ಭಾರತೀಯರಿಗಾಗಿ ಇದೀಗ ಬರುತ್ತಿದೆ ಹೊಸ 'ಇ-ಪಾಸ್‌ಪೋರ್ಟ್'!

|

ಇತ್ತೀಚಿಗಷ್ಟೇ ಮೊಬೈಲ್‌ ಆಪ್‌ನಲ್ಲೇ ಪಾಸ್‌ಪೋರ್ಟ್ ಮಾಡಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದ ಸರ್ಕಾರ ಇದೀಗ ಇ-ಪಾಸ್‌ಪೋರ್ಟ್‌ ನೀಡಲು ತಯಾರಾಗಿದೆ. ಅರ್ಜಿದಾರರ ವೈಯಕ್ತಿಕ ಮಾಹಿತಿಗಳನ್ನು ಡಿಜಿಟಲ್‌ ಸೈನ್‌ ಮಾಡಿಸಿ ಚಿಪ್‌ನಲ್ಲಿ ಸಂಗ್ರಹಿಸಲಾಗದ ಹೊಸ ಬಯೋಮೆಟ್ರಿಕ್ ಪಾಸ್‌ಪೋರ್ಟ್‌ ಶೀಘ್ರವೇ ಲಭ್ಯವಾಗಲಿದ್ದು, ಬಯೋಮೆಟ್ರಿಕ್ ಮಾಹಿತಿಯೊಂದಿಗೆ ಸಾಂಪ್ರದಾಯಿಕ ಪಠ್ಯ ಆಧಾರಿತ ಮಾಹಿತಿಯನ್ನು ಹೊಸ ಇ-ಪಾಸ್‌ಪೋರ್ಟ್ ಒಳಗೊಂಡಿರುತ್ತದೆ ಎಂದು ತಿಳಿದುಬಂದಿದೆ.

ಭಾರತೀಯರಿಗಾಗಿ ಇದೀಗ ಬರುತ್ತಿದೆ ಹೊಸ 'ಇ-ಪಾಸ್‌ಪೋರ್ಟ್'!

ಹೌದು, ಪಾಸ್‌ಪೊರ್ಟ್ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಸರ್ಕಾರ ಇದೀಗ ಬಯೋಮೆಟ್ರಿಕ್ ಪಾಸ್‌ಪೋರ್ಟ್‌ನತ್ತ ಮುಖಮಾಡಿದೆ. ಪ್ರಯಾಣಿಕರ ಅಗತ್ಯ ಡೇಟಾವನ್ನು ಚಿಪ್‌ನಲ್ಲಿ ಸಂಗ್ರಹಿಸಿಡುವ ಮಾದರಿಯಲ್ಲಿ ಪಾಸ್‌ಪೋರ್ಟ್ ಅನ್ನು ತರುತ್ತಿದೆ. ಪಾಸ್‌ಪೋರ್ಟ್‌ನಲ್ಲಿನ ಈ ಚಿಪ್‌ನಲ್ಲಿ ಬೆರಳಚ್ಚುಗಳು, ಮುಖ ಗುರುತಿಸುವಿಕೆ ಮತ್ತು ಐರಿಸ್ ಸ್ಕ್ಯಾನ್‌ಗಳಂತಹ ಬಯೋಮೆಟ್ರಿಕ್ ವಿವರಗಳನ್ನು ತುಂಬಿಡಲಾಗುತ್ತದೆ. ಇದರಿಂದ ವಲಸೆ ಕೇಂದ್ರಗಳಲ್ಲಿ ಪ್ರಯಾಣಿಕರ ಸಮಯವು ಕೂಡ ಉಳಿತಾಯವಾಗಲಿದೆ.

ಈ ನೂತನ ಇ-ಪಾಸ್‌ಪೋರ್ಟ್ ಹಿಂದಿನದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದ್ದು, ಈ ಇ-ಪಾಸ್‌ಪೋರ್ಟ್‌ನ ಎದುರು ಮತ್ತು ಹಿಂಬದಿಯಲ್ಲಿ ದಪ್ಪನೆಯ ಹೊದಿಕೆಯಿರಲಿದೆ. ಇದರ ಸಾಫ್ಟ್‌ ವೇರನ್ನು ಐಐಟಿ ಕಾನ್ಪುರ್‌ ಮತ್ತು ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್‌ಐಸಿ)ದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಯಾರಾದರೂ ಪಾಸ್‌ಪೋರ್ಟ್ ಅನ್ನು ಟ್ಯಾಂಪರ್ ಮಾಡಲು ಮುಂದಾದರೆ ಅದು ತಕ್ಷಣ ತಿಳಿಯಲಿದೆ ಮತ್ತು ಆ ಕ್ಷಣವೇ ಪಾಸ್‌ಪೋರ್ಟ್‌ ದೃಢೀಕರಣವು ವಿಫಲವಾಗುತ್ತದೆ ಎಂದು ತಿಳಿದುಬಂದಿದೆ.

ಭಾರತೀಯರಿಗಾಗಿ ಇದೀಗ ಬರುತ್ತಿದೆ ಹೊಸ 'ಇ-ಪಾಸ್‌ಪೋರ್ಟ್'!

ಇಷ್ಟೇ ಅಲ್ಲದೇ ಈ ಇ-ಪಾಸ್‌ಪೋರ್ಟ್‌ನಿಂದ ಹಲವಾರು ಅನುಕೂಲಗಳಿವೆ. ಸ್ವಯಂಚಾಲಿತ ಇ-ಪಾಸ್‌ಪೋರ್ಟ್ ಗೇಟ್‌ಗಳನ್ನು ಹೊಂದಿದ ವಿಮಾನ ನಿಲ್ದಾಣಗಳಲ್ಲಿ ವಲಸೆ ಪ್ರಕ್ರಿಯೆಗಳನ್ನು ಸುಧಾರಿಸಲು ಬಯೋಮೆಟ್ರಿಕ್ ಪಾಸ್‌ಪೋರ್ಟ್‌ಗಳು ಸಹಾಯ ಮಾಡಲಿವೆ. ವಿಮಾನ ನಿಲ್ದಾಣಗಳ ಕ್ಯೂಗಳಲ್ಲಿ ಕಾಯಬೇಕಾದ ಪ್ರಕ್ರಿಯೆ ಮತ್ತು ನಿಮ್ಮ ಪಾಸ್‌ಪೋರ್ಟ್ ಕಳೆದುಕೊಳ್ಳುವ ಭಯ ಸೇರಿದಂತೆ ಹಲವು ಅನಾನುಕೂಲತೆಗಳಿಗೆ ಬಯೋಮೆಟ್ರಿಕ್ ಪಾಸ್‌ಪೋರ್ಟ್‌ ಬ್ರೇಕ್ ಹಾಕಲಿದೆ ಎನ್ನಲಾಗಿದೆ.

ಓದಿರಿ: 'ಹಾನರ್ 20' ಫೋನಿನ ಮೊದಲ ಫ್ಲಾಶ್‌ಸೇಲ್ ಇಂದಿನಿಂದ ಆರಂಭ!

ಇ-ಪಾಸ್‌ಪೋರ್ಟ್‌ಗಳನ್ನು ಸುರಕ್ಷತೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದ್ದು, ಪಾಸ್‌ಪೋರ್ಟ್‌ನಲ್ಲಿ ದಾಖಲಾದ ಡೇಟಾವನ್ನು ಹಾಳು ಮಾಡುವುದು ಹೆಚ್ಚು ಕಷ್ಟಕರ. ಹಾಗಾಗಿ, ಈಗಾಗಲೇ ವಿಶ್ವದಾದ್ಯಂತ ಸರ್ಕಾರಗಳು ಇ-ಪಾಸ್‌ಪೋರ್ಟ್‌ಗಳಿಗೆ ಬದಲಾಯಿಸುವ ನಿರ್ಧಾರವನ್ನು ಕೈಗೊಂಡಿವೆ. 114 ದೇಶಗಳು ಇ- ಪಾಸ್‌ಪೋರ್ಟ್‌ ವ್ಯವಸ್ಥೆ ಹೊಂದಿವೆ. ಅಂದರೆ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಅರ್ಧಕ್ಕಿಂತ ಹೆಚ್ಚು ರಾಷ್ಟ್ರಗಳು ಈಗಾಗಲೇ ಇ-ಪಾಸ್‌ಪೋರ್ಟ್‌ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಿವೆ.

Best Mobiles in India

English summary
For those unaware about E-passports, which are also known as a digital passport or a biometric passport is simply the digitized version of the physical copy of an individual’s passport. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X