Home
ಸುದ್ದಿಜಾಲ

ಗೇಮಿಂಗ್‌ ಸ್ಮಾರ್ಟ್‌ಫೋನ್‌ ಖರೀದಿಸಬೇಕೆ?..ಹಾಗಿದ್ರೆ, ಈ ಆಫರ್‌ ಸೂಪರ್‌!

ಜನಪ್ರಿಯ ಗೇಮಿಂಗ್ ಸ್ಮಾರ್ಟ್‌ಫೋನ್‌ ಕಂಪನಿಯಾಗಿ ಗುರುತಿಸಿಕೊಂಡಿರುವ ಆಸುಸ್‌ ಕೆಲವು ಜಬರ್ದಸ್ತ್‌ ಫೀಚರ್ಸ್‌ನ ಫೋನ್‌ಗಳ ಮೂಲಕ ಮಾರುಕಟ್ಟೆಲ್ಲಿ ಗುರುತಿಸಿಕೊಂಡಿದೆ. ಸಂಸ್ಥೆಯ ಟಾಪ್‌ ಗೇಮಿಂಗ್‌ ಫೋನ್‌ಗಳಲ್ಲಿ ಒಂದಾಗಿರುವ ಆಸುಸ್‌ ROG ಫೋನ್ 5s ಮೊಬೈಲ್‌ ಇದೀಗ ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ್ ನಲ್ಲಿ ಭಾರೀ ರಿಯಾಯಿತಿ ಪಡೆದುಕೊಂಡಿದೆ.

ಹೌದು, ಆಸುಸ್‌ ಮೊಬೈಲ್‌ ಸಂಸ್ಥೆಯ ಆಸುಸ್‌ ROG ಫೋನ್ 5s ಮೊಬೈಲ್‌ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ಶೇ. 28% ಡಿಸ್ಕೌಂಟ್‌ ಒಳಗೊಂಡಿದೆ. ಈ ಫೋನ್‌ 8 GB RAM + 128GB ವೇರಿಯಂಟ್‌ ಮಾಡೆಲ್‌ 55,999ರೂ. ಪ್ರೈಸ್‌ ಟ್ಯಾಗ್‌ ಪಡೆದಿದ್ದು, ಕೊಡುಗೆಯಲ್ಲಿ ಗ್ರಾಹಕರು 39,999ರೂ. ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಹಾಗೆಯೇ ಆಯ್ದ ಬ್ಯಾಂಕ್‌ಗಳಿಂದ ಹೆಚ್ಚುವರಿ ಡಿಸ್ಕೌಂಟ್‌ ಕೂಡಾ ಸಿಗಲಿದೆ.

ಗೇಮಿಂಗ್‌ ಸ್ಮಾರ್ಟ್‌ಫೋನ್‌ ಖರೀದಿಸಬೇಕೆ?..ಹಾಗಿದ್ರೆ, ಈ ಆಫರ್‌ ಸೂಪರ್‌!

ಅಂದಹಾಗೆ ಈ ಫೋನ್ ಟ್ರಿಪಲ್ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾ 64 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸೌಲಭ್ಯ ಪಡೆದುಕೊಂಡಿದೆ. ಇಲ್ಲದೇ ಸ್ನಾಪ್‌ಡ್ರಾಗನ್‌ 888+ SoC ಪ್ರೊಸೆಸರ್‌ ಪವರ್‌ ಅನ್ನು ಪಡೆದುಕೊಂಡಿದೆ. ಹಾಗಾದರೆ ಆಸುಸ್‌ ROG ಫೋನ್ 5s ಫೋನಿನ ಇತರೆ ಫೀಚರ್ಸ್‌ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಆಸುಸ್‌ ROG ಫೋನ್ 5s ಮೊಬೈಲ್‌ 1,080 x 2,448 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.78 ಇಂಚಿನ ಫುಲ್‌ HD+ ಡಿಸ್‌ಪ್ಲೇ ಪಡೆದಿದೆ. ಈ ಡಿಸ್‌ಪ್ಲೇ ಸ್ಯಾಮ್‌ಸಂಗ್‌ ಅಮೋಲೆಡ್‌ ಡಿಸ್‌ಪ್ಲೇ ಆಗಿದ್ದು, 144Hz ರಿಫ್ರೆಶ್ ರೇಟ್, 360Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಒಳಗೊಂಡಿದೆ. ಇದಲ್ಲದೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್‌ ಪಡೆದುಕೊಂಡಿದೆ.

ಗೇಮಿಂಗ್‌ ಸ್ಮಾರ್ಟ್‌ಫೋನ್‌ ಖರೀದಿಸಬೇಕೆ?..ಹಾಗಿದ್ರೆ, ಈ ಆಫರ್‌ ಸೂಪರ್‌!

ಪ್ರೊಸೆಸರ್‌ ಯಾವುದು

ಈ ಮೊಬೈಲ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 888+ SoC ಪ್ರೊಸೆಸರ್‌ ಕಾರ್ಯ ನಿರ್ವಹಣೆ ಪಡೆದುಕೊಂಡಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 11 ಓಎಸ್ ಬೆಂಬಲದೊಂದಿಗೆ ಕೆಲಸ ನಿರ್ವಹಿಸಲಿದೆ. ಇದರೊಂದಿಗೆ ಆಸುಸ್‌ ROG ಫೋನ್ 5s ಫೋನ್‌ 12GB RAM ಮತ್ತು 256 GB ಸ್ಟೋರೇಜ್‌ ಹೊಂದಿದೆ.

ಕ್ಯಾಮೆರಾ ಸೆನ್ಸಾರ್ ಹೇಗಿದೆ

ಆಸುಸ್‌ ROG ಫೋನ್ ಮೊಬೈಲ್ ಟ್ರಿಪಲ್ ರಿಯರ್‌ ಕ್ಯಾಮೆರಾ ರಚನೆ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೋನಿ IMX686 ಸೆನ್ಸಾರ್‌, ಎರಡನೇ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್‌ ಅನ್ನು ಪಡೆದಿದೆ. ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್‌ ಅನ್ನು ಪಡೆದಿದೆ. ಇದಲ್ಲದೆ 24 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯ ಮಾಹಿತಿ

ಆಸುಸ್‌ ROG ಫೋನ್ 5s ಮೊಬೈಲ್‌ 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, ಇವುಗಳು 30W ವೇಗದ ಚಾರ್ಜಿಂಗ್ ಸಪೋರ್ಟ್‌ ಸಹ. ಇನ್ನು ಕನೆಕ್ಟಿವಿಟಿ ಸೌಲಭ್ಯ 5G, 4G LTE, Wi-Fi 6 ಜೊತೆಗೆ 802.11 a/b/g/n/ac/ax, Wi-Fi ಡೈರೆಕ್ಟ್, ಬ್ಲೂಟೂತ್ v5.2, NFC, ಮತ್ತು a ಯುಎಸ್ಬಿ ಟೈಪ್-ಸಿ ಪೋರ್ಟ್ ಬೆಂಬಲಿಸಲಿದೆ.

ಆಸುಸ್ ROG ಫೋನ್ 5s ಪ್ರೊ - ಫೀಚರ್ಸ್ ಹೀಗಿವೆ

ಆಸುಸ್‌ ಸಂಸ್ಥೆಯ ಈ ಮೊಬೈಲ್‌ ಫೋನ್‌ ಕೂಡಾ 1,080x2,448 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.78 ಇಂಚಿನ ಡಿಸ್‌ಪ್ಲೇ ಪಡೆದುಕೊಂಡಿದೆ. ಅಲ್ಲದೇ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 888+ SoC ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ನಿರ್ವಹಿಸಲಿದ್ದು, 6,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ.

Best Mobiles in India

English summary
Good News for Mobile Gamers: Asus ROG 5s received big price drop. check offer price and specifications details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+