಡು ಆಕೆಯ ಗೆಳೆಯ ಮನೆಯನ್ನು ಪ್ರವೇಶಿಸಿದ್ದಾನೆ.

ಕರಕಲಾದ ವಾಸನೆ

ಕರಕಲಾದ ವಾಸನೆ

ಮನೆಯನ್ನು ಪ್ರವೇಶಿಸಿದೊಡನೇ ಏನೋ ಸುಟ್ಟು ಕರಕಲಾದ ವಾಸನೆ ಆತನ ಮೂಗಿಗೆ ಬಡಿಯುತ್ತಿತ್ತು.

ಸುಟ್ಟು ಹೋಗಿದೆ

ಸುಟ್ಟು ಹೋಗಿದೆ

ಮನೆಯಲ್ಲೇನೋ ಆಹಾರ ಸಾಮಾಗ್ರಿ ಸುಟ್ಟು ಹೋಗಿದೆ ಎಂಬುದು ಆತನ ವಿಚಾರವಾಗಿತ್ತು.

ಹುಡುಗಿಯ ಕೋಣೆ

ಹುಡುಗಿಯ ಕೋಣೆ

ಆದರೆ ತನ್ನ ಹುಡುಗಿಯ ಕೋಣೆಯನ್ನು ಸಮೀಪಿಸುತ್ತಿದ್ದಂತೆಯೇ ಈ ಸುಟ್ಟ ವಾಸನೆ ಮತ್ತಷ್ಟು ಆಗಾಧವಾಯಿತು.

ಮಾನಸಿಕವಾಗಿ ಅಸ್ವಸ್ಥಗೊಂಡಿದ್ದಾನೆ

ಮಾನಸಿಕವಾಗಿ ಅಸ್ವಸ್ಥಗೊಂಡಿದ್ದಾನೆ

ಇಯರ್ ಫೋನ್ ಸಿಕ್ಕಿಸಿಕೊಂಡೇ ಹುಡುಗಿ ಮೃತಪಟ್ಟಿರುವುದನ್ನು ಕಂಡ ಹುಡುಗ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದಾನೆ.

ಫೋನ್ ಸ್ಫೋಟ

ಫೋನ್ ಸ್ಫೋಟ

ನಿದ್ದೆಯ ಅಮಲಿನಲ್ಲಿ ಇಯರ್ ಫೋನ್ ತೆಗೆಯಬೇಕೆಂಬ ಪ್ರಜ್ಞೆಯನ್ನೇ ಹುಡುಗಿ ಮರೆತುಬಿಟ್ಟಿದ್ದಳು ಮತ್ತು ಹಾಡಿನ ಶಬ್ಧಕ್ಕೆ ಫೋನ್ ಸ್ಫೋಟಗೊಂಡು ಅವಳನ್ನೇ ಬಲಿತೆಗೆದುಕೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
We all love listening to music and headphones/earphones are a part of our daily lives. Most of us keep our headphone on while working/studying and doing everything else. However, this benign activity can also be really dangerous.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot