ಐಡಿಯಾದಿಂದ ಉಚಿತ 1008 GB 4G ಡೇಟಾ ಆಫರ್: ಪಡೆದುಕೊಳ್ಳುವುದು ಹೇಗೆ..?
ಟೆಲಿಕಾಂ ಮಾರುಕಟ್ಟೆಯಲ್ಲಿ ವಿವಿಧ ಕಂಪನಿಗಳ ನಡುವೆ ಭಾರೀ ಸ್ಪರ್ಧೆ ನಡೆಯುತ್ತಿರುವುದನ್ನು ನಾವು ಕಾಣಬಹುದಾಗಿದೆ. ಈ ಸ್ಪರ್ಧೆಯಿಂದಾಗಿ ಜಿಯೋ-ಏರ್‌ಟೆಲ್-ವೊಡಾಫೋನ್‌ಗಳು ಗ್ರಾಹಕರಿಗೆ ಭರ್ಜರಿ ಆಫರ್ ಗಳನ್ನು ನೀಡುತ್ತಿವೆ. ಇದೇ ಮಾದರಿಯಲ್ಲಿ ಐಡಿಯಾ ಸಹ ತನ್ನ ಬಳಕೆದಾರರಿಗೆ ಬಂಪರ್ ಆಫರ್ ವೊಂದನ್ನು ಘೋಷಣೆ ಮಾಡಿದ್ದು, ಬರೋಬ್ಬರಿ 1008 GB 4G ಡೇಟಾವನ್ನು ಉಚಿತವಾಗಿ ಬಳಕೆಗೆ ನೀಡಲು ಮುಂದಾಗಿದೆ.

ಓದಿರಿ: ಊಹಿಸಲೂ ಸಾಧ್ಯವಿಲ್ಲದ ಬೆಲೆಗೆ ಲಾಂಚ್ ಆಯ್ತು ಒನ್‌ಪ್ಲಸ್ 5T: ವಿಶೇಷತೆಗಳ ಕುರಿತ ಕಂಪ್ಲಿಟ್ ಸ್ಟೋರಿ
ಈ ಮಾದರಿಯ ಆಫರ್ ಬೇರೆ ಯಾವುದೇ ಟೆಲಿಕಾಂ ಕಂಪನಿಗಳು ಇದುವರೆವಿಗೂ ನೀಡಿಲ್ಲ ಎನ್ನಲಾಗಿದೆ. ಐಡಿಯಾ ಈ ಆಫರ್ ನೀಡುವ ಸಲುವಾಗಿ ಒನ್‌ಪ್ಲಸ್ ಕಂಪನಿಯೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದು, ನೂತನವಾಗಿ ಲಾಂಚ್ ಆಗಿರುವ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಕೊಂಡವರಿಗೆ ಐಡಿಯಾ 1008 GB 4G ಡೇಟಾವನ್ನು ಉಚಿತವಾಗಿ ತ್ವರೆ ಮಾಡಲಿದೆ.

ಒನ್‌ಪ್ಲಸ್ 5T ಕೊಂಡವರಿಗೆ:
ನಿನ್ನೇ ಲಾಂಚ್ ಆಗಿರುವ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಅನ್ನು ಅಮೆಜಾನ್ ಮೂಲಕ ಕೊಂಡವರಿಗೆ ಐಡಿಯಾದಿಂದ ಉಚಿತ 1008 GB 4G ಡೇಟಾ ಆಫರ್ ದೊರೆಯಲಿದೆ. ಇದು ಒಂದು ವರ್ಷದ ಆಫರ್ ಇದಾಗಿದೆ. ಒನ್‌ಪ್ಲಸ್ 5T ಬಳಕೆದಾರರು ಒಂದು ವರ್ಷದ ಕಾಲ ಈ ಆಫರ್ ಲಾಭ ಪಡೆದುಕೊಳ್ಳಬಹುದಾಗಿದೆ.

ಈ ಮಾದರಿಯ ಆಫರ್ ಯಾರು ನೀಡಿಲ್ಲ:
ಈ ಹಿಂದೆ ಯಾರು ಸಹ ಐಡಿಯಾ ಮಾದರಿಯ ಆಫರ್ ಅನ್ನು ಬಿಡುಗಡೆ ಮಾಡಿಲ್ಲ ಎನ್ನಲಾಗಿದೆ. ಜಿಯೋ-ಏರ್‌ಟೆಲ್ ಹೆಚ್ಚು ಎಂದರೆ ನೂತನ ಸ್ಮಾರ್ಟ್‌ಫೋನ್‌ನೊಂದಿಗೆ 100GB ಡೇಟಾ ಆಫರ್ ಘೋಷಣೆ ಮಾಡುತ್ತಿದ್ದವು ಎನ್ನಲಾಗಿದೆ. ಆದರೆ ಈ ಬಾರಿ ಐಡಿಯಾ ಇದಕ್ಕೆಲ್ಲಾ ಸೆಡ್ಡು ಹೊಡೆದು ದೊಡ್ಡ ಪ್ರಮಾಣದ ಆಫರ್ ನೀಡಿದೆ.

ಫೋನ್ ಖರೀದಿಸಲು ಇದೂ ಒಂದು ಕಾರಣ:
ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಕೊಂಡವರಿಗೆ ಐಡಿಯಾದಿಂದ ದೊರೆಯುತ್ತಿರುವ ಈ ಆಫರ್ ಮೊಬೈಲ್ ಕೊಳ್ಳಲು ಒಂದು ಕಾರಣವಾಗಿದೆ ಎಂದರೆ ತಪ್ಪಾಗುವುದಿಲ್ಲ. ಒಟ್ಟಿನಲ್ಲಿ ಒಳ್ಳೆ ಫೋನಿಗೆ ಒಳ್ಳೆ ಆಫರ್ ಇದಾಗಿದೆ.

ಒನ್‌ಪ್ಲಸ್ 5T ವಿಶೇಷತೆಗಳು:
ಒನ್‌ಪ್ಲಸ್ 5T 18:9 ಅನುಪಾತದಲ್ಲಿ 6.01 ಇಂಚಿನ ಬ್ರಜಿಲ್ ಲೈಸ್ ಡಿಸ್‌ಪ್ಲೇಯನ್ನು ಹೊಂದಿದ್ದು, ಹಿಂಭಾಗದಲ್ಲಿ ಡ್ಯುಯಲ್ ಲೈನ್ಸ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದಾಗಿದೆ. ಮಾರುಕಟ್ಟೆಯಲ್ಲಿ ಇರುವ ಟಾಪ್ ಎಂಡ್ ಸ್ಮಾರ್ಟ್‌ಗಳಿಗೆ ಭರ್ಜರಿ ಸ್ಪರ್ಧೆಯನ್ನು ನೀಡಲಿದೆ ಎನ್ನಲಾಗಿದೆ.


Click it and Unblock the Notifications








