Home
ಸುದ್ದಿಜಾಲ

ಭಾಷಾಂತರಕ್ಕೆ ಎಐ ಬಳಕೆ... ಈ ಮಾಧ್ಯಮದಲ್ಲಿ ಉದ್ಯೋಗಿಗಳ ವಜಾ!

ಎಐ (AI) ಸದ್ಯದ ಮಟ್ಟಿಗೆ ಜಗತ್ತಿನಾದ್ಯಂತ ಉತ್ತಮವಾಗಿ ಪ್ರತಿಕ್ರಿಯೆ ಪಡೆಯುತ್ತಿರುವ ಟೂಲ್‌ ಆಗಿದೆ. ಈ ನಡುವೆ ಎಲ್ಲಾ ರಂಗದಲ್ಲೂ ಎಐ ಬಳಕೆ ಮಾಡಲಾಗುತ್ತಿದ್ದು, ಈ ಮೂಲಕ ಬಳಕೆದಾರರಿಗೆ ಹೊಸ ಅನುಭವ ನೀಡಲು ಕಂಪೆನಿಗಳು ಹಾತೊರೆಯುತ್ತಿವೆ. ಈ ನಡುವೆ ಎಐನಿಂದಾಗಿ ಮಾಧ್ಯಮಗಳಲ್ಲಿ ಕೆಲಸ ಮಾಡುವವರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.

ಹೌದು, ಕೆಲವು ವೆಬ್‌ಸೈಟ್‌ಗಳು ಹಾಗೂ ಮಾಧ್ಯಮ ಸಂಸ್ಥೆಗಳು (media organization) ಎಐ ಅನ್ನು ಬಳಕೆ ಮಾಡಿಕೊಂಡು ಮಾಹಿತಿ ನೀಡಲು ಮುಂದಾಗಿವೆ. ಅಂದರೆ ಎಐ ಟೂಲ್ಸ್‌ನಿಂದ ಬರೆಯಲಾದ ಮಾಹಿತಿಯನ್ನು ಅಪ್‌ಲೋಡ್‌ ಮಾಡಲಾಗುತ್ತಿದೆ. ಇದು ಸರಳ ಹಾಗೂ ವೇಗವಾದ ಕೆಲಸವಾದ ಪರಿಣಾಮ ಹಲವಾರು ಉದ್ಯೋಗಿಗಳ ಉದ್ಯೋಗಕ್ಕೆ ಕುತ್ತು ತರುತ್ತಿದೆ ಎನ್ನಲಾಗಿದೆ. ಯಾಕೆಂದರೆ ಇಲ್ಲೊಂದು ವೆಬ್‌ಸೈಟ್‌ ಸಿಬ್ಬಂದಿಗಳ ಅಂದರೆ ಕಂಟೆಂಟ್‌ ಎಡಿಟರ್ಸ್‌ಗಳ ಬದಲಾಗಿ ಎಐ ಅನ್ನೇ ಬಳಕೆ ಮಾಡುತ್ತಿದೆ. ಬನ್ನಿ ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಬರೋಣ.

ಭಾಷಾಂತರಕ್ಕೆ ಎಐ ಬಳಕೆ... ಈ ಮಾಧ್ಯಮದಲ್ಲಿ ಉದ್ಯೋಗಿಗಳ ವಜಾ!

ಜಗತ್ತಿನ ಖ್ಯಾತ ಟೆಕ್ ಬ್ಲಾಗ್ ಆಗಿರುವ ಗಿಜ್ಮೊಡೊ (Gizmodo) 2002 ರಿಂದಲೂ ತನ್ನದೇ ಆದ ರೀತಿಯಲ್ಲಿ ಜನರಿಗೆ ಟೆಕ್ನಾಲಜಿ ಸಂಬಂಧಿ ಮಾಹಿತಿಯನ್ನು ನೀಡುತ್ತಾ ಬರುತ್ತಿದೆ. ಆದರೆ ಇತ್ತೀಚಿನ ಬೆಳವಣಿಗೆಯಲ್ಲಿ ಈ ಸಂಸ್ಥೆ ಕೆಲವು ಪ್ರಮುಖ ವಿಷಯಗಳಿಗಾಗಿ ಮುನ್ನೆಲೆಗೆ ಬಂದಿದೆ. ಈ ಸಂಬಂಧ ದಿ ವರ್ಜ್ ಮಾಹಿತಿ ಪ್ರಸಾರ ಮಾಡಿದೆ. ಗಿಜ್ಮೊಡೊ ಇತ್ತೀಚೆಗೆ ತನ್ನ ಸ್ಪ್ಯಾನಿಷ್ ಭಾಷೆಯ ಸೈಟ್ ಗಿಜ್ಮೊಡೊ ಎನ್ ಎಸ್ಪಾನೊಲ್ (Gizmodo en Español) ನಲ್ಲಿ ಕೆಲಸ ಮಾಡಿದ ಕೆಲವು ಸಿಬ್ಬಂದಿಯನ್ನು ಕೈಬಿಟ್ಟು ಅವರ ಬದಲಿಗೆ ಎಐ ಬಳಕೆ ಮಾಡುತ್ತಿದೆ ಎಂದು.

ಈಗ, ಈ ವೇಳೆ ಸ್ಪ್ಯಾನಿಷ್ ಸೈಟ್‌ಗೆ (Spanish site) ಭೇಟಿ ನೀಡಿದರೆ ಅಲ್ಲಿನ ಲೇಖನಗಳಲ್ಲಿ ಒಂದು ಸಂದೇಶವನ್ನು ಗಮನಿಸಬಹುದು. ಅದರಲ್ಲಿ 'ಈ ವಿಷಯವನ್ನು ಮೂಲ ವಸ್ತುವಿನಿಂದ ಆಟೋಮ್ಯಾಟಿಕ್‌ ಆಇ ಅನುವಾದಿಸಲಾಗಿದೆ. ಯಂತ್ರ ಅನುವಾದದ ಹಿನ್ನೆಲೆ ಸ್ವಲ್ಪ ವ್ಯತ್ಯಾಸಗಳಿರಬಹುದು. ಮೂಲ ಆವೃತ್ತಿಗಾಗಿ, ಇಲ್ಲಿ ಕ್ಲಿಕ್ ಮಾಡಿ' ಎಂದು ಬರೆಯಲಾಗಿದೆ.

ಇಂಗ್ಲಿಷ್ ಲೇಖನಗಳನ್ನು ಸ್ಪ್ಯಾನಿಷ್‌ಗೆ ಪರಿವರ್ತಿಸಲು ಎಐ ಬಳಕೆ ಮಾಡಲಾಗುತ್ತಿದೆ ಎಂದು ಈ ಮೂಲಕ ತಿಳಿದುಬಂದಿದೆ. ಎಐ ನಡೆಸುತ್ತಿರುವ ಸುಧಾರಿತ ಅನುವಾದ ಸೇವೆಯನ್ನು ಬಳಸಲು ಆರಂಭಿಸಲಾಗಿದೆ ಎಂದೂ ಸಹ ಗಿಜ್ಮೊಡೊನ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ. ವಿವಿಧ ಭಾಷೆಗಳಲ್ಲಿ ತಮ್ಮ ಲೇಖನಗಳ ಆವೃತ್ತಿಗಳನ್ನು ಮಾಡುವಲ್ಲಿ ಇದು ಮೊದಲ ಹೆಜ್ಜೆ ಎಂದು ತಿಳಿಸಲಾಗಿದ್ದು, ಇದು ಹೊಸ ಓದುಗರನ್ನು ಕರೆತರುತ್ತದೆ ಎಂದಿದ್ದಾರೆ.

ಜೊತೆಗೆ ಇನ್ನು ಮುಂದೆ ಅನುವಾದಿತ ಅಂದರೆ ಟ್ರಾನ್ಸ್ಲೇಷನ್ ಮಾಡಲಾದ ಲೇಖನಗಳಲ್ಲಿ ಮಾನವ ಬರಹಗಾರರ ಹೆಸರನ್ನು ಹಾಕುವುದಿಲ್ಲ ಎಂದು ತಿಳಿಸಿದ್ದಾರೆ. ಈ ಸಂಬಂಧ
ಗಿಜ್ಮೊಡೊ ಕಾರ್ಮಿಕರನ್ನು ಪ್ರತಿನಿಧಿಸುವ GMG ಯೂನಿಯನ್ ಎಂಬ ಗುಂಪು ತಮ್ಮ ಆಲೋಚನೆಗಳನ್ನು ಶೇರ್‌ ಮಾಡಿಕೊಂಡಿದ್ದು, ತಮ್ಮ ನುರಿತ ಪತ್ರಕರ್ತರನ್ನು ಎಐ ನೊಂದಿಗೆ ಬದಲಾಯಿಸಿದ್ದಕ್ಕಾಗಿ ಗಿಜ್ಮೊಡೊ ವಿರುದ್ಧ ಕಿಡಿಕಾರಿದ್ದಾರೆ.

ಆ ಲೇಖನಗಳಲ್ಲಿ ಮಾನವರ ಹಸ್ತಕ್ಷೇಪ ಇರದ ಕಾರಣ ಅವು ಖಂಡಿತವಾಗಿ ಉತ್ತಮವಾಗಿಲ್ಲ ಎಂದು ಹೇಳಿದೆ. ಅಷ್ಟೇ ಅಲ್ಲದೆ ಎಐ ಹಿನ್ನೆಲೆ ಕೆಲಸ ಕಳೆದುಕೊಳ್ಳುವ ಬಗ್ಗೆ ಕಾರ್ಮಿಕರು ದೂರು ನೀಡುತ್ತಿರುವುದು ಇದೇ ಮೊದಲಲ್ಲ. ಅನೇಕ ಕಂಪನಿಗಳು ಹಣವನ್ನು ಉಳಿಸಲು ಮತ್ತು ವೇಗವಾಗಿ ಕೆಲಸ ಮಾಡಲು ಎಐ ಅನ್ನು ಬಳಕೆ ಮಾಡುತ್ತಾ ಬರುತ್ತಿವೆ. ಜೊತೆಗೆ ಕೆಲವು ಕಂಪೆನಿಗಳು ಎಐ ಬಳಕೆ ಮಾಡಲು ಚಿಂತನೆ ಸಹ ನಡೆಸಿವೆ.

ಇಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಎಐ ಪರಿಪೂರ್ಣವಾಗಿಲ್ಲ. ಸಾಕಷ್ಟು ಮಾನವ ಮೇಲ್ವಿಚಾರಣೆಯಿಲ್ಲದೆ ಎಐ ಅನ್ನು ಬಳಕೆ ಮಾಡಿದರೆ ಹಲವಾರು ಸಮಸ್ಯೆಗಳು ಎದುರಿಸಿದಂತೆ. ಈ ಮೂಲಕ ಎಐ ಬಳಕೆ ಮಾಡಿ ಉದ್ಯೋಗಿಗಳನ್ನು ವಜಾ ಮಾಡುವುದು ಮುಂದಿನ ದಿನಗಳಲ್ಲಿ ಹಲವರಿಗೆ ಸವಾಲಾಗಿ ಪರಿಣಮಿಸಲಿದೆ ಎನ್ನಲಾಗಿದೆ. ಈ ಕಾರಣಕ್ಕೆ ಕೆಲವರು ಎಐ ಹಸ್ತಕ್ಷೇಪ ಇಲ್ಲದೆ ಕಡೆ ಉದ್ಯೋಗ ಹುಡುಕಲು ಮುಂದಾಗಿದ್ದಾರೆ.

ಭಾಷಾಂತರಕ್ಕೆ ಎಐ ಬಳಕೆ... ಈ ಮಾಧ್ಯಮದಲ್ಲಿ ಉದ್ಯೋಗಿಗಳ ವಜಾ!

ಎಐ ಮಾನವ ಕೆಲಸಗಾರರ ಉದ್ಯೋಗಗಳನ್ನು ಕಸಿದುಕೊಳ್ಳುತ್ತದೆಯೇ? ಎಂದು ಚಾಟ್‌ಜಿಪಿಟಿಗೆ ಪ್ರಶ್ನೆ ಮಾಡಿದ್ರೆ, 'ಉದ್ಯೋಗಗಳ ಮೇಲೆ ಎಐ ಪ್ರಭಾವವು ಒಂದು ಸಂಕೀರ್ಣ ಮತ್ತು ಚರ್ಚೆಯ ವಿಷಯವಾಗಿದೆ. ಎಐ ಕೆಲವು ಕಾರ್ಯಗಳು ಮತ್ತು ಉದ್ಯೋಗಗಳನ್ನು ಸ್ವಯಂಚಾಲಿತಗೊಳಿಸುವ ಸಾಮರ್ಥ್ಯವನ್ನು ಹೊಂದಿದ್ದರೂ, ಇದು ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಮತ್ತು ಅನೇಕ ಕೈಗಾರಿಕೆಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ' ಎಂದು ತಿಳಿಸಿದೆ.

Best Mobiles in India

English summary
Some websites and media organizations are using AI to provide information. That means uploading information written by AI tools.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+