ಕೊರೊನಾ ನಿಗಾಕ್ಕೆ ಸ್ಮಾರ್ಟ್‌ ಬ್ಯಾಂಡ್‌ ಅಭಿವೃದ್ಧಿ ಪಡಿಸಿದ ಮೈಸೂರಿನ ಯುವತಿ!

|

ಕೊರೊನಾ ವೈರಸ್‌ ಸಾಂಕ್ರಾಮಿಕ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದು, ಭಾರತದಲ್ಲಿಯೂ ಭೀತಿ ಮೂಡಿಸಿದೆ. ಕೋವಿಡ್‌-19 ಹರಡದಂತೆ ತಡೆಯಲು ಸರ್ಕಾರ ಲಾಕ್‌ಡೌನ್‌ ವ್ಯವಸ್ಥೆಯನ್ನು ಜಾರಿ ಮಾಡಿದ್ದು, ಸಾಮಾಜಿಕ ಅಂತರ ಕಾಪಾಡುವುದು, ಮನೆಯಲ್ಲಿ ಇರುವುದು ಅವಶ್ಯವಾಗಿದೆ. ಹಾಗೆಯೇ ಕ್ವಾರಂಟೈನ್‌ನಲ್ಲಿರುವವರ ಮೇಲೆ ನಿಗಾ ವಹಿಸುವುದಕ್ಕಾಗಿ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಆರೋಗ್ಯ ಸೇತು ಆಪ್ ಅಭಿವೃದ್ಧಿ ಪಡೆಸಿದೆ. ಈ ನಿಟ್ಟಿನಲ್ಲಿ ಮೈಸೂರಿನ ಯುವತಿಯೊಬ್ಬಳು ಕ್ವಾರಂಟೈನ್‌ ಒಳಗಾದವರನ್ನು ಟ್ರಾಕ್ ಮಾಡಲು ನ್ಯಾನೋ ಟೆಕ್ನಾಲಜಿಯ ಸ್ಮಾರ್ಟ್‌ವಾಚ್ ಕಂಡುಹಿಡಿದಿದ್ದಾಳೆ.

ಮೈಸೂರಿನ ವಿದ್ಯಾವಿಕಾಸ ಇನ್‌ಸ್ಟಿಟ್ಯೂಟ್‌

ಹೌದು, ಮೈಸೂರಿನ ವಿದ್ಯಾವಿಕಾಸ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಅಂಡ್‌ ಟೆಕ್ನಾಲಜಿಯ ಅಂತಿಮ ವರ್ಷದ ಎಲೆಕ್ಟ್ರಿಕ್‌ ಎಂಜಿನಿಯರಿಂಗ್ ವಿಭಾಗದ ಸ್ವಾತಿ ಹೆಗಡೆ‌ ಕ್ವಾರೆಂಟೈನ್‌ನಲ್ಲಿರುವವರನ್ನು ಟ್ರಾಕ್ ಮಾಡಲು ಸ್ಮಾರ್ಟ್‌ ವಾಚ್‌ ಸಂಶೋಧಿಸಿದ್ದಾರೆ. ಈ ವಾಚ್ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಯ ಆರೋಗ್ಯದ ಮಾಹಿತಿಯನ್ನು ಮತ್ತು ಚಲನವಲನವನ್ನು ನ್ಯಾನೋ ಸೆನ್ಸಾರ್ ತಂತ್ರಜ್ಞಾನದ ಮೂಲಕ ಕಂಟ್ರೋಲ್ ರೋಮ್‌ಗೆ ರವಾನೆ ಮಾಡುವ ಸೌಲಭ್ಯವನ್ನು ಪಡೆದಿದೆ.

ಕಂಟ್ರೋಲ್‌ ರೂಮ್‌ಗೆ ಮಾಹಿತಿ

ಕಂಟ್ರೋಲ್‌ ರೂಮ್‌ಗೆ ಮಾಹಿತಿ

ಕ್ವಾರೆಂಟೈನ್‌ನಲ್ಲಿರುವ ವ್ಯಕ್ತಿಗೆ ಜ್ವರ ಅಥವಾ ಉಸಿರಾಟದಲ್ಲಿ ಏನಾದರೂ ತೊಂದರೆ ಕಾಣಿಸಿಕೊಂಡರೆ ಬ್ಯಾಂಡ್‌ನಲ್ಲಿರುವ ನ್ಯಾನೋ ಸೆನ್ಸಾರ್‌ಗಳು ಅದನ್ನು ಪತ್ತೆ ಹಚ್ಚಿ ರೆಡ್‌ ಲೈಟ್‌ ಹೊರ ಸೂಸುತ್ತದೆ. ಹಾಗೆಯೇ ಆ ಮಾಹಿತಿಯು ಕಂಟ್ರೋಲ್‌ ರೂಮ್‌ಗೆ ರವಾನೆ ಆಗುತ್ತದೆ. ಈ ವ್ಯವಸ್ಥೆಯು ಆ ವ್ಯಕ್ತಿಗೆ ಕೊರೊನಾ ಸೋಂಕು ಇರುವುದನ್ನು ಪತ್ತೆ ಮಾಡಲು ನೆರವಾಗಲಿದೆ. ಈ ಬ್ಯಾಂಡ್‌ ಬ್ಲೂಟೂತ್ 5 ಆಧಾರಿತ ಟ್ರಾಕಿಂಗ್ ವ್ಯವಸ್ಥೆ ಹೊಂದಿದೆ.

ಕ್ವಾರೆಂಟೈನ್‌ ವ್ಯಕ್ತಿ ಮೇಲೆ ನಿಗಾ

ಕ್ವಾರೆಂಟೈನ್‌ ವ್ಯಕ್ತಿ ಮೇಲೆ ನಿಗಾ

ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳು ಹೊರಗಡೆ ಎಲ್ಲಿಯೂ ಓಡಾಡಬಾರದು ಈ ಅವಧಿಯಲ್ಲಿ ಅವರು ಮನೆ ಇಲ್ಲವೇ ಒಂದು ನಿಗದಿತ ಸ್ಥಳದಲ್ಲಿ ಇರಬೇಕು. ಒಂದು ವೇಳೆ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿ ಏನಾದರೂ ಮನೆಯಿಂದ ಹೊರಬಂದರೇ ಈ ಬ್ಯಾಂಡ್‌ ಕಂಟ್ರೋಲ್‌ ರೂಮ್‌ಗೆ ಮಾಹಿತಿ ರವಾನೆ ಮಾಡುತ್ತದೆ. ಈ ವ್ಯವಸ್ಥೆಯಿಂದ ಕ್ವಾರಂಟೈನ್‌ ವ್ಯಕ್ತಿಗಳ ಟ್ರಾಕ್‌ ಮಾಡಲು ಪೊಲೀಸರು ಅವರ ಮನೆಯ ಭೇಟಿ ನೀಡುವ ಸಾಧ್ಯತೆಗಳು ಕಡಿಮೆಯಾಗುತ್ತದೆ.

96 ಗಂಟೆಯ ಮಾಹಿತಿ

96 ಗಂಟೆಯ ಮಾಹಿತಿ

ಕ್ವಾರಂಟೈನ್‌ ವ್ಯಕ್ತಿಯ ಕೈನಲ್ಲೇ ಈ ಬ್ಯಾಂಡ್‌ ಅನ್ನು ಕಟ್ಟಿಕೊಂಡರೆ ಆ ವ್ಯಕ್ತಿಯ ಆರೋಗ್ಯದ ಮಾಹಿತಿಯು ಸೇರಿದಂತೆ 96 ಗಂಟೆಗಳಲ್ಲಿ ಎಲ್ಲೆಲ್ಲಿ ಓಡಾಡಿದ್ದಾನೆ. ಎನ್ನುವ ಮಾಹಿತಿಯು ಸಂಗ್ರಹವಾಗಲಿದೆ. ಹೀಗಾಗಿ ಸುಲಭವಾಗಿ ಆ ವ್ಯಕ್ತಿಯನ್ನು ಟ್ರಾಕ್ ಮಾಡಬಹುದು.

​ಬ್ಯಾಂಡ್‌ ತೆಗೆದರೂ ಮಾಹಿತಿ ರವಾನೆ

​ಬ್ಯಾಂಡ್‌ ತೆಗೆದರೂ ಮಾಹಿತಿ ರವಾನೆ

ಈ ಬ್ಯಾಂಡ್‌ ಅತ್ಯುತ್ತಮ ಸೆನ್ಸಾರ್ ಲಾಕಿಂಗ್‌ ಸಿಸ್ಟಮ್‌ ಹೊಂದಿದ್ದು, ಸುಲಭವಾಗಿ ಕೀಳಲು ಆಗದು. ಅದನ್ನು ಪೊಲೀಸರು/ಸಂಬಂಧಪಟ್ಟ ಅಧಿಕಾರಿಗಳೇ ಅನ್‌ಲಾಕ್‌ ಮಾಡಿಬೇಕು. ಅದಾಗ್ಯೂ ಈ ಬ್ಯಾಂಡ್ ಧರಿಸಿದ ಕ್ವಾರಂಟೈನ್ ವ್ಯಕ್ತಿ ಒಂದು ವೇಳೆ ಬ್ಯಾಂಡ್‌ ಅನ್ನು ತೆಗೆಯಲು ಪ್ರಯತ್ನಿಸಿದರೇ ಅಥವಾ ಕಿತ್ತರೂ ಸಹ ಆ ಮಾಹಿತಿಯೂ ಸಹ ಕಂಟ್ರೋಲ್‌ ರೂಮ್‌ಗೆ ರವಾನೆ ಆಗುತ್ತದೆ.

ಬ್ಯಾಂಡ್‌ ಬೆಲೆಯೂ ಕಡಿಮೆ

ಬ್ಯಾಂಡ್‌ ಬೆಲೆಯೂ ಕಡಿಮೆ

ಕೇವಲ 10 ದಿನಗಳ ಅವಧಿಯಲ್ಲಿ ಈ ಬ್ಯಾಂಡ್‌ ತಯಾರಿಸಿರುವುದಾಗಿ ಸ್ವಾತಿ ಹೆಗಡೆ ಹೇಳಿದ್ದಾರೆ. ಈ ಬ್ಯಾಂಡ್‌ಗೆ ಖರ್ಚು ಸಹ ಕಡಿಮೆ ಎಂದಿದ್ದಾರೆ. ಒಂದು ಬ್ಯಾಂಡ್‌ಗೆ ಸುಮಾರು 300 ರೂ. ವೆಚ್ಚವಾಗಬಹುದು ಎಂದು ಹೇಳಿದ್ದಾರೆ.

Best Mobiles in India

English summary
This band contains nanosensors designed using MEMS technology, that helps to detect the symptoms of COVID-19.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X