Subscribe to Gizbot

ವಿಶಿಷ್ಟ ಸಂಶೋಧನೆ: ಕಸದ ತೊಟ್ಟಿಯಿಂದ ವೈಫೈ

Posted By:

ಕಸದ ತೊಟ್ಟಿಯನ್ನು ಬಳಸಿಕೊಂಡು ವೈಫೈ ಸಂಪರ್ಕ ಸೌಲಭ್ಯ ಬಳಸುವ ವಿಶೇಷ ವ್ಯವಸ್ಥೆಗೆ ದೇಶ ಮುಂದಾಗಿದೆ. ವಾಣಿಜ್ಯ ಪದವಿಯನ್ನು ಪಡೆದುಕೊಂಡಿರುವ ಇಬ್ಬರು ವಿದ್ಯಾರ್ಥಿಗಳು ಕಸದ ಡಬ್ಬಿಯನ್ನು ಬಳಸಿಕೊಂಡು ವೈಫೈ ಸಂಪರ್ಕವನ್ನು ಪಡೆದುಕೊಳ್ಳುವ ವಿಶೇಷ ಸೌಲಭ್ಯವನ್ನು ಒದಗಿಸುವಲ್ಲಿ ಮುಂದಾಗಿದ್ದಾರೆ.

ಓದಿರಿ: ಅಪಾಯದಿಂದ ನಿಮ್ಮನ್ನು ದೂರವಿಡುವ ಫೇಸ್‌ಬುಕ್ ಟಿಪ್ಸ್

ಮುಂಬೈ ವಾಸಿಯಾಗಿರುವ ಪ್ರತೀಕ್ ಅಗರ್‌ವಾಲ್ ಮತ್ತು ರಾಜ್ ದೇಸಾಯಿ ವಿಶ್ವದ ಬೇರೆ ಬೇರೆ ದೇಶಗಳಿಗೆ ಭೇಟಿ ನೀಡಿ ಈ ಅತ್ಯಪೂರ್ವ ಸಂಶೋಧನೆಗೆ ಮುಂದಾಗಿದ್ದಾರೆ. ಕಸದ ಡಬ್ಬಿಯಿಂದ ಇಂಟರ್ನೆಟ್ ಪಡೆಯುವಿಕೆ ವಿವರಕ್ಕಾಗಿ ಕೆಳಗಿನ ಸ್ಲೈಡರ್ ನೋಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕೋಡ್ ಫ್ಲ್ಯಾಶ್

ಕೋಡ್ ಫ್ಲ್ಯಾಶ್

ಕಸದ ತೊಟ್ಟಿಗೆ ಯಾರಾದರೂ ಏನನ್ನಾದರೂ ಎಸೆದಾಗ ಇದು ಒಂದು ಕೋಡ್ ಅನ್ನು ಫ್ಲ್ಯಾಶ್ ಮಾಡುತ್ತದೆ ಇದು ಉಚಿತ ವೈಫೈಯನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತದೆ.

ವೈಫೈ ಸಂಶೋಧನೆ

ವೈಫೈ ಸಂಶೋಧನೆ

ಮುಂಬೈ ನಿವಾಸಿಗಳಾಗಿರುವ ಪ್ರತೀಕ್ ಅಗರ್‌ವಾಲ್ ಮತ್ತು ರಾಜ್ ದೇಸಾಯಿ ಈ ವೈಫೈ ಸಂಶೋಧನೆಯ ಹರಿಕಾರರು ಎಂದೆನಿಸಿದ್ದಾರೆ.

ವಿಶ್ವದ ಹಲವು ದೇಶ

ವಿಶ್ವದ ಹಲವು ದೇಶ

ವಿಶ್ವದ ಹಲವು ದೇಶಗಳಾದ ಡೆನ್ಮಾರ್ಕ್, ಫಿನ್‌ಲ್ಯಾಂಡ್, ಸಿಂಗಪೂರ್ ಮೊದಲಾದ ಕಡೆಗೆ ಪ್ರಯಾಣಿಸಿ ಈ ಕಸದ ತೊಟ್ಟಿಯಿಂದ ವೈಫೈ ಪಡೆದುಕೊಳ್ಳುವ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ.

ಭಾರತದಲ್ಲೂ ಅಳವಡಿಸುವ ಯೋಜನೆ

ಭಾರತದಲ್ಲೂ ಅಳವಡಿಸುವ ಯೋಜನೆ

ಈ ದೇಶಗಳಲ್ಲಿ ಈ ವ್ಯವಸ್ಥೆ ಪ್ರಸ್ತುತ ಜಾರಿಯಲ್ಲಿದ್ದು ಭಾರತದಲ್ಲೂ ಇದನ್ನು ಅಳವಡಿಸುವ ಯೋಜನೆಗೆ ಇವರು ಮುಂದಾಗಿದ್ದಾರೆ.

ವೈಫೈ ಯೋಜನೆ

ವೈಫೈ ಯೋಜನೆ

ಯಾವುದೋ ಕಾರ್ಯಕ್ರಮದಲ್ಲಿ ಸ್ನೇಹಿತರನ್ನು ಹುಡುಕುತ್ತಾ ಇದ್ದ ಸಂದರ್ಭದಲ್ಲಿ ಈ ವೈಫೈ ಯೋಜನೆ ಇವರ ತಲೆಯಲ್ಲಿ ಮೊಳೆತಿದೆ.

ಹಾಟ್‌ಸ್ಟಾಟ್‌

ಹಾಟ್‌ಸ್ಟಾಟ್‌

ಹಾಟ್‌ಸ್ಟಾಟ್‌ಗಳನ್ನು ಬಳಸಿಕೊಂಡು ವೈಫೈಯನ್ನು ಜನರಿಗೆ ಏಕೆ ಒದಗಿಸಬಾರದು ಎಂಬ ಯೋಚನೆ ನಮ್ಮಲ್ಲಿ ಬಂದಿತು.

ಅಂತರ್ಜಾಲದ ಅಭಾವ

ಅಂತರ್ಜಾಲದ ಅಭಾವ

ಸ್ಥಳವನ್ನು ಸ್ವಚ್ಛವಾಗಿಸುವ ಯೋಜನೆಯೊಂದಿಗೆ ಅಂತರ್ಜಾಲದ ಅಭಾವವನ್ನು ನೀಗಿಸುವ ಉಪಾಯವನ್ನು ಈ ಸ್ನೇಹಿತರು ಕಂಡುಕೊಂಡಿದ್ದಾರೆ.

ಎಮ್‌ಟಿಎಸ್ ಸಂಸ್ಥೆ

ಎಮ್‌ಟಿಎಸ್ ಸಂಸ್ಥೆ

ಎಮ್‌ಟಿಎಸ್ ಸಂಸ್ಥೆ ಈ ವಿದ್ಯಾರ್ಥಿಗಳ ವೈಫೈ ಯೋಜನೆಗೆ ಕೈಜೋಡಿಸಿದ್ದು ಬೆಂಗಳೂರು, ಕೋಲ್ಕತ್ತಾ ಮತ್ತು ದೆಹಲಿಗಳಲ್ಲಿ ನಡೆದ ಕಾರ್ಯಾಗಾರಗಳಲ್ಲಿ ಕಸದ ತೊಟ್ಟಿಯಿಂದ ಇಂಟರ್ನೆಟ್ ಯೋಜನೆಯನ್ನು ಪ್ರಸ್ತುತಪಡಿಸಿದ್ದಾರೆ.

ಕಡಿಮೆ ದುಡ್ಡಿನಲ್ಲಿ ಮಾಹಿತಿ ವಲಯ

ಕಡಿಮೆ ದುಡ್ಡಿನಲ್ಲಿ ಮಾಹಿತಿ ವಲಯ

ಜನರ ವರ್ತನೆಯನ್ನು ಬದಲಾಯಿಸುವ ಗುರಿಯನ್ನು ನಾವು ಹೊಂದಿದ್ದು ಕಡಿಮೆ ದುಡ್ಡಿನಲ್ಲಿ ಮಾಹಿತಿ ವಲಯವನ್ನು ಪ್ರವೇಶಿಸುವಂತಾಗಬೇಕೆಂಬುದು ಇವರ ವಿಚಾರವಾಗಿದೆ.

ವೈಫೈ ಬಿನ್‌

ವೈಫೈ ಬಿನ್‌

ವೈಫೈ ಬಿನ್‌ಗಳನ್ನು ಈ ಯೋಜನೆಗಾಗಿ ಸ್ನೇಹಿತರು ನಿರ್ಮಿಸಲಿದ್ದು ಜನರಲ್ಲಿ ವರ್ತನೆಯನ್ನು ಬದಲಾಯಿಸುವ ಉದ್ದೇಶವನ್ನು ಇದು ಹೊಂದಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Realising the need of the Internet in everyday life, two commerce graduates decided to give free WiFi to people in exchange of a cleaner surrounding with an unique initiative -- a 'WiFi Trash Bin'.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot