Home
ಸುದ್ದಿಜಾಲ

BSNLನಿಂದ ಬಂಪರ್ ಕೊಡುಗೆ : ಪ್ರತಿದಿನ 2.2GB ಡೇಟಾ ಉಚಿತ!

ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಟೆಲಿಕಾಂ ಸಂಸ್ಥೆಯು ತನ್ನ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಈಗಾಗಲೇ ಖಾಸಗಿ ಟೆಲಿಕಾಂ ಕಂಪನಿಗಳೊಂದಿಗೆ ನೇರ ಪೈಪೋಟಿಗೆ ಇಳಿದಿದೆ. ಈ ನಿಟ್ಟಿನಲ್ಲಿ ಮುಂದುವರೆದಿರುವ ಕಂಪನಿಯು ಮತ್ತೆ ತನ್ನ ಪ್ರೀಪೇಡ್‌ ಬಳಕೆದಾರರಿಗೆ ಪ್ರತಿದಿನ ಹೆಚ್ಚುವರಿಯಾಗಿ 2.2GB ಡೇಟಾವನ್ನು ಉಚಿತವಾಗಿ ನೀಡಲು ಮುಂದಾಗಿದೆ.

BSNLನಿಂದ ಬಂಪರ್ ಕೊಡುಗೆ : ಪ್ರತಿದಿನ 2.2GB ಡೇಟಾ ಉಚಿತ!

ಹೌದು, ಬಿಎಸ್‌ಎಲ್‌ಎಲ್‌ ಸಂಸ್ಥೆಯು ತನ್ನ ಪ್ರೀಡೇಡ್‌ ಬಳಕೆದಾರರಿಗೆ ಪ್ರತಿದಿನ ಹೆಚ್ಚುವರಿಯಾಗಿ 2.2GB ಉಚಿತ ಡೇಟಾವನ್ನು ನೀಡಲಾರಂಭಿಸಿದ್ದು, ಈ ಆಫರ್‌ನಲ್ಲಿ ಗ್ರಾಹಕರಿಗೆ ಅವರ ಪ್ರತಿದಿನದ ಉಚಿತ ಡೇಟಾದ ಜೊತೆಗೆ ಹೆಚ್ಚುವರಿಯಾಗಿ 2.2GB ಉಚಿತ ಡೇಟಾ ಲಭ್ಯವಾಗಲಿದೆ. ಈ ಹಿಂದೆಯು ಸಂಸ್ಥೆಯು ಎರಡು ಬಾರಿ ಈ ಕೊಡುಗೆಯನ್ನು ತನ್ನ ಬಳಕೆದಾರರಿಗೆ ಪರಿಚಯಿಸಿತ್ತು ಅದರ ಜನಪ್ರಿತೆಯ ಆಧಾರದ ಮೇಲೆ ಈಗ ಮತ್ತೆ ಹೆಚ್ಚುವರಿಯಾಗಿ ಉಚಿತ ಡೇಟಾ ನೀಡುತ್ತಿದೆ.

BSNLನಿಂದ ಬಂಪರ್ ಕೊಡುಗೆ : ಪ್ರತಿದಿನ 2.2GB ಡೇಟಾ ಉಚಿತ!

ಪ್ರತಿದಿನ ಹೆಚ್ಚುವರಿಯಾಗಿ ಉಚಿತ 2.2GB ಡೇಟಾವು ಬಿಎಸ್‌ಎನ್‌ಎಲ್‌ನ ಹೊಸ ಮತ್ತು ಎಕ್ಸಿಸ್ಟಿಂಗ್ ಪ್ರೀಪೇಡ್‌ ಬಳಕೆದಾರರಿಬ್ಬರಿಗೂ ಲಭ್ಯವಾಗಲಿದ್ದು, ಗ್ರಾಹಕರ ಪ್ರಸ್ತುತ ಉಚಿತ ಡೇಟಾದೊಂದಿಗೆ ಹೆಚ್ಚುವರಿಯಾಗಿ ಉಚಿತ 2.2GB ಡೇಟಾ ಸೀಗಲಿದೆ. ಇದು ಸೀಮಿತ ಅವಧಿಯ ಆಫರ್‌ ಆಗಿದ್ದು, ಇದೇ ಜುಲೈ 4ರಿಂದ ಆರಂಭವಾಗಿರುವ ಕೊಡುಗೆಯು ಇದೇ ಅಕ್ಟೋಬರ 1, 2019ರ ವರೆಗೂ ಮಾತ್ರ ಇರಲಿದೆ ಮತ್ತು ಆಯ್ದ ಬಿಎಸ್‌ ಎನ್‌ಎಲ್‌ ಟೆಲಿಕಾಂ ಸರ್ಕಲ್‌ನಲ್ಲಿ ಕೊಡುಗೆ ಲಭ್ಯ.

BSNLನಿಂದ ಬಂಪರ್ ಕೊಡುಗೆ : ಪ್ರತಿದಿನ 2.2GB ಡೇಟಾ ಉಚಿತ!

ಬಿಎಸ್‌ಎನ್‌ಎಲ್‌ ಪ್ರೀಪೇಡ್ ಬಳಕೆದಾರರಿಗೆ 2.2GB ಉಚಿತ ಡೇಟಾವನ್ನು ಹೆಚ್ಚುವರಿಯಾಗಿ ನೀಡುವ ಕೊಡುಗೆಯನ್ನು ಕಳೆದ ಸೆಪ್ಟಂಬರ್‌ನಲ್ಲಿ ಆರಂಭಿಸಿತ್ತು. ಅದಾದ ನಂತರ ಇದೇ ಜನವರಿ ಮತ್ತು ಮೇ ತಿಂಗಳಿನಲ್ಲಿ ಮತ್ತೆ ಹೆಚ್ಚುವರಿ ಉಚಿತ ಡೇಟಾದ ಕೊಡುಗೆಯನ್ನು ಬಳಕೆದಾರರಿಗೆ ನೀಡಿತ್ತು. ಆದರೆ ಸಂಸ್ಥೆಯು ಈಗ ಮತ್ತೊಮ್ಮೆ ಹೆಚ್ಚುವರಿ ಡೇಟಾ ಕೊಡುಗೆಯ ಪ್ರಯೋಜನವನ್ನು ಬಳಕೆದಾರರಿಗೆ ನೀಡಿದೆ.

ಬಿಎಸ್‌ಎನ್‌ಎಲ್‌ನ ಜನಪ್ರಿಯ 186ರೂ, 289ರೂ, 485ರೂ, 666ರೂ ಮತ್ತು 1,699ರೂ.ಗಳ ಪ್ರಿಪೇಡ್‌ ರೀಚಾರ್ಜ್ ಪ್ಲ್ಯಾನ್‌ಗಳ ಬಳಕೆದಾರರಿಗೂ ಹೆಚ್ಚುವರಿ ಉಚಿತ ಡೇಟಾದ ಪ್ರಯೋಜನವು ದೊರೆಯಲಿದೆ. ಹಾಗೂ ಸಂಸ್ಥೆಯ 187ರೂ, 349ರೂ, 399ರೂ ಮತ್ತು 448ರೂ.ಗಳ STV ರೀಚಾರ್ಜ್‌ ಬಳಕೆದಾರರಿಗೂ ಸಹ ಹೆಚ್ಚುವರಿ ಉಚಿತ ಡೇಟಾ ಆಫರ್‌ ಲಭ್ಯವಾಗಲಿದೆ.

ಏರ್‌ಟೆಲ್‌ನ ಹೊಸ 148ರೂ. ರೀಚಾರ್ಜ್‌ ಪ್ಯಾಕ್‌ನಲ್ಲಿ 3GB ಡೇಟಾ ಉಚಿತ!

ಏರ್‌ಟೆಲ್‌ನ ಹೊಸ 148ರೂ. ರೀಚಾರ್ಜ್‌ ಪ್ಯಾಕ್‌ನಲ್ಲಿ 3GB ಡೇಟಾ ಉಚಿತ!


ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಸದ್ಯ ಟೆಲಿಕಾಂ ಕಂಪನಿಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದ್ದು, ಜಿಯೋ ಸಂಸ್ಥೆಯು ಭರ್ಜರಿ ಆಫರ್‌ಗಳನ್ನು ಮುಂದುವರಿಸುತ್ತಲೆ ಸಾಗಿದೆ. ಈ ನಿಟ್ಟಿನಲ್ಲಿ ವೊಡಾಫೋನ್‌, ಭಾರ್ತಿ ಏರ್‌ಟೆಲ್‌ ಹಾಗೂ ಬಿಎಸ್‌ಎನ್‌ಎಲ್‌ ಕಂಪನಿಗಳು ಬಳಕೆದಾರರಿಗಾಗಿ ಅತ್ಯುತ್ತಮ ರೀಚಾರ್ಜ್‌ ಆಫರ್‌ಗಳನ್ನು ಪರಿಚಯಿಸುತ್ತಲಿದ್ದು, ಅವುಗಳಲ್ಲಿ ಏರ್‌ಟೆಲ್‌ ಈಗ ಮತ್ತೊಂದು ಪ್ರೀಪೇಡ್‌ ಪ್ಲ್ಯಾನ ಬಿಡುಗಡೆ ಮಾಡಿದೆ.

ಹೌದು, ಏರ್‌ಟೆಲ್‌ ಈಗಾಗಲೇ ಹಲವು ಬೆಸ್ಟ್‌ ರೀಚಾರ್ಜ್‌ ಕೊಡುಗೆ ಗ್ರಾಹಕರಿಗೆ ಪರಿಚಯಿಸಿದ್ದು, ಈಗ 148ರೂ.ಗಳ ಹೊಸ ಪ್ರೀಪೇಡ್‌ ರೀಚಾರ್ಜ್‌ ಪ್ಲ್ಯಾನ್‌ ಅನ್ನು ಲಾಂಚ್‌ ಮಾಡಿದೆ. ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ 3GB ಡೇಟಾ, ಅನಿಯಮಿತ ಉಚಿತ ಕರೆಗಳು, ಉಚಿತ ಎಸ್‌ಎಮ್‌ಎಸ್‌ ಹಾಗೂ ಏರ್‌ಟೆಲ್‌ ಟಿವಿ ಚಂದಾದಾರಿಕೆಯ ಸೌಲಭ್ಯದ ಪ್ರಯೋಜನಗಳು ದೊರೆಯಲಿವೆ. ಹಾಗಾದರೇ ಏರ್‌ಟೆಲ್‌ನ ಹೊಸ 148ರೂ ಪ್ರೀಪೇಡ್‌ ಪ್ಯಾಕ್‌ ವಿಶೇಷತೆಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಅನಿಯಮಿತ ಉಚಿತ ಕರೆಗಳು

ಅನಿಯಮಿತ ಉಚಿತ ಕರೆಗಳು

ಏರ್‌ಟೆಲ್‌ ಸಂಸ್ಥೆಯು ಹೊಸದಾಗಿ ಬಿಡುಗಡೆ ಮಾಡಿರುವ 148ರೂ.ಗಳ ಪ್ರೀಪೇಡ್‌ ಪ್ಲ್ಯಾನ್‌ನಲ್ಲಿ ಗ್ರಾಹಕರು ಅನಿಯಮಿತ ಉಚಿತ ಲೋಕಲ್‌ ಮತ್ತು ಎಸ್‌ಟಿಡಿ ಕರೆಗಳನ್ನು ಮಾಡಬಹುದಾಗಿದೆ. ಇದರೊಂದಿಗೆ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳನ್ನು ಸಹ ಕಳುಹಿಸಬಹುದಾದ ಪ್ರಯೋಜನಗಳು ಗ್ರಾಹಕರಿಗೆ ದೊರೆಯಲಿವೆ.

ಉಚಿತ ಡೇಟಾ ಮತ್ತು ವ್ಯಾಲಿಡಿಟಿ

ಉಚಿತ ಡೇಟಾ ಮತ್ತು ವ್ಯಾಲಿಡಿಟಿ

ಏರ್‌ಟೆಲ್‌ನ ಹೊಸ 148ರೂ.ಗಳ ಪ್ರೀಪೇಡ್‌ ಕೊಡುಗೆಯು 28 ದಿನಗಳ ಅವಧಿಯ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಹಾಗೆಯೇ ಈ ಪ್ಯಾಕ್‌ 28 ದಿನಗಳಿಗೆ ಕೇವಲ 3GB ಉಚಿತ ಡೇಟಾ ಆಯ್ಕೆಯನ್ನು ಹೊಂದಿದ್ದು, ಡೇಟಾವನ್ನು ಹೆಚ್ಚಾಗಿ ಬಳಸದ ಮತ್ತು ಹೆಚ್ಚು ಕರೆಗಳನ್ನು ಮಾಡುವ ಗ್ರಾಹಕರಿಗೆ ಈ ರೀಚಾರ್ಜ್ ಬೆಸ್ಟ್‌ ಎನಿಸಲಿದೆ. ಅನಿಯಮಿತ ಕರೆಗಳ ಸೌಲಬ್ಯ ಉಪಯುಕ್ತ ಎನಿಸಲಿದೆ.

ವಿಶೇಷ ಸೌಲಭ್ಯ

ವಿಶೇಷ ಸೌಲಭ್ಯ

ಏರ್‌ಟೆಲ್‌ನ ಹೊಸ ಪ್ರೀಪೇಡ್‌ ರೀಚಾರ್ಜ್‌ ಪ್ಯಾಕ್‌ ಉಚಿತ ಕರೆ, ಡೇಟಾ ಮತ್ತು ಎಸ್‌ಎಮ್‌ಎಸ್ ಪ್ರಯೋಜನಗಳೊಂದಿಗೆ ಏರ್‌ಟೆಲ್‌ ಟಿವಿ ಮತ್ತು ಏರ್‌ಟೆಲ್‌ Wynk ಮ್ಯೂಸಿಕ್‌ ಚಂದಾದಾರತ್ವ ಲಭ್ಯವಾಗಲಿದೆ. ಗ್ರಾಹಕರು ಏರ್‌ಟೆಲ್‌ ಟಿವಿ ಮತ್ತು Wynk ಮ್ಯೂಸಿಕ್‌ ಆಕ್ಸಸ್‌ ಮಾಡಬಹುದಾಗಿದ್ದು, ಏರ್‌ಟೆಲ್‌ ಟಿವಿಯನಲ್ಲಿ ಸುಮಾರು 350ಕ್ಕೂ ಹೆಚ್ಚು ಚಾನಲ್‌ಗಳ ಆಯ್ಕೆ ಇದೆ.

ವಾರ್ಷಿಕ ವ್ಯಾಲಿಡಿಟಿಯ ಪ್ಲ್ಯಾನ್‌

ವಾರ್ಷಿಕ ವ್ಯಾಲಿಡಿಟಿಯ ಪ್ಲ್ಯಾನ್‌

ಹೆಚ್ಚು ವ್ಯಾಲಿಡಿಟಿ ಬಯಸುವ ಗ್ರಾಹಕರಿಗಾಗಿ ಏರ್‌ಟೆಲ್‌ ಇತ್ತೀಚಿಗೆ 1699ರೂ.ಗಳ ಪ್ರೀಪೇಡ್‌ ಪ್ಲ್ಯಾನ್‌ ಅನ್ನು ಸಹ ಬಿಡುಗಡೆ ಮಾಡಿದೆ. ಈ ಪ್ಲ್ಯಾನ್‌ನಲ್ಲಿ ಗ್ರಾಹಕರಿಗೆ ಒಂದು ವರ್ಷದ ವ್ಯಾಲಿಡಿಟಿಯೊಂದಿಗೆ ಅನಿಯಮಿತ ಉಚಿತ ಕರೆಗಳು, ಪ್ರತಿದಿನ 100 ಉಚಿತ ಎಸ್ಎಮ್‌ಎಸ್‌ಗಳು, ಹಾಗೂ ಪ್ರತಿದಿನ 1.4GB ಉಚಿತ ಡೇಟಾ ಸಹ ದೊರೆಯಲಿದೆ.

Best Mobiles in India

English summary
This offer was extended by the telecom operator earlier this year, and once again, the company has stretched the offer period till October. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+