'ಹಾನರ್ 20' ಫೋನಿನ ಮೊದಲ ಫ್ಲಾಶ್‌ಸೇಲ್ ಇಂದಿನಿಂದ ಆರಂಭ!

|

ಒನ್‌ಪ್ಲಸ್ 7ಗೆ ಬ್ರೇಕ್ ಹಾಕುವ ಸಲುವಾಗಿ ಬಂದಿರುವ ಕ್ವಾಡ್ ಕ್ಯಾಮೆರಾ ಸೆಟ್‌ಅಪ್‌ ಹೊಂದಿರುವ 'ಹಾನರ್ 20' ಫೋನಿನ ಮೊದಲ ಸೇಲ್ ಇಂದಿನಿಂದ ಆರಂಭವಾಗಿದೆ. ಫ್ಲಿಪ್‌ಕಾರ್ಟ್ ಮತ್ತು ಪ್ರಮುಖ ಆಫ್‌ಲೈನ್ ಸ್ಟೋರ್‌ಗಳಲ್ಲಿ ಮಧ್ಯಾಹ್ನ 12 ಗಂಟೆಗೆ ಫ್ಲಾಶ್‌ಸೇಲ್ ಶುರುವಾಗಲಿದ್ದು, ಆರಂಭಿಕ ಕೊಡುಗೆಯಾಗಿ ನೋ ಕಾಸ್ಟ್ ಇಎಂಐ ಮತ್ತು ಜಿಯೊ ಕ್ಯಾಶ್‌ಬ್ಯಾಕ್ ನಿಡಲಾಗಿದೆ.

'ಹಾನರ್ 20' ಫೋನಿನ ಮೊದಲ ಫ್ಲಾಶ್‌ಸೇಲ್ ಇಂದಿನಿಂದ ಆರಂಭ!

ಹಾನರ್ ಇತ್ತೀಚಿಗಷ್ಟೇ ಹಾನರ್ 20, ಹಾನರ್ 20i ಮತ್ತು ಹಾನರ್ 20 ಪ್ರೊ ಎಂಬ ಮೂರು ಸರಣಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿತ್ತು. ಅದರಲ್ಲಿ ಜೂನ್ 18ರಂದು ಮೊದಲು ಹಾನರ್ 20i ಸೇಲ್‌ಗೆ ಬಂದಿತ್ತು. ಇದೀಗ ಜೂನ್ 25ರಂದು ಹಾನರ್ 20 ಫೋನ್ ಮೊದಲ ಮಾರಾಟಕ್ಕೆ ಬಂದಿದೆ. 6 GB RAM ಮತ್ತು 128 GB ಸ್ಟೋರೇಜ್ ಮಾದರಿಯಲ್ಲಿ ಫೋನ್ ಖರೀದಿಗೆ ಲಭ್ಯವಿದೆ.

ಹಾನರ್ 20 ಮತ್ತು ಹಾನರ್ 20 ಪ್ರೊ ಎರಡೂ ಪೋನ್‌ಗಳು 7nm ಆಧಾರಿತ ಚಿಪ್‌ಸೆಟ್, ಕ್ವಾಡ್ ಕ್ಯಾಮೆರಾ ಸೆಟ್‌ಅಪ್‌ ಮತ್ತು 6.26 ಇಂಚಿನ ಎಫ್‌ಎಚ್‌ಡಿ+ ಡಿಸ್‌ಪ್ಲೇಯಂತಹ ಅತ್ಯುತ್ತಮ ಫೀಚರ್ಸ್ ಹೊತ್ತು ಬಿಡುಗಡೆಯಾಗಿ ಗಮನಸೆಳೆದಿವೆ. ಹಾಗಾದರೆ, ಹಾನರ್ 20 ಮತ್ತು ಹಾನರ್ 20 ಪ್ರೊ ಸ್ಮಾರ್ಟ್‌ಫೋನ್‌ಗಳು ಹೇಗಿವೆ? ಇತರೆ ಫೀಚರ್ಸ್ ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಹಾನರ್ 20 ಮತ್ತು 20 ಪ್ರೊ ವಿನ್ಯಾಸ!

ಹಾನರ್ 20 ಮತ್ತು 20 ಪ್ರೊ ವಿನ್ಯಾಸ!

ಹಾನರ್ 20 ಮತ್ತು ಹಾನರ್ 20 ಪ್ರೊ ಎರಡೂ ಸ್ಮಾರ್ಟ್‌ಫೋನ್‌ಗಳು ಗ್ಲಾಸ್ ಮತ್ತು ಮೆಟಲ್ ದೇಹವನ್ನು ಹೊಂದಿವೆ. ಕೆಲವು ಸ್ಯಾಮ್ಸಂಗ್ ಸ್ಮಾರ್ಟ್‌ಫೋನ್‌ಗಳಲ್ಲಿ ನೀವು ನೋಡಿರುವಂತೆ ಫೋನಿನ ಒಂದು ಬದಿಯಲ್ಲಿ ಫಿಂಗರ್ಪ್ರಿಂಟ್ ಸ್ಕ್ಯಾನರ್‌ ಅನ್ನು ಅಳವಡಿಸಲಾಗಿದೆ. ಇನ್ನು ಸೆಲ್ಫೀ ಕ್ಯಾಮೆರಾವು ವಿಶೇಷವಾಗಿ ಸ್ಮಾರ್ಟ್‌ಪೋನ್ ಡಿಸ್ಪ್ಲೇಯ ಮೇಲಿನ ಎಡ ಮೂಲೆಯಲ್ಲಿ ಇದೆ.

ಹಾನರ್ 20 ಮತ್ತು 20 ಪ್ರೊ ಡಿಸ್‌ಪ್ಲೇ!

ಹಾನರ್ 20 ಮತ್ತು 20 ಪ್ರೊ ಡಿಸ್‌ಪ್ಲೇ!

ಹಾನರ್ 20 ಮತ್ತು ಹಾನರ್ 20 ಪ್ರೊ ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ 6.26 ಇಂಚಿನ ಎಫ್‌ಎಚ್‌ಡಿ+ ಸ್ಪೋರ್ಟ್ ಡಿಸ್‌ಪ್ಲೇಯನ್ನು ಪರಿಚಯಿಸಲಾಗಿದೆ. 2340x1080p ರೆಸೋಲ್ಯೂಷನ್ ಸಾಮರ್ಥ್ಯದ ಡಿಸ್‌ಪ್ಲೇಯೂ ಆಲ್‌ ವ್ಯೂ ಪ್ರದರ್ಶನವನ್ನು ನೀಡಲಿದೆ. ಪ್ರೀಮಿಯಂ ಡಿಸ್‌ಪ್ಲೇ ಇದಾಗಿರುವುದರಿಂದ ಮಲ್ಟಿಟಿಮೀಡಿಯಾ ಹಾಗೂ ಗೇಮಿಂಗ್ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ.

ಹಾನರ್ 20 ಮತ್ತು 20 ಪ್ರೊ ಪ್ರೊಸೆಸರ್!

ಹಾನರ್ 20 ಮತ್ತು 20 ಪ್ರೊ ಪ್ರೊಸೆಸರ್!

ಹಾನರ್ 20 ಮತ್ತು ಹಾನರ್ 20 ಪ್ರೊ ಎರಡೂ ಸ್ಮಾರ್ಟ್‌ಫೋನ್‌ಗಳೂ ಕೂಡ ಕಿರಿನ್ 980 ಎಸ್‌ಒಸಿ ಪ್ರೊಸೆಸರ್ ಜೊತೆಗೆ ಆಂಡ್ರಾಯ್ಡ್ 9 ಪೈನಲ್ಲಿ ಮ್ಯಾಜಿಕ್ UI ಜೊತೆಗೆ ಬಂದಿವೆ. ಕಂಪೆನಿ ಹೇಳಿರುವಂತೆ, ಫೋನಿನಲ್ಲಿ ಶೇ 75 ಪ್ರತಿಶತದಷ್ಟು ವೇಗವರ್ಧಕ, ಶೇ.58 ಪ್ರತಿಶತ ವಿದ್ಯುತ್ ಸಾಮರ್ಥ್ಯ ಸುಧಾರಣೆ ಮತ್ತು ತಡೆರಹಿತ ಮತ್ತು ಪೂರ್ಣ ಫ್ರೇಮ್ ಗೇಮಿಂಗ್ ಅನುಭವ ಸಿಗಲಿದೆ.

ಹಾನರ್ 20 ಮತ್ತು 20 ಪ್ರೊ ಬ್ಯಾಟರಿ!

ಹಾನರ್ 20 ಮತ್ತು 20 ಪ್ರೊ ಬ್ಯಾಟರಿ!

ಹಾನರ್ 20 ಮತ್ತು ಹಾನರ್ 20 ಪ್ರೊ ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ ಬೇರೆ ಬೇರೆ ಬ್ಯಾಟರಿ ಸಾಮರ್ಥ್ಯವನ್ನು ತರಲಾಗಿದೆ. ಹಾನರ್ 20 3,750mAh ಶಕ್ತಿಯ ಬ್ಯಾಟರಿಯನ್ನು ಹೊಂದಿದ್ದರೆ ಹಾನರ್ ಪ್ರೊ ಮಾದರಿಯು 4,000mAh ಬ್ಯಾಟರಿ ಹೊಂದಿದೆ. ಎರಡೂ ಫೋನ್‌ಗಳು 22.5W ವೇಗದ ಚಾರ್ಜಿಂಗ್ಗೆ ಬೆಂಬಲ ಹೊಂದಿದ್ದು, 30 ನಿಮಿಷದಲ್ಲಿ 50% ಚಾರ್ಜ್‌ ಆಗುತ್ತವೆ ಎನ್ನಲಾಗಿದೆ.

ಹಾನರ್ 20 ಮತ್ತು 20 ಪ್ರೊ ಸೆಲ್ಫೀ ಕ್ಯಾಮೆರಾ!

ಹಾನರ್ 20 ಮತ್ತು 20 ಪ್ರೊ ಸೆಲ್ಫೀ ಕ್ಯಾಮೆರಾ!

ಹಾನರ್ 20 ಮತ್ತು ಹಾನರ್ 20 ಪ್ರೊ ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ 32 ಎಂಪಿ ಸೆಲ್ಫಿ ಕ್ಯಾಮರಾವನ್ನು ನೀಡಲಾಗಿದೆ. ಸೆಲ್ಫೀ ಕ್ಯಾಮೆರಾವು ಫೋನ್ ಸ್ಕ್ರೀನ್ ಮೇಲೆ ಎಡಭಾಗದಲ್ಲಿರುವುದು ವಿಶೇಷತೆ. ಇನ್ನು ಸೆಲ್ಫೀ ಕ್ಯಾಮೆರಾದಲ್ಲಿ ಯಾವುದೇ ಬದಲಾವಣೆಯನ್ನು ಹೊಂದಿಲ್ಲದ ಈ ಸ್ಮಾರ್ಟ್‌ಪೋನ್‌ಗಳು ರಿಯರ್ ಕ್ಯಾಮೆರಾದಲ್ಲಿ ವ್ಯತ್ಯಾಸವನ್ನು ಹೊಂದಿರುವುದನ್ನು ನೋಡಬಹುದು.

ಹಾನರ್ 20 ಮತ್ತು 20 ಪ್ರೊ ರಿಯರ್ ಕ್ಯಾಮೆರಾ!

ಹಾನರ್ 20 ಮತ್ತು 20 ಪ್ರೊ ರಿಯರ್ ಕ್ಯಾಮೆರಾ!

ಹಾನರ್ 20 ಪ್ರೊ 48MP f / 1.4 ಪ್ರಾಥಮಿಕ ಸಂವೇದಕ, 16MP f / 2.2 ಅಲ್ಟ್ರಾ ವೈಡ್ ಸಂವೇದಕ, 8MP ಟೆಲಿಫೋಟೋ ಕ್ಯಾಮೆರಾ ಮತ್ತು 2MP ಮ್ಯಾಕ್ರೊ ಕ್ಯಾಮರಾಗಳನ್ನು ಹೊಂದಿದೆ. ಆದರೆ, ಹಾನರ್ 20 ಇದೇ 48MP f / 1.8ಮುಖ್ಯ ಕ್ಯಾಮೆರಾ ಪಡೆಯುತ್ತದೆಯಾದರೂ, ಪ್ರೊನಂತೆ 8MP ಟೆಲಿಫೋಟೋ ಕ್ಯಾಮೆರಾ ಇರದೇ, ಕೇವಲ 2MP ಕ್ಯಾಮೆರಾವನ್ನು ಬೆಂಬಲಿಸುತ್ತದೆ.

ಹಾನರ್ 20 ಮತ್ತು 20 ಪ್ರೊ ವ್ಯತ್ಯಾಸ!

ಹಾನರ್ 20 ಮತ್ತು 20 ಪ್ರೊ ವ್ಯತ್ಯಾಸ!

ಹಾನರ್‌ 20 ಪ್ರೊ ಸ್ಮಾರ್ಟ್‌ಫೋನ್ ಹಾನರ್ 20ಗಿಂತ ಸ್ಪಲ್ಪ ಹೆಚ್ಚು ವಿಶೇಷತೆ ಹೊಂದಿದೆ. ಬ್ಯಾಟರಿ ಗಾತ್ರ, ಸ್ಟೋರೇಜ್‌ ಮತ್ತು ನಾಲ್ಕನೇ ವಿಶೇಷ ಕ್ಯಾಮೆರಾದಲ್ಲಿ ಮಾತ್ರ ವ್ಯತ್ಯಾಸವನ್ನು ಗುರುತಿಸಬಹುದು. ಇನ್ನು ಹಾನರ್ 20 6ಜಿಬಿ RAM ಮತ್ತು 128ಜಿಬಿ ಮೆಮೊರಿ ಮಾದರಿಯಲ್ಲಿ ಬಂದಿದ್ದರೆ, 8ಜಿಬಿ RAM ಮತ್ತು 256 ಜಿಬಿ ಮೆಮೊರಿ ಮಾದರಿಯಲ್ಲಿ 20 ಪ್ರೊ ಬಂದಿದೆ.

ಹಾನರ್ 20 ಮತ್ತು 20 ಪ್ರೊ ಬೆಲೆಗಳು!

ಹಾನರ್ 20 ಮತ್ತು 20 ಪ್ರೊ ಬೆಲೆಗಳು!

ನಿರೀಕ್ಷಿಸಲ್ಪಟ್ಟಂತೆ ಪ್ರೀಮಿಯಮ್ ಬೆಲೆಗಳೊಂದಿಗೆ ಹಾನರ್ 20 ಸರಣಿ ಫೋನ್‌ಗಳು ಬಿಡುಗಡೆಯಾಗಿವೆ. 6GB + 128GB ಹಾನರ್ ಬೆಲೆ 32,999 ರೂಪಾಯಿಗಳಾಗಿದ್ದರೆ, 8GB + 256GB ಶೇಖರಣಾ ಮಾದರಿಯ ಹಾನರ್ 20 ಪ್ರೊ 39,999 ರೂಪಾಯಿಗಳಿಗೆ ಬಿಡುಗಡೆಯಾಗಿದೆ. ಆದರೆ, ಹಾನರ್ 20 ಪ್ರೊ ಮಾರಾಟದ ದಿನಾಂಕವನ್ನು ಈ ವರೆಗೂ ಕಂಪೆನಿ ಪ್ರಕಟಿಸಿಲ್ಲ.

Best Mobiles in India

English summary
Huawei sub-brand Honor launched the Honor 20, Honor 20 Pro, and Honor 20i in India earlier this month.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X