ಭಾರತದಲ್ಲಿ Gmail ಸ್ಥಗಿತ: ಇಮೇಲ್ ಕಳುಹಿಸಲು, ಸ್ವೀಕರಿಸಲು ಆಗುತ್ತಿಲ್ಲ!

|

ಜನಪ್ರಿಯ ಗೂಗಲ್ ಸಂಸ್ಥೆಯ ಪ್ರಮುಖ ಸೇವೆಗಳಲ್ಲಿ ಒಂದಾದ ಜಿ-ಮೇಲ್ ದೇಶಾದ್ಯಂತ ಡೌನ್‌ ಆಗಿದೆ ಎಂದು ವರದಿಯಾಗಿದೆ. ದೇಶದ ಕೆಲವು ಪ್ರದೇಶಗಳಲ್ಲಿ ಜಿ-ಮೇಲ್ ಸೇವೆಯು ಸ್ಥಗಿತಗೊಂಡಿದೆ. 14 ಪ್ರತಿಶತದಷ್ಟು ಬಳಕೆದಾರರು ಜಿ-ಮೇಲ್ ಲಾಗಿನ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಡೌನ್ ಡಿಟೆಕ್ಟರ್ ವೆಬ್‌ಸೈಟ್ ಮಾಹಿತಿ ತಿಳಿಸಿದೆ.

ಭಾರತದಲ್ಲಿ Gmail ಸ್ಥಗಿತ: ಇಮೇಲ್ ಕಳುಹಿಸಲು, ಸ್ವೀಕರಿಸಲು ಆಗುತ್ತಿಲ್ಲ!

ಹೌದು, ಗೂಗಲ್ ಒಡೆತನದ ಜಿ-ಮೇಲ್‌ ಇಂದು ಮಧ್ಯಾಹ್ನ 3 ಗಂಟೆಯಿಂದ ಡೌನ್ ಆಗಿದೆ ಎಂದು ಕೆಲವು ಬಳಕೆದಾರರು ವರದಿ ಮಾಡಿದ್ದಾರೆ. ಜಿ-ಮೇಲ್ ಸ್ಥಗಿತ ದಿಂದಾಗಿ ಮಧ್ಯಾಹ್ನದಿಂದ ಕೆಲವು ಬಳಕೆದಾರರು ಇ-ಮೇಲ್‌ಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ ಎಂದು ಡೌನ್ ಡಿಟೆಕ್ಟರ್ ವೆಬ್‌ಸೈಟ್ ಮಾಹಿತಿಯಿಂದ ತಿಳಿದು ಬಂದಿದೆ. ಸುಮಾರು 68% ಬಳಕೆದಾರರು ವೆಬ್‌ಸೈಟ್‌ನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಾಗೆಯೇ 18% ಜನರು ಸರ್ವರ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಮತ್ತು 14% ನಷ್ಟು ಜನರು ಲಾಗಿನ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಡೌನ್ ಡಿಟೆಕ್ಟರ್ ವೆಬ್‌ಸೈಟ್ ತಿಳಿಸಿದೆ.

ಜಿ-ಮೇಲ್ ಡೌನ್‌ ಆಗಿರುವ ಬಗ್ಗೆ ಗೂಗಲ್ ಸಂಸ್ಥೆಯು ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಇನ್ನು ಟ್ವಿಟರ್‌ನಲ್ಲಿ #GmailDown ನಂತಹ ಹ್ಯಾಶ್‌ಟ್ಯಾಗ್‌ಗಳು ಮತ್ತು ಜಿ-ಮೇಲ್ ಡೌನ್‌ ಸಂಬಂಧಿಸಿದ ವಿಷಯಗಳು ಹೆಚ್ಚು ಟ್ರೆಂಡ್ ಆಗುತ್ತಿವೆ. ಜಿ-ಮೇಲ್‌ ಸೇವೆಯಲ್ಲಿ ಇಮೇಲದ ಕಳುಹಿಸುವಾಗ ಅಥವಾ ಸ್ವೀಕರಿಸುವಾಗ ಸಮಸ್ಯೆ/ವ್ಯತ್ಯಯ ಎದುರಿಸಿದ ಬಳಕೆದಾರರು ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ದೂರು ನೀಡುತ್ತಿದ್ದಾರೆ.

ಇಮೇಲ್‌ಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ, ಜಿಮೇಲ್ ಡೌನ್ ಆಗಿದೆಯೇ ಎಂದು ಬಳಕೆದಾರರು ಟ್ವಿಟ್ಟರ್ ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಹಾಗೆಯೇ ಇನ್ನೊಬ್ಬ ಬಳಕೆದಾರರು ಇಮೇಲ್‌ಗಳನ್ನು ಕಳುಹಿಸುವುದು ಅಥವಾ ಸ್ವೀಕರಿಸುವುದು ಕಳೆದ ಒಂದು ಗಂಟೆಯಿಂದ ಕಷ್ಟಕರವಾಗಿದೆ ಎಂದು ಟ್ವಿಟ್ ಮಾಡಿದ್ದಾರೆ.

ಮತ್ತೊಬ್ಬ ಬಳಕೆದಾರರು ಜಿಮೇಲ್ ಡೌನ್‌ ಆಗಿರುವುದಕ್ಕೆ 'ನಾವು ಪತ್ರಗಳನ್ನು ಸಂವಹನದ ಸಾಧನವಾಗಿ ಕಳುಹಿಸಲು ಹಿಂತಿರುಗುತ್ತಿದ್ದೇವೆ' ಎಂದು ಟ್ವಿಟ್ ಮಾಡಿದ್ದಾರೆ.

Most Read Articles
Best Mobiles in India

English summary
Gmail Down in India: Multiple Users Unable To Send Or Receive Emails.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X