ಭವಿಷ್ಯದ ಪಿಕ್ಸೆಲ್‌ಗಳಿಗಾಗಿ 'ಹೆಚ್‌ಟಿಸಿ' ತಂತ್ರಜ್ಞರಿಗೆ ಗೂಗಲ್ ಗಾಳ!! ಏನಿದು?
ಹೆಚ್‌ಟಿಸಿ ಕಂಪೆನಿಯ ಒಂದು ಭಾಗವನಷ್ಟೆ ಗೂಗಲ್ ತನ್ನ ತೆಕ್ಕೆಗೆ ಹಾಕಿಕೊಂಡಿದೆ.!
ಅಂತರಾಷ್ಟ್ರೀಯ ಮೊಬೈಲ್ ಕಂಪೆನಿ ಹೆಚ್‌ಟಿಸಿ ಗೂಗಲ್ ತೆಕ್ಕೆಗೆ ಬೀಳಲಿದೆ ಎನ್ನುವ ಸುದ್ದಿಯಲ್ಲಿ ಅರ್ಧದಷ್ಟು ನಿಜವಾಗಿದೆ.! ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳನ್ನು ನಿರ್ಮಿಸಿದ್ದ ಹೆಚ್‌ಟಿಸಿ ಕಂಪೆನಿಯನ್ನೇ ಗೂಗಲ್ ತನ್ನ ತೆಕ್ಕೆಗೆ ಹಾಕಿಕೊಳ್ಳಲು ಮುಂದಾಗಿತ್ತು, ಆದರೆ, ಹೆಚ್‌ಟಿಸಿ ಕಂಪೆನಿಯ ಒಂದು ಭಾಗವನಷ್ಟೆ ಗೂಗಲ್ ತನ್ನ ತೆಕ್ಕೆಗೆ ಹಾಕಿಕೊಂಡಿದೆ.!
ಬುಧವಾರ ತನ್ನ ಶೇರುಗಳನ್ನು ಸ್ಥಗಿತಗೊಳಿಸಿದ ಹೆಚ್‌ಟಿಸಿ ಕಂಪೆನಿ ಒಂದು ಗಂಟೆಯಲ್ಲಿ ಗೂಗಲ್ ಜೊತೆಗಿನ ಒಡಂಬಡಿಕೆಯನ್ನು ಮುಗಿಸಿಕೊಂಡಿದ್ದು, 1.1 ಬಿಲಿಯನ್ ಡಾಲರ್‌ಗೆ ಹೆಚ್‌ಟಿಸಿಯ ಒಂದು ಭಾಗದ ಭೌದ್ದಿಕ ಆಸ್ತಿಗಳು ಹಾಗೂ ಪಿಕ್ಸೆಲ್ ಸ್ಮಾರ್ಟ್‌ಫೋನ್ ತಯಾರಕ ಎಂಜಿನಿಯರ್‌ಗಳ ಪಡೆಯನ್ನು ಗೂಗಲ್ ಪಾಲಾಗಿದ್ದಾರೆ.!!

ಗೂಗಲ್ ಈ ಒಡಂಬಡಿಕೆಗಾಗಿ 1.1 ಬಿಲಿಯನ್ ಡಾಲರ್ ಅನ್ನು ಖರ್ಚು ಮಾಡಿದ್ದು, ತನ್ನ ಪಿಕ್ಸೆಲ್ ಸರಣಿ ಸ್ಮಾರ್ಟ್‌ಫೋನ್‌ಗಳ ಭವಿಷ್ಯಕ್ಕಾಗಿ ಈ ದೊಡ್ಡ ಒಡಂಬಡಿಕೆಯನ್ನು ಹೆಚ್‌ಟಿಸಿ ಕಂಪೆನಿ ಜೊತೆ ಮಾಡಿಕೊಂಡಿದೆ ಎಂದು ಅಂತರಾಷ್ಟ್ರೀಯ ಮೊಬೈಲ್ ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.!!

ಹಾಗಾಗಿ, ಗೂಗಲ್ ತನ್ನ ಭವಿಷ್ಯದ ಫೋನ್‌ಗಳ ಮೇಲೆ ಹೆಚ್ಚು ಕೇಂದ್ರಿಕರಿಸಲಿದೆ!! ಗೂಗಲ್‌ಗೆ ಭೌಧ್ದಿಕ ಆಸ್ತಿಗಳಿಗಿಂತ ಪಿಕ್ಸೆಲ್ ಸ್ಮಾರ್ಟ್‌ಫೋನ್ ತಯಾರಿಕೆಯಲ್ಲಿ ಶ್ರಮವಹಿಸಿರುವ ಹೆಚ್‌ಟಿಸಿಯಲ್ಲಿರುವ ಮಾನವ ಸಂಪನ್ಮೂಲದ ಮೇಲೆ ಕಣ್ಣಿತ್ತು. ಹಾಗಾಗಿಯೇ, ಈ ಒಡಬಂಬಡಿಕೆಗೆ ಗೂಗಲ್ ಬಹಳಷ್ಟು ಶ್ರಮಿಸಿತ್ತು ಎನ್ನಲಾಗಿದೆ
ಓದಿರಿ: ಜಿಯೋಫೈ ಮೇಲೆ 50% ಡಿಸ್ಕೌಂಟ್ಸ್.!! ಪ್ರಸ್ತುತ ಬೆಲೆ ಎಷ್ಟು?


Click it and Unblock the Notifications








