ಗಿಜ್ಮೋರ್‌ನ ವೋಗ್ ವಾಚ್ ಅನಾವರಣ: ಅತ್ಯುತ್ತಮ ಫೀಚರ್ಸ್, ಬೆಲೆ ಅಗ್ಗ!
ಪ್ರಮುಖ ಸ್ಮಾರ್ಟ್ ಆಕ್ಸೆಸರೀಸ್ ಬ್ರಾಂಡ್‌ಗಳಲ್ಲಿ ಒಂದಾಗಿರುವ ಗಿಜ್ಮೋರ್ ಹೊಸ ಸ್ಮಾರ್ಟ್‌ವಾಚ್ ಅನ್ನು ಅನಾವರಣ ಮಾಡಿದ್ದು, ಈ ವಾಚ್ ಬಜೆಟ್ ಸ್ನೇಹಿ ಬೆಲೆಯಲ್ಲಿ ಅತ್ಯುತ್ತಮ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಹಾಗೆಯೇ ಇತ್ತೀಚಿನ ಟ್ರೆಂಡ್‌ಗೆ ತಕ್ಕ ಶೈಲಿಯನ್ನು ಪಡೆದುಕೊಂಡಿದೆ.
ಹೌದು, ಸ್ಮಾರ್ಟ್‌ವಾಚ್ ವಿಭಾಗದಲ್ಲಿ ಈಗಾಗಲೇ ಹಲವಾರು ಸ್ಮಾರ್ಟ್‌ವಾಚ್‌ಗಳು ಮಾರುಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಇದೀಗ ಈ ಲಾಂಚ್ ಆಗಿರುವ ವೋಗ್ (Vogue) ಸ್ಮಾರ್ಟ್‌ವಾಚ್ ವಿಶೇಷ ಸ್ಥಾನ ಪಡೆದುಕೊಳ್ಳಲಿದೆ. ಹಾಗೆಯೇ ಈ ವಾಚ್ ಜಿಪಿಎಸ್ ಫೀಚರ್ಸ್, ಹೃದಯ ಬಡಿತ ಟ್ರ್ಯಾಕಿಂಗ್, SpO2 ಸೇರಿದಂತೆ ಇನ್ನಿತರೆ ವಿಶೇಷ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಹಾಗಿದ್ರೆ, ಈ ವಾಚ್‌ನ ಇನ್ನಷ್ಟು ಫೀಚರ್ಸ್ ಹಾಗೂ ಇದರ ಬೆಲೆ ಬಗ್ಗೆ ತಿಳಿಸಿಕೊಡಲಾಗಿದೆ ಓದಿರಿ.

ವೋಗ್ ಸ್ಮಾರ್ಟ್‌ವಾಚ್ ಡಿಸ್‌ಪ್ಲೇ ವಿವರ: ಈ ವೋಗ್ ಸ್ಮಾರ್ಟ್‌ವಾಚ್ 1.95 ಇಂಚಿನ ಹೆಚ್‌ಡಿ ಆಲ್‌ವೇಸ್ ಆನ್ ಡಿಸ್‌ಪ್ಲೇ ಹೊಂದಿದ್ದು, ಇದು 100 ಕ್ಕೂ ಹೆಚ್ಚು ವಾಚ್ ಫೇಸ್‌ಗಳ ಆಯ್ಕೆಯನ್ನು ಪಡೆದುಕೊಂಡಿದೆ. ಜೊತೆಗೆ ಮೆನುವನ್ನು ನ್ಯಾವಿಗೇಟ್ ಮಾಡಲು ಸಹಾಯಕವಾಗುವಂತೆ ರೊಟೇಟಿಂಗ್ ಡಯಲ್ ಆಯ್ಕೆಯನ್ನು ಪಡೆದುಕೊಂಡಿದೆ. ಹಾಗೆಯೇ 600 Nits ಬ್ರೈಟ್‌ನೆಸ್ ಪಡೆದುಕೊಂಡಿದೆ.
ವೋಗ್ ಸ್ಮಾರ್ಟ್‌ವಾಚ್ ಪ್ರಮುಖ ಫೀಚರ್ಸ್: ಇನ್ನು ಈ ಗಿಜ್ಮೋರ್ ವೋಗ್ ವಾಚ್ ಶಾರ್ಟ್‌ಕಟ್ ಮೆನುಗಾಗಿ ಸ್ಪ್ಲಿಟ್ ಸ್ಕ್ರೀನ್ ವೀಕ್ಷಣೆಯನ್ನು ಬೆಂಬಲಿಸಲಿದ್ದು, ಇದರೊಂದಿಗೆ ಎರಡು ಮೀಸಲಾದ ಬಟನ್‌ಗಳನ್ನು ಹೊಂದಿದೆ. ಇವುಗಳ ಮೂಲಕ ಪವರ್ ಆನ್ ಮತ್ತು ಆಫ್ ಮಾಡಬಹುದಾಗಿದೆ ಜೊತೆಗೆ ಕೊನೆಯದಾಗಿ ಬಳಸಿದ ಆಪ್ ಓಪನ್ ಮಾಡಲು ಇವು ಸಹಕಾರಿಯಾಗಿವೆ.
ಇನ್ನು ಈ ವಾಚ್ ಜಿಪಿಎಸ್ ಸೌಲಭ್ಯ ಹೊಂದಿದ್ದು, ನಿಮ್ಮ ದೈನಂದಿನ ಚಟುವಟಿಕೆಯನ್ನು ಟ್ರ್ಯಾಕ್ ಮಾಡುತ್ತದೆ. ಜೊತೆಗೆ ವಿಫಿಟ್ ಮೊಬೈಲ್ ಆಪ್ ಮೂಲಕ ಚಟುವಟಿಕೆಯನ್ನು ಟ್ರ್ಯಾಕ್ ಮಾಡಲು ಮತ್ತು ಶೇರ್ ಮಾಡಿಕೊಳ್ಳುವ ಈ ವಾಚ್ ಅನುವು ಮಾಡಿಕೊಡುತ್ತದೆ. ಇನ್ನುಳಿದಂತೆ ಹೃದಯ ಬಡಿತ ಮಾನಿಟರಿಂಗ್ ಸೆನ್ಸರ್, SpO2 ಸೆನ್ಸರ್, ಮಹಿಳೆಯರಿಗೆ ಸಂಬಂಧಿಸಿದ ಆರೋಗ್ಯ ಸಂಬಂಧಿ ಮಾಹಿತಿ ಮತ್ತು ನಿದ್ರೆಯ ಟ್ರ್ಯಾಕಿಂಗ್ ಸೇರಿದಂತೆ ಇನ್ನಿತರೆ ಮಾಹಿತಿ ನೀಡುವ ಫೀಚರ್ಸ್‌ಗಳನ್ನು ಈ ವಾಚ್ ಪಡೆದುಕೊಂಡಿದೆ.

ಇದರೊಂದಿಗೆ ಈ ಗಿಜ್ಮೋರ್ ವಾಚ್ ಕೃತಕ ಬುದ್ಧಿಮತ್ತೆ (AI) ವಾಯ್ಸ್ ಅಸಿಸ್ಟೆಂಟ್ ಸೌಲಭ್ಯ ಹೊಂದಿದ್ದು, ವಾಚ್‌ನಲ್ಲಿ ಎಲ್ಲಾ ಕಾರ್ಯವನ್ನು ಈ ಮೂಲಕ ನಿಯಂತ್ರಣ ಮಾಡಬಹುದಾಗಿದೆ. ಇದರ ಜೊತೆ ಈ ವಾಚ್ IP67 ರೇಟಿಂಗ್ ಹೊಂದಿದ್ದು, ಎಲ್ಲಾ ಸಮಯದಲ್ಲೂ ಅಂದರೆ ಮಳೆ ಬಿಸಿಲೆನ್ನದೆ ಬಳಕೆ ಮಾಡಬಹುದಾಗಿದೆ. ಹಾಗೆಯೇ ಆಕರ್ಷಕ ಫೀಚರ್ಸ್ ಇರುವ ಈ ವಾಚ್ ಅನ್ನು ಮುಂದಿನ 12 ತಿಂಗಳಲ್ಲಿ ಸುಮಾರು 1 ಮಿಲಿಯನ್ ನಷ್ಟು ತಯಾರಿಸುವ ಆಲೋಚನೆಯಲ್ಲಿ ಕಂಪೆನಿ ಇದೆ.
ವೋಗ್ ಸ್ಮಾರ್ಟ್‌ವಾಚ್ ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ: ಈ ಹೊಸ ಸ್ಮಾರ್ಟ್‌ವಾಚ್ 10 ಗಂಟೆಗಳವರೆಗೆ ಬ್ಯಾಕಪ್ ನೀಡಲಿದೆ. ಹಾಗೆಯೇ ಇದು ವಾಯರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಎಂದು ಕಂಪೆನಿ ದೃಢಪಡಿಸಿದೆ. ಇನ್ನುಳಿದಂತೆ ಗಿಜ್ಮೋರ್ ವೋಗ್ 5.1 ಬ್ಲೂಟೂತ್ ಆವೃತ್ತಿ ಹೊಂದಿದ್ದು, ಈ ಮೂಲಕ ಉತ್ತಮ ಕನೆಕ್ಟಿವಿಟಿ ಆಯ್ಕೆ ಪಡೆದುಕೊಂಡಿದೆ.

ವೋಗ್ ಸ್ಮಾರ್ಟ್‌ವಾಚ್ ಬೆಲೆ ಹಾಗೂ ಲಭ್ಯತೆ: ವೋಗ್ ಸ್ಮಾರ್ಟ್‌ವಾಚ್‌ಗೆ ಭಾರತದಲ್ಲಿ 1,999 ರೂ.ಗಳ ಬೆಲೆ ನಿಗದಿ ಮಾಡಲಾಗಿದ್ದು, ಇದನ್ನು ನೀವು ಆನ್‌ಲೈನ್ ಮೂಲಕ ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ಈ ಸ್ಮಾರ್ಟ್‌ವಾಚ್ ಕಪ್ಪು, ಕಿತ್ತಳೆ ಮತ್ತು ಬಿಳಿಯ ಮೂರು ಬಣ್ಣದ ಆಯ್ಕೆಗಳಲ್ಲಿ ಕಂಡುಬಂದಿದೆ.


Click it and Unblock the Notifications








