ಅಪರಿಚಿತರಿಗೆ ಲಕ್ಷ ಬೆಲೆಯ ಐಫೋನ್ X ಹಂಚಿದ: ರಿಯಾಕ್ಷನ್ ಹೇಗಿತ್ತು ಗೊತ್ತಾ..?
ದಿನೇ ದಿನೇ ಯೂಟ್ಯೂಬ್‌ಗಾಗಿಯೇ ವಿಡಿಯೋ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೇ ಅದರಿಂದಲೇ ಕಾಸುಗಳಿಸುವವರು ಸಂಖ್ಯೆ ಕಮ್ಮಿಯೇನು ಇಲ್ಲ. ಇದೇ ಮಾದರಿಯಲ್ಲಿ ಅಮೆರಿಕಾದಲ್ಲಿ BigDawsTv ಯೂಟ್ಯೂಬ್ ಚಾನಲ್ ನಡೆಸುತ್ತಿರುವ ವ್ಯಕ್ತಿಯೊಬ್ಬ ದುಬಾರಿಯ ಐಫೋನ್X ಅನ್ನು ಅಪರಿಚಿತರಿಗೆ ಹಂಚಿ ಅವರ ಭಾವ ಹೇಗಿರಲಿದೆ ಎನ್ನುವುದನ್ನು ವಿಡಿಯೋ ಮಾಡಿ ಹರಿ ಬಿಟ್ಟಿದ್ದಾನೆ. ಇದರಿಂದ ತನ್ನ ಖಾತೆಗೆ ಹಣವನ್ನು ತುಂಬಿಸಿಕೊಳ್ಳುತ್ತಿದ್ದಾನೆ.

ಓದಿರಿ: ಐಡಿಯಾದಿಂದ ಉಚಿತ 1008 GB 4G ಡೇಟಾ ಆಫರ್: ಪಡೆದುಕೊಳ್ಳುವುದು ಹೇಗೆ..?
ಉಚಿತವಾಗಿ ಐಪೋನ್ X ಹಂಚುತ್ತಿರುವ ವಿಡಿಯೋ ಸಧ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ ಎನ್ನಲಾಗಿದೆ. ಒಟ್ಟು 8 ಫೋನ್ ಗಳನ್ನು ಖರೀದಿಸಿ ಅದರಲ್ಲಿ 7 ಐಪೋನ್ X ಅನ್ನು ಅಪರಿಚಿತರಿಗೆ ನೀಡಿದ್ದಾನೆ, ಉಳಿದ ಒಂದು ಫೋನ್ ಗೆಲ್ಲಲು ತನ್ನ ಯೂಟ್ಯೂಬ್ ವಿಕ್ಷಕರಿಗೆ ಅವಕಾಶವನ್ನು ಮಾಡಿಕೊಟ್ಟಿದ್ದಾನೆ.

ನಂಬಲು ಸಾಧ್ಯವಿಲ್ಲ:
ರಸ್ತೆಯಲ್ಲಿ ಸಾಗುತ್ತಿದ್ದ ವೇಳೆಯಲ್ಲಿ ಅಪರಿಚಿತನೋರ್ವ ಎದುರಿಗೆ ಬಂದು ಹಾಗೆಯೇ ಪರಿಚಯವನ್ನು ಮಾಡಿಕೊಂಡು ಐಪೋನ್ X ಅನ್ನು ಉಡುಗೊರೆಯಾಗಿ ಕೊಟ್ಟ ಸಂದರ್ಭದಲ್ಲಿ ಎದುರಿಗಿದ್ದವರಿಗೆ ಅದನ್ನು ನಂಬಲು ಸಾಧ್ಯವಾಗಿಲ್ಲ. ಕೊನೆಗೆ ಆತನೇ ಬಾಕ್ಸ್ ಓಪನ್ ಮಾಡಿ ಫೋನ್ ತೋರಿಸಿದ ಮೇಲೆ ಅದನ್ನು ಸ್ವೀಕರಿಸಿ, ಆತನ ಕಾರ್ಯಕ್ಕೆ ಮೆಚ್ಚುಗೆ ಸೂಚಿ ಐಫೋನ್ ಪಡೆದು ಧನ್ಯವಾದ ಸೂಚಿಸಿದ್ದಾರೆ.

ವಿಡಿಯೋ ಮಾಡುವುದು ತಿಳಿದಿಲ್ಲ:
ಅಪರಿಚಿತರಿಗೆ ತಾನು ಐಫೋನ್ X ಉಚಿತವಾಗಿ ನೀಡುತ್ತಿರುವ ವಿಡಿಯೋ ಮಾಡುತ್ತಿರುವುದನ್ನು ತಿಳಿಸದೆ ಅವರು ಯಾವ ರೀತಿಯಲ್ಲಿ ವರ್ತಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಅವರಿಗೆ ತಿಳಿಯದಂತೆ ದೂರದಲ್ಲಿ ಎಲ್ಲಿಯೋ ನಿಂತು ವಿಡಿಯೋವನ್ನು ಮಾಡಿದ್ದಾನೆ.
ನೀವು ನೋಡಿ:
ಈಗಾಗಲೇ ಯೂಟ್ಯೂಬ್. ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ ಎನ್ನಲಾಗಿದೆ. ಯೂಟ್ಯೂಬ್ ವೊಂದರಲ್ಲಿ ಈ ವಿಡಿಯೋ 3,480,120 ಬಾರಿ ವೀಕ್ಷಣೆಯಾಗಿದೆ ಎನ್ನಲಾಗಿದೆ. ನೀವು ಈ ವಿಡಿಯೋ ಹೇಗಿದೆ ನೋಡಿ.


Click it and Unblock the Notifications








