Home
ಸುದ್ದಿಜಾಲ

ಈ ಸಮಯದವರೆಗೆ ಬಳಕೆ ಮಾಡದಿದ್ರೆ ನಿಮ್ಮ ಜಿಮೇಲ್‌ ಖಾತೆ ನಿಷ್ಕ್ರಿಯ!

ಇತ್ತೀಚೆಗೆ ಜಿಮೇಲ್‌ನಲ್ಲಿ ಭಾರೀ ಬೆಳವಣಿಗೆಗಳು ಕಂಡುಬರುತ್ತಿವೆ. ಕೆಲವು ದಿನಗಳಿಂದ ಈ ಪ್ಲಾಟ್‌ಫಾರ್ಮ್‌ನಲ್ಲಿ ಜಾಹೀರಾತುಗಳು ಕಾಣಿಸಿಕೊಳ್ಳುತ್ತಿದ್ದು, ಈ ಮೂಲಕ ಜಿಮೇಲ್‌ನಲ್ಲಿ ಗೂಗಲ್‌ ಆದಾಯ ಪಡೆಯಲು ಮುಂದಾಗಿದೆ. ಜೊತೆಗೆ ಬಳಕೆದಾರರಿಗೆ ಚಂದಾದಾರಿಕೆ ಸೇವೆಯನ್ನೂ ಸಹ ನೀಡಲು ಸಜ್ಜಾಗಿದೆ ಎನ್ನಲಾಗಿದೆ. ಈ ನಡುವೆ ಜಿಮೇಲ್ ಬಳಕೆದಾರರು ಶಾಕ್‌ ಆಗುವ ಸುದ್ದಿಯೊಂದು ಹೊರಬಿದ್ದಿದೆ.

ಹೌದು, ಸ್ಮಾರ್ಟ್‌ಫೋನ್‌ ಬಳಕೆ ಮಾಡಲು, ಯಾವುದಾದರೂ ಕೆಲಸಕ್ಕೆ ಅರ್ಜಿ ಸಲ್ಲಿಕೆ ಮಾಡಲು, ಆನ್‌ಲೈನ್‌ನಲ್ಲಿ ಸೇವೆ ಪಡೆದುಕೊಳ್ಳಲು ಜಿಮೇಲ್‌ ಅನಿವಾರ್ಯ. ಈ ಕಾರಣಕ್ಕಾಗಿಯೇ ಎಲ್ಲರೂ ಜಿಮೇಲ್‌ ಖಾತೆ ಹೊಂದಿರುವುದು ಕಡ್ಡಾಯವಾಗಿದೆ. ಆದರೆ, ಇನ್ಮುಂದೆ ಈ ಸಮಯದಿಂದ ಬಳಕೆ ಮಾಡದ ಜಿಮೇಲ್‌ ಖಾತೆಯನ್ನು ಅಳಿಸಿಹಾಕಲು ಕಂಪೆನಿ ಮುಂದಾಗಿದೆ. ಹಾಗಿದ್ರೆ, ಜಿಮೇಲ್‌ನಲ್ಲಿ ಆಗುತ್ತಿರುವ ಹೊಸ ಬದಲಾವಣೆ ಏನು?, ಇದರಿಂದ ಯಾರಿಗೆಲ್ಲಾ ನಷ್ಟ ಎಂಬಿತ್ಯಾದಿ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಈ ಸಮಯದವರೆಗೆ ಬಳಕೆ ಮಾಡದಿದ್ರೆ ನಿಮ್ಮ ಜಿಮೇಲ್‌ ಖಾತೆ ನಿಷ್ಕ್ರಿಯ!

ಈ ಸಮಯದಿಂದ ಜಿಮೇಲ್‌ ಬಳಕೆ ಮಾಡುತ್ತಿಲ್ಲ ಎಂದಾದ್ರೆ ಖಾತೆ ನಿಷ್ಕ್ರಿಯ: ನೀವು ಜಿಮೇಲ್ ಖಾತೆಯನ್ನು ಹೊಂದಿದ್ದರೂ ಸಹ ಎರಡು ವರ್ಷಗಳಿಗೂ ಅಧಿಕ ಕಾಲ ಅದನ್ನು ಬಳಕೆ ಮಾಡದೆ ಇದ್ದರೆ. ಅಂದರೆ ಲಾಗಿನ್‌ ಆಗದೆ ಇದ್ದರೆ ಆ ಖಾತೆಗಳನ್ನು ನಿಷ್ಕ್ರಿಯ ಮಾಡಲು ಗೂಗಲ್‌ ಮುಂದಾಗಿದೆ. ಈ ಮೂಲಕ ನೀವು ಅಗತ್ಯ ಇದೆ ಎಂದು ಯಾವಾಗಲಾದರೊಮ್ಮೆ ಅದನ್ನು ಓಪನ್‌ ಮಾಡಲು ಮುಂದಾದರೆ ಅದು ಖಂಡಿತಾ ಓಪನ್‌ ಆಗುವುದಿಲ್ಲ.

ನಿಷ್ಕ್ರಿಯ ಖಾತೆಗಳಿಗಾಗಿ ಗೂಗಲ್‌ ತನ್ನ ನೀತಿಗಳಿಗೆ ನವೀಕರಣವನ್ನು ತಂದಿದ್ದು, ಬಳಕೆದಾರರು ಕನಿಷ್ಠ 24 ತಿಂಗಳಿಗೊಮ್ಮೆ ಹಳೆಯ ಗೂಗಲ್‌ ಖಾತೆಗಳನ್ನು ಲಾಗಿನ್ ಮಾಡಲು ಮತ್ತು ಪರಿಶೀಲಿಸಲು ತಿಳಿಸಿದೆ. ಈ ಮೂಲಕ ಖಾತೆ ನಿಷ್ಕ್ರಿಯ ಆಗದಂತೆ ನೋಡಿಕೊಳ್ಳಬಹುದು. ಅದಾಗ್ಯೂ ಏನಾದರೂ ಆಗಲಿ ಎಂದು ಬಿಟ್ಟರೆ ನಿಮಗೆ ನಷ್ಟ. ಈ ಹಿಂದೆ ಎರಡು ವರ್ಷಗಳಿಂದ ಕಾರ್ಯನಿರ್ವಹಿಸದ ಖಾತೆಗಳಲ್ಲಿ ಸಂಗ್ರಹವಾಗಿರುವ ಡೇಟಾವನ್ನು ಅಳಿಸಿಹಾಕಬಹುದು ಎಂಬ ನೀತಿಯನ್ನು ಗೂಗಲ್‌ ಹೊಂದಿತ್ತು. ಆದರೀಗ ಸಂಪೂರ್ಣವಾಗಿ ಖಾತೆಯನ್ನೇ ಅಳಿಸಲಿದೆ.

ಈ ಸಮಯದವರೆಗೆ ಬಳಕೆ ಮಾಡದಿದ್ರೆ ನಿಮ್ಮ ಜಿಮೇಲ್‌ ಖಾತೆ ನಿಷ್ಕ್ರಿಯ!
ಈ ಸಂಬಂಧ ಗೂಗಲ್‌ ಬ್ಲಾಗ್‌ಪೋಸ್ಟ್‌ನಲ್ಲಿ ಮಾಹಿತಿ ನೀಡಿಲಾಗಿದ್ದು, 'ನಾವು ಗೂಗಲ್‌ ಖಾತೆಗಳಿಗಾಗಿ ನಮ್ಮ ನಿಷ್ಕ್ರಿಯತೆಯ ನೀತಿಯನ್ನು 2 ವರ್ಷಗಳವರೆಗೆ ನವೀಕರಿಸುತ್ತಿದ್ದೇವೆ. ಈ ವರ್ಷದ ನಂತರ ಗೂಗಲ್ ಖಾತೆಯನ್ನು ಕನಿಷ್ಠ 2 ವರ್ಷಗಳವರೆಗೆ ಬಳಕೆ ಮಾಡಿಲ್ಲ ಎಂದಾದರೆ ಅಥವಾ ಸೈನ್ ಇನ್ ಮಾಡದಿದ್ದರೆ ನಾವು ಖಾತೆಯನ್ನು ಮತ್ತು ಅದರಲ್ಲಿ ಇರುವ ಯಾವುದೇ ಮಾಹಿತಿಯನ್ನು ಅಳಿಸುತ್ತೇವೆ' ಎಂದು ತಿಳಿಸಿದೆ.

ಎಂದಿನಿಂದ ಈ ಜಾರಿ: ಈ ಹೊಸ ನೀತಿಯು ಈ ವರ್ಷದ ಅಂತ್ಯದ ವರೆಗೂ ಜಾರಿಗೆ ಬರುವುದಿಲ್ಲ ಎನ್ನಲಾಗಿದೆ.ಆದರೆ, ಡಿಸೆಂಬರ್‌ ನಂತರ ಗೂಗಲ್ ಈ ಸಂಬಂಧ ಮಾಹಿತಿ ನೀಡಲಿದ್ದು, ಎಂದಿನಿಂದ ಈ ನಿಯಮ ಜಾರಿಯಾಗಲಿದೆ ಎಂದು ತಿಳಿಸಲಿದೆ. ಈ ಕಾರಣಕ್ಕಾಗಿ ಈವರೆಗೂ ನಿಮ್ಮ ಖಾತೆಗೆ ಲಾಗಿನ್‌ ಆಗಿಲ್ಲ ಅಥವಾ ಬಳಕೆ ಮಾಡುತ್ತಿಲ್ಲ ಎಂದಾದರೆ ಈಗಲೇ ಲಾಗಿನ್‌ ಆಗಿ. ಅದರಲ್ಲೂ ಒಂದೇ ಬಾರಿಗೆ ಹಲವು ಖಾತೆಗಳಿಗೆ ಲಾಗಿನ್‌ ಆಗುವ ಅವಕಾಶ ಸಹ ಇದೆ.

ಇನ್ನು ಈ ಅಳಿಸುವಿಕೆ ಪ್ರಕ್ರಿಯೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವ ಬಗ್ಗೆ ಹೆಚ್ಚಿನ ವಿವರ ಲಭ್ಯ ಆಗಿಲ್ಲ. ಆದರೆ, ಈ ರೀತಿ ಏನಾದರೂ ಆದರೆ ಮತ್ತೆ ಆ ಜಿಮೇಲ್ ಖಾತೆಯನ್ನು ಬಳಕೆ ಮಾಡಲು ಸಾಧ್ಯವಿಲ್ಲ ಎನ್ನುವ ಮಾಹಿತಿ ತಿಳಿದುಬಂದಿದೆ. ಇದರಲ್ಲಿ ಇಮೇಲ್‌ಗಳನ್ನು ಓದುವುದು ಅಥವಾ ಕಳುಹಿಸುವುದು, ಗೂಗಲ್‌ ಡ್ರೈವ್ ಅನ್ನು ಬಳಸುವುದು, ಯೂಟ್ಯೂಬ್‌ ವಿಡಿಯೋ ವೀಕ್ಷಿಸುವುದು, ಪ್ಲೇ ಸ್ಟೋರ್‌ನಿಂದ ನಿಂದ ಆಪ್‌ ಡೌನ್‌ಲೋಡ್ ಮಾಡುವುದು ಸೇರಿದಂತೆ ಅಗತ್ಯ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.

ಈ ಸಮಯದವರೆಗೆ ಬಳಕೆ ಮಾಡದಿದ್ರೆ ನಿಮ್ಮ ಜಿಮೇಲ್‌ ಖಾತೆ ನಿಷ್ಕ್ರಿಯ!

ವಿಷಯ ಏನೆಂದರೆ ಗೂಗಲ್‌ ಒನ್‌ಗೆ ನೀವು ಚಂದಾದಾರರಾಗಿದ್ದೀರಿ ಎಂದಾದರೆ ನೀವು ಜಿಮೇಲ್‌ನಲ್ಲಿ ಸಕ್ರಿಯವಾಗಿದ್ದೀರಿ ಎಂದರ್ಥ. ಆದರೆ, ಇದನ್ನು ಬಿಟ್ಟು ನೀವು ಪರ್ಯಾಯ ಖಾತೆಗಳಿಗೆ ಜಿಮೇಲ್ ಬಳಕೆ ಮಾಡಿಕೊಂಡು ಸಕ್ರಿಯವಾಗಿದ್ದೇವೆ ಎಂದು ಹೇಳಿದರೆ ಗೂಗಲ್‌ ಈ ವಾದವನ್ನು ಒಪ್ಪುವುದಿಲ್ಲವಂತೆ. ಇನ್ನು ಈ ರೀತಿಯ ಖಾತೆಗೆ ಬಹು ಅಧಿಸೂಚನೆಗಳನ್ನು ಕಳುಹಿಸಲು ಕಂಪನಿಯು ಯೋಜಿಸಿದ್ದು, ಬಳಕೆದಾರರು ಎಚ್ಚೆತ್ತುಕೊಳ್ಳಲು ಸಹಾಯ ಮಾಡಲಿದೆ.

Best Mobiles in India

English summary
Even if you have a Gmail account, if you haven't used it for more than two years, Google has decided to deactivate those accounts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+